ಚಿನ್ನಲೇಪಿತ ಚೌಕಟ್ಟಿನ ಗಾಂಧೀಜಿ ಕನ್ನಡಕ ಹರಾಜಿಗೆ
Team Udayavani, Aug 11, 2020, 6:00 AM IST
ಲಂಡನ್: ಭಾರತದ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಧರಿಸಿ ದ್ದರೆನ್ನಲಾದ ಚಿನ್ನದ ಲೇಪನದ ಚೌಕಟ್ಟು ಹೊಂದಿರುವ ಜೋಡಿ ಕನ್ನಡಕ ಇದೀಗ ಇಂಗ್ಲೆಂಡಿನಲ್ಲಿ ಹರಾಜಿಗೆ ಸಿದ್ಧವಾಗಿದೆ. 10 ಸಾವಿರ ಮತ್ತು 15 ಸಾವಿರ ಪೌಂಡ್‌ನಷ್ಟು ಬೆಲೆ ಬಾಳುವ ಈ ಕನ್ನಡಕಗಳು ವಿಶ್ವದ ಬಿಡ್‌ದಾರರನ್ನು ಆಕರ್ಷಿಸಿವೆ.
ಪ್ರತಿಷ್ಠಿತ ಬ್ರಿಟಿಷ್ ಕುಟುಂಬವೊಂದರ ಒಡೆತನ ದಲ್ಲಿದ್ದ ಕನ್ನಡಕಗಳನ್ನು ಈಗ ನೈರುತ್ಯ ಇಂಗ್ಲೆಂಡಿನ ಹ್ಯಾನ್‌ಹ್ಯಾಂನ ಈಸ್ಟ್ ಬ್ರಿಸ್ಟಲ್ ಹರಾಜು ಕೇಂದ್ರದಲ್ಲಿ ಸಂರಕ್ಷಿಸಿಡಲಾ ಗಿದೆ. ಮಾರಾಟ ಗಾರನ ಚಿಕ್ಕಪ್ಪ 1910- 1930ರ ನಡುವೆ ದಕ್ಷಿಣ ಆಫ್ರಿಕದ ಬ್ರಿಟಿಷ್ ಪೆಟ್ರೋಲಿಯಂನಲ್ಲಿ ಕೆಲಸ ಮಾಡು ತ್ತಿ ದ್ದರು. ಈ ವೇಳೆ ಗಾಂಧೀಜಿ ಒಂದು ವಿಶೇಷ ಉಪಕಾರಕ್ಕಾಗಿ ಕನ್ನಡಕಗಳನ್ನು ಉಡುಗೊರೆ ನೀಡಿದ್ದರು.
ಗಾಂಧೀಜಿ ಈ ಕನ್ನಡಕಗಳನ್ನು ಇಂಗ್ಲೆಂಡಿನಲ್ಲಿ ಓದುತ್ತಿದ್ದಾಗ ಖರೀದಿಸಿದ್ದರು ಎಂದು ತಿಳಿದು ಬಂದಿದೆ. ಸಿ1920 ಚಿನ್ನ ಲೇಪಿತ ವೃತ್ತಾಕಾ ರದ ರಿಮ್ಡ್ ಕನ್ನಡಕಗಳ ಮೂಗಿನ ಪಟ್ಟಿಗೂ ಬಂಗಾರದ ಲೇಪನ ನೀಡಲಾಗಿದೆ. ಗಾಂಧೀಜಿ ಕ್ರಮೇಣ ಭಾರತದ ಸ್ವಾತಂತ್ರ್ಯ ಚಳವಳಿಯಲ್ಲಿ ದೊಡ್ಡ ಹೆಸರು ಮಾಡುವ ಹೊತ್ತಿಗೆ, ಅವರ ಕನ್ನಡಕವೂ ಬ್ರ್ಯಾಂಡ್ ಆಗಿ ಜನರನ್ನು ಸೆಳೆದಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kim Jong Un: ಉತ್ತರ ಕೊರಿಯಾದಿಂದ ಆತ್ಮಹತ್ಯಾ ಡ್ರೋನ್ ಪರೀಕ್ಷೆ
Iran: ಹಿಜಾಬ್ ನಿರಾಕರಿಸಿದರೆ ವಿಶೇಷ ಕ್ಲಿನಿಕ್: ಇರಾನ್ ತೀರ್ಮಾನಕ್ಕೆ ಆಕ್ರೋಶ
Canada: ದೇಗುಲದ ಮೇಲೆ ದಾಳಿ: ಕೆನಡಾ ಪೊಲೀಸ್‌ಗೆ ಕ್ಲೀನ್‌ಚಿಟ್
UK; ಪ್ರಧಾನಿ ದೀಪಾವಳಿ ಪಾರ್ಟಿಯಲ್ಲಿ ಮದ್ಯ, ಮಾಂಸ: ಕೊನೆಗೂ ಕ್ಷಮೆ ಯಾಚನೆ
Sri Lanka Election Result:ಸಂಸತ್ ಚುನಾವಣೆ-ಅಧ್ಯಕ್ಷ ಅನುರಾ ದಿಸ್ಸಾನಾಯಕೆ ಪಕ್ಷ ಜಯಭೇರಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.