ಬೈರುತ್ ಬಂದರು ಪ್ರದೇಶದಲ್ಲಿ ಅವಳಿ ಸ್ಪೋಟ: 73 ಮಂದಿ ಸಾವು, ಸಾವಿರಾರು ಜನರಿಗೆ ಗಂಭೀರ ಗಾಯ
Team Udayavani, Aug 5, 2020, 7:44 AM IST
ಬೈರುತ್: ಲೆಬನಾನ್ ರಾಜಧಾನಿ ಬೈರುತ್ ನಗರದ ಬಂದರು ಪ್ರದೇಶದಲ್ಲಿ ಎರಡು ಭಾರೀ ಸ್ಟೋಟ ಸಂಭವಿಸಿದ್ದು 73 ಮಂದಿ ದಾರುಣವಾಗಿ ಮೃತಪಟ್ಟು, ಸಾವಿರಾರು ಜನ ಗಾಯಗೊಂಡಿದ್ದಾರೆ. ಸ್ಪೋಟದ ರಭಸಕ್ಕೆ ಕಟ್ಟಡಗಳು ಅಲುಗಾಡಿದ್ದು ರಾಜಧಾನಿಯಾದ್ಯಂತ ಭೀತಿ ಸೃಷ್ಟಿಸಿದೆ.
ಅವಳಿ ಸ್ಪೋಟದಲ್ಲಿ ಸಾವಿರಾರು ಕಟ್ಟಡಗಳು ಹಾನಿಗೊಳಗಾಗಿದ್ದು ಘಟನೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಸ್ಪೋಟದ ತೀವ್ರತೆಗೆ ಬೆಂಕಿಯ ಜ್ವಾಲೆಗಳು ಮಾತ್ರವಲ್ಲದೆ ಸಮುದ್ರದ ಅಲೆಗಳು ಮಗಿಲೆತ್ತರಕ್ಕೆ ಏರಿದ್ದು, ಘಟನೆಯ ವಿಡಿಯೋಗಳು ಭಯಾನಕವಾಗಿದೆ. ಬೈರುತ್ ನಗರ ರಕ್ತಸಿಕ್ತವಾಗಿ ಮಾರ್ಪಟ್ಟಿದ್ದು ಎಲ್ಲೆಂದರಲ್ಲಿ ಮೃತದೇಹಗಳು, ಕಟ್ಟಡದ ಅವಶೇಷಗಳಡಿ ಸಿಲುಕಿದ ಗಾಯಾಳುಗಳು ಕಂಡುಬರುತ್ತಿದ್ದಾರೆ. ಸುಮಾರು 3,700 ಮಂದಿ ಗಾಯಗೊಂಡಿದ್ದು ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ ಎಂದು ವರದಿ ತಿಳಿಸಿದೆ.
This is so terrifying! The Beirut explosion from a car driving on the road next to the port#Lebanon #BeirutExplosion pic.twitter.com/p8V99136To
— ???? ??????™ ? (@KFartom) August 4, 2020
ಕಳೆದ ಹಲವು ವರ್ಷಗಳಿಂದ ಯುದ್ಧಭೂಮಿಯಂತಾಗಿರುವ ಲೆಬನಾನ್‌ನಲ್ಲಿ ಕಳೆದ ಕೆಲ ದಿನಗಳಿಂದ ನಿಶಬ್ದತೆ ಆವರಿಸಿತ್ತು. ಆದರೆ ಮಂಗಳವಾರ ತಡರಾತ್ರಿ ಬೈರುತ್ ನಗರದ ಬಂದರಿನಲ್ಲಿ ಸಂಭವಿಸಿರುವ ಭಾರೀ ಸ್ಪೋಟವು ಲೆಬನಾನ್‌ನಲ್ಲಿ ಮತ್ತೆ ಆಘಾತದ ತರಂಗಗಳನ್ನು ಎಬ್ಬಿಸಿವೆ.
Insane what’s happening in #Beirut .. friend of a friend took this while coming back from diving.. ? check the blast wave in the water! pic.twitter.com/AAcqTwSbri
— sosadon (@sosadonttv) August 4, 2020
ಬಂದರು ಪ್ರದೇಶದಲ್ಲಿ ರಕ್ಷಣಾ ಕಾರ್ಯ ಭರದಿಂದ ಸಾಗಿದ್ದು, ಕಳೆದ ಒಂದು ವರ್ಷದಲ್ಲಿ ಸಂಭವಿಸಿದ ಭಾರೀ ಸ್ಪೋಟ ಇದಾಗಿದೆ. ನಾವು ದೊಡ್ಡ ದುರಂತವೊಂದಕ್ಕೆ ಸಾಕ್ಷಿಯಾಗುತ್ತಿದ್ದೇವೆ ಎಂದು ಲೆಬನಾನ್ ರೆಡ್‌ಕ್ರಾಸ್ ನ ಮುಖ್ಯಸ್ಥ ಜಾರ್ಜ್ ಕೆಟಾನಿ ತಿಳಿಸಿದ್ದಾರೆ. ಸ್ಫೋಟದ ಸದ್ದು 200 ಕಿಮೀ ದೂರದವರೆಗೂ ಕೇಳಿ ಬಂದಿದ್ದು, ಜನರು ಬೆಚ್ಚಿ ಬಿದ್ದಿದ್ದಾರೆ.
صور تظهر دماراً كبيراً بعد الانفجار الذي هز #بيروت#لبنان pic.twitter.com/vkPSFZtpf4
— ا لـ حـ ـد ث (@AlHadath) August 4, 2020
ಸ್ಥಳದಲ್ಲಿ ಆ್ಯಂಬುಲೆನ್ಸ್ ಗಳು ಹಾಗೂ ಸೇನಾ ಹೆಲಿಕಾಪ್ಟರ್ ಗಳು ಕಾರ್ಯಾಚರಣೆಗಿಳಿದಿದ್ದು, ರಕ್ಷಣಾ ಕಾರ್ಯಗಳನ್ನು ನಡೆಸುತ್ತಿವೆ. ಆಸ್ಪತ್ರೆಗಳಲ್ಲಿ ರೋಗಿಗಳು ತುಂಬಿ ಹೋಗಿದ್ದು, ಆಸ್ಪತ್ರೆಯ ಸಿಬ್ಬಂದಿಗಳು ರಕ್ತದಾನ ಮಾಡುವಂತೆ ಜನರ ಬಳಿ ಮನವಿ ಮಾಡಿಕೊಳ್ಳುತ್ತಿದ್ದಾರೆ.
Mother of God.
Explosion in Beirut for unknown reasons.
I have never seen anything like this.
Friends in Beirut telling me they were in a supermarket far from there and still everything fell of them pic.twitter.com/TOvGzJkE98— Tancredi Palmeri (@tancredipalmeri) August 4, 2020
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
Sheikh Hasina ಅವಧಿಯಲ್ಲಾದ ಅಪಹರಣಗಳಿಗೆ ಭಾರತ ಕುಮ್ಮಕ್ಕು: ಬಾಂಗ್ಲಾ ವರದಿ
Meditation; ಜಾಗತಿಕ ಶಾಂತಿ, ಏಕತೆಗೆ ಧ್ಯಾನ ಮುಖ್ಯ ಸಾಧನ: ಶ್ರೀ ಶ್ರೀ ರವಿಶಂಕರ್
Israel ಮೇಲೆ ದಾಳಿಗೆ ಇರಾನ್‌ನಿಂದ ಮಕ್ಕಳ ಬಳಕೆ?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.