ಈಜಿಪ್ಟ್ ಮಸೀದಿಯಲ್ಲಿ ಸ್ಫೋಟಕ್ಕೆ 235 ಮಂದಿ ಬಲಿ
Team Udayavani, Nov 25, 2017, 6:00 AM IST
ಕೈರೋ: ಈಜಿಪ್ಟ್ನ ಮಸೀದಿಯಲ್ಲಿ ನಡೆದ ಬಾಂಬ್ ದಾಳಿಯಲ್ಲಿ 235ಕ್ಕೂ ಹೆಚ್ಚು ಜನ ಮೃತಪಟ್ಟು, ನೂರಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಉತ್ತರ ಸಿನೈ ಪ್ರದೇಶದಲ್ಲಿರುವ ಅಲ್ ರೌದಾ ಮಸೀದಿಯಲ್ಲಿ ಪ್ರಾರ್ಥನೆ ಮಾಡುತ್ತಿದ್ದವರ ಮೇಲೆ 4 ವಾಹನಗಳಲ್ಲಿ ಬಂದ ಉಗ್ರರು ಮೊದಲು ಬಾಂಬ್ ದಾಳಿ ನಡೆಸಿದ್ದಾರೆ. ಪ್ರಾರ್ಥನೆ ನಡೆಸುತ್ತಿದ್ದವರು ಮಸೀದಿಯಿಂದ ಹೊರಗೋಡುತ್ತಿದ್ದಂತೆ ಹೊರಗೆ ನಿಂತಿದ್ದ ಉಗ್ರರು ಗುಂಡಿನ ದಾಳಿ ನಡೆಸಿದ್ದಾರೆ.
ರಕ್ಷಣಾ ಕಾರ್ಯಾಚರಣೆ ತೀವ್ರಗೊಂಡಿದ್ದು, 50ಕ್ಕೂ ಹೆಚ್ಚು ಆ್ಯಂಬುಲೆನ್ಸ್‌ಗಳಿಂದ ಗಾಯಾಳುಗಳನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಈವರೆಗೆ ಯಾವುದೇ ಉಗ್ರ ಸಂಘಟನೆಯೂ ದುಷ್ಕೃತ್ಯದ ಹೊಣೆ ಹೊತ್ತುಕೊಂಡಿಲ್ಲ. ದೇಶಾದ್ಯಂತ ಮೂರು ದಿನಗಳವರೆಗೆ ಶೋಕಾಚರಣೆ ಘೋಷಿಸಲಾಗಿದೆ. ಅಧ್ಯಕ್ಷ ಅಬ್ಧೆಲ್ ಫತಾ ಎಲ್ ಸಿಸಿ ತುರ್ತು ಸಭೆ ನಡೆಸಿದ್ದಾರೆ.
2011ರಲ್ಲಿ ಮುಸ್ಲಿಂ ಮೂಲಭೂತವಾದಿ ಮುಖಂಡ ಹೋಸ್ನಿ ಮುಬಾರಕ್ ಅಧಿಕಾರ ಕಳೆದುಕೊಂಡು, ಹೊಸ ಸರ್ಕಾರ ಅಸ್ತಿ¤ತ್ವಕ್ಕೆ ಬಂದ ನಂತರ ಉಗ್ರರ ಉಪಟಳ ತೀವ್ರಗೊಂಡಿದ್ದು, ಭದ್ರತಾ ಸಿಬ್ಬಂದಿ ಮತ್ತು ಪೊಲೀಸರನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲಾಗುತ್ತಿದೆ. ಈವರೆಗೆ ಸಾವಿರಕ್ಕೂ ಹೆಚ್ಚು ಮಂದಿ ದಾಳಿಯಲ್ಲಿ ಸಾವನ್ನಪ್ಪಿದ್ದಾರೆ. 2017 ಏ.9ರಂದು ಹಾಗೂ ಮೇ 26ರಂದು ನಡೆದ ದಾಳಿಯಲ್ಲಿ ಸುಮಾರು 100 ಮಂದಿ ಮೃತಪಟ್ಟಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Los Angeles: ಹತೋಟಿಗೆ ಬಾರದ ಕಾಡ್ಗಿಚ್ಚು, ಸಾವಿರಾರು ಮನೆಗಳು ಆಹುತಿ, ಮೃತರ ಸಂಖ್ಯೆ 16ಕ್ಕೆ
Neuralink; ಮತ್ತೊಬ್ಬನ ಮೆದುಳಿಗೆ ಚಿಪ್ : ಏನಿದು ತಂತ್ರಜ್ಞಾನ?
Wildfires; ಲಾಸ್ ಏಂಜಲೀಸ್ ಬೆಂಕಿಗೆ 10000 ಕೋಟಿ ಬಂಗಲೆ ಭಸ್ಮ
Donald Trump ಸೋಲಿಸುತ್ತಿದ್ದೆ, ಪಕ್ಷಕ್ಕಾಗಿ ಹಿಂದೆ ಸರಿದೆ: ಅಧ್ಯಕ್ಷ ಜೋ ಬೈಡೆನ್
ಹವಾಮಾನ ಇಲಾಖೆಗೆ 150: ಕಾರ್ಯಕ್ರಮಕ್ಕೆ ಬರಲ್ಲ ಬಾಂಗ್ಲಾ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.