ಅಫ್ಘಾನಿಸ್ತಾನದ ಬಹುಕೋಟಿ ಸಂಪತ್ತು ತಾಲಿಬಾನ್ ಉಗ್ರರ ಕೈಗೆ ಸಿಗದು!

ಅಫ್ಘಾನ್‌ ಖಾತೆಗಳನ್ನು ಮುಟ್ಟುಗೋಲು ಹಾಕಲಾಗಿದೆ.

Team Udayavani, Aug 19, 2021, 2:47 PM IST

ಅಫ್ಘಾನಿಸ್ತಾನದ ಬಹುಕೋಟಿ ಸಂಪತ್ತು ತಾಲಿಬಾನ್ ಉಗ್ರರ ಕೈಗೆ ಸಿಗದು!

ವಾಷಿಂಗ್ಟನ್‌: ದೇಶವನ್ನು ತಾಲಿಬಾನಿಗಳು  ವಶಪಡಿಸಿಕೊಂಡಿದ್ದರೂ, ಸರಕಾರದ ಸಂಪತ್ತು ಅವರಿಗೆ ಸಿಗುವುದಿಲ್ಲ ಎಂದು ಅಫ್ಘಾನಿಸ್ಥಾನ ಸೆಂಟ್ರಲ್‌ ಬ್ಯಾಂಕ್‌ನ ಅಧ್ಯಕ್ಷ ಅಜ್ಮಲ್‌ ಅಹ್ಮದಿ ಹೇಳಿದ್ದಾರೆ. “ದ ಅಫ್ಘಾನಿಸ್ಥಾನ್‌ ಬ್ಯಾಂಕ್‌ (ಡಿಎಬಿ) ಸುಮಾರು 9 ಬಿಲಿಯನ್‌ ಡಾಲರ್‌ (6.68 ಲಕ್ಷ ಕೋಟಿ ರೂ.) ಮೌಲ್ಯದ ಸಂಪತ್ತನ್ನು ನಿರ್ವಹಿಸುತ್ತಿತ್ತು.  ಅದರಲ್ಲಿ 7 ಬಿಲಿಯನ್‌ ಡಾಲರ್‌ (5.19 ಲಕ್ಷ ಕೋಟಿ ರೂ.) ಚಿನ್ನ, ಬಾಂಡ್‌ಗಳು, ನಗದು ಮತ್ತು ಅಮೆರಿಕದ ಫೆಡರಲ್‌ ರಿಸರ್ವ್‌ನಲ್ಲಿ ಹೂಡಿಕೆ ರೂಪದಲ್ಲಿದೆ. ಬಹುತೇಕ ಎಲ್ಲ ಸಂಪತ್ತು ಹೊರ ದೇಶಗಳಲ್ಲಿಯೇ ಇದೆ. ದೇಶದಲ್ಲಿ ಭದ್ರತಾ ಸಮಸ್ಯೆ ಉಂಟಾದಾಗಿನಿಂದ ದೇಶಕ್ಕೆ ಹಣವೂ ಬಂದಿಲ್ಲ. ಕೇವಲ ಶೇ. 0.2ರಷ್ಟು ಸಂಪತ್ತು ಮಾತ್ರವೇ ದೇಶದಲ್ಲಿದೆ. ಹಾಗಾಗಿ ತಾಲಿಬಾನಿಗಳಿಗೆ ದೇಶದ ಸಂಪತ್ತು ಸಿಗುವುದಿಲ್ಲ ಎಂದಿದ್ದಾರೆ.

ಇದೇ ವೇಳೆ, ಅಮೆರಿಕದಲ್ಲಿ ಸುಮಾರು 9.5 ಬಿಲಿಯನ್‌ ಡಾಲರ್‌ ಮೌಲ್ಯದ ಅಫ್ಘಾನ್‌ ಸಂಪತ್ತಿದೆ. ಇಲ್ಲಿನ ಅಫ್ಘಾನ್‌ ಖಾತೆಗಳನ್ನು ಮುಟ್ಟುಗೋಲು ಹಾಕಲಾಗಿದೆ. ಯಾವುದೇ ಕಾರಣಕ್ಕೂ ಸಂಪತ್ತು ತಾಲಿಬಾನಿಗಳ ಕೈಗೆ ಸೇರದಂತೆ ನೋಡಿಕೊಳ್ಳಲಾಗುವುದು ಎಂದು ಅಮೆರಿಕ ಹೇಳಿದೆ.

ಅಂಗೈಯಲ್ಲಿ ಜೀವ ಹಿಡಿದು ಹೊರಟರು! :

ತಾಲಿಬಾನಿಗಳು ಇಡೀ ಅಫ್ಘಾನಿಸ್ಥಾನವನ್ನು ತಮ್ಮ ತೆಕ್ಕೆಗೆ ತೆಗೆದುಕೊಳ್ಳುವುದು ಇನ್ನೂ 2-3 ದಿನ ಬಾಕಿ ಇರುವಾಗಲೇ ಭಾರತ ಸರಕಾರ, ಆ ದೇಶದಲ್ಲಿರುವ ತನ್ನ ರಾಯಭಾರಿ ಕಚೇರಿಯ ಸಿಬಂದಿಯನ್ನು, ಭಾರತೀಯರನ್ನು ಕರೆಯಿಸಿಕೊಳ್ಳುವ ಪ್ರಕ್ರಿಯೆಗೆ ಚಾಲನೆ ನೀಡಿತ್ತು. ಸುಗಮ ಸಾರಿಗೆ ಅವಕಾಶ ಕಲ್ಪಿಸುವಂತೆ ರಾಯಭಾರಿ ಕಚೇರಿಯೂ ತಾಲಿಬಾನಿ ನಾಯಕರಿಗೆ ಮನವಿ ಮಾಡಿತ್ತು. ಆದರೂ, ಅಫ್ಘಾನ್‌ ನೆಲದಿಂದ ವಿಮಾನದಲ್ಲಿ ಗಗನಕ್ಕೆ ಹಾರುವವರೆಗೆ ಭಾರತೀಯರು ಅಂಗೈಯ್ಯಲ್ಲಿ ಜೀವ ಹಿಡಿದುಕೊಂಡೇ ಇದ್ದರು!

ರಾಯಭಾರ ಕಚೇರಿ ತೆರವು ಮಾಡುವ ದಿನದಂದು, ಕಚೇರಿಯ ಅವರಣದಲ್ಲಿ ಸುಮಾರು 150 ಭಾರತೀಯ ರಾಜತಂತ್ರಜ್ಞರು, ಹಲವಾರು ನಾಗರಿಕರು, ಶೀಘ್ರವೇ ಹೊರಡುವ ತರಾತುರಿಯಲ್ಲಿದ್ದರು. ಆದರೆ ಕಾಂಪೌಂಡಿನ ಗೇಟಿನಲ್ಲಿ ಬಂದೂಕು ಕೈಯ್ಯಲ್ಲಿ ಹಿಡಿದು ಕಾಯುತ್ತಿದ್ದ ತಾಲಿಬಾನಿಗಳ ಗುಂಪನ್ನು ನೋಡಿದಾಗಲೆಲ್ಲ ಜೀವ ನಡುಗುತ್ತಿತ್ತು.

ಇದೇ ಆತಂಕದಲ್ಲಿಯೇ ಅಧಿಕಾರಿಗಳು, ಭಾರತೀಯರು, ರಾಯಭಾರಿ ಕಚೇರಿಯ ಕಾಂಪೌಂಡಿನಲ್ಲಿ ಸಾಲಾಗಿ ನಿಂತಿದ್ದ ವಾಹನಗಳಲ್ಲಿ ಕುಳಿತು, ಪಯಣ ಶುರು ಮಾಡಿದರು. ರಾಯಭಾರಿ ಕಚೇರಿಯ ಗೇಟುಗಳು ತೆರೆಯಲ್ಪಟ್ಟು, ಕಾರುಗಳು ರಸ್ತೆಗಿಳಿದವು.

ಯಾರಿಂದ ಗುಂಡಿನ ದಾಳಿಯ ಭೀತಿ ಆವರಿಸಿತ್ತೋ ಅವರೇ (ತಾಲಿಬಾನಿಗಳು), ಸಣ್ಣನೆಯ ನಸುನಗು ನಕ್ಕು, ಟಾಟಾ ಮಾಡಿ, ವಾಹನಗಳಿಗೆ ರಸ್ತೆ ಬಿಟ್ಟುಕೊಟ್ಟರು!  ವಾಹನಗಳಲ್ಲಿದ್ದವರಿಗೆ ಅಚ್ಚರಿಯೋ ಅಚ್ಚರಿ. ದಾರಿಯ ಇಕ್ಕೆಲಗಳಲ್ಲಿಯೂ ಹಾಜರಿದ್ದ ಆ ಉಗ್ರರ ಗುಂಪುನಲ್ಲಿ ಕೆಲವರು ವಿಮಾನ ನಿಲ್ದಾಣಕ್ಕೆ ಹೋಗುವ ದಾರಿ ತೋರಿಸಿದರು. ಸದ್ಯ ಅವರ ಬಂದೂಕುಗಳು ಆ ಹೊತ್ತಿಗೆ ವಿಶ್ರಾಂತಿ ಪಡೆಯುತ್ತಿದ್ದವು. ವಾಹನಗಳಲ್ಲಿ ಹೋಗುತ್ತಿದ್ದವರಿಗೆ “ಬದುಕಿದೆಯಾ ಬಡಜೀವವೇ’ ಎಂಬ ಭಾವ. ಇದು ನಿಜಕ್ಕೂ ಗಂಡಾಂತರವೊಂದನ್ನು ಗೆದ್ದುಬಂದ ಹಾಗೆ ಎನ್ನುತ್ತಾರೆ ಭಾರತಕ್ಕೆ ಬಂದಿಳಿದಿರುವ ಅಧಿಕಾರಿಗಳು.

ಟಾಪ್ ನ್ಯೂಸ್

20-belagavi-2

Belagavi: ಅಂಗನವಾಡಿ ಕಾರ್ಯಕರ್ತೆಯರ ಬೇಡಿಕೆಗಳ ಈಡೇರಿಕೆಗೆ ಕ್ರಮ: ಸಚಿವೆ ಲಕ್ಷ್ಮೀ

Umar Khalid: ದೆಹಲಿ ಗಲಭೆ ಪ್ರಕರಣದ ಆರೋಪಿ ಉಮರ್ ಖಾಲಿದ್‌ಗೆ 7 ದಿನಗಳ ಮಧ್ಯಂತರ ಜಾಮೀನು

Umar Khalid: ದೆಹಲಿ ಗಲಭೆ ಪ್ರಕರಣದ ಆರೋಪಿ ಉಮರ್ ಖಾಲಿದ್‌ಗೆ 7 ದಿನಗಳ ಮಧ್ಯಂತರ ಜಾಮೀನು

‌Actress: 31 ವರ್ಷದ ನಟಿಗೆ 71 ವರ್ಷದ ಹಿರಿಯ ನಟನ ಜತೆ ಪ್ರೀತಿ..? ಫೋಟೋ ವೈರಲ್

‌Actress: 31ರ ನಟಿಗೆ 71 ವರ್ಷದ ಹಿರಿಯ ನಟನ ಜತೆ ಪ್ರೀತಿ..? ಫೋಟೋ ವೈರಲ್

1-mannn

Mumbai Train; ಮಹಿಳಾ ಬೋಗಿಗೆ ಬೆ*ತ್ತಲೆ ಯಾಗಿ ನುಗ್ಗಿದ ಪುರುಷ!!: ವಿಡಿಯೋ ವೈರಲ್

8

Year ender: ಈ ವರ್ಷ ನಕ್ಕು ನಗಿಸಿ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆದ ವಿಡಿಯೋಗಳಿವು..

14-uv-fusion

Meditation: ವರ್ಧಿತ ಶೈಕ್ಷಣಿಕ ಕಾರ್ಯಕ್ಷಮತೆಗೆ ಧ್ಯಾನ

1-prathvi

Shaw left out; ಓ ದೇವರೇ, ನಾನು ಇನ್ನೇನೆಲ್ಲ ನೋಡಬೇಕು..; ಪೃಥ್ವಿ ಶಾ ನೋವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-lasike

Russia; ಅಭಿವೃದ್ಧಿಪಡಿಸಲಾದ ಕ್ಯಾನ್ಸರ್ ಲಸಿಕೆ ಉಚಿತವಾಗಿ ಲಭ್ಯ

Israel ನಡೆಸಿದ ಭಾರೀ ದಾಳಿಗೆ ಸಿರಿಯಾದಲ್ಲಿ ಲಘು ಭೂಕಂಪನ!

Israel ನಡೆಸಿದ ಭಾರೀ ದಾಳಿಗೆ ಸಿರಿಯಾದಲ್ಲಿ ಲಘು ಭೂಕಂಪನ!

ಅಮೆರಿಕದಲ್ಲಿ ಶೂಟೌಟ್‌: ಇಬ್ಬರ ಕೊಂದು ವಿದ್ಯಾರ್ಥಿನಿ ಆತ್ಮಹ*ತ್ಯೆ

New York: ಅಮೆರಿಕದಲ್ಲಿ ಶೂಟೌಟ್‌: ಇಬ್ಬರ ಕೊಂದು ವಿದ್ಯಾರ್ಥಿನಿ ಆತ್ಮಹ*ತ್ಯೆ

Moscow: ಕೆಮಿಕಲ್‌ ಅಸ್ತ್ರ ಬಳಸಿದ್ದ ರಷ್ಯಾ ಪರಮಾಣು ರಕ್ಷಣಾಪಡೆ ಮುಖ್ಯಸ್ಥನ ಹತ್ಯೆ

Moscow: ಕೆಮಿಕಲ್‌ ಅಸ್ತ್ರ ಬಳಸಿದ್ದ ರಷ್ಯಾ ಪರಮಾಣು ರಕ್ಷಣಾಪಡೆ ಮುಖ್ಯಸ್ಥನ ಹತ್ಯೆ

Watch Video: ದ್ವೀಪರಾಷ್ಟ್ರ ವನವಾಟುನಲ್ಲಿ ಪ್ರಬಲ ಭೂಕಂಪ, ಹಲವಾರು ಕಟ್ಟಡ ಕುಸಿತ

Watch Video: ದ್ವೀಪರಾಷ್ಟ್ರ ವನವಾಟುನಲ್ಲಿ ಪ್ರಬಲ ಭೂಕಂಪ, ಹಲವಾರು ಕಟ್ಟಡ ಕುಸಿತ

MUST WATCH

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

udayavani youtube

ಅಯ್ಯಪ್ಪ ಸ್ವಾಮಿ ಪವಾಡ | ಮಾತು ಬಾರದ ಬಾಲಕನಿಗೆ ಮಾತು ಬಂತು!

udayavani youtube

CCTV Footage | Udupi; ಹೆದ್ದಾರಿಯಲ್ಲೇ ಶರವೇಗದಲ್ಲಿ ಬಂದು ಅಪ್ಪಳಿಸಿದ ಕಾರು.

ಹೊಸ ಸೇರ್ಪಡೆ

20-belagavi-2

Belagavi: ಅಂಗನವಾಡಿ ಕಾರ್ಯಕರ್ತೆಯರ ಬೇಡಿಕೆಗಳ ಈಡೇರಿಕೆಗೆ ಕ್ರಮ: ಸಚಿವೆ ಲಕ್ಷ್ಮೀ

19-thirthahalli

Thirthahalli: ನದಿಗೆ ಹಾರಿ ಕಾಲೇಜು ವಿದ್ಯಾರ್ಥಿ ಮೃತ್ಯು

18-aranthodu

Aranthodu: ವಿದ್ಯುತ್ ಕಂಬಕ್ಕೆ ಕಾರು ಡಿಕ್ಕಿ; ಪ್ರಯಾಣಿಕರಿಗೆ ಗಾಯ

Umar Khalid: ದೆಹಲಿ ಗಲಭೆ ಪ್ರಕರಣದ ಆರೋಪಿ ಉಮರ್ ಖಾಲಿದ್‌ಗೆ 7 ದಿನಗಳ ಮಧ್ಯಂತರ ಜಾಮೀನು

Umar Khalid: ದೆಹಲಿ ಗಲಭೆ ಪ್ರಕರಣದ ಆರೋಪಿ ಉಮರ್ ಖಾಲಿದ್‌ಗೆ 7 ದಿನಗಳ ಮಧ್ಯಂತರ ಜಾಮೀನು

‌Actress: 31 ವರ್ಷದ ನಟಿಗೆ 71 ವರ್ಷದ ಹಿರಿಯ ನಟನ ಜತೆ ಪ್ರೀತಿ..? ಫೋಟೋ ವೈರಲ್

‌Actress: 31ರ ನಟಿಗೆ 71 ವರ್ಷದ ಹಿರಿಯ ನಟನ ಜತೆ ಪ್ರೀತಿ..? ಫೋಟೋ ವೈರಲ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.