27 ವರ್ಷಗಳ ಹಿಂದೆ ನಾಪತ್ತೆಯಾದವ ನೆರೆಮನೆಯ ನೆಲಮಾಳಿಗೆಯಲ್ಲಿ ಪತ್ತೆ!!: ವಿಡಿಯೋ ವೈರಲ್
ಅಂತರ್ಯುದ್ಧದಲ್ಲಿ ಪ್ರಾಣ ಕಳೆದುಕೊಂಡಿದ್ದ ಎಂದು ಭಾವಿಸಿದ್ದರು..
Team Udayavani, May 16, 2024, 5:00 PM IST
ಅಲ್ಜೀರಿಯಾ: 26 ವರ್ಷಗಳ ಹಿಂದೆ ನಾಪತ್ತೆಯಾಗಿದ್ದ ಹದಿಹರೆಯದ ತರುಣನನ್ನು ಆತನ ಮನೆಯಿಂದ ಕೇವಲ 100 ಮೀಟರ್ ದೂರದ ನೆರೆಮನೆಯ ನೆಲಮಾಳಿಗೆಯಿಂದ ರಕ್ಷಿಸಲಾಗಿದೆ. ಈ ಘಟನೆಯ ವಿಡಿಯೋ ವೈರಲ್ ಆಗಿದೆ.
ನ್ಯೂಯಾರ್ಕ್ ಪೋಸ್ಟ್ ಪ್ರಕಾರ, 1998 ರಲ್ಲಿ ಒಮರ್ ಬಿನ್ ಒಮ್ರಾನ್ 17 ನೇ ವಯಸ್ಸಿನಲ್ಲಿ ಶಾಲೆಗೆ ಹೋಗುತ್ತಿದ್ದಾಗ ಅಪಹರಣಕ್ಕೊಳಗಾಗಿದ್ದ.ಅಲ್ಜೀರಿಯಾದಲ್ಲಿನ ತನ್ನ ನಿವಾಸದಿಂದ ಕೇವಲ 100 ಮೀಟರ್ ದೂರದಲ್ಲಿ ಜೀವಂತವಾಗಿ ಪತ್ತೆಯಾಗಿದ್ದಾನೆ. ಈಗ 45 ವರ್ಷ ವಯಸ್ಸಿನ ಒಮರ್ ಅವರನ್ನು ನೆರೆಮನೆಯವನೇ ಅಪಹರಿಸಿ ಮನೆಯಲ್ಲಿ ನೆಲಮಾಳಿಗೆಯಲ್ಲಿ ಅಕ್ರಮ ಬಂಧನದಲ್ಲಿ ಇರಿಸಿದ್ದ. ಒಂಟಿಯಾಗಿ ವಾಸಿಸುತ್ತಿದ್ದ 61 ವರ್ಷದ ವೃದ್ದನೇ ಅಪಹರಿಸಿದ್ದು ಆತನನ್ನು ಪೊಲೀಸರು ಕಸ್ಟಡಿಗೆ ತೆಗೆದುಕೊಂಡಿದ್ದಾರೆ.ಈ ಘೋರ ಅಪರಾಧ ಎಸಗಿದ ಅಪರಾಧಿಗೆ ಕಠಿನ ಶಿಕ್ಷೆ ವಿಧಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಭಾನುವಾರ ಭದ್ರತಾ ಪಡೆಗಳು ಒಮರ್‌ನನ್ನು ರಕ್ಷಿಸಿದ ಕ್ಷಣದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಉದ್ದನೆಯ ಗಡ್ಡವನ್ನು ಹೊಂದಿರುವ ಒಮರ್ ನೆಲಮಾಳಿಗೆಯಿಂದ ಹೊರಬರಲು ಸಹಾಯ ಪಡೆದಿದ್ದು ನಡುಗುತ್ತಿರುವುದನ್ನು ಕಾಣಬಹುದಾಗಿದೆ.
ತನ್ನ ಸಹೋದರನೇ ಅಪಹರಣದಲ್ಲಿ ಭಾಗಿಯಾಗಿದ್ದಾನೆ ಎಂದು ಅಪಹರಣಗೈದವನ ಒಡಹುಟ್ಟಿದವ ಸಾಮಾಜಿಕ ಮಾಧ್ಯಮದಲ್ಲಿ ಬಹಿರಂಗಪಡಿಸಿದ ನಂತರ ಪೊಲೀಸರಿಗೆ ಮಾಹಿತಿ ಲಭ್ಯವಾಯಿತು. ಪಿತ್ರಾರ್ಜಿತ ಅಸ್ತಿ ವಿವಾದದಲ್ಲಿ ಸಹೋದರರ ಜಗಳ ಮಾಹಿತಿ ಬಹಿರಂಗಕ್ಕೆ ಕಾರಣವಾಯಿತು.
ಅಧಿಕಾರಿಗಳು ಮನೆಗೆ ನುಗ್ಗಿ ಹುಡುಕಿದಾಗ, ನೆಲದ ಮೇಲೆ ಹುಲ್ಲು ಹಾಸಿನ ಕೆಳಗೆ ಟ್ರ್ಯಾಪ್ಡೋರ್ ಕಂಡುಕೊಂಡಿದ್ದು ಒಳ ಪ್ರವೇಶಿಸಿ ರಕ್ಷಣೆ ನಡೆಸಿದ್ದಾರೆ. ಅಪಹರಣಕಾರನ ಮೇಲೆ ಒಮರ್‌ನ ನಾಯಿಯನ್ನು ಕೊಂದ ಆರೋಪವೂ ಇದೆ. ರಕ್ಷಿಸಿದ ನಂತರ ಒಮರ್‌ನನ್ನು ಸ್ಥಳೀಯ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆದೊಯ್ಯಲಾಗಿದೆ.
1990 ರ ದಶಕದಲ್ಲಿ ದೇಶದ ಅಂತರ್ಯುದ್ಧದ ಸಮಯದಲ್ಲಿ ಒಮರ್ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಕುಟುಂಬದ ಇತರ ಸದಸ್ಯರು ಭಾವಿಸಿದ್ದರು. ಆದರೆ ತಾಯಿ ಮಾತ್ರ ಮಗನನ್ನು ಹುಡುಕುತ್ತಲೇ ಇದ್ದರು. ಆಕೆ 2013 ರಲ್ಲಿ ನೋವಿನಲ್ಲೇ ನಿಧನ ಹೊಂದಿದ್ದಳು. ”ಕಿಟಕಿಯ ಮೂಲಕ ಅಪಹರಣಕಾರನ ಮನೆಯಲ್ಲಿರುವುದನ್ನು ನಾವು ನೋಡಿದ್ದೆವು ಆದರೆ ಮಾತನಾಡಿಸಲು ಅಥವಾ ಕರೆಯಲು ಸಾಧ್ಯವಾಗಲಿಲ್ಲ” ಎಂದು ಒಮರ್ ಕುಟುಂಬ ಸದಸ್ಯರು ಹೇಳಿರುವುದಾಗಿ ಅಲ್ಜೀರಿಯಾದ ಸುದ್ದಿವಾಹಿನಿಗಳು ವರದಿ ಮಾಡಿವೆ.
NEW: Man who disappeared 27 years ago at the age of 17, found alive 200 meters from his family’s home in a neighbor’s cellar.
Insane.
Omar Bin Omran of Algeria disappeared 27 years ago. He went missing in 1998 on his way to a vocational school.
A 61-year-old is in police… pic.twitter.com/idkvSCykmh
— Collin Rugg (@CollinRugg) May 15, 2024
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Afghanistan: 2 ಅಪಘಾತ: 50 ಸಾವು, 76 ಮಂದಿಗೆ ಗಾಯ
Missile Development: ಕ್ಷಿಪಣಿ ನಿರ್ಮಾಣ ಆರೋಪ: ಪಾಕ್‌ಗೆ ಅಮೆರಿಕ ನಿರ್ಬಂಧ
Viral Video: ಖ್ಯಾತ ನ್ಯೂಸ್ ಆ್ಯಂಕರ್ ನ ಖಾಸಗಿ ವಿಡಿಯೋ ಲೀಕ್..? ಸಿಕ್ಕಾಪಟ್ಟೆ ವೈರಲ್
Donald Trump: ನೀವು ತೆರಿಗೆ ಹಾಕಿದರೆ ನಾವೂ ಹಾಕುತ್ತೇನೆ… ಭಾರತಕ್ಕೆ ಟ್ರಂಪ್ ಎಚ್ಚರಿಕೆ
Earthquake…! ರೋಡ್ ರೋಲರ್ ಶಬ್ದವನ್ನು ಭೂಕಂಪ ಎಂದು ಗ್ರಹಿಸಿ ಕಿಟಕಿಯಿಂದ ಜಿಗಿದರು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.