‘ಹವಾಮಾನ ಬದಲಾಯಿಸಿದ’ ಫೋಕ್ಸ್‌ವ್ಯಾಗನ್ ವಿರುದ್ಧ ರೈತರಿಂದ ದಾವೆ
Team Udayavani, Aug 25, 2018, 4:42 PM IST
ಮೆಕ್ಸಿಕೋ : ಮೆಕ್ಸಿಕೋ ದ ಪ್ಯೂಬ್ಲಾ ದಲ್ಲಿನ ತನ್ನ ಕಾರ್ಖಾನೆ ವಲಯದಲ್ಲಿ “ಹವಾಮಾನವನ್ನು ಬದಲಾಯಿಸಿದ’ ಆರೋಪದ ಮೇಲೆ ಮೆಕ್ಸಿಕೋ ರೈತರು ವಿಶ್ವ ಪ್ರಸಿದ್ಧ ಫೋಕ್ಸ್‌ವ್ಯಾಗನ್ ಮೋಟಾರು ವಾಹನ ಸಂಸ್ಥೆಯ ವಿರುದ್ಧ 37 ಲಕ್ಷ ಡಾಲರ್ ಮೊತ್ತದ ಪರಿಹಾರ ದಾವೆಯನ್ನು ಹೂಡಿದ್ದಾರೆ.
ಫೋಕ್ಸ್‌ವ್ಯಾಗನ್ ಕಂಪೆನಿಯು ತನ್ನ ಕಾರ್ಖಾನೆಯ ಮೇಲೆ ಮತ್ತು ತಾನು ಉತ್ಪಾದಿಸಿದ ಕಾರುಗಳ ಮೇಲೆ ಆಲೀಕಲ್ಲು ಮಳೆ ಸುರಿಯುವುದನ್ನು ತಪ್ಪಿಸಲು ವಾತಾವರಣದಲ್ಲಿ ಆಲೀಕಲ್ಲು ಮೋಡಗಳು ಕಲೆಯುವ ಮುನ್ನವೇ ಅವುಗಳನ್ನು ಬ್ಲಾಸ್ಟ್ ಮಾಡಿ ಅತೀ ದೂರಕ್ಕೆ ಅಟ್ಟಲು ಭಾರೀ ಪ್ರಮಾಣದಲ್ಲಿ, ಯುದ್ಧದಲ್ಲಿ ಬಳಸುವ, ಕ್ಯಾನನ್‌ಗಳನ್ನು ಪ್ರಯೋಗಿಸಿರುವುದು ಹವಾಮಾನ ಬದಲಾವಣೆಗೆ ಕಾರಣವಾಗಿ ತಮಗೆ ಅಪಾರ ಪ್ರಮಾಣದಲ್ಲಿ ಬೆಳೆ ನಷ್ಟವಾಗಿದೆ ಎಂದು ರೈತರು ದೂರಿರುವುದಾಗಿ ಜ್ಯಾಲೋಪ್ನಿಕ್ ಪ್ರಕಟಿಸಿರುವ ವರದಿ ತಿಳಿಸಿದೆ.
ಫೋಕ್ಸ್‌ವ್ಯಾಗನ್ ಬಳಸಿರುವ ಈ ತಂತ್ರದಿಂದಾಗಿ ಹವಾಮಾನದ ಮೇಲೆ ಭಾರೀ ದುಷ್ಪರಿಣಾಮ ಉಂಟಾಗಿದ್ದು ಇದು ಬರಗಾಲಕ್ಕೆ ಕಾರಣವಾಗಿದೆ ಮತ್ತು ಆ ಮೂಲಕ ತಮ್ಮ ಅನೇಕ ಬೆಳೆಗಳು ನಾಶವಾಗಿವೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿರುವುದಾಗಿ ಮಾಧ್ಯಮ ವರದಿ ತಿಳಿಸಿದೆ.
ವಿಶೇಷವೆಂದರೆ ಅಲೀಕಲ್ಲಿನ ಮೋಡಗಳನ್ನು ಆಗಸದಲ್ಲೇ ಬ್ಲಾಸ್ಟ್ ಮಾಡುವ ಈ “ಸಮರೋಪಾದಿಯ ಬ್ಲಾಸ್ಟಿಂಗ್ ತಂತ್ರಜ್ಞಾನ’ವನ್ನು ಫೋಕ್ಸ್‌ವ್ಯಾಗನ್ ನ ಪ್ಯೂಬ್ಲಾ ಕಾರ್ಖಾನೆ ಮಾತ್ರವಲ್ಲದೆ ಸ್ವತಃ ರೈತರು ಕೂಡ ತಮ್ಮ “ಬೆಳೆ ರಕ್ಷಣೆ’ಗಾಗಿ ಬಳಸಿಕೊಳ್ಳುವುದಿದೆ ಎಂದು ವರದಿ ತಿಳಿಸಿದೆ.
ಕ್ಯಾನನ್ ಉತ್ಪಾದಕರು ಹೇಳುವ ಪ್ರಕಾರ ಈ ತಂತ್ರಜ್ಞಾನ ಬಳಕೆಯಿಂದ ಬರ ಉಂಟಾಗುವುದಿಲ್ಲ; ಏಕೆಂದರೆ ಕ್ಯಾನನ್ ಪ್ರಯೋಗದ ಪರಿಣಾಮ ಕೇವಲ 600 ಚದರಡಿ ಪ್ರದೇಶಕ್ಕೆ ಮಾತ್ರವೇ ಸೀಮಿತವಾಗಿರುತ್ತದೆ.
ಹಾಗಿದ್ದರೂ ಫೋಕ್ಸ್‌ವ್ಯಾಗನ್ ಸಂಸ್ಥೆ ಈ ಬಗ್ಗೆ ತನ್ನ ಅಧಿಕೃತ ಹೇಳಿಕೆಯನ್ನು ಹೊರಡಿಸಿದ್ದು ಆ ಪ್ರಕಾರ ತಾನೀಗ ಸ್ವಯಂಚಾಲಿತ ಕ್ಯಾನನ್ ಪ್ರಯೋಗವನ್ನು ಬಂದ್ ಮಾಡಿರುವುದಾಗಿ ಹೇಳಿದೆ. ಕ್ಯಾನನ್ ಬ್ಲಾಸ್ಟ್ ಪ್ರಯೋಗಕ್ಕೆ ಬದಲು ತಾನಿನ್ನು ಅಲೀಕಲ್ಲು ತಡೆ ನೆಟ್ ಬಳಸಿಕೊಂಡು ತನ್ನ ಫ್ಯಾಕ್ಟರಿಯಲ್ಲಿನ ದಾಸ್ತಾನನ್ನು ರಕ್ಷಿಸುವುದಾಗಿ ಫೋಕ್ಸ್‌ವ್ಯಾಗನ್ ಹೇಳಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mahalingpur: ಹೊಸ ಬಸ್ ನಿಲ್ದಾಣದಲ್ಲಿ ಹಳೆ ಸಮಸ್ಯೆಗಳು
Bantwal: ಕಲ್ಲಡ್ಕ ಫ್ಲೈಓವರ್; ಪೂರ್ಣತೆಯತ್ತ; ಕಾಂಕ್ರೀಟ್ ಕಾಮಗಾರಿ ಪ್ರಗತಿ
Odisha: ‘ಪ್ರವಾಸಿ ಭಾರತೀಯ ದಿವಸ್’ ಉದ್ಘಾಟಿಸಿದ ಪ್ರಧಾನಿ ಮೋದಿ; ವಿಶೇಷ ರೈಲಿಗೂ ಚಾಲನೆ
AUSvSL: ಲಂಕಾ ಸರಣಿಗೆ ಆಸೀಸ್ ತಂಡ ಪ್ರಕಟ: ಸ್ಟೀವ್ ಸ್ಮಿತ್ ಗೆ ನಾಯಕತ್ವ ಪಟ್ಟ
CID Crime Serial ಪ್ರಭಾವ…ಅಣ್ಣನನ್ನು ಯಾಮಾರಿಸಲು ಅಪಹರಣದ ನಾಟಕವಾಡಿ ಸಿಕ್ಕಿಬಿದ್ದ ತಮ್ಮ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.