ಗಡಿಪಾರು ವಿಚಾರಣೆ ಆರಂಭ: ಆಪಾದನೆಗಳೆಲ್ಲ ಸುಳ್ಳು: ಮಲ್ಯ
Team Udayavani, Dec 4, 2017, 5:10 PM IST
ಲಂಡನ್ : ಮದ್ಯ ದೊರೆ ವಿಜಯ್ ಮಲ್ಯ ಅವರನ್ನು ಭಾರತಕ್ಕೆ ಗಡಿಪಾರು ಮಾಡುವ ಕುರಿತ ವಿಚಾರಣೆ ಲಂಡನ್‌ನ ವೆಸ್ಟ್‌ಮಿನಿಸ್ಟರ್ ಮ್ಯಾಜಿಸ್ಟ್ರೇಟ್ ಕೋರ್ಟ್ ನಲ್ಲಿ ಇಂದು ಸೋಮವಾರ ಮತ್ತೆ ಆರಂಭವಾಗಿದ್ದು ವಿಚಾರಣೆ ಎದುರಿಸಲು ಮಲ್ಯ ಅವರು ಕೋರ್ಟಿಗೆ ಹಾಜರಾಗಿದ್ದಾರೆ.
ತಮ್ಮ ಮುಚ್ಚಿಹೋಗಿರುವ ಕಿಂಗ್‌ಫಿಶರ್ ಏರ್ ಲೈನ್ಸ್‌ಗೆ ಸಂಬಂಧಿಸಿದಂತೆ, 61ರ ಹರೆಯದ ವಿಜಯ್ ಮಲ್ಯ ಅವರು ಭಾರತದಲ್ಲಿ ವಿವಿಧ ಬ್ಯಾಂಕುಗಳಲ್ಲಿ ಸುಮಾರು 9,000 ಕೋಟಿ ರೂ.ಗಳನ್ನು ಬಾಕಿ ಇರಿಸಿ ಕಳೆದ ವರ್ಷ ಮಾರ್ಚ್‌ನಲ್ಲಿ ಲಂಡನ್‌ಗೆ ಪಲಾಯನ ಮಾಡಿದ್ದರು.
ಭಾರೀ ಪ್ರಮಾಣದ ಹಣ ವಂಚನೆ, ದುರುಪಯೋಗ ಇತ್ಯಾದಿ ಆರೋಪಗಳ ಮೇಲೆ ಸ್ಕಾಟ್ಲಂಡ್ ಯಾರ್ಡ್ ಪೊಲೀಸರಿಂದ ಬಂಧಿಸಲ್ಪಟ್ಟಿದ್ದ ಮಲ್ಯ 6,50 ಲಕ್ಷ ಪೌಂಡ್ ಬಾಂಡ್ ಮೇಲೆ ಬೇಲ್ ಪಡೆದು ಸದ್ಯ ಹೊರಗಿದ್ದಾರೆ.
ಲಂಡನ್ ವೆಸ್ಟ್ ಮಿನಿಸ್ಟರ್ ಕೋರ್ಟಿನಲ್ಲಿ ವಿಚಾರಣೆ ಎದುರಿಸಿದ ಮದ್ಯ ದೊರೆ ವಿಜಯ್ ಮಲ್ಯ ಇಂದು ಹೇಳಿದ್ದು ಇಷ್ಟು : ನನ್ನ ವಿರುದ್ಧದ ಆರೋಪಗಳು ಸುಳ್ಳು, ನಿರಾಧಾರ ಮತ್ತು ಸೃಷ್ಟಿಸಲ್ಪಟ್ಟು ಎಂದು ನಾನು ಈ ತನಕವೂ ಪದೇ ಪದೇ ಹೇಳುತ್ತಾ ಬಂದಿದ್ದೇನೆ; ಇದಕ್ಕೆ ಹೊರತಾಗಿ ನನಗೆ ಬೇರೇನೂ ಹೇಳುವುದಕ್ಕಿಲ್ಲ; ನಾನು ಕೋರ್ಟಿಗೆ ಸಲ್ಲಿಸಿರುವ ಹೇಳಿಕೆಯಲ್ಲೇ ಇದು ಸಷ್ಟವಿದೆ.
ಕೋರ್ಟ್ ವಿಚಾರಣೆಯು ವಾದಗಳೊಂದಿಗೆ ಆರಂಭಗೊಂಡಿದ್ದು ಇದನ್ನು ಅನುಸರಿಸಿ ವಾಯು ಯಾನ ತಜ್ಞರಾದ ಡಾ. ಬಿ ಹಂಫ್ರೆàಸ್ ಅವರು ಸಾಕ್ಷ್ಯ ನುಡಿಯಲಿದ್ದಾರೆ.
ಮಲ್ಯ ವಿರುದ್ಧದ ಗಡಿಪಾರು ವಿಚಾರಣೆ ಡಿ.14ರ ವರೆಗೆ ನಡೆಯಲಿದೆ. ಡಿ.6 ಮತ್ತು 8ರ ದಿನಾಂಕವನ್ನು ನಾನ್ ಸೆಟ್ಟಿಂಗ್ ಡೇ ಎಂದು ಗುರುತಿಸಲಾಗಿದೆ. ಮುಂದಿನ ವರ್ಷದ ಆರಂಭದ ವರೆಗೂ ತೀರ್ಪನ್ನು ನಿರೀಕ್ಷಿಸುವಂತಿಲ್ಲ ಎನ್ನಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hala Modi; ಮಿನಿ ಹಿಂದೂಸ್ಥಾನಕ್ಕೆ ಸಾಕ್ಷಿಯಾಗುತ್ತಿದ್ದೇನೆ: ಕುವೈಟ್ ನಲ್ಲಿ ಮೋದಿ
9/11-ಶೈಲಿಯಲ್ಲಿ ರಷ್ಯಾದ ವಸತಿ ಕಟ್ಟಡಗಳ ಮೇಲೆ ಉಕ್ರೇನ್ ನಿಂದ ಸರಣಿ ಡ್ರೋನ್ ದಾಳಿ!
German: ಮಾರುಕಟ್ಟೆಗೆ ನುಗ್ಗಿದ ಕಾರು, ಇಬ್ಬರು ಸಾವು, 60ಕ್ಕೂ ಹೆಚ್ಚು ಗಾಯ, ವೈದ್ಯನ ಬಂಧನ
GDP ಕುಸಿತ: ಆರ್ಥಿಕ ಹಿಂಜರಿತದತ್ತ ನ್ಯೂಜಿಲ್ಯಾಂಡ್
Afghanistan: 2 ಅಪಘಾತ: 50 ಸಾವು, 76 ಮಂದಿಗೆ ಗಾಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Belgavi: ಸಿ.ಟಿ.ರವಿ ಪ್ರಕರಣ ಮುಂದುವರಿಸುವಲ್ಲಿ ಅರ್ಥವೇ ಇಲ್ಲ: ಸಚಿವ ಸತೀಶ್ ಜಾರಕಿಹೊಳಿ
Kota: ಕೋಟಾದಲ್ಲಿ ಮತ್ತೂಬ್ಬ ವಿದ್ಯಾರ್ಥಿ ಆತ್ಮಹತ್ಯೆ: ವರ್ಷದ 17ನೇ ಪ್ರಕರಣ
Allu Arjun; ತಪ್ಪು ಮಾಹಿತಿ, ಚಾರಿತ್ರ್ಯ ಹರಣಕ್ಕೆ ಯತ್ನ: ರೇವಂತ್ ರೆಡ್ಡಿಗೆ ತಿರುಗೇಟು
R Ashwin: ಅಶ್ವಿನ್‌ಗೆ ಖೇಲ್ ರತ್ನ; ಕ್ರೀಡಾ ಸಚಿವರಿಗೆ ಸಂಸದರಿಂದ ಪತ್ರ
Virat Kohli: ಬಾಕ್ಸಿಂಗ್ ಡೇ ಟೆಸ್ಟ್‌ಗೂ ಮುನ್ನ ವಿರಾಟ್ ನೂತನ ಕೇಶ ವಿನ್ಯಾಸ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.