ಮೆಹುಲ್ ಚೋಕ್ಸಿಗೆ ಜಾಮೀನು ನಿರಾಕರಿಸಿದ ಡೊಮಿನಿಕಾ ಕೋರ್ಟ್
Team Udayavani, Jun 3, 2021, 9:43 AM IST
ಡೊಮಿನಿಕಾ/ ನವದೆಹಲಿ: ಭಾರತದಲ್ಲಿ ಪಂಜಾಬ್ ನ್ಯಾಶನಲ್ ಬ್ಯಾಂಕ್ ಗೆ ವಂಚಿಸಿ ಪರಾರಿಯಾಗಿರುವ ವಜ್ರೋದ್ಯಮಿ ಮೆಹುಲ್ ಚೋಕ್ಸಿ ಗೆ ಜಾಮೀನು ನೀಡಲು ಡೊಮಿನಿಕಾದ ಮ್ಯಾಜಿಸ್ಟ್ರೇಟ್ ಕೋರ್ಟ್ ನಿರಾಕರಿಸಿದೆ. ಡೊಮಿನಿಕಾಗೆ ಅಕ್ರಮವಾಗಿ ಪ್ರವೇಶ ಮಾಡಿದ ಬಗ್ಗೆ ತಪ್ಪಿತಸ್ಥ ಎಂದು ಚೋಕ್ಸಿ ಒಪ್ಪಿಕೊಂಡಿದ್ದಾರೆ ಎಂದು ವರದಿ ತಿಳಿಸಿದೆ.
ಮೆಹುಲ್ ಚೋಕ್ಸಿ ಅವರಿಗೆ ಆರೋಗ್ಯದ ದೃಷ್ಟಿಯಿದ ಜಾಮೀನು ನೀಡಬೇಕು ಎಂದು ಚೋಕ್ಸಿ ಪರ ವಕೀಲರು ವಾದಿಸಿದ್ದರು.
ಭಾರತದಿಂದ ಪರಾರಿಯಾಗಿದ್ದ ಮೆಹುಲ್ ಚೋಕ್ಸಿ 2018ರಿಂದ ಆ್ಯಂಟಿಗಾ ಮತ್ತು ಬರ್ಬುಡಾ ದೇಶದಲ್ಲಿ ನೆಲೆಸಿದ್ದರು. ಕೆಲ ದಿನಗಳ ಹಿಂದೆ ಆ್ಯಂಟಿಗಾದಿಂದ ನಾಪತ್ತೆಯಾಗಿದ್ದ ಚೋಕ್ಸಿಯನ್ನು ಮೇ 26 ಡೊಮಿನಿಕಾ ದೇಶದಲ್ಲಿ ಬಂಧಿಸಿದ್ದರು. ಡೊಮಿನಿಕಾ ದೇಶದೊಳಗೆ ಅಕ್ರಮ ಪ್ರವೇಶ ಮಾಡಿದ ಕಾರಣಕ್ಕೆ ಚೋಕ್ಸಿಯನ್ನು ಆ ದೇಶದ ಪೊಲೀಸರು ಬಂಧನಕ್ಕೆ ಒಳಪಡಿಸಿದ್ದರು.
ಇದನ್ನೂ ಓದಿ:ಯಾವ ಸಿನಿಮಾ ನಟರಿಗೂ ಕಮ್ಮಿಯಿಲ್ಲ ಈ ಹುಡುಗರ ಸ್ಟಂಟ್: ಸಾಮಾಜಿಕ ಜಾಲತಾಣದಲ್ಲಿ ಇವರದ್ದೇ ಸೌಂಡ್
ಮೆಹುಲ್ ಚೋಕ್ಸಿ ಡೊಮಿನಿಕಾ ಹೈಕೋರ್ಟ್ ನಲ್ಲಿ ಹೇಬಿಯಸ್ ಕೊರ್ಪಸ್ ಅರ್ಜಿ ಸಲ್ಲಿಸಿದ್ದಾರೆ. ಡೊಮಿನಿಕಾ ಪೊಲೀಸ್ ಕಸ್ಟಡಿಯಲ್ಲಿ ತನಗೆ ಸುರಕ್ಷತೆಯಿಲ್ಲ ಎಂದೆನಿಸುತ್ತಿದೆ. ತಾನು ಆ್ಯಂಟಿಗಾಗೆ ತೆರಳಲು ಸಿದ್ದನಿದ್ದೇನೆ ಎಂದು ಚೋಕ್ಸಿ ಹೇಳಿದ್ದಾರೆ.
ಈ ನಡುವೆ, ಚೋಕ್ಸಿಯನ್ನು ಭಾರತಕ್ಕೆ ಕರೆ ತರುವ ನಿಟ್ಟಿನಲ್ಲಿ ಮಹಿಳಾ ಐಪಿಎಸ್ ಅಧಿಕಾರಿ ಶಾರದಾ ರಾವತ್ ನೇತೃತ್ವದಲ್ಲಿ 6 ಮಂದಿ ಸದಸ್ಯರ ಸಿಬಿಐ ತಂಡ ಈಗಾಗಲೇ ತೆರಳಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pakistan; ಶಿಯಾ ಮುಸ್ಲಿಮರನ್ನು ಗುರಿಯಾಗಿರಿಸಿ ಗುಂಡಿನ ದಾಳಿ: ಕನಿಷ್ಠ 38 ಬ*ಲಿ
Netanyahu ವಿರುದ್ಧ ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯದಿಂದ ಬಂಧನ ವಾರಂಟ್
Russia ದಿಂದ ಉಕ್ರೇನ್ ಮೇಲೆ ICBM ದಾಳಿ; ನ್ಯೂಕ್ಲಿಯರ್ ದಾಳಿ ಉದ್ವಿಗ್ನತೆ ಹೆಚ್ಚಳ
Chrome Browser: ಗೂಗಲ್ ಸರ್ಚ್ ಎಂಜಿನ್ ಕ್ರೋಮ್ ಮಾರಾಟ?
ವಾಯುವ್ಯ ಅಮೆರಿಕಕ್ಕೆ ಅಪ್ಪಳಿಸಿದ ಬಾಂಬ್ ಸೈಕ್ಲೋನ್, 6 ಲಕ್ಷ ಮನೆಗಳಿಗೆ ವಿದ್ಯುತ್ ಕಡಿತ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.