ಚಲಿಸುತ್ತಿದ್ದ ವಿಮಾನದಿಂದ ಜಿಗಿದ ಪ್ರಯಾಣಿಕ!
Team Udayavani, Jun 27, 2021, 3:16 PM IST
ಲಾಸ್ ಏಂಜಲೀಸ್: ಚಲಿಸುತ್ತಿದ್ದ ವಿಮಾನದಿಂದ ಪ್ರಯಾಣಿಕನೋರ್ವ ಹಾರಿದ ಘಟನೆ ಅಮೆರಿಕಾದ ಲಾಸ್ ಏಂಜಲೀಸ್ ನಲ್ಲಿ ನಡೆದಿದೆ. ಪ್ರಯಾಣಿಕನನ್ನು ವಶಕ್ಕೆ ಪಡೆದು ನಂತರ ಆಸ್ಪತ್ರೆಗೆ ದಾಖಲಿಸಲಾಗಿದೆ.
ಲಾಸ್ ಏಂಜಲೀಸ್ ಅಂತಾರಾಷ್ಟ್ರೀಯ ವಿಮಾ ನಿಲ್ದಾಣದಿಂದ ಸಾಲ್ಟ್ ಲೇಕ್ ಸಿಟಿಗೆ ಹೊರಟಿದ್ದ ಸ್ಕೈವೆಸ್ಟ್ ಕಂಪೆನಿಯ ಯುನೈಟೆಡ್ ಎಕ್ಸ್ಪ್ರೆಸ್ ವಿಮಾನವು ರಾತ್ರಿ 7 ಗಂಟೆಗೆ ಟೇಕ್ ಆಫ್ಗೆ ಸಿದ್ಧವಾದಂತೆ ಪ್ರಯಾಣಿಕನೊಬ್ಬ ವಿಮಾನದಿಂದ ಹೊರಹೋಗಲು ಈ ರೀತಿ ಪ್ರಯತ್ನ ಮಾಡಿದ್ದಾನೆ.
ಆತ ಮೊದಲಿಗೆ ಕಾಕ್‌ಪಿಟ್ ಪ್ರವೇಶಿಸಲು ಪ್ರಯತ್ನಿಸಿದ್ದ, ಆದರೆ ನಂತರ ಸರ್ವಿಸ್ ಬಾಗಿಲು ತೆರೆಯುವಲ್ಲಿ ಯಶಸ್ವಿಯಾದ ಆತ ಎಮರ್ಜೆನ್ಸಿ ಸ್ಲೈಡ್‌ನಿಂದ ಟಾರ್ಮ್ಯಾಕ್ ಗೆ ಹಾರಿದ ಎಂದು ಸುದ್ದಿ ಸಂಸ್ಥೆ ಅಸೋಸಿಯೇಟೆಡ್ ಪ್ರೆಸ್ ವರದಿ ಮಾಡಿದೆ.
ಇದನ್ನೂ ಓದಿ:ಜಮ್ಮು ವಾಯು ಪಡೆ ನಿಲ್ದಾಣದ ಮೇಲೆ ಡ್ರೋನ್ ಬಾಂಬ್ ದಾಳಿ ಶಂಕೆ
ಟ್ಯಾಕ್ಸಿವೇನಲ್ಲಿ ತಕ್ಷಣ ಆ ಯಾತ್ರಿಯನ್ನು ವಿಮಾನ ನಿಲ್ದಾಣದ ಅಧಿಕಾರಿಗಳು ವಶಕ್ಕೆ ತೆಗೆದುಕೊಂಡರು. ಕೂಡಲೇ ಪ್ರಥಮ ಚಿಕಿತ್ಸೆ ನೀಡಿ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು.
ಘಟನೆಯ ಬಳಿಕ ಯುನೈಟೆಡ್ ಎಕ್ಸ್ಪ್ರೆಸ್ ವಿಮಾನವು ತನ್ನ ಗೇಟ್‌ಗೆ ಮರಳಿದೆ. ಮೂರು ಗಂಟೆಗಳ ನಂತರವೂ ವಿಮಾನ ಹಾರಾಟ ನಡೆಸಲು ಸಾಧ್ಯವಾಗಲಿಲ್ಲ. ವಿಮಾನದಲ್ಲಿದ್ದ ಬೇರೆ ಯಾರೂ ಗಾಯಗೊಂಡಿಲ್ಲ ಎಂದು ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್ (ಎಫ್‌ಎಎ) ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Adani; ಆಸೀಸ್ ಕಲ್ಲಿದ್ದಲು ಗಣಿಯಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಆರೋಪ
London: ಶಂಕಾಸ್ಪದ ಲಗೇಜ್ ಪತ್ತೆ: ಲಂಡನ್ ಏರ್‌ಪೋರ್ಟ್ ಖಾಲಿ ಮಾಡಿಸಿ ತನಿಖೆ!
ಆಕಸ್ಮಿಕವಾಗಿ ಹಾರಿದ ಗುಂಡು: ಬರ್ತ್ ಡೇ ದಿನವೇ ಹಾರಿ ಹೋಯ್ತು ಭಾರತೀಯ ಮೂಲದ ವಿದ್ಯಾರ್ಥಿ ಜೀವ
Canada-India Row: ನಿಜ್ಜರ್ ಹತ್ಯೆ ಹಿಂದೆ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ
Khalistan; ಕೆನಡಾ ಹಿಂದೂಗಳ ಮೇಲೆ ದಾಳಿ: ಉಗ್ರರ ಹೊಸ ಬೆದರಿಕೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.