ಶ್ರೀರಾಮ ನೇಪಾಳಿ, ಆಯೋಧ್ಯೆ ಇರುವುದು ನೇಪಾಳದಲ್ಲಿ: ಪ್ರಧಾನಿ ಕೆ.ಪಿ.ಶರ್ಮಾ ಒಲಿ
Team Udayavani, Jul 14, 2020, 8:53 AM IST
ಕಠ್ಮಂಡು: ರಾಮಜನ್ಮ ಭೂಮಿ ಆಯೋಧ್ಯೆ ವಾಸ್ತವವಾಗಿ ನೇಪಾಳದ ಕಠ್ಮಂಡುವಿನ ಸಮೀಪವಿರುವ ಒಂದು ಸಣ್ಣ ಹಳ್ಳಿಯಾಗಿದೆ ಎಂದು ಪ್ರಧಾನಿ ಕೆ.ಪಿ.ಶರ್ಮಾ ಒಲಿ ಹೇಳಿದ್ದಾರೆ.ಮಾತ್ರವಲ್ಲದೆ ರಾಮ ನೇಪಾಳಿ ಎನ್ನುವ ಮೂಲಕ ಹೊಸ ವಿವಾದ ಸೃಷ್ಟಿಸಿದ್ದಾರೆ.
ತಮ್ಮ ನಿವಾಸದಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಓಲಿ, ಭಾರತವು ಸಾಂಸ್ಕೃತಿಕ ದಬ್ಬಾಳಿಕೆ ಮತ್ತು ಅತಿಕ್ರಮಣ ಮಾಡುತ್ತಿದೆ. ವಿಜ್ಞಾನಕ್ಕೆ ನೇಪಾಳದ ಕೊಡುಗೆಯನ್ನು ಕಡಿಮೆ ಮಾಡಲಾಗಿದೆ. ನಿಜವಾದ ಆಯೋಧ್ಯೆ ಇರುವುದು ಬಿರ್ ಗುಂಜ್ ನ (ರಾಜಧಾನಿ ಕಠ್ಮಂಡುವಿನಿಂದ 135 ಕಿ.ಮೀ ದೂರದಲ್ಲಿರುವ ನೇಪಾಳದ ಜಿಲ್ಲೆ) ಪಶ್ಚಿಮ ಭಾಗದಲ್ಲಿರುವ ಥೋರಿ ನಗರದಲ್ಲಿ. ರಾಮ ಭಾರತದಲ್ಲಿ ಹುಟ್ಟಿದ್ದು ಎಂದು ಭಾರತ ಹೇಳುತ್ತಲೇ ಇದ್ದುದ್ದರಿಂದ ಸೀತಾದೇವಿ ಭಾರತದ ರಾಜಕುಮಾರ ರಾಮನನ್ನು ವಿವಾಹವಾಗಿದ್ದಳು ಎಂದು ನಾವು ನಂಬಿದ್ದೆವು.
ಭಾರತ ನಕಲಿ ಆಯೋಧ್ಯೆ ಸೃಷ್ಟಿಸಿದೆ. ಆ ಮೂಲಕ ಸಾಂಸ್ಕೃತಿಕ ಅತೀಕ್ರಮಣ ಮಾಡಿದೆ. ವಾಲ್ಮಿಕಿ ಆಶ್ರಮ ನೇಪಾಳಲದಲಿದ್ದು ರಾಜ ದಶರಥ ಪುತ್ರನನ್ನು ಪಡೆಯಲು ಧಾರ್ಮಿಕ ವಿಧಿಗಳನ್ನು ನಡೆಸಿಸ್ದು ರಿಧಿಯಲ್ಲಿ. ದಶರಥನ ಮಗ ರಾಮ ಭಾರತೀಯನಲ್ಲ. ನಾವು ಸಾಂಸ್ಕೃತಿಕವಾಗಿ ತುಳಿತಕ್ಕೊಳಗಾಗಿದ್ದೇವೆ. ಸತ್ಯವನ್ನು ಅತಿಕ್ರಮಿಸಲಾಗಿದೆ.
ಯಾವದೇ ಸಂಪರ್ಕ ವ್ಯವಸ್ಥೆ ಇಲ್ಲದಿರುವಾಗ ರಾಮ ಸೀತೆಯನ್ನು ವಿವಾಹವಾಗಲು ಜನಕಪುರ್ ಗೆ ಹೇಗೆ ಬಂದ ? ಇದೀಗ ಭಾರತದಲ್ಲಿರುವ ಆಯೋಧ್ಯೆಯಿಂದ ರಾಮ ಜನಕ್ ಪುರ್ ಗೆ ಬರುವುದು ಅಸಾಧ್ಯ. ಜನಕ್ ಪುರ್ ನೇಪಾಳದಲ್ಲಿಯೇ ಇದೆ. ಟೆಲಿಫೋನ್ ಇಲ್ಲದ ಸಮಯದಲ್ಲಿ ವಿವಾಹ ಮಾತುಕತೆ ನಡೆಯುತ್ತದೆ. ರಾಮನಿಗೆ ಜನಕ್ ಪುರ್ ಹೇಗೆ ಗೊತ್ತು ? ಎಂದು ಪ್ರಶ್ನಿಸಿದ್ದಾರೆ.
ಅಯೋಧ್ಯೆ ರಾಜ್ಯ ರಾಜಧಾನಿ ಲಕ್ನೋದಿಂದ 135 ಕಿ.ಮೀ ದೂರದಲ್ಲಿರುವ ಉತ್ತರ ಪ್ರದೇಶದ ಒಂದು ಪಟ್ಟಣ. ಇತ್ತೀಚಿಗಷ್ಟೆ ಲಿಪುಲೇಶ್, ಕಾಲಾಪಾನಿ, ಮತ್ತು ಲಿಂಪಿಯಾಧುರಾ ಪ್ರದೇಶಗಳನ್ನು ಒಳಗೊಂಡ ರಾಜಕೀಯ ಪರೀಷ್ಕೃತ ನಕ್ಷೆಯನ್ನು ಬಿಡುಗಡೆ ಮಾಡಿ ನೇಪಾಳ ವಿವಾದ ಸೃಷ್ಟಿಸಿತ್ತು.