ಆಕಸ್ಮಿಕವಾಗಿ ಖಾತೆಗೆ ಬಂತು 4.26 ಕೋಟಿ ರೂ.: ದುಡ್ಡು ಬಳಸಿ ದುಬಾರಿ ಜೀವನ ನಡೆಸಿದಾತನಿಗೆ ಜೈಲು ಶಿಕ್ಷೆ.!
Team Udayavani, Dec 14, 2022, 10:57 AM IST
ನವದೆಹಲಿ: ಯಾರೋ ಆಕಸ್ಮಿಕವಾಗಿ ಬ್ಯಾಂಕ್ ಖಾತೆಗೆ ಹಾಕಿದ ಹಣವನ್ನು ಖರ್ಚು ಮಾಡಿದ ಪರಿಣಾಮ ಯುವಕನೊಬ್ಬ ಜೈಲು ಶಿಕ್ಷೆಯನ್ನು ಅನುಭವಿಸಿರುವ ಘಟನೆ ಆಸ್ಟ್ರೇಲಿಯಾದಲ್ಲಿ ನಡೆದಿರುವುದು ಬೆಳಕಿಗೆ ಬಂದಿದೆ.
ರ‍್ಯಾಪರ್ ಆಗಿರುವ 24 ವರ್ಷದ ಅಬ್ದೆಲ್ ಘಾಡಿಯಾ ಎಂಬುವನನ್ನು ಪೊಲೀಸರು ಬಂಧಿಸಿದ್ದಾರೆ.
ಘಟನೆ ಹಿನ್ನೆಲೆ: ತಾರಾ ಥಾರ್ನೆ ಆಕೆಯ ಪತಿ ಕೋರಿ ಸಿಡ್ನಿಯಲ್ಲಿ ತಾವೊಂದು ಮನೆ ಖರೀದಿಸಬೇಕೆಂದು ಸೇವಿಂಗ್ಸ್ (4.26 ಕೋಟಿ ರೂ.) ಹಣವನ್ನು ಕೂಡಿರುತ್ತಾರೆ. ದಲ್ಲಾಳಿಯಾಗಿರುವ ಆಡಮ್ ಮ್ಯಾಗ್ರೋ ಎನ್ನುವವರ ಜೊತೆ ವ್ಯವಹಾರ ಮಾಡಲು ಶುರು ಮಾಡುತ್ತಾರೆ. ಆದರೆ ಕೆಲ ದಿನಗಳ ಬಳಿಕ ಆಡಮ್ ಮ್ಯಾಗ್ರೋ ಅವರ ಇಮೇಲ್ ಹ್ಯಾಕ್ ಆಗಿದೆ ಎಂದು ದಂಪತಿಗೆ ತಿಳಿಯುತ್ತದೆ.
ತಾವು ಕಳುಹಿಸಿದ ಹಣ ಅಬ್ದೆಲ್ ಘಾಡಿಯಾ ಅವರ ಖಾತೆಗೆ ಜಮಾವಣೆಯಾಗಿರುತ್ತದೆ. ಅಬ್ದೆಲ್ ಘಾಡಿಯಾ ಈ ಹಣವನ್ನು ದುಬಾರಿ ಬಟ್ಟೆ ಹಾಗೂ ಚಿನ್ನದ ಬಿಸ್ಕೆಟ್ ಗಳನ್ನು, ಮೇಕಪ್ ಐಟಂಗಳನ್ನು ಖರೀದಿಸುತ್ತಾನೆ. ಇದೇ ದುಡ್ಡಿನಲ್ಲಿ ಆತ ಹಾಡುಗಳನ್ನು ಮಾಡುತ್ತಾನೆ. ಆಕಸ್ಮಿಕವಾಗಿ ಹಣವನ್ನು ಯಾರೋ ಹಾಕಿದ್ದಾರೆಂದು ಭಾವಿಸಿ ಎಲ್ಲವನ್ನೂ ಖರ್ಚು ಮಾಡಿ ಐಷಾರಾಮಿ ಜೀವನವನ್ನು ಸಾಗಿಸಿದ ಅಬ್ದೆಲ್ ನನ್ನು ಪೊಲೀಸರು ಬಂಧಿಸಿದ್ದಾರೆ.
ಕೋಟರಿನ ಮುಂದೆ ಹಾಜರ್ ಪಡಿಸಿದ್ದು, ಆತನಿಗೆ 18 ತಿಂಗಳು ಜೈಲು ಶಿಕ್ಷೆಯನ್ನು ನೀಡಿಯೆಂದು ಕೋರ್ಟ್ ತೀರ್ಪು ನೀಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pakistan; ಶಿಯಾ ಮುಸ್ಲಿಮರನ್ನು ಗುರಿಯಾಗಿರಿಸಿ ಗುಂಡಿನ ದಾಳಿ: ಕನಿಷ್ಠ 38 ಬ*ಲಿ
Netanyahu ವಿರುದ್ಧ ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯದಿಂದ ಬಂಧನ ವಾರಂಟ್
Russia ದಿಂದ ಉಕ್ರೇನ್ ಮೇಲೆ ICBM ದಾಳಿ; ನ್ಯೂಕ್ಲಿಯರ್ ದಾಳಿ ಉದ್ವಿಗ್ನತೆ ಹೆಚ್ಚಳ
Chrome Browser: ಗೂಗಲ್ ಸರ್ಚ್ ಎಂಜಿನ್ ಕ್ರೋಮ್ ಮಾರಾಟ?
ವಾಯುವ್ಯ ಅಮೆರಿಕಕ್ಕೆ ಅಪ್ಪಳಿಸಿದ ಬಾಂಬ್ ಸೈಕ್ಲೋನ್, 6 ಲಕ್ಷ ಮನೆಗಳಿಗೆ ವಿದ್ಯುತ್ ಕಡಿತ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.