ಟೈಮ್ಸ್ ಸ್ಕ್ವೇರ್‌ನಲ್ಲಿ ರಾಮರೂಪ ದರ್ಶನ ; ಅಮೆರಿಕದಲ್ಲೂ ಆ.5ಕ್ಕೆ ಕಾರ್ಯಕ್ರಮ ಪ್ರಸಾರ
Team Udayavani, Jul 31, 2020, 9:17 AM IST
ಸಾಂದರ್ಭಿಕ ಚಿತ್ರ
ವಾಷಿಂಗ್ಟನ್/ಲಕ್ನೋ: ರಾಮಮಂದಿರ ಭೂಮಿ ಪೂಜೆ ಸಂಭ್ರಮಕ್ಕೆ ಅಮೆರಿಕದ ಪ್ರತಿಷ್ಠಿತ ಟೈಮ್ಸ್ ಸ್ಕ್ವೇರ್ ಕೂಡ ಸಾಕ್ಷಿಯಾಗಲಿದೆ. ಆ.5ರ ಬೆಳಗ್ಗೆ 8ರಿಂದ ರಾತ್ರಿ 10 ಗಂಟೆವರೆಗೆ ಟೈಮ್ಸ್ ಸ್ಕ್ವೇರ್‌ನಲ್ಲಿ ಭೂಮಿಪೂಜೆ ಸಮಾರಂಭದ ವೀಡಿಯೊ, ಉದ್ದೇಶಿತ ರಾಮ ಮಂದಿರದ 3ಡಿ ಚಿತ್ರಗಳು, ರಾಮಜನ್ಮಭೂಮಿಯ ವಾಸ್ತುಶಿಲ್ಪಗಳನ್ನು ಪ್ರದರ್ಶಿ ಸಲಾಗುತ್ತದೆ. ಇಂಗ್ಲಿಷ್, ಹಿಂದಿಯಲ್ಲಿ “ಜೈ ಶ್ರೀರಾಮ್’ ಬರಹ ರಾರಾಜಿಸಲಿದೆ.
“ರಾಮ ಮಂದಿರ ನಿರ್ಮಾಣ ವಿಶ್ವದಾದ್ಯಂತ ನೆಲೆಸಿರುವ ಹಿಂದೂಗಳ ಕನಸು. ಇಂಥದ್ದೊಂದು ಮಹತ್ವದ ದಿನ ಬರುತ್ತದೆಂದು ನಾವ್ಯಾರೂ ಭಾವಿಸಿರಲಿಲ್ಲ. ಆದರೆ, ಮೋದಿ ಅವರ ಸಮರ್ಥ ನಾಯಕತ್ವದಿಂದಾಗಿ ಅಂಥ ಐತಿಹಾಸಿಕ ದಿನ ಬಂದಿದೆ’ ಎಂದು ಅಮೆರಿಕನ್ ಇಂಡಿಯನ್ ಪಬ್ಲಿಕ್ ಅಫೇರ್ಸ್ ಕಮಿಟಿಯ ಜಗದೀಶ್ ಸೆವ್ಹಾನಿ ಹರ್ಷ ವ್ಯಕ್ತಪಡಿಸಿದ್ದಾರೆ.
ಯೋಗಿ ಸಭೆ: ಗುಪ್ತಚರ ಇಲಾಖೆ ಉಗ್ರರ ದಾಳಿಯ ಮುನ್ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ಭೂಮಿಪೂಜೆಯಂದು ಅಯೋಧ್ಯೆಯಲ್ಲಿ ಭಾರೀ ಬಿಗಿಭದ್ರತೆ ಕಲ್ಪಿಸುವಂತೆ ಸಿಎಂ ಯೋಗಿ ಆದಿತ್ಯ ನಾಥ್, ಪೊಲೀಸ್ ಇಲಾಖೆಗೆ ಸೂಚಿಸಿದೆ. ಫೈಝಾಬಾದ್ ಅಲ್ಲದೆ ಸುತ್ತ ಮುತ್ತಲಿನ ಜಿಲ್ಲೆಗಳಲ್ಲಿ ಸಾಮಾಜಿಕ ವಿರೋಧಿ ಚಟುವಟಿಕೆಗಳಿಗೆ ಅವಕಾಶ ನೀಡಬಾರದು ಎಂದು ಆದೇಶಿಸಿದ್ದಾರೆ.
ಈ ಸಂಬಂಧ ಯೋಗಿ ಆದಿತ್ಯನಾಥ್ ಗುರು ವಾರ ಉನ್ನತ ಪೊಲೀಸ್ ಅಧಿಕಾರಿಗಳ ಸಭೆ ನಡೆಸಿ ದ್ದರು. ಕೊರೊನಾ ಸಂಬಂಧಿತ ಪ್ರೊಟೊ ಕಾಲ್‌ಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಪೊಲೀಸರಿಗೆ ಸೂಚಿಸಿದ್ದಾರೆ.
ವಿಹಿಂಪ ತಿರುಗೇಟು: ಭೂಮಿಪೂಜೆಯನ್ನು ವಿರೋಧಿ ಸುತ್ತಿರುವ ಸಂಸದ ಅಸಾದುದ್ದೀನ್ ಒವೈಸಿ, ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ, ಎನ್‌ಸಿಪಿ ನಾಯಕ ಶರದ್ ಪವಾರ್‌ಗೆ ವಿಹಿಂಪ ತಿರುಗೇಟು ನೀಡಿದೆ. “ಮಂದಿರ ಭಾರತದ ಹೆಮ್ಮೆಯ ಸಂಕೇತ. ಕೆಲವರು ವಿರೋಧವನ್ನೇ ರಾಜಕೀಯ ವ್ಯವಹಾರ ಮಾಡಿ ಕೊಂಡಿದ್ದಾರೆ. ಅದನ್ನು ಬಿಟ್ಟರೆ ಅವರಿಗೆ ಬೇರೆ ದಾರಿಗಳೇ ಉಳಿದಿಲ್ಲ’ ಎಂದು ವಿಹಿಂಪ ಪ್ರಧಾನ ಕಾರ್ಯದರ್ಶಿ ಮಿಲಿಂದ್ ಪರಾಂಡೆ ಟೀಕಿಸಿದ್ದಾರೆ.
ಇಪ್ಪತ್ತು ಉಗ್ರರಿಗೆ ಪಾಕ್ ತರಬೇತಿ
ಅಯೋಧ್ಯೆಯಲ್ಲಿ ಆ.5ರಂದು ನಡೆಯಲಿರುವ ಭೂಮಿಪೂಜೆಯನ್ನು ಗುರಿಯಾಗಿಸಿಕೊಂಡು ಉಗ್ರರು ದಾಳಿ ನಡೆಸುವ ಸಾಧ್ಯತೆಯಿದೆ ಎಂದು ಗುಪ್ತಚರ ಸಂಸ್ಥೆಗಳು ವರದಿ ಮಾಡಿವೆ. ಆ.5ರಂದು ಸಂವಿಧಾನದ 370ನೇ ವಿಧಿ ರದ್ದಾದ ವರ್ಷಾಚರಣೆಯೂ ಇದ್ದು, ಅದೇ ದಿನ ಅಯೋಧ್ಯೆಯ ರಾಮಮಂದಿರ ಹಾಗೂ ಜಮ್ಮು ಮತ್ತು ಕಾಶ್ಮೀರದಲ್ಲಿ ದಾಳಿ ನಡೆಸಲು ಉಗ್ರರು ಸಂಚು ರೂಪಿಸಿದ್ದಾರೆ. ಜತೆಗೆ, ಆ.15ರ ಸ್ವಾತಂತ್ರ್ಯ ದಿನದಂದೂ ದಾಳಿಗೆ ಯೋಜಿಸಲಾಗಿದೆ. ಈ ಕುಕೃತ್ಯಕ್ಕಾಗಿ ಪಾಕಿ ಸ್ಥಾನದ ಸೇನೆಯು 20 ಮಂದಿ ತಾಲಿಬಾನಿ ಉಗ್ರರಿಗೆ ತರಬೇತಿಯನ್ನೂ ನೀಡಿದೆ ಎಂದು ಗುಪ್ತಚರ ಸಂಸ್ಥೆಗಳು ಹೇಳಿವೆ. ಅಫ್ಘಾನಿಸ್ತಾನದ ಜಲಾಲಾಬಾದ್‌ನಲ್ಲಿ ಪಾಕ್ ಸೇನೆಯ ವಿಶೇಷ ಸೇವಾ ಸಮೂಹವು ಹಲವು ತಾಲಿಬಾನಿ ಉಗ್ರರಿಗೆ ತರಬೇತಿ ನೀಡಿದೆ. ಪಾಕ್ ಸೇನೆಯು 20-25 ಭಯೋತ್ಪಾದಕರನ್ನು ಜಮ್ಮು- ಕಾಶ್ಮೀರದ ಎಲ್‌ಒಸಿಯಲ್ಲಿ ಹಾಗೂ ಸುಮಾರು 5-6 ಉಗ್ರರನ್ನು ಭಾರತ-ನೇಪಾಲ ಗಡಿಯಲ್ಲಿ ಒಳನುಸುಳಲು ಸಹಾಯ ಮಾಡಲಿದೆ ಎಂದೂ ಹೇಳಲಾಗಿದೆ. ಈ ಹಿನ್ನೆಲೆಯಲ್ಲಿ ಅಯೋಧ್ಯೆ, ದಿಲ್ಲಿ, ಜಮ್ಮು ಮತ್ತು ಕಾಶ್ಮೀರದಲ್ಲಿ ಭದ್ರತೆ ಬಿಗಿಗೊಳಿಸಲಾಗಿದೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bangladesh:ಇಸ್ಕಾನ್ ನಿಷೇಧಿಸಲು ನಿರಾಕರಿಸಿದ ಬಾಂಗ್ಲಾದೇಶ ಹೈಕೋರ್ಟ್,ಸರ್ಕಾರಕ್ಕೆ ಮುಖಭಂಗ
Bengaluru ಭಯೋ*ತ್ಪಾದಕ ಚಟುವಟಿಕೆ ಆರೋಪಿ, ಉ*ಗ್ರ ಖಾನ್ ರುವಾಂಡದಿಂದ ಭಾರತಕ್ಕೆ ಗಡಿಪಾರು!
Pakistan: ಇಮ್ರಾನ್ ಬಿಡುಗಡೆಗೆ ಬೆಂಬಲಿಗರ ಪ್ರತಿಭಟನೆ: ಹಿಂಸಾಚಾರ, ಸಾವಿರಾರು ಜನರ ಬಂಧನ
Appoint: ಲಾಕ್‌ಡೌನ್ ಟೀಕಿಸಿದ್ದ ಜಯ ಭಟ್ಟಾಚಾರ್ಯ ಅಮೆರಿಕ ಆರೋಗ್ಯ ಸಂಸ್ಥೆ ಮುಖ್ಯಸ್ಥ
Pakistan: ಪೊಲೀಸರ ಕಾರ್ಯಾಚರಣೆಗೆ ಪಿಟಿಐ ಪ್ರತಿಭಟನೆ ರದ್ದು!
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
HIGH COURT: ಬಿಎಸ್‌ವೈ ವಿರುದ್ಧದ ಪೋಕ್ಸೋ ಪ್ರಕರಣ: ವಿಚಾರಣೆ ಮುಂದಕ್ಕೆ
BSY ಸಿಎಂ ಸ್ಥಾನ ಕಳೆದುಕೊಳ್ಳಲು ರೇವಣ್ಣ ಕಾರಣ: ಜಿಟಿಡಿ ಆರೋಪ
Congress Govt.,: ಅಧಿವೇಶನದಲ್ಲಿ ಉ.ಕ.ಕ್ಕೆ ಕೊಟ್ಟ ಹಣದ ಲೆಕ್ಕ ಕೇಳುತ್ತೇವೆ: ಅಶೋಕ್
BJP: ಅಶಿಸ್ತಿನ ವಿರುದ್ಧ ಹೈಕಮಾಂಡ್ ಕ್ರಮ ಕೈಗೊಳ್ಳಲಿ: ಡಿವಿಎಸ್
National Highway ಅವ್ಯವಸ್ಥೆ ಸಂಬಂಧಿಸಿ ನಾಗರಿಕರ ಅಹವಾಲಿಗೆ ವೇದಿಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.