![Lalu](https://www.udayavani.com/wp-content/uploads/2025/02/Lalu-2-415x282.jpg)
![Lalu](https://www.udayavani.com/wp-content/uploads/2025/02/Lalu-2-415x282.jpg)
Team Udayavani, Oct 10, 2023, 1:57 PM IST
ನವದೆಹಲಿ: ಮಾಜಿ ನೀಲಿ ಚಿತ್ರತಾರೆ ಮಿಯಾ ಖಲೀಫಾ ಕಳೆದ ಕೆಲ ದಿನಗಳಿಂದ ಟ್ರೆಂಡಿಂಗ್ ನಲ್ಲಿನಲ್ಲಿದ್ದಾರೆ. ಲಿಬನಾನ್ ಮೂಲದ ಮಿಯಾ ಅವರ ಇಸ್ರೇಲ್ – ಪ್ಯಾಲೆಸ್ತೀನ್ ಯುದ್ಧದ ಕುರಿತಾದ ಮಾಡಿದ ಕೆಲ ಟ್ವೀಟ್ ಗಳು ಆಕ್ರೋಶಕ್ಕೆ ಕಾರಣವಾಗಿದೆ.
ಮಾಜಿ ನೀಲಿ ಚಿತ್ರತಾರೆ ಮಿಯಾ ಖಲೀಫಾ ಇತ್ತೀಚೆಗೆ ಇಸ್ರೇಲ್ – ಪ್ಯಾಲೆಸ್ತೀನ್ ಯುದ್ಧ ಬಗ್ಗೆ ಸರಣಿ ಟ್ವೀಟ್ ಗಳನ್ನು ಹಾಕಿದ್ದರು. ಪ್ಯಾಲೆಸ್ತೀನ್ ಗೆ ಬೆಂಬಲವಾಗಿ ನಿಂತು ಮಿಯಾ ಟ್ವೀಟ್ ಮಾಡಿದ್ದರು.
“ಸದ್ಯದ ಪರಿಸ್ಥಿತಿಯನ್ನು ನೋಡುವಾಗ, ನೀವು ಪ್ಯಾಲೆಸ್ತೀನ್ ಪರವಾಗಿ ಇರಲು ಸಾಧ್ಯವಾಗದಿದ್ದರೆ, ನೀವು ವರ್ಣಭೇದ ನೀತಿಯ ವಿರುದ್ಧವಾಗಿ(ತಪ್ಪು ಬದಿಯಲ್ಲಿದ್ದೀರಿ) ಇದ್ದೀರಿ. ಇತಿಹಾಸವು ಇದನ್ನು ಕಾಲಾನಂತರದಲ್ಲಿ ಸಾಬೀತುಪಡಿಸುತ್ತದೆ” ಎಂದು ಮಿಯಾ ಟ್ವೀಟ್ ಮಾಡಿದ್ದರು.
ಈ ಟ್ವೀಟ್ ಗೆ ಅನೇಕರಿಂದ ಆಕ್ರೋಶ ವ್ಯಕ್ತಬವಾಗಿತ್ತು. ಆದರೆ ಅದು ಯಾವುದಕ್ಕೂ ಹೆದರದ ಮಿಯಾ ಮತ್ತೆ ಪ್ಯಾಲೆಸ್ತೀನ್ ಪರ ಟ್ವೀಟ್ ಮಾಡಿದ್ದರು.
“ಯಾರಾದರೂ ಪ್ಯಾಲೆಸ್ತೀನ್‌ನಲ್ಲಿರುವ ಸ್ವಾತಂತ್ರ್ಯ ಹೋರಾಟಗಾರರಿಗೆ ತಮ್ಮ ಫೋನ್‌ಗಳನ್ನು ತಿರುಗಿಸಲು ಮತ್ತು ಅಡ್ಡ ಚಿತ್ರಿಸಲು ಹೇಳಬಹುದೇ?” ಎಂದು ಮತ್ತೊಂದು ಟ್ವೀಟ್ ಮಾಡಿದ್ದರು. ಆ ಮೂಲಕ ಪ್ಯಾಲೆಸ್ತೀನ್ ಹಮಾಸ್ ಉಗ್ರರನ್ನು ಸ್ವಾತಂತ್ರ್ಯ ಹೋರಾಟಗಾರರೆಂದಿದ್ದರು.
ಪ್ಯಾಲೆಸ್ತೀನ್ ನಲ್ಲಿ ಪುಟ್ಟ ಮಕ್ಕಳು ಸೇರಿದಂತೆ ಅಲ್ಲಿನ ನಾಗರೀಕರು ಅತ್ಯಂತ ಶೋಚನೀಯ ಸ್ಥಿತಿಯಲ್ಲಿದ್ದಾರೆ ಎಂದು ಮಿಯಾ ಟ್ವೀಟ್ ಮಾಡಿದ್ದರು.
ಸದ್ಯ ಮಿಯಾ ಖಲೀಫಾ ಟ್ವೀಟ್ ಗೆ ಆಕ್ರೋಶ ವ್ಯಕ್ತವಾಗುತ್ತಿರುವ ಜೊತೆಯಲ್ಲಿ ಅವರ ಪಾಡ್ ಕಾಸ್ಟ್ ಒಪ್ಪಂದವೇ ಇದರಿಂದ ಮುರಿದು ಬಿದ್ದಿದೆ.
ಮಿಯಾ ಖಲೀಫಾ ರೆಡ್ ಲೈಟ್ ಹಾಲೆಂಡ್ ಕಂಪೆನಿಯಲ್ಲಿ ಪಾಡ್ ಕಾಸ್ಟ್ ಒಪ್ಪಂದವನ್ನು ಮಾಡಿಕೊಂಡಿದ್ದರು. ಈ ಟ್ವೀಟ್ ನಿಂದ ಆ ಕಂಪೆನಿ ಆಕ್ರೋಶ ವ್ಯಕ್ತಪಡಿಸಿದ್ದು, ಮಿಯಾ ಖಲೀಫಾರ ಒಪ್ಪಂದವನ್ನು ಕೊನೆಗೊಳಿಸಿದೆ.
ಮಿಯಾರ ಟ್ವೀಟ್ ನ್ನು ಉಲ್ಲೇಖಿಸಿ, “ಇದು ಅತ್ಯಂತ ಭಯಾನಕ ಟ್ವೀಟ್. ನಿಮ್ಮನ್ನು ತಕ್ಷಣವೇ ವಜಾಗೊಳಿಸಲಾಗುತ್ತದೆ. ಅಸಹ್ಯವನ್ನು ಕೂಡ ನೀವು ಮೀರಿದ್ದೀರಿ. ಉತ್ತಮ ಮಾನವರಾಗಿ. ನೀವು ಸಾವು, ಅತ್ಯಾಚಾರ, ಹಲ್ಲೆ,ಒತ್ತೆಯಾಳನ್ನು ಈ ರೀತಿ ಸಮರ್ಥಿಸಿಕೊಳ್ಳುತ್ತಿರುವುದು ನಿಜಕ್ಕೂ ದುರಂತ. ನಿಮ್ಮ ಅಜ್ಞಾನವನ್ನು ಯಾವುದೇ ಪದಗಳು ವಿವರಿಸಲು ಸಾಧ್ಯವಿಲ್ಲ” ಎಂದು ಪಾಡ್ ಕಾಸ್ಟರ್ ಟಾಡ್ ಶಪಿರೋ ಟ್ವೀಟ್ ಮಾಡಿದ್ದಾರೆ.
“ಇಂತಹ ದುರಂತದ ಸಮಯದಲ್ಲಿ ನಾವೆಲ್ಲ ಒಗ್ಗೂಡುವ ಅಗತ್ಯವಿದೆ. ನೀವು ಉತ್ತಮ ವ್ಯಕ್ತಿಯಾಗಬೇಕೆಂದು ನಾನು ಪ್ರಾರ್ಥಿಸುತ್ತೇನೆ. ಆದಾಗ್ಯೂ, ಇದು ನಿಮಗೆ ತುಂಬಾ ತಡವಾಗಿದೆ ಎಂದು ಸ್ಪಷ್ಟವಾಗಿ ತೋರುತ್ತದೆ” ಎಂದು ಅವರು ಟ್ವೀಟ್ ಮಾಡಿದ್ದಾರೆ.
ಆದರೆ ಇದಕ್ಕೆ ಮಿಯಾ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಟ್ವೀಟ್ ಮೂಲಕ ಅವರು ತನ್ನ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.
ತನ್ನ ಹೇಳಿಕೆಯು ಯಾವುದೇ ರೀತಿಯಲ್ಲಿ ಹಿಂಸಾಚಾರವನ್ನು ಪ್ರಚೋದಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಪ್ಯಾಲೆಸ್ತೀನಿಯನ್ ನಾಗರಿಕರನ್ನು ವಿವರಿಸಲು “ಸ್ವಾತಂತ್ರ್ಯ ಹೋರಾಟಗಾರರು” ಎಂಬ ಪದದ ಬಳಕೆಯನ್ನು ಅವರು ಸಮರ್ಥಿಸಿಕೊಂಡರು, ಅದು ಅವರ ಹೋರಾಟವನ್ನು ನಿಖರವಾಗಿ ಪ್ರತಿನಿಧಿಸುತ್ತದೆ ಎಂದು ಹೇಳಿದ್ದಾರೆ.
This is such a horrendous tweet @miakhalifa. Consider yourself fired effective immediately. Simply disgusting. Beyond disgusting. Please evolve and become a better human being. The fact you are condoning death, rape, beatings and hostage taking is truly gross. No words can… https://t.co/ez4BEtNzj4
— Todd Shapiro (@iamToddyTickles) October 8, 2023
Obama Is Queer: ಮಾಜಿ ಅಧ್ಯಕ್ಷ ಒಬಾಮಾ ಪತ್ನಿ ಮಿಚೆಲ್ ಗಂಡಸು: ಮಸ್ಕ್ ತಂದೆ
Cut Down: ವೆಚ್ಚ ಕಡಿತ: ಅಮೆರಿಕ ಸರಕಾರಿ ಉದ್ಯೋಗಿಗಳೇ ವಜಾ!
Mexico:ಯುರೋಪ್ ನ Most ವಾಂಟೆಡ್ ಕ್ರಿ*ಮಿನಲ್, ಡ್ರ*ಗ್ ಕಿಂಗ್ ಪಿನ್ ಮಾರ್ಕೋ ಹ*ತ್ಯೆ
Bourbon Whiskey: ಅಮೆರಿಕದ ಬೌರ್ಬನ್ ವಿಸ್ಕಿ ಆಮದು ಸುಂಕ ಕಡಿತ ಮಾಡಿದ ಭಾರತ
ರಷ್ಯಾ-ಉಕ್ರೇನ್ ಕಾಳಗ ತಪ್ಪಿಸಲು ಮುಂದಿನ ವಾರ 3 ದೇಶದ ಅಧಿಕಾರಿಗಳ ಸಭೆ
You seem to have an Ad Blocker on.
To continue reading, please turn it off or whitelist Udayavani.