ಅಮೆರಿಕ ಅಧ್ಯಕ್ಷೀಯ ಚುನಾವಣೆ ಅಂತಿಮ ಚರ್ಚೆ: ಭಾರತದ ವಿರುದ್ಧ ಟ್ರಂಪ್ ಆರೋಪವೇನು?
ಸೆಪ್ಟೆಂಬರ್ 29ರಂದು ಟ್ರಂಪ್ ಮತ್ತು ಜೋ ಬೈಡೆನ್ ನಡುವೆ ನಡೆದ ಚರ್ಚೆಯು ಇದುವರೆಗಿನ ಅತ್ಯಂತ ಕಳಪೆ ಚರ್ಚೆ ಎಂದು ಕರೆಯಿಸಿಕೊಂಡಿದೆ.
Team Udayavani, Oct 23, 2020, 11:52 AM IST
ವಾಷಿಂಗ್ಟನ್: ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಕೊನೆಯ ಚರ್ಚೆಯಲ್ಲಿ ಡೊನಾಲ್ಡ್ ಟ್ರಂಪ್ ಭಾಗವಹಿಸಿದ್ದು, ಡೆಮಾಕ್ರಟ್ ಅಭ್ಯರ್ಥಿ ಜೋ ಬೈಡನ್ ಅವರ ಹವಾಮಾನ ಬದಲಾವಣೆಯ ಯೋಜನೆಯನ್ನು ಕಟುವಾಗಿ ಟೀಕಿಸಿದ್ದಾರೆ. ಭಾರತ, ರಷ್ಯಾ ಮತ್ತು ಚೀನಾದ ಹವಾಮಾನ ತುಂಬಾ ಕಲುಷಿತಗೊಂಡಿರುವುದಾಗಿ ಟ್ರಂಪ್ ಅಕ್ಟೋಬರ್ 22ರ ರಾತ್ರಿ ನಡೆದ ಚರ್ಚೆಯಲ್ಲಿ ಆರೋಪಿಸಿದ್ದಾರೆ.
ಅಮೆರಿಕದಲ್ಲಿ ಚುನಾವಣೆಗೂ ಮುನ್ನ ಅಧ್ಯಕ್ಷೀಯ ಅಭ್ಯರ್ಥಿಗಳ ನಡುವೆ ಚರ್ಚೆಗಳನ್ನು ಏರ್ಪಡಿಸಲಾಗುತ್ತದೆ. ನಾಲ್ಕರಿಂದ ಐದು ವಿಷಯಗಳನ್ನು ಆಯ್ಕೆ ಮಾಡಿ ಅದರ ಮೇಲೆ ಅಭ್ಯರ್ಥಿಗಳಿಬ್ಬರೂ ತಮ್ಮ ವಾದ ಮಂಡಿಸಬೇಕು. ಸೆಪ್ಟೆಂಬರ್ 29ರಂದು ಟ್ರಂಪ್ ಮತ್ತು ಜೋ ಬೈಡೆನ್ ನಡುವೆ ನಡೆದ ಚರ್ಚೆಯು ಇದುವರೆಗಿನ ಅತ್ಯಂತ ಕಳಪೆ ಚರ್ಚೆ ಎಂದು ಕರೆಯಿಸಿಕೊಂಡಿದೆ.
ಅಕ್ಟೋಬರ್ 22ರ ರಾತ್ರಿ 9ಗಂಟೆಗೆ (ಭಾರತೀಯ ಕಾಲಮಾನ:ಶುಕ್ರವಾರ ಬೆಳಗ್ಗೆ 7.30ಕ್ಕೆ) ಟ್ರಂಪ್ ಮತ್ತು ಬೈಡೆನ್ ನಡುವೆ ಕೊನೆಯ ಅಧ್ಯಕ್ಷೀಯ ಚರ್ಚೆ ನಡೆಯುತ್ತಿದ್ದು, ಈ ಚರ್ಚೆಯನ್ನು ಎನ್ ಬಿಸಿಯ ವರದಿಗಾರ್ತಿ ಕ್ರಿಸ್ಟನ್ ವೆಲ್ಕರ್ ನಡೆಸಿಕೊಡುತ್ತಿದ್ದಾರೆ.
ಇದನ್ನೂ ಓದಿ:ಇನ್ನು ಮುಂದೆ ಪ್ರಾದೇಶಿಕ ಭಾಷೆಗಳಲ್ಲೂ ಜೆಇಇ ಮೈನ್: ಕನ್ನಡದಲ್ಲೂ ಸಿಗುತ್ತಾ ಅವಕಾಶ?
ಭಾರತದ ಹವಾಮಾನದ ವಿರುದ್ಧ ಟ್ರಂಪ್ ಟೀಕೆ:
ಎರಡನೇ ಹಾಗೂ ಕೊನೆಯ ಸುತ್ತಿನ ಅಧ್ಯಕ್ಷೀಯ ಚರ್ಚೆಯಲ್ಲಿ, ಹವಾಮಾನ ವೈಪರೀತ್ಯದ ಕುರಿತು ಕೈಗೊಂಡ ಕ್ರಮದಲ್ಲಿ ಅಮೆರಿಕಕ್ಕೆ ಅನ್ಯಾಯವಾಗಿದೆ ಎಂಬ ಟೀಕೆಯನ್ನು ಪುನರ್ ವಿಮರ್ಶಿಸಬೇಕು ಎಂದ ಟೊನಾಲ್ಡ್ ಟ್ರಂಪ್, ಚೀನಾ ದೇಶವನ್ನು ನೋಡಿ ಅದರ ಹವಾಮಾನ ಹೊಲಸಾಗಿದೆ, ರಷ್ಯಾ, ಭಾರತದ ಹವಾಮಾನ ಕೂಡಾ ಕಲುಷಿತಗೊಂಡಿದೆ ಎಂದು ಅಮೆರಿಕದ ನ್ಯಾಶ್ ವಿಲ್ಲೆಯಲ್ಲಿ ಆಯೋಜಿಸಿದ್ದ ಚರ್ಚೆಯಲ್ಲಿ ಆರೋಪಿಸಿದರು.
ಪ್ರಮುಖವಾದ ಪ್ಯಾರಿಸ್ ಹವಾಮಾನ ಒಪ್ಪಂದದಿಂದ ಅಮೆರಿಕ ಹಿಂದೆ ಸರಿಯುತ್ತಿರುವುದನ್ನು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಮರ್ಥಿಸಿಕೊಂಡಿದ್ದು, ಭಾರತ, ಚೀನಾ ಮತ್ತು ರಷ್ಯಾ ಹವಾಮಾನ ವೈಪರೀತ್ಯದ ಬಗ್ಗೆ ಯಾವುದೇ ಮುಂಜಾಗ್ರತಾ ಕ್ರಮ ತೆಗೆದುಕೊಂಡಿಲ್ಲ ಎಂದು ದೂರಿದರು.
ಪ್ಯಾರಿಸ್ ಒಪ್ಪಂದದಿಂದ ಚೀನಾ ಮತ್ತು ಭಾರತದಂತಹ ದೇಶಗಳು ಹೆಚ್ಚಿನ ಲಾಭ ಪಡೆಯುತ್ತಿದೆ ಎಂದು ಟ್ರಂಪ್ ನಿರಂತರವಾಗಿ ವಾದ ಮಂಡಿಸುತ್ತಿದ್ದಾರೆ. ಕಳೆದ ವಾರ ಉತ್ತರ ಕರೋಲಿನಾದಲ್ಲಿ ನಡೆದ ಚುನಾವಣಾ ಪ್ರಚಾರ ರಾಲಿಯಲ್ಲಿ ಮಾತನಾಡುತ್ತ, ಜಾಗತಿಕ ವಾಯುಮಾಲಿನ್ಯಕ್ಕೆ ಚೀನಾ, ರಷ್ಯಾ ಮತ್ತು ಭಾರತದಂತಹ ದೇಶಗಳ ಕೊಡುಗೆ ಹೆಚ್ಚಿದೆ ಎಂದು ಆರೋಪಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
26/11 ದಾಳಿಯ ಸಂಚುಕೋರ ಅಬ್ದುಲ್ ರೆಹಮಾನ್ ಮಕ್ಕಿ ಪಾಕಿಸ್ತಾನದಲ್ಲಿ ಹೃದಯಾಘಾತದಿಂದ ಸಾ*ವು
ಟಿಪ್ಸ್ ಕೊಡದಿದ್ದಕ್ಕೆ ಗರ್ಭಿಣಿ ಮಹಿಳೆಯನ್ನೇ 14 ಬಾರಿ ಇರಿದ ಪಿಜ್ಜಾ ಡೆಲಿವರಿ ಮಹಿಳೆ
New York:ಆಸ್ತಿ ಹಂಚಿದ ಶ್ರೀಮಂತ ಹೂಡಿಕೆದಾರ ಬಫೆಟ್; ಕುಟುಂಬದ 4 ಫೌಂಡೇಶನ್ ಆಸ್ತಿ ಹಂಚಿಕೆ
Syria ಸರ್ವಾಧಿಕಾರಿ ಬಶರ್ ಅಸಾದ್ ಪತ್ನಿಗೆ ಲ್ಯುಕೇಮಿಯಾ: ವರದಿ
Maulana Masood: 26/11 ದಾಳಿಯ ಮಾಸ್ಟರ್ ಮೈಂಡ್: ಭಯೋ*ತ್ಪಾದಕ ಮಸೂದ್ ಗೆ ಹೃದಯಾಘಾತ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Udupi: ಅಂಬಲಪಾಡಿ ಜಂಕ್ಷನ್ ಬಳಿ ಬೃಹತ್ ಹೊಂಡಕ್ಕೆ ಬಿದ್ದ ಕಾರು
watermelon:ಕಲ್ಲಂಗಡಿ ಬೆಳೆ ಯಾವಾಗ ಉತ್ತಮ ಇಳುವರಿ ಕೊಡುತ್ತೆ…ಕೃಷಿ ವಿಜ್ಞಾನಿಗಳ ಸಲಹೆ ಏನು?
Bidar; ಗುತ್ತಿಗೆದಾರ ಆತ್ಮಹತ್ಯೆ ಕೇಸ್; ಕರ್ತವ್ಯ ನಿರ್ಲಕ್ಷ್ಯ ತೋರಿದ 2 ಪೇದೆಗಳ ಅಮಾನತು
Tv Actor: ಗೆಳತಿಗೆ ಲೈಂಗಿಕ ಕಿರುಕುಳ ನೀಡಿ ಕೊಲೆ ಬೆದರಿಕೆ; ಖ್ಯಾತ ಕಿರುತೆರೆ ನಟ ಅರೆಸ್ಟ್
Gangavathi: ಕ್ಲಿಫ್ ಜಂಪಿಂಗ್ ಜಲ ಸಾಹಸ ಕ್ರೀಡೆ ಅಸುರಕ್ಷಿತ..! ಅಪಾಯಕಾರಿ ಸಾಹಸ…
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.