45 ವರ್ಷಗಳ ಬಳಿಕ ದಾದಿಯನ್ನು ಹುಡುಕಿಕೊಂಡು ಬೊಲಿವಿಯಾಗೆ ಹೊರಟ! ವಿಡಿಯೋ ನೋಡಿ
Team Udayavani, Sep 29, 2022, 11:38 AM IST
ಲಾ ಪಜ್: ವಿಶೇಷ ಕಾರಣಕ್ಕಾಗಿ ವಿಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಒಬ್ಬ ವ್ಯಕ್ತಿ 45 ವರ್ಷಗಳ ನಂತರ ತನ್ನ ಮಾಜಿ ದಾದಿಯನ್ನು ಭೇಟಿಯಾಗಲು ಸ್ಪೇನ್ ನಿಂದ ಬೊಲಿವಿಯಾಕ್ಕೆ ಪ್ರಯಾಣಿಸಿದ್ದಾನೆ. ಅವರು ತಮ್ಮ ಸಂಪೂರ್ಣ ಪ್ರಯಾಣವನ್ನು ರೆಕಾರ್ಡ್ ಮಾಡಿದ್ದು, ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊ ಮಾಂಟೇಜ್ ಹಂಚಿಕೊಂಡಿದ್ದಾರೆ.
ಗುಡ್‌ನ್ಯೂಸ್ ಮೂವ್‌ಮೆಂಟ್ ಟ್ವಿಟರ್ ಹ್ಯಾಂಡಲ್ ನಲ್ಲಿ ಈ ವಿಡಿಯೋ ಹಂಚಿಕೊಂಡಿದೆ. ಈತ ಅಂಬೆಗಾಲಿಡುತ್ತಿರುವಾಗ ತನ್ನನ್ನು ನೋಡಿಕೊಳ್ಳುತ್ತಿದ್ದ ತನ್ನ ಹಿಂದಿನ ದಾದಿಯನ್ನು ಹೇಗೆ ಪತ್ತೆಹಚ್ಚಿದನು ಎಂಬುದನ್ನು ಇದು ತೋರಿಸುತ್ತದೆ. ದಾದಿ ಅನಾ ಅವನನ್ನು ತನ್ನ ಸ್ವಂತ ಮಗುವಿನಂತೆ ನೋಡಿಕೊಂಡಿದ್ದಳು, ಹೀಗಾಗಿ ಹಲವು ವರ್ಷಗಳ ಬಳಿಕ ಆಕೆಯನ್ನು ನೋಡಲು ಬೊಲಿವಿಯಾಕ್ಕೆ ಬಂದಿದ್ದಾನೆ.
ಇದನ್ನೂ ಓದಿ:ಒಂದೇ ಪಂದ್ಯದಲ್ಲಿ ಎರಡೆರಡು ದಾಖಲೆ ಮುರಿದ ಸೂರ್ಯಕುಮಾರ್ ಯಾದವ್
“45 ವರ್ಷಗಳ ನಂತರ ಈ ಮನುಷ್ಯನು ತನ್ನ ಹಿಂದಿನ ದಾದಿ ಅನಾರನ್ನು ಹುಡುಕಿದ್ದಾನೆ. ಈ ಮಹಿಳೆ ಬಾಲ್ಯದಲ್ಲಿ ಅವನನ್ನು ತನ್ನ ಸ್ವಂತ ಮಗನಂತೆ ನೋಡಿಕೊಂಡಿದ್ದರು”ಎಂದು ವೀಡಿಯೊ ಕ್ಯಾಪ್ಶನ್ ಹಾಕಲಾಗಿದೆ.
ಆತನನ್ನು 45 ವರ್ಷಗಳ ಬಳಿಕ ಕಂಡ ಅನಾ ಭಾವುಕರಾದರು. ಈ ಭಾವುಕ ಕ್ಷಣಗಳ ವಿಡಿಯೋ ಇಲ್ಲಿದೆ.
After more than 45 years apart this man finds his former nanny named Ana. An incredible woman who took care of him as a child as if he were her own son. (?:juanitojonsson)
— GoodNewsCorrespondent (@GoodNewsCorres1) September 28, 2022
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kazakhstan: ಅಜೆರ್ಬೈಜಾನ್ ಏರ್ ಲೈನ್ಸ್ ಪತನ, 25ಕ್ಕೂ ಅಧಿಕ ಪ್ರಯಾಣಿಕರ ಮೃತ್ಯು?
Afghanistan: ತಾಲಿಬಾನ್ ನೆಲೆಗಳ ಮೇಲೆ ಪಾಕಿಸ್ತಾನ ವೈಮಾನಿಕ ದಾಳಿ? 25ಕ್ಕೂ ಅಧಿಕ ಸಾ*ವು
UK: ಒಂದೇ ನಿಮಿಷದಲ್ಲಿ 49 ಗ್ರಾಂ ಕಾಟನ್ ಕ್ಯಾಂಡಿ ಸೇವಿಸಿ ದಾಖಲೆ ಬರೆದ ಮಹಿಳೆ
American Airlines ಅಮೆರಿಕ: ವಿಮಾನಯಾನ ವ್ಯತ್ಯಯ,”ಕ್ರಿಸ್ಮಸ್’ಗೆ ಅಡ್ಡಿ
Bangladesh: 42,600 ಕೋಟಿ ರೂ. ಲಂಚ ಕೇಸ್: ಹಸೀನಾ ವಿರುದ್ಧ ತನಿಖೆ ಶುರು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.