ಚೀನ ಹೊಟೇಲ್‌ ಕೋಣೆಯಲ್ಲಿ ಕಳ್ಳ ಸೆಕ್ಸ್‌ ಕ್ಯಾಮೆರಾ: ಆರೋಪಿ ಸೆರೆ


Team Udayavani, Jul 2, 2018, 5:27 PM IST

spy-sex-camera-700.jpg

ಬೀಜಿಂಗ್‌ : ಹೊಟೇಲ್‌ ರೂಮ್‌ ಪಡೆಯುವ ಯುವ ಜೋಡಿಗಳು ತಾವು ಉಳಿದುಕೊಳ್ಳುವ ಕೊಠಡಿಯಲ್ಲಿ ಕಳ್ಳ ವಿಡಿಯೋ ಕ್ಯಾಮೆರಾ ಅಳವಡಿಸಲಾಗಿದೆಯೇ ಎಂಬುದನ್ನು ಖಾತರಿಪಡಿಸಿಕೊಳ್ಳದೇ ಹೋದಲ್ಲಿ ತಮ್ಮ ಸೆಕ್ಸ್‌  ಖಾಸಗೀತನ ಹರಾಜಾಗುವ ಅಪಾಯವನ್ನು ಎದುರಿಸಬೇಕಾಗುತ್ತದೆ ಎಂಬುದಕ್ಕೆ ಚೀನದ ಒಂದು ಉದಾಹರಣೆ ಈಗ ಎದುರಾಗಿದೆ.

ಚೀನದ ಸಿಚುವಾನ್‌ ಪ್ರಾಂತ್ಯದಲ್ಲಿನ ಐಶಾರಾಮಿ ಹೊಟೇಲ್‌ ಒಂದರಲ್ಲಿ ಈ ವರ್ಷ ಮಾರ್ಚ್‌ ತಿಂಗಳಲ್ಲಿ  ಚೀನೀ ವ್ಯಕ್ತಿಯೋರ್ವ ಎರಡು ಕೋಣೆಗಳನ್ನು ಬಾಡಿಗೆಗೆ ಪಡೆದಿದ್ದ; ಯಾರಿಗೂ ಗೊತ್ತಾಗದ ರೀತಿಯಲ್ಲಿ ಆತ ಅತೀ ಸಣ್ಣ ವಿಡಿಯೋ ಕ್ಯಾಮೆರಾ ಕಣ್ಣನ್ನು ಕೋಣೆಯ ಸೂರಿನಲ್ಲಿ ತೂತು ಮಾಡಿ ಇರಿಸಿದ್ದ. ಇದಕ್ಕೆ ಯಾವುದೇ ವಯರ್‌ಗಳಿಲ್ಲದಿರುವುದರಿಂದ ಇದು ಯಾರ ಗಮನಕ್ಕೂ ಬರುವಂತಿರಲಿಲ್ಲ. ಹೊಟೇಲಿನವರಿಗಂತೂ ಈ ವಿಷಯವೇ ಗೊತ್ತಿರಲಿಲ್ಲ !

ಈ ಕ್ಯಾಮೆರಾ ಕಣ್ಣಿನ ರಿಮೋಟ್‌ ಮೂಲಕ ಆ ವ್ಯಕ್ತಿ  ತಾನಿರುವ ಕಡೆಯಿಂದಲೇ ಅದನ್ನು  ಆನ್‌, ಆಫ್ ಮಾಡುತ್ತಿದ್ದ. ಈ ಕಳ್ಳ ಕ್ಯಾಮೆರಾ ಕಣ್ಣು  ಚಿತ್ರೀಕರಿಸಿಕೊಳ್ಳುತ್ತಿದ್ದ ಯುವ ಜೋಡಿಗಳ ಸೆಕ್ಸ್‌ ಖಾಸಗೀತನ ಆತ ನೀಟಾಗಿ ತನ್ನ ಕಂಪ್ಯೂಟರ್‌ನಲ್ಲಿ ಡೌನ್‌ ಲೋಡ್‌ ಮಾಡಿಕೊಳ್ಳುತ್ತಿದ್ದ; ಬಳಿಕ ಅವುಗಳನ್ನು ಭಾರೀ ದುಬಾರಿ ಬೆಲೆ ಇಂಟರ್‌ನೆಟ್‌ನಲ್ಲಿ ಮಾರಾಟ ಮಾಡುತ್ತಿದ್ದ. ಅಂತೆಯೇ ಆತನ ಈ ದುಷ್ಕೃತ್ಯದಿಂದ ಅನೇಕಾನೇಕ ಯುವ ಜೋಡಿಗಳ ಕಾಮದಾಟ ಇಂಟರ್‌ನೆಟ್‌ನಲ್ಲಿ ಜಗಜ್ಜಾಹೀರಾಗಿತ್ತು. 

ಕೆಲ ದಿನಗಳ ಹಿಂದೆ ಇದೇ ಹೊಟೇಲ್‌ನ ಆ ಕೋಣೆಗೆ ಒಂದು ಯುವ ಜೋಡಿ ಬಂದಿತ್ತು. ಅದು ಹೇಗೋ ಆ ಯುವ ಜೋಡಿಗೆ ಮಂಚದ ಮೇಲಿನ ಸೂರಿನಲ್ಲಿರುವ ತೂತಿನಲ್ಲಿ ಅದೇನೋ ವಸ್ತು ಕಂಡು ಬಂದಿತ್ತು. ಒಡನೆಯೇ ಜಾಗೃತಗೊಂಡ ಈ ಜೋಡಿ ತಾವು ಪತ್ತೆ ಹಚ್ಚಿದ ವಸ್ತು ವಿಡಿಯೋ ಕ್ಯಾಮೆರಾ ಕಣ್ಣು ಎನ್ನುವುದು  ಖಚಿತವಾಯಿತು. ಕೂಡಲೇ ಈ ಜೋಡಿ ಹೊಟೇಲ್‌ ಆಡಳಿತಕ್ಕೆ ಮತ್ತು ಪೊಲೀಸರಿಗೆ ದೂರು ನೀಡಿತು. 

ಪೊಲೀಸರು ಈ ಕ್ಯಾಮೆರಾ ಕಣ್ಣಿನ ಜಾಡನ್ನು ಅರಸುತ್ತಾ, ಅದನ್ನು ಯಾರಿಗೂ ಕಾಣದಂತೆ ಇರಿಸಿದ್ದ ವ್ಯಕ್ತಿಯ ನಿವಾಸವನ್ನು ತಲುಪಿದರು. ಅಲ್ಲಿದ್ದ ಆ ಕಳ್ಳ ಖದೀಮನನ್ನು ಬಂಧಿಸಿದರು. ಆತನ ಕಂಪ್ಯೂಟರ್‌ನಲ್ಲಿ ಆತ ಶೇಖರಿಸಿಟ್ಟಿದ್ದ ವಿವಿಧ ಜೋಡಿಗಳ ಸುಮಾರು 3 ಟೆರಾಬೈಟ್‌ ಸೆಕ್ಸ್‌ ವಿಡಿಯೋ ಡಾಟಾವನ್ನು ಮತ್ತು ಹಾರ್ಡ್‌ ಡಿಸ್ಕ್ ಅನ್ನು ವಶಪಡಿಸಿಕೊಂಡರು. 

ಆರೋಪಿಯು ಈ ಸೆಕ್ಸ್‌ ವಿಡಿಯೋ ಪ್ರದರ್ಶಿಸುವ ತನ್ನದೇ ಆದ ಆನ್‌ಲೈನ್‌ ಸೈಟ್‌ ಕೂಡ ಆರಂಬಿಸಿದ್ದ. ತಿಂಗಳ ಶುಲ್ಕ ಪಾವತಿಯ ಮೇಲೆ ಅನೇಕ ಸದಸ್ಯರನ್ನೂ ನೋಂದಾಯಿಸಿಕೊಂಡಿದ್ದ.  ಈಗಿನ್ನು ಪೊಲೀಸರು ಈ ಆನ್‌ಲೈನ್‌ ಸೈಟಿನ ಸದಸ್ಯತ್ವ ಪಡೆದವರ ವಿರುದ್ಧ ಕೂಡ ಕಾನೂನು ಕ್ರಮ ಜರುಗಿಸುತ್ತಾರೋ ಎಂಬುದು ಗೊತ್ತಾಗಿಲ್ಲ. 

ಸೌತ್‌ ಚೈನಾ ಮಾರ್ನಿಂಗ್‌ ಪೋಸ್ಟ್‌  ಈ ಕಳ್ಳ ಖದೀಮನು ನಡೆಸಿದ್ದ  ಸೆಕ್ಸ್‌ ವಿಡಿಯೋ ಕ್ಯಾಮೆರಾ ಕಣ್ಣಿನ ಪ್ರಹಸವನ್ನು ವರದಿ ಮಾಡಿದೆ.

ಟಾಪ್ ನ್ಯೂಸ್

BJP_Cong

Local Bodies: ಸ್ಥಳೀಯ ಸಂಸ್ಥೆ ಉಪಚುನಾವಣೆ: ಕಾಂಗ್ರೆಸ್‌ 8, ಬಿಜೆಪಿ 3, ಪಕ್ಷೇತರ 1

newspaper

Medical Asist: ಪತ್ರಿಕಾ ವಿತರಕರಿಗೆ ವೈದ್ಯ ನೆರವು: 70 ವರ್ಷಕ್ಕೆ ವಯೋಮಿತಿ ಹೆಚ್ಚಳ

CM-Siddu-High-Court

MUDA Case: ಮುಡಾ ನಿವೇಶನ ಹಗರಣ ಸಿಬಿಐಗೆ: ಡಿ. 10ಕ್ಕೆ ವಿಚಾರಣೆ ಮುಂದೂಡಿಕೆ

High-Court

Order: ಮಗು ಆರೈಕೆ ರಜೆ: ಸಿಎಟಿ ಆದೇಶ ಎತ್ತಿಹಿಡಿದ ಹೈಕೋರ್ಟ್‌

Tamil-tahala

Pro Kabaddi: ಯೋಧಾಸ್‌ಗೆ ತಲೈವಾಸ್‌ ಆಘಾತ

Hockey

Hockey: ಇಂದಿನಿಂದ ಜೂ. ಏಷ್ಯಾ ಕಪ್‌ ಹಾಕಿ; ಭಾರತಕ್ಕೆ ಥಾಯ್ಲೆಂಡ್‌ ಎದುರಾಳಿ

Murder-Represent

Bengaluru: ಪ್ರಿಯಕರನಿಂದಲೇ ಪ್ರೇಯಸಿ ಎದೆಗೆ ಇರಿದು ಹ*ತ್ಯೆ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Pakistan: 6 security personnel hit, shoot-at-sight order

Pakistan: 6 ಮಂದಿ ಭದ್ರತಾ ಸಿಬ್ಬಂದಿ ಸಾವು, ಕಂಡಲ್ಲಿ ಗುಂಡು ಆದೇಶ

Pakistan: ಪಾಕ್‌ ಸೇನೆ ಮತ್ತು ಇಮ್ರಾನ್‌ ಸಂಘರ್ಷ- ಯುಎಇ ಮಧ್ಯಸ್ಥಿಕೆ ವಹಿಸಲಿ: ಐಎಸ್‌ ಐ

Pakistan: ಪಾಕ್‌ ಸೇನೆ ಮತ್ತು ಇಮ್ರಾನ್‌ ಸಂಘರ್ಷ- ಯುಎಇ ಮಧ್ಯಸ್ಥಿಕೆ ವಹಿಸಲಿ: ಐಎಸ್‌ ಐ

Bangladesh:ಬಂಧನಕ್ಕೊಳಗಾದ ಇಸ್ಕಾನ್‌ ನ ಕೃಷ್ಣದಾಸ್‌ ಗೆ ಜಾಮೀನು ನಿರಾಕರಿಸಿದ ಬಾಂಗ್ಲಾ ಕೋರ್ಟ್

Bangla:ಬಂಧನಕ್ಕೊಳಗಾದ ಇಸ್ಕಾನ್‌ ನ ಕೃಷ್ಣದಾಸ್‌ ಗೆ ಜಾಮೀನು ನಿರಾಕರಿಸಿದ ಬಾಂಗ್ಲಾ ಕೋರ್ಟ್

Census: ಇರಾಕ್‌ನಲ್ಲಿ 37 ವರ್ಷಗಳ ಬಳಿಕ ಗಣತಿ… 4.54 ಕೋಟಿ ಜನಸಂಖ್ಯೆ

Census: ಇರಾಕ್‌ನಲ್ಲಿ 37 ವರ್ಷಗಳ ಬಳಿಕ ಗಣತಿ… 4.54 ಕೋಟಿ ಜನಸಂಖ್ಯೆ

Bangala-Krishna-Das

Tensions Grip: ಬಾಂಗ್ಲಾದೇಶ ಸರಕಾರದಿಂದ ಹಿಂದೂ ನಾಯಕ, ಇಸ್ಕಾನ್‌ನ ಕೃಷ್ಣದಾಸ್‌ ಸೆರೆ

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

BJP_Cong

Local Bodies: ಸ್ಥಳೀಯ ಸಂಸ್ಥೆ ಉಪಚುನಾವಣೆ: ಕಾಂಗ್ರೆಸ್‌ 8, ಬಿಜೆಪಿ 3, ಪಕ್ಷೇತರ 1

newspaper

Medical Asist: ಪತ್ರಿಕಾ ವಿತರಕರಿಗೆ ವೈದ್ಯ ನೆರವು: 70 ವರ್ಷಕ್ಕೆ ವಯೋಮಿತಿ ಹೆಚ್ಚಳ

CM-Siddu-High-Court

MUDA Case: ಮುಡಾ ನಿವೇಶನ ಹಗರಣ ಸಿಬಿಐಗೆ: ಡಿ. 10ಕ್ಕೆ ವಿಚಾರಣೆ ಮುಂದೂಡಿಕೆ

High-Court

Order: ಮಗು ಆರೈಕೆ ರಜೆ: ಸಿಎಟಿ ಆದೇಶ ಎತ್ತಿಹಿಡಿದ ಹೈಕೋರ್ಟ್‌

Tamil-tahala

Pro Kabaddi: ಯೋಧಾಸ್‌ಗೆ ತಲೈವಾಸ್‌ ಆಘಾತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.