ಅಮೆರಿಕದಲ್ಲಿ ಮಂಗಳೂರು ಮೂಲದ ಮಹಿಳೆ, ಪತಿ ಹತ್ಯೆ
Team Udayavani, May 7, 2017, 3:45 AM IST
ವಾಷಿಂಗ್ಟನ್/ಮಂಗಳೂರು: ಬಜಪೆ ಮೂಲದ ಮಹಿಳೆ ಮತ್ತು ಆಕೆಯ ಪತಿಯನ್ನು ಅಮೆರಿಕದ ಕ್ಯಾಲಿಫೋರ್ನಿಯಾದ ಸ್ಯಾನ್‌ಜೋಸ್‌ನಲ್ಲಿ ಈ ದಂಪತಿಯ ಪುತ್ರಿಯ ಮಾಜಿ ಪ್ರೇಮಿ ಗುಂಡಿಕ್ಕಿ ಕೊಲೆ ಮಾಡಿದ ಘಟನೆ ಮೇ 3ರಂದು ನಡೆದಿದೆ. ಹಂತಕ ಬಳಿಕ ಅಮೆರಿಕದ ಪೊಲೀಸರ ಗುಂಡೇಟಿಗೆ ಬಲಿಯಾಗಿದ್ದಾನೆ.
ಬಜಪೆ ಮೂಲದ ಮಹಿಳೆ ರಿಯಾನಾ (48) ಮತ್ತು ಆಕೆಯ ಪತಿ ಮುಂಬಯಿ ಮೂಲದ ನರೇನ್ ಪ್ರಭು (50) ಹಂತಕನ ಗುಂಡೇಟಿಗೆ ಬಲಿಯಾದವರು. ಅಮೆರಿಕದ ಮಿಝಾì ಟಟಿಕ್ (24) ಪೊಲೀಸರಿಂದ ಹತನಾದ ಹಂತಕ. ಹಂತಕ ಮಿಝಾì ಟಟಿಕ್ ದಂಪತಿಯ ಪುತ್ರಿ ರ್ಯಾಶೆಲ್‌ನ ಮಾಜಿ ಪ್ರಿಯಕರ. ನರೇನ್- ರಿಯಾನಾ ದಂಪತಿಯ ಸಾನ್ ಜೋಸ್‌ನಲ್ಲಿರುವ ಲಾರಾ ವಿಲ್ ಲೇನ್‌ನಲ್ಲಿರುವ ಮನೆಯಲ್ಲಿ ಈ ಘಟನೆ ಸಂಭವಿಸಿದೆ.
ಪ್ರೀತಿ ನಿರಾಕರಣೆ: ರ್ಯಾಶೆಲ್ ಅವರು ಈ ಹಿಂದೆ ಮಿಝಾìನನ್ನು ಪ್ರೀತಿಸುತ್ತಿದ್ದಳು. ಆದರೆ ಆತನ ನಡತೆ ಸರಿ ಇಲ್ಲ ಎಂಬ ಕಾರಣಕ್ಕಾಗಿ ಒಂದು ವರ್ಷದ ಹಿಂದೆ ಆಕೆ ಆತನ ಸಂಬಂಧವನ್ನು ಕಡಿದುಕೊಂಡಿದ್ದಳು. ಆದರೆ ಆತ ಆಕೆಯನ್ನು ಪ್ರೀತಿಸುವಂತೆ ಬಲವಂತಪಡಿಸುತ್ತಿದ್ದ. ಆಕೆ ಇನ್ನೂ ವ್ಯಾಸಂಗ ಮಾಡುತ್ತಿದ್ದು, ಆತನ ಕಿರುಕುಳ ಜಾಸ್ತಿಯಾದಾಗ ಹೆತ್ತವರು ಆಕೆಯನ್ನು ಮನೆಯಿಂದ ದೂರ ಕಳುಹಿಸಿ ವಾಸ್ತವ್ಯಕ್ಕೆ ಪ್ರತ್ಯೇಕ ವ್ಯವಸ್ಥೆ ಮಾಡಿ ಕಲಿಕೆಗೆ ಅನುವು ಮಾಡಿ ಕೊಟ್ಟಿದ್ದರು. ಬೇಸತ್ತ ಮಿಝಾì ಮನೆಮಂದಿಯ ಮೇಲೆ ಆಕ್ರೋಶ ಹೊಂದಿದ್ದು, ಬೆದರಿಕೆ ಹಾಕುತ್ತಿದ್ದನು. ಆತ ಪುತ್ರಿಗೆ ಕಿರುಕುಳ ನೀಡದಂತೆ ದಂಪತಿ ನ್ಯಾಯಾಲಯದಿಂದ ತಡೆಯಾಜ್ಞೆಯನ್ನೂ ತಂದಿದ್ದರು. ಇದರಿಂದ ತೀವ್ರ ಆಕ್ರೋಶಿತನಾದ ಮಿಝಾì ಮೇ 3ರಂದು ರಾತ್ರಿ ದಂಪತಿಯ ಮನೆಗೆ ತೆರಳಿ ಗುಂಡು ಹಾರಿಸಿ ಕೊಲೆ ಮಾಡಿದ್ದಾನೆ.
ಒತ್ತೆಯಾಳು ಬಿಡುಗಡೆ: ಬುಧವಾರ ರಾತ್ರಿ ದಂಪತಿಯ ಮನೆಯಲ್ಲಿದ್ದ ಪುತ್ರ ಪೊಲೀಸರಿಗೆ ಫೋನ್ ಮಾಡಿ ತನ್ನ ಹೆತ್ತವರನ್ನು ಶಂಕಿತ ವ್ಯಕ್ತಿಯೊಬ್ಬ ಕೊಲೆ ಮಾಡಿರುವುದಾಗಿ ತಿಳಿಸಿದ್ದರು. ಪೊಲೀಸರು ಆಗಮಿಸಿದಾಗ ನರೇನ್ ಪ್ರಭು ಮನೆಯ ಬಾಗಿಲ ಬಳಿ ರಕ್ತದ ಮಡುವಿನಲ್ಲಿ ಬಿದ್ದಿರುವುದು ಕಂಡು ಬಂದಿತ್ತು. ತನ್ನ ತಾಯಿ ಮತ್ತು 13 ವರ್ಷದ ಇನ್ನೋರ್ವ ಪುತ್ರ ಹಾಗೂ ಶಂಕಿತ ವ್ಯಕ್ತಿ ಮನೆಯ ಇನ್ನೊಂದು ಕೊಠಡಿಯಲ್ಲಿ ಇರುವುದಾಗಿ ತಿಳಿಸಿದ್ದ. ಬಳಿಕ ಮಿಝಾì ಮತ್ತು ಪೊಲೀಸ್ ಮಧ್ಯೆ ಸಂಧಾನ ಯತ್ನ ನಡೆಯಿತು. ಈ ನಡುವೆ ಪೊಲೀಸರು ಹೆಚ್ಚುವರಿ ಪಡೆಯನ್ನು ಕರೆಸಿದರು. ಆಗ ಆರೋಪಿ ಮಿಝಾì ಕೊಠಡಿಯಲ್ಲಿ ಒತ್ತೆಯಾಳಾಗಿ ಕೂಡಿ ಹಾಕಿದ್ದ 13 ವರ್ಷದ ಮಗನನ್ನು ಬಿಡುಗಡೆ ಮಾಡಿದ. ಆರೋಪಿ ಮಿಝಾì 13 ವರ್ಷದ ಮಗನ ಫೋನ್ ಉಪಯೋಗಿಸಿ ತನ್ನ ಮಾಜಿ ಪ್ರೇಯಸಿ ರ್ಯಾಶೆಲ್‌ಗೆ ಕರೆ ಮಾಡಿ ಮಾತನಾಡಲು ಯತ್ನಿಸಿದ್ದ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
White House; ಎಐ ಹಿರಿಯ ಸಲಹೆಗಾರರಾಗಿ ಭಾರತ ಮೂಲದ ವ್ಯಕ್ತಿ ನೇಮಕ
Syria ಮಾಜಿ ಅಧ್ಯಕ್ಷ ಅಸಾದ್‌ಗೆ ವಿಚ್ಛೇದನ ಕೊಡಲು ಪತ್ನಿ ಚಿಂತನೆ?
Sheikh ಹಸೀನಾರನ್ನು ಬಾಂಗ್ಲಾದೇಶಕ್ಕೆ ವಾಪಸ್ ಕಳುಹಿಸಿ: ಭಾರತಕ್ಕೆ ಬಾಂಗ್ಲಾ ಮನವಿ
You Tuber: ನೀಲಿ ಚಿತ್ರತಾರೆ ಆಗಲು ಪಿಎಚ್ ಡಿ ಕಲಿಕೆಯನ್ನೇ ತೊರೆದ ಖ್ಯಾತ ಯೂಟ್ಯೂಬರ್
Plane Mishap: ಲಘು ವಿಮಾನ ಪತನ… ಬ್ರೆಜಿಲ್ ನ ಉದ್ಯಮಿ ಸೇರಿ ಹತ್ತು ಮಂದಿ ಮೃತ್ಯು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.