ಬ್ರಿಟನ್‌ ಸಂಸತ್‌ ಮೇಲೆ ಉಗ್ರರ ದಾಳಿ ಯತ್ನ ವಿಫ‌ಲ: 5 ಸಾವು


Team Udayavani, Mar 23, 2017, 3:45 AM IST

Britains-Parliament.jpg

ಲಂಡನ್‌: ಬ್ರಸೆಲ್ಸ್‌, ಫ್ರಾನ್ಸ್‌ ಮೇಲೆ ಭಯೋತ್ಪಾದಕರ ಕರಿನೆರಳು ಬಿದ್ದಿರುವಂತೆಯೇ, ಬ್ರಿಟನ್‌ ಸಂಸತ್‌ ಮೇಲೂ ಉಗ್ರ ದಾಳಿ ಯತ್ನ ನಡೆದಿದೆ. ಬುಧವಾರ ನಡೆದ ದಾಳಿ ಯತ್ನವನ್ನು ಪೊಲೀಸರು ತಡೆದಿದ್ದು, ದಾಳಿಕೋರನ ಮೇಲೆ ಗುಂಡು ಹಾರಿಸಿದ್ದಾರೆ. ಈ ಸಂದರ್ಭದಲ್ಲಿ ಸುಮಾರು 400 ಮಂದಿ ಸಂಸದರು ಸಂಸತ್‌ ಭವನದ ಒಳಗಿದ್ದರು. ಅವರು ಸುರಕ್ಷಿತರಾಗಿದ್ದಾರೆ.

ದಾಳಿ ನಡೆದ ಕೆಲವೇ ಕ್ಷಣಗಳ ಮುನ್ನ ಪ್ರಧಾನಿ ಥೆರೇಸಾ ಮೇ ಸಂಸತ್‌ನಿಂದ ಹೊರಗೆ ಹೋಗಿದ್ದರು. ಈ ನಡುವೆ ಘಟನೆಯಲ್ಲಿ ಓರ್ವ ಪೊಲೀಸ್‌ ಅಧಿಕಾರಿ, ಓರ್ವ ಮಹಿಳೆ ಸೇರಿ , ಇಬ್ಬರು ಪುರುಷರು ಸೇರಿ ಐವರು  ಮೃತಪಟ್ಟಿದ್ದಾರೆ. ಜತೆಗೆ 20 ಮಂದಿ ಗಾಯಗೊಂಡಿದ್ದಾರೆ

ಲಂಡನ್‌ನ ಸ್ಥಳೀಯ  ಕಾಲಮಾನ ಮಧ್ಯಾಹ್ನ 2.45ರ ವೇಳೆಗೆ ಸಂಸತ್ತು ಪ್ಯಾಲೇಸ್‌ ಆಫ್ ವೆಸ್ಟ್‌ ಮಿನಿಸ್ಟರ್‌ ಹೊರಗಿನ ಸೇತುವೆಯಲ್ಲಿ ವ್ಯಕ್ತಿಯೊಬ್ಬ ಕಾರನ್ನು ಹಿಗ್ಗಾಮುಗ್ಗಾ ಚಲಾಯಿಸಿದ್ದು, ಪಾದಚಾರಿಗಳಿಗೆ ಮೇಲೆ ಏರಿ ಹೋಗಿದ್ದಾನೆ. ಬಳಿಕ ಅಲ್ಲಿನ ಗೇಟೊಂದಕ್ಕೆ ಗುದ್ದಿಸಿದ್ದು ಅಲ್ಲೇ ಇದ್ದ ಪೊಲೀಸ್‌ ಅಧಿಕಾರಿಯೊಬ್ಬರಿಗೆ ಚೂರಿಯಿಂದ ಇರಿದಿದ್ದಾನೆ. ಬಳಿಕ ಸಂಸತ್‌ ಗೇಟಿನೊಳಕ್ಕೆ ನುಗ್ಗಲು ಯತ್ನಿಸುತ್ತಿದ್ದಂತೆ ಶಸ್ತ್ರಸಜ್ಜಿತ ಪೊಲೀಸರು ದಾಳಿಕೋರನ ಮೇಲೆ ಗುಂಡು ಹಾರಿಸಿದ್ದಾರೆ. ಸಂಸತ್ತಿನ ಹೊರಭಾಗ ಮೂರು ಗುಂಡಿನ ದಾಳಿ ಸದ್ದು ಕೇಳುತ್ತಿದ್ದಂತೆ, ಹೈ ಅಲರ್ಟ್‌ ಘೋಷಿಸಲಾಗಿದೆ. ಪ್ರಧಾನಿಯವರನ್ನು ಕೂಡಲೇ ಸ್ಥಳಾಂತರಿಸಲಾಗಿದೆ. ಘಟನೆ ವೇಳೆ ಸಂಸತ್ತಿನ ಒಳಗೆ ಸುಮಾರು 400 ಮಂದಿ ಸಂಸತ್‌ ಸದಸ್ಯರಿದ್ದರು.

ಘಟನೆ ತಕ್ಷಣ ಏರ್‌ ಅಂಬ್ಯುಲೆನ್ಸ್‌ ಮತ್ತು ತುರ್ತು ರಕ್ಷಣಾ ಹೆಲಿಕಾಪ್ಟರ್‌ಗಳು ಸಂಸತ್‌ ಆವರಣದಲ್ಲಿ ಇಳಿದಿದ್ದು, ಕೂಡಲೇ ಇಡೀ ಪ್ರದೇಶವನ್ನು ಭದ್ರತಾ ಪಡೆಗಳು ವಶಕ್ಕೆ ಪಡೆದಿವೆ. ಸಂಸತ್ತನ್ನು ಬಂದ್‌ ಮಾಡಲಾಗಿದ್ದು, ಹಲವರು ಘಟನೆಯಲ್ಲಿ ಗಾಯಗೊಂಡಿದ್ದಾಗಿ ಹೇಳಲಾಗಿದೆ.

ಬ್ರಸೆಲ್ಸ್‌ ಉಗ್ರದಾಳಿಗೆ 1 ವರ್ಷ ವಾಗುತ್ತಿದ್ದು, ಇದೇ ಸಂದರ್ಭದಲ್ಲಿ ಬ್ರಿಟನ್‌ ಸಂಸತ್‌ ಮೇಲೆ ನಡೆದ ದಾಳಿ ಯತ್ನ ಹುಬ್ಬೇರಿಸಿದೆ. ಆದರೆ ಬ್ರಿಟನ್‌ ಸಂಸತ್ತಿನ ಮೇಲೆ ನಡೆಸಿದ ಈ ದಾಳಿ ಯತ್ನದ ಹಿಂದೆ ಯಾವ ಭಯೋತ್ಪಾದಕ ಸಂಘಟನೆ ಇದೆ? ಕಾರಣವೇನು ಎಂಬುದು ತಿಳಿದುಬಂದಿಲ್ಲ.

ದಾಳಿಕೋರ 40 ವರ್ಷದ ಏಷ್ಯಾ ಮೂಲದವ?: ದಾಳಿಕೋರ 40 ವರ್ಷದವನಾಗಿದ್ದು ಏಷ್ಯಾ ಮೂಲದವನಾಗಿದ್ದಾನೆ ಎಂದು ಪೊಲೀಸ್‌ ಮೂಲಗಳು ಹೇಳಿವೆ. ಆತನ ಬಳಿ 6 ಇಂಚು ಉದ್ದದ ಹರಿತವಾದ ಚೂರಿ ಇತ್ತು. ಕಪ್ಪುಬಣ್ಣದ ಪ್ಯಾಂಟ್‌ ಮತ್ತು ಶರ್ಟ್‌ ಧರಿಸಿದ್ದ. ಎಸ್‌ಯುವಿ ಚಲಾಯಿಸುತ್ತಿದ್ದ ಆತ ಆರಂಭದಲ್ಲಿ ಸಂಸತ್ತಿನ ಗೇಟಿಗೆ ಗುದ್ದಿಸಿ, ಬಳಿಕ ಚೂರಿ ಇರಿದು ಇನ್ನೊಂದು ಗೇಟಿನತ್ತ ನುಗ್ಗಲು ಯತ್ನಿಸಿದ್ದಾಗಿ ಹೇಳಲಾಗಿದೆ. ಇದೇ ವೇಳೆ ಪೊಲೀಸರು ಆತನ ಮೇಲೆ ಗುಂಡು ಹಾರಿಸಿದ್ದಾರೆ.

ಟಾಪ್ ನ್ಯೂಸ್

NITK-Padavi-pradana

Surathkal: ಎಐಯಿಂದ ಉದ್ಯೋಗ, ನಂಬಿಕೆಗೆ ಕುತ್ತು: ಪ್ರೊ| ಗೋವಿಂದನ್‌ ರಂಗರಾಜನ್‌

Nalin-Kateel

Result: ಮಹಾರಾಷ್ಟ್ರದಲ್ಲಿ ಎನ್‌ಡಿಎಗೆ ಜಯಭೇರಿ; ಮೋದಿ ನಾಯಕತ್ವಕ್ಕೆ ಮನ್ನಣೆ: ನಳಿನ್‌

Padmaraj–JPoojary

Mangaluru: ಗೊಂದಲ ಮೂಡಿಸುವ ಬಿಜೆಪಿಗೆ ತಕ್ಕ ಪಾಠ: ಕೆಪಿಸಿಸಿ ಪ್ರ.ಕಾರ್ಯದರ್ಶಿ ಪದ್ಮರಾಜ್‌

Sanjeev-Matandoor

Putturu: ಬಜೆಟ್‌ನಲ್ಲಿ ಹೊರಡಿಸಿರುವ ಆದೇಶ ಅನುಷ್ಠಾನಿಸದೆ ಕೃಷಿಕರಿಗೆ ವಂಚನೆ: ಮಠಂದೂರು

Sri-Home-minister

Udupi: ಪೇಜಾವರ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ -ಗೃಹ ಸಚಿವ ಅಮಿತ್‌ ಶಾ ಭೇಟಿ

Udupi-DC-Dr.-Vidya-kumari

Udupi: ಮಂಗನಕಾಯಿಲೆ ಪ್ರಕರಣ: ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಿ: ಡಿಸಿ ಡಾ.ವಿದ್ಯಾಕುಮಾರಿ

adani (2)

Adani; 2,200 ಕೋಟಿ ರೂ. ಲಂಚ: ಅಮೆರಿಕ ಸಮನ್ಸ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

7

Pakistan: ಪಾಕ್‌ನಲ್ಲಿ ಹಿಂಸಾಚಾರ; ಒಟ್ಟು 37 ಮಂದಿ ಸಾವು

Adani; ಆಸೀಸ್‌ ಕಲ್ಲಿದ್ದಲು ಗಣಿಯಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಆರೋಪ

Adani; ಆಸೀಸ್‌ ಕಲ್ಲಿದ್ದಲು ಗಣಿಯಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಆರೋಪ

London: ಶಂಕಾಸ್ಪದ ಲಗೇಜ್‌ ಪತ್ತೆ: ಲಂಡನ್‌ ಏರ್‌ಪೋರ್ಟ್‌ ಖಾಲಿ ಮಾಡಿಸಿ ತನಿಖೆ!

London: ಶಂಕಾಸ್ಪದ ಲಗೇಜ್‌ ಪತ್ತೆ: ಲಂಡನ್‌ ಏರ್‌ಪೋರ್ಟ್‌ ಖಾಲಿ ಮಾಡಿಸಿ ತನಿಖೆ!

ಆಕಸ್ಮಿಕವಾಗಿ ಹಾರಿದ ಗುಂಡು: ಬರ್ತ್ ಡೇ ದಿನವೇ ಹಾರಿ ಹೋಯ್ತು ಭಾರತೀಯ ಮೂಲದ ವಿದ್ಯಾರ್ಥಿ ಜೀವ

ಆಕಸ್ಮಿಕವಾಗಿ ಹಾರಿದ ಗುಂಡು: ಬರ್ತ್ ಡೇ ದಿನವೇ ಹಾರಿ ಹೋಯ್ತು ಭಾರತೀಯ ಮೂಲದ ವಿದ್ಯಾರ್ಥಿ ಜೀವ

Canada-India Row: ಕೆನಡಾದ ಆಂತರಿಕ ವಿಚಾರದಲ್ಲಿ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ

Canada-India Row: ನಿಜ್ಜರ್ ಹತ್ಯೆ ಹಿಂದೆ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ

MUST WATCH

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

ಹೊಸ ಸೇರ್ಪಡೆ

NITK-Padavi-pradana

Surathkal: ಎಐಯಿಂದ ಉದ್ಯೋಗ, ನಂಬಿಕೆಗೆ ಕುತ್ತು: ಪ್ರೊ| ಗೋವಿಂದನ್‌ ರಂಗರಾಜನ್‌

Nalin-Kateel

Result: ಮಹಾರಾಷ್ಟ್ರದಲ್ಲಿ ಎನ್‌ಡಿಎಗೆ ಜಯಭೇರಿ; ಮೋದಿ ನಾಯಕತ್ವಕ್ಕೆ ಮನ್ನಣೆ: ನಳಿನ್‌

Padmaraj–JPoojary

Mangaluru: ಗೊಂದಲ ಮೂಡಿಸುವ ಬಿಜೆಪಿಗೆ ತಕ್ಕ ಪಾಠ: ಕೆಪಿಸಿಸಿ ಪ್ರ.ಕಾರ್ಯದರ್ಶಿ ಪದ್ಮರಾಜ್‌

Sanjeev-Matandoor

Putturu: ಬಜೆಟ್‌ನಲ್ಲಿ ಹೊರಡಿಸಿರುವ ಆದೇಶ ಅನುಷ್ಠಾನಿಸದೆ ಕೃಷಿಕರಿಗೆ ವಂಚನೆ: ಮಠಂದೂರು

Sri-Home-minister

Udupi: ಪೇಜಾವರ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ -ಗೃಹ ಸಚಿವ ಅಮಿತ್‌ ಶಾ ಭೇಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.