Mars; ಕೆಂಪು ಗ್ರಹದಲ್ಲಿ ಬೃಹತ್ ಜ್ವಾಲಾಮುಖಿ, ನೀರ್ಗಲ್ಲು!; ಆವಿಷ್ಕಾರದ ಲಾಭವೇನು?
ಸಕ್ರಿಯವಾಗಿರುವ ಜ್ವಾಲಾಮುಖಿ ಪತ್ತೆ
Team Udayavani, Mar 15, 2024, 6:20 AM IST
ಟೆಕ್ಸಾಸ್: ಕೆಂಪು ಗ್ರಹದ ವಿಸ್ಮಯಗಳ ಸಾಲಿಗೆ ಮತ್ತೂಂದು ಸೇರ್ಪಡೆಯೆಂಬಂತೆ, ಮಂಗಳ ಗ್ರಹದಲ್ಲಿ ಬೃಹತ್ ಜ್ವಾಲಾಮುಖಿಯೊಂದನ್ನು ವಿಜ್ಞಾನಿಗಳು ಪತ್ತೆಹಚ್ಚಿದ್ದಾರೆ!
ಅಮೆರಿಕದ ಟೆಕ್ಸಾಸ್‌ನಲ್ಲಿ ನಡೆದ ವಿಜ್ಞಾನ ಸಮಾವೇಶವೊಂದರಲ್ಲಿ ಈ ಕುರಿತು ಘೋಷಣೆ ಮಾಡಲಾಗಿದೆ. ಮಂಗಳ ಗ್ರಹದ ಥಾರ್ಸಿಸ್ ಜ್ವಾಲಾಮುಖೀ ಪ್ರದೇಶದಲ್ಲಿ ಈ ಅಗಾಧವಾದ ಜ್ವಾಲಾಮುಖಿಯು ಅಡಗಿ ಕುಳಿತಿದ್ದು, ಇದರಡಿಯಲ್ಲಿ ನೀರ್ಗಲ್ಲುಗಳ ಪದರಗಳಿವೆ. +9,022 ಮೀಟರ್ ಎತ್ತರದ ಜ್ವಾಲಾಮುಖಿ ಇದಾಗಿದ್ದು, 450 ಕಿ.ಮೀ. ಅಗಲವಿದೆ. ಇದಕ್ಕೆ “ನಾಕ್ಟಿಸ್ ಜ್ವಾಲಾಮುಖಿ’ ಎಂದು ಹೆಸರಿಡಲಾಗಿದೆ. ದೀರ್ಘಕಾಲದಿಂದಲೂ ಇದು ಸಕ್ರಿಯವಾಗಿದೆ. 1971ರಿಂದಲೂ ಮಂಗಳನ ಸುತ್ತ ಸುತ್ತುತ್ತ ಫೋಟೋಗಳನ್ನು ರವಾನಿಸುತ್ತಿರುವ ಮರೈನರ್ 9 ಬಾಹ್ಯಾಕಾಶ ನೌಕೆಗೂ ಇದರ ಸ್ಪಷ್ಟ ಚಿತ್ರ ಸೆರೆಹಿಡಿಯಲು ಸಾಧ್ಯವಾಗಿಲ್ಲ.
ಈ ಆವಿಷ್ಕಾರದಿಂದ ಲಾಭವೇನು?: ಮಂಗಳ ಗ್ರಹದ ಭೌಗೋಳಿಕ ವಿಕಸನ ದ ಅಧ್ಯಯನಕ್ಕೆ ನೆರವಾಗಲಿದೆ. ಭವಿಷ್ಯದ ರೊಬೋಟಿಕ್ ಮತ್ತು ಮಾನವ ಅನ್ವೇಷಣೆ ಯೋಜನೆಗಳಿಗೆ, ಗ್ರಹವು ಮಾನವ ವಾಸ ಯೋಗ್ಯವೇ ಎಂದು ಅರಿಯಲು ಸಹಕಾರಿಯಾಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Vyasanagar: ಮಣ್ಣಿನ ಒಳ ರಸ್ತೆಗಳಿಗೆ ಬೇಕು ಬೀದಿದೀಪ
Mangalore: ಅಡ್ಯಾರ್ ಕಣ್ಣೂರಿನಲ್ಲಿ ತ್ಯಾಜ್ಯ ಸುಡುವಿಕೆಯಿಂದ ಪರಿಸರ ಮಾಲಿನ್ಯ
Dandeli ನಗರ ಠಾಣೆಯ ತನಿಖಾ ವಿಭಾಗದ ಪಿಎಸ್ಐಯಾಗಿ ಕಿರಣ್ ಪಾಟೀಲ್ ಅಧಿಕಾರ ಸ್ಬೀಕಾರ
Thirthahalli: ತುಂಗಾ ನದಿಯಲ್ಲಿ ಅಪರಿಚಿತ ಮೃತದೇಹ ಪತ್ತೆ
Waqf issue: ಅಲ್ಲಾನ ಹೆಸರಲ್ಲಿ ಅಲ್ಲಾನಿಗೆ ದೋಖಾ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.