ಮಲಯಾಳಂ ಚಲನಚಿತ್ರ “ಜಲ್ಲಿಕಟ್ಟು” ಗೆ ಕೈ ತಪ್ಪಿದ ಆಸ್ಕರ್
93 ನೇ ಅಕಾಡೆಮಿ ಅವಾರ್ಡ್ ಗೆ ಆಯ್ಕೆಯಾಗದೇ ಹೊರಗುಳಿದ ಜಲ್ಲಿಕಟ್ಟು
Team Udayavani, Feb 10, 2021, 4:57 PM IST
ಕ್ಯಾಲಿಫೋರ್ನಿಯಾ : ವಿಮರ್ಶಾತ್ಮಕವಾಗಿ ಮೆಚ್ಚುಗೆ ಪಡೆದು ಅಂತರಾಷ್ಟ್ರೀಯ ಫೀಚರ್ ಫಿಲ್ಮ್ ವಿಭಾಗಕ್ಕೆ ಪ್ರವೇಶ ಪಡೆದ ಭಾರತೀಯ ಮಲಯಾಳಂ ಚಲನಚಿತ್ರ “ಜಲ್ಲಿಕಟ್ಟು” 93 ನೇ ಅಕಾಡೆಮಿ ಅವಾರ್ಡ್ ಗೆ ಆಯ್ಕೆಯಾಗದೇ ವಿಫಲವಾಗಿದೆ.
ಬುಧವಾರ(ಫೆ.10)ದಂದು ಅಕಾಡೆಮಿ ಆಫ್ ಮೋಷನ್ ಪಿಕ್ಚರ್ ಆರ್ಟ್ಸ್ ಹಾಗೂ ಸೈನ್ಸ್ ಹೊರಡಿಸಿದ 9 ವಿಭಾಗಗಳ ಶಾರ್ಟ್ ಲಿಸ್ಟ್ ನಿಂದ ಲಿಜೊ ಜೋಸ್ ಪೆಲ್ಲಿಸ್ಸೆರಿ ಅವರ ಮಲಯಾಳಂ ಚಿತ್ರ “ಜಲ್ಲಿಕಟ್ಟು” ಹೊರಗುಳಿದಿದೆ.
ಓದಿ : “ಇ’ವಾಹನಗಳತ್ತ ಜನರ ಚಿತ್ತ
ಅಕಾಡೆಮಿ ಬಿಡುಗಡೆಗೊಳಿಸಿದ ಶಾರ್ಟ್ ಲಿಸ್ಟ್ ನಲ್ಲಿ 15 ಚಲನಚಿತ್ರಗಳು ಮುಂದಿನ ಸುತ್ತಿಗೆ ಆಯ್ಕೆಗೊಂಡಿವೆ. 93 ದೇಶಗಳ ಚಲನಚಿತ್ರಗಳು ಅಕಾಡೆಮಿ ಪ್ರಶಸ್ತಿಗಾಗಿ ಪೈಪೋಟಿ ನಡೆಸಿದ್ದವು.
ಹರೀಶ್ ಅವರ Maoist(ಮಾವೋವಾದಿ) ಎಂಬ ಸಣ್ಣ ಕಥೆಯಾಧಾರಿತ “ಜಲ್ಲಿಕಟ್ಟು” ಚಿತ್ರದಲ್ಲಿ ಆ್ಯಂಟೋನಿ ವಾರ್ಗೀಸ್, ಚೆಂಬನ್ ವಿನೋದ್ ಜೋಸ್, ಸಬುಮೊನ್ ಅಬ್ದುಸಮದ್, ಸಂತಿ ಬಾಲಚಂದ್ರನ್ ಒಳಗೊಂಡ ದೊಡ್ಡ ತಾರಾಗಣವೇ ಇದ್ದಿತ್ತು.
ಕೇರಳದ ಖಸಾಯಿಕಾನೆಯೊಂದರಿಂದ ಅಪಹರಿಸಲ್ಪಟ್ಟ ಒಂದು ಎಮ್ಮೆಯ ಸುತ್ತ ಕಥೆ ನಡೆಯುತ್ತದೆ. ಅದರ ಬೆನ್ನು ಹಿಡಿದ ಪಟ್ಟಣವಾಸಿಗಳಿಂದ ಗದ್ದಲ ಸೃಷ್ಟಿಯಾಗುತ್ತದೆ. ಇಡೀ ಚಿತ್ರದಲ್ಲಿ ಕಥಾವಸ್ತು ಮಾನವೀಯತೆಯ ಕರಾಳ ಮುಖವನ್ನು ತೋರಿಸುತ್ತದೆ.
ಇನ್ನು, ಆಸ್ಕರ್ ಪ್ರಶಸ್ತಿಗಾಗಿ ಅಂತಿಮ ನಾಮಪತ್ರಗಳನ್ನು ಮಾರ್ಚ್ 15 2021ರಂದು ಘೋಷಿಸಲಾಗುತ್ತದೆ. ಏಪ್ರಿಲ್ 25ರಂದು ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ ಎಂದು ಸುದ್ದಿ ಮೂಲಗಳು ತಿಳಿಸಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pakistan: ಪಾಕ್ನಲ್ಲಿ ಹಿಂಸಾಚಾರ; ಒಟ್ಟು 37 ಮಂದಿ ಸಾವು
Adani; ಆಸೀಸ್ ಕಲ್ಲಿದ್ದಲು ಗಣಿಯಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಆರೋಪ
London: ಶಂಕಾಸ್ಪದ ಲಗೇಜ್ ಪತ್ತೆ: ಲಂಡನ್ ಏರ್ಪೋರ್ಟ್ ಖಾಲಿ ಮಾಡಿಸಿ ತನಿಖೆ!
ಆಕಸ್ಮಿಕವಾಗಿ ಹಾರಿದ ಗುಂಡು: ಬರ್ತ್ ಡೇ ದಿನವೇ ಹಾರಿ ಹೋಯ್ತು ಭಾರತೀಯ ಮೂಲದ ವಿದ್ಯಾರ್ಥಿ ಜೀವ
Canada-India Row: ನಿಜ್ಜರ್ ಹತ್ಯೆ ಹಿಂದೆ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Surathkal: ಎಐಯಿಂದ ಉದ್ಯೋಗ, ನಂಬಿಕೆಗೆ ಕುತ್ತು: ಪ್ರೊ| ಗೋವಿಂದನ್ ರಂಗರಾಜನ್
Result: ಮಹಾರಾಷ್ಟ್ರದಲ್ಲಿ ಎನ್ಡಿಎಗೆ ಜಯಭೇರಿ; ಮೋದಿ ನಾಯಕತ್ವಕ್ಕೆ ಮನ್ನಣೆ: ನಳಿನ್
Mangaluru: ಗೊಂದಲ ಮೂಡಿಸುವ ಬಿಜೆಪಿಗೆ ತಕ್ಕ ಪಾಠ: ಕೆಪಿಸಿಸಿ ಪ್ರ.ಕಾರ್ಯದರ್ಶಿ ಪದ್ಮರಾಜ್
Putturu: ಬಜೆಟ್ನಲ್ಲಿ ಹೊರಡಿಸಿರುವ ಆದೇಶ ಅನುಷ್ಠಾನಿಸದೆ ಕೃಷಿಕರಿಗೆ ವಂಚನೆ: ಮಠಂದೂರು
Udupi: ಪೇಜಾವರ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ -ಗೃಹ ಸಚಿವ ಅಮಿತ್ ಶಾ ಭೇಟಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.