ಮಂಗಳನ ಅಂಗಳಕ್ಕೆ ರೋವರ್ ಇಳಿಸುವಲ್ಲಿ ಭಾರತ ಮೂಲದ ಸ್ವಾತಿ ಮೋಹನ್ ಯಶಸ್ವಿ..!

ಡಾ. ಸ್ವಾತಿ ಮೋಹನ್ ಯಾರು..?

Team Udayavani, Feb 19, 2021, 1:22 PM IST

Meet Dr Swati Mohan, the Indian-American scientist behind NASA’s rover landing on Mars

ವಾಷಿಂಗ್ಟನ್ :  ನಾಸಾದ ರೋವರ್ ಮಿಷನ್ ಮಂಗಳನ ಅಂಗಳಕ್ಕೆ ಯಶಸ್ವಿಯಾಗಿ ಇಳಿದಿದೆ. ಮಂಗಳ ಗ್ರಹದ ಮೇಲೆ ಏನ್ಶಿಯಂಟ್ ಜೀವಿಗಳ ವಾಸದ ಬಗ್ಗೆ ಹಾಗೂ ಅಲ್ಲಿ ಖಗೋಳ ವಿಜ್ಞಾನದ ಅನ್ವೇಷಣೆಗಾಗಿ ರೋವರನ್ನು ಕಳುಹಿಸಲಾಗಿತ್ತು.

ನಾಸಾದ ಮಹತ್ವಾಕಾಂಶೆಯ ಯೋಜನೆಯೆಂದು ಹೇಳಲಾಗುತ್ತಿದ್ದ ರೋವರ್ ಯಶಸ್ವಿಯಾಗಿ ಮಂಗಳನ ಅಂಗಳಕ್ಕೆ ತಲುಪಿರುವಲ್ಲಿ ಭಾರತ ಮೂಲದ ಮಹಿಳೆಯೋರ್ವರ ಪಾಲಿರುವುದು ಇಡೀ ಭಾರತೀಯರಿಗೆ ಹೆಮ್ಮೆ ತರುವಂತಹ ವಿಚಾರವಾಗಿದೆ ಎನ್ನುವುದರಲ್ಲಿ ಸಂಶಯವಿಲ್ಲ.

ಹೌದು, ಈ ರೋವರ್ ನ ನಿಯಂತ್ರಣ ಹಾಗೂ ಪಥ ಮಾರ್ಗದರ್ಶನ ಇಂಜಿನಿಯರ್ ಆಗಿದ್ದವರು ಡಾ. ಸ್ವಾತಿ ಮೋಹನ್, ಭಾರತದ ಮೂಲದವರು.

ಓದಿ : 391ನೇ ಛತ್ರಪತಿ ಶಿವಾಜಿ ಜಯಂತಿ : ಪ್ರಧಾನಿ ಸೇರಿ ಹಲವು ಪ್ರಮುಖ ನಾಯಕರಿಂದ ಶುಭಾಶಯ

ಈ ಐತಿಹಾಸಿಕ ಯಶಸ್ವಿ ಕಾರ್ಯಕ್ಕೆ ಭಾರತ ಮೂಲದ ಮಹಿಳೆಯೋರ್ವರ ನಿರ್ದೇಶನ ಇತ್ತು ಎನ್ನುವುದೇ ಸಹಸ್ರ ಸಹಸ್ರ ಭಾರತೀಯರಿಗೆ ಸಂತೋಷದ ವಿಚಾರವಾಗಿದೆ. ಅದರಲ್ಲೂ ಕರ್ನಾಟಕದ ಹಿನ್ನಲೆಯವರು ಎನ್ನುವುದು ಇನ್ನೂ ದೊಡ್ಡ ಹೆಮ್ಮೆ.

ಡಾ. ಸ್ವಾತಿ ಮೋಹನ್ ಯಾರು..?

ಅಮೇರಿಕಾದಲ್ಲಿ ಹಲವು ವರ್ಷಗಳಿಂದ ನೆಲೆಸಿರುವ ಕನ್ನಡಿಗರಾದ ಜ್ಯೋತಿ ಹಾಗೂ ಮೋಹನ್ ದಂಪತಿಗಳ ಪುತ್ರಿ, ಡಾ. ಸ್ವಾತಿ ಮೋಹನ್.

ಕ್ಯಾಲಿಫೋರ್ನಿಯಾದ ನಾಸಾದ ನಿಯಂತ್ರಣ ಕೊಠಡಿಯಲ್ಲಿ ಗೈಡೆನ್ಸ್ ಆ್ಯಂಡ್ ನೇವಿಗೇಶನ್ ಹಾಗೂ ಕಂಟ್ರೋಲ್ ಯೋಜನೆಯ ತಂಡದ ನಡುವೆ ಸ್ವಾತಿ ಯಶಸ್ವಿಯಾಗಿ ರೋವರ್ ನ್ನು ಮಂಗಳನ ಅಂಗಳಕ್ಕೆ ಇಳಿಸಿದ್ದಾರೆ.

ನಾಸಾ ವಿಜ್ಞಾನಿ ಡಾ ಮೋಹನ್ ಅವರು ಕೇವಲ ಒಂದು ವರ್ಷದವರಾಗಿದ್ದಾಗ ಭಾರತದಿಂದ ಅಮೆರಿಕಕ್ಕೆ ತಮ್ಮ ತಂದೆ ತಾಯಿಯವರೊಂದಿಗೆ ವಲಸೆ ಬಂದರು. ಸ್ವಾತಿ, ತಮ್ಮ ಬಾಲ್ಯದ ಬಹು ಭಾಗವನ್ನು ಉತ್ತರ ವರ್ಜೀನಿಯಾ-ವಾಷಿಂಗ್ಟನ್ ಡಿಸಿ ಮೆಟ್ರೋ ಪ್ರದೇಶದಲ್ಲಿ ಕಳೆದಿದ್ದಾರೆ. 9ನೇ ವಯಸ್ಸಿನಲ್ಲಿ, ಮೊದಲ ಬಾರಿಗೆ ವೀಕ್ಷಿಸಿದ ‘ಸ್ಟಾರ್ ಟ್ರೆಕ್'(ಅಮೇರಿಕನ್ ಟೆಲಿವಿಷನ್ ಸೀರೀಸ್) ಸ್ವಾತಿಯವರನ್ನು ಪ್ರಭಾವಿಸಿತು.

ಓದಿ : ಯಕ್ಷರಂಗದ ಸಿಡಿಲಮರಿ ಡಾ.ಶ್ರೀಧರ ಭಂಡಾರಿ ನಿಧನ: ಕೊಳ್ತಿಗೆ ನಾರಾಯಣ ಗೌಡರಿಂದ ನುಡಿ ನಮನ

ಸ್ವಾತಿ, ತನ್ನ 16 ವರ್ಷದ ತನಕ ಶಿಶು ವೈದ್ಯರಾಗಲು ಬಯಸಿದ್ದರು. ಆದಾಗ್ಯೂ, ಅವರ ಮೊದಲ ಭೌತಶಾಸ್ತ್ರ ತರಗತಿ ಮತ್ತು ಅವರಿಗಿದ್ದ ಉತ್ತಮ ಶಿಕ್ಷಕರ ಸಲಹೆಯ ಮೇರೆಗೆ, ಬಾಹ್ಯಾಕಾಶ ಪರಿಶೋಧನೆಯಲ್ಲಿ ತನ್ನ ಆಸಕ್ತಿಯನ್ನು ಮುಂದುವರಿಸುವ ಉದ್ದೇಶದಿಂದ “ಎಂಜಿನಿಯರಿಂಗ್”  ಕ್ಷೇತ್ರಕ್ಕೆ ತಮ್ಮನ್ನು ತಾವು ತೊಡಗಿಸಿಕೊಂಡರು.

ಡಾ. ಸ್ವಾತಿ ಕಾರ್ನೆಲ್ ವಿಶ್ವವಿದ್ಯಾಲಯದಿಂದ ಮೆಕ್ಯಾನಿಕಲ್ ಮತ್ತು ಏರೋಸ್ಪೇಸ್ ಎಂಜಿನಿಯರಿಂಗ್‌ ನಲ್ಲಿ ಬ್ಯಾಚುಲರ್ ಆಫ್ ಸೈನ್ಸ್ ಪದವಿ ಪಡೆದಿದ್ದಾರೆ ಮತ್ತು ಏರೋನಾಟಿಕ್ಸ್ ಎಂ ಐ ಟಿ ಯಿಂದ ಎಂ ಎಸ್ ಮತ್ತು ಪಿ ಎಚ್‌ ಡಿ ಪೂರ್ಣಗೊಳಿಸಿದ್ದಾರೆ.  ಸಿಎ ಪಾಸಡೆನಾದಲ್ಲಿರುವ ನಾಸಾದ ಜೆಟ್ ಪ್ರೊಪಲ್ಶನ್ ಲ್ಯಾಬೊರೇಟರಿಯಲ್ಲಿ ಮೊದಲಿನಿಂದಲೂ ಸ್ವಾತಿ ರೋವರ್ ಮಿಷನ್‌ ನ ವಿಜ್ಞಾನಿಗಳ ತಂಡದಲ್ಲಿದ್ದರು, ಡಾ.ಮೋಹನ್ ಅವರು ನಾಸಾದ ವಿವಿಧ ಪ್ರಮುಖ ಕಾರ್ಯಗಳಲ್ಲಿ ಪಾಲ್ಪಡೆದಿದ್ದಾರೆ. ಭಾರತೀಯ-ಅಮೇರಿಕನ್ ವಿಜ್ಞಾನಿ ಡಾ. ಸ್ವಾತಿ ಕ್ಯಾಸಿನಿ (ಶನಿಯ ಒಂದು ಮಿಷನ್) ಮತ್ತು ಗ್ರೇಲ್ (ಚಂದ್ರನಲ್ಲಿಗೆ ಒಂದು ಜೋಡಿ ರಚನೆಯ ಬಾಹ್ಯಾಕಾಶ ನೌಕೆಯ ಉಡಾವಣೆ) ಯೋಜನೆಗಳಲ್ಲಿ ಕೆಲಸ ಮಾಡಿದ್ದು, ನುರಿತ ವಿಜ್ಞಾನಿಯಾಗಿದ್ದಾರೆ.

ಇನ್ನು, ಬರೋಬ್ಬರಿ 203 ದಿನಗಳನ್ನು ತೆಗೆದುಕೊಂಡು ಈ ರೋವರ್ ಮಂಗಳನ ಅಂಗಳಕ್ಕಿಳಿದಿದೆ. ಸುಮಾರು 470 ರಿಂದ 472 ಮಿಲಿಯನ್ ಕಿಲೋಮೀಟರ್ ದೂರ ಈ ರೋವರ್ ತಲುಪಿದೆ. ಸದ್ಯಕ್ಕೆ ಪ್ರಾಥಮಿಕ ಹಂತದ ಯಶಸ್ವಿ ಕಂಡಿದ್ದು, ಮಂಗಳನ ಮೇಲ್ಮೈನಲ್ಲಿ ಏನ್ಶಿಯಂಟ್ ಸೂಕ್ಷ್ಮ ಜೀವಿಗಳ ವಾಸದ ವಿಚಾರವನ್ನೊಳಗೊಂಡು ಅಲ್ಲಿನ ಹಲವು ಮಾಹಿತಿಗಳನ್ನು ಭೂಮಿಗೆ ಕಳುಹಿಸಲಿದೆ.

ಓದಿ : ಮಾರುಕಟ್ಟೆಗೆ ಲಗ್ಗೆ ಇಡಲಿರುವ  Moto E7 Power… ವೈಶಿಷ್ಟ್ಯತೆಗಳೇನು?

ಟಾಪ್ ನ್ಯೂಸ್

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಯಾನಿಯ ಪ್ರಾರ್ಥನೆ

1-congress

Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ

DKSHi-4

Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Gambhir-Agarkar have differences of opinion on Pant-Rahul issue

Team India: ಪಂತ್-ರಾಹುಲ್‌ ವಿಚಾರದಲ್ಲಿ ಗಂಭೀರ್-‌ ಅಗರ್ಕರ್‌ ನಡುವೆ ಭಿನ್ನಾಭಿಪ್ರಾಯ

15-monalisa

Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ

nagavalli bangale kannada movie

Sandalwood: ʼನಾಗವಲ್ಲಿ ಬಂಗಲೆ’ಯಿಂದ ಹಾಡು ಬಂತು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Obama Is Queer: ಮಾಜಿ ಅಧ್ಯಕ್ಷ ಒಬಾಮಾ ಪತ್ನಿ ಮಿಚೆಲ್‌ ಗಂಡಸು: ಮಸ್ಕ್ ತಂದೆ

Obama Is Queer: ಮಾಜಿ ಅಧ್ಯಕ್ಷ ಒಬಾಮಾ ಪತ್ನಿ ಮಿಚೆಲ್‌ ಗಂಡಸು: ಮಸ್ಕ್ ತಂದೆ

Trump-musk

Cut Down: ವೆಚ್ಚ ಕಡಿತ: ಅಮೆರಿಕ ಸರಕಾರಿ ಉದ್ಯೋಗಿಗಳೇ ವಜಾ!

Mexico:ಯುರೋಪ್‌ ನ Most ವಾಂಟೆಡ್‌ ಕ್ರಿ*ಮಿನಲ್‌, ಡ್ರ*ಗ್‌ ಕಿಂಗ್‌ ಪಿನ್‌ ಮಾರ್ಕೋ ಹತ್ಯೆ

Mexico:ಯುರೋಪ್‌ ನ Most ವಾಂಟೆಡ್‌ ಕ್ರಿ*ಮಿನಲ್‌, ಡ್ರ*ಗ್‌ ಕಿಂಗ್‌ ಪಿನ್‌ ಮಾರ್ಕೋ ಹ*ತ್ಯೆ

India cuts import duty on American Bourbon Whiskey

Bourbon Whiskey: ಅಮೆರಿಕದ ಬೌರ್ಬನ್ ವಿಸ್ಕಿ ಆಮದು ಸುಂಕ ಕಡಿತ ಮಾಡಿದ ಭಾರತ

ರಷ್ಯಾ-ಉಕ್ರೇನ್‌ ಕಾಳಗ ತಪ್ಪಿಸಲು ಮುಂದಿನ ವಾರ 3 ದೇಶದ ಅಧಿಕಾರಿಗಳ ಸಭೆ

ರಷ್ಯಾ-ಉಕ್ರೇನ್‌ ಕಾಳಗ ತಪ್ಪಿಸಲು ಮುಂದಿನ ವಾರ 3 ದೇಶದ ಅಧಿಕಾರಿಗಳ ಸಭೆ

MUST WATCH

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

udayavani youtube

ಮುಕೇಶ್ ಅಂಬಾನಿ ಕುಟುಂಬದ ನಾಲ್ಕು ತಲೆಮಾರು ಮಹಾ ಕುಂಭಮೇಳದಲ್ಲಿ ಪವಿತ್ರ ಸ್ನಾನ

ಹೊಸ ಸೇರ್ಪಡೆ

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಯಾನಿಯ ಪ್ರಾರ್ಥನೆ

1sadgu

Pariksha Pe Charcha: ಸ್ಮಾರ್ಟ್ ಫೋನ್‌ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು

1-congress

Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ

18

Uv Fusion: ಗೆಳೆತನವೆಂಬ ನಿಸ್ವಾರ್ಥ ಬಾಂಧವ್ಯ

17

Uv Fusion: ಎಡವುದು ಕೂಡ ಒಳ್ಳೆಯದೇ ಒಮ್ಮೊಮ್ಮೆ…

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.