ಮ್ಯಾನ್ಮಾರ್ ನಲ್ಲಿ ಮಿಲಿಟರಿ ದಂಗೆಯ ನಂತರ ಪರಿಸ್ಥಿತಿ ಹೇಗಿದೆ.? WFP ಹೇಳಿದ್ದೇನು..?
Team Udayavani, May 28, 2021, 5:13 PM IST
ಪ್ರಾತಿನಿಧಿಕ ಚಿತ್ರ
ಯಾಂಗೊನ್ : ಮಿಲಿಟರಿ ದಂಗೆ ಮತ್ತು ಆರ್ಥಿಕ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ, ಮುಂಬರುವ ತಿಂಗಳುಗಳಲ್ಲಿ ಲಕ್ಷಾಂತರ ಮ್ಯಾನ್ಮಾರ್ ನಾಗರಿಕರು ಹಸಿವಿನಿಂದ ಬಳಲುವ ಸಾಧ್ಯವಿದೆ ಎಂದು ವರ್ಲ್ಡ್ ಫುಡ್ ಪ್ರೋಗ್ರಾಮ್ (ಡಬ್ಲ್ಯು ಎಫ್ ಪಿ) ಅಥವಾ ವಿಶ್ವ ಆಹಾರ ಯೋಜನೆ ಎಚ್ಚರಿಸಿದೆ.
ಫೆಬ್ರವರಿ 1 ರ ಮಿಲಿಟರಿ ದಂಗೆಯ ಹಾಗೂ ರಾಜಕೀಯ ಪ್ರಕ್ಷುಬ್ಧತೆಯಿಂದ ಮ್ಯಾನ್ಮಾರ್ 6.4 ಮಿಲಿಯನ್ ನಷ್ಟು ಮಂದಿ ತೀವ್ರ ಹಸಿವಿನಿಂದ ಬಳಲುತ್ತಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ : ‘ನಾನು ಗರ್ಭಿಣಿ, ಹೊಟ್ಟೆ ನೋಯುತ್ತಿದೆ ಎಂದರೂ ಬಿಡುತ್ತಿಲ್ಲ’ ಪೊಲೀಸರ ವಿರುದ್ಧ ಮಹಿಳೆ ಸಿಟ್ಟು
ಈ ಬಗ್ಗೆ ಪ್ರತಿಕ್ರಿಯಿಸಿರುವ ಡಬ್ಲ್ಯು ಎಫ್ ಪಿ ಮ್ಯಾನ್ಮಾರ್ ದೇಶದ ನಿರ್ದೇಶಕ ಸ್ಟೀಫನ್ ಆಂಡರ್ಸನ್, ಮ್ಯಾನ್ಮಾರ್ ನಲ್ಲಿ ಜನ ಹಸಿವಿನಿಂದ ಬಳಲುತ್ತಿರುವುದು ಹಾಗೂ ಅಲ್ಲಿನ ರಾಜಕೀಯದ ಕಾರಣದಿಂದಾಗಿ ಹತಾಶಗೊಳ್ಳುತ್ತಿರುವುದು ಇದೇ ಮೊದಲಲ್ಲ. ಬಡ ಜನರು ಉದ್ಯೋಗ ಕಳೆದುಕೊಂಡಿದ್ದಾರೆ ಮತ್ತು ಆಹಾರವನ್ನು ಪಡೆಯಲು ಅವರಿಗೆ ಸಾಧ್ಯವಾಗುತ್ತಿಲ್ಲ. ಆಹಾರದ ಸಮಸ್ಯೆಯನ್ನು ನೀಗಿಸಲು ಹಾಗೂ ಅವರ ಅಗತ್ಯೆತಗಳನ್ನು ಪೂರೈಸಲು ಒಂದು ಸಮಗ್ರ ಪ್ರತಿಕ್ರಿಯೆ ಅಗತ್ಯ ಎಂದು ಹೇಳಿದ್ದಾರೆ.
ವಿಶ್ವ ಆಹಾರ ಯೋಜನೆಯು ಒದಗಿಸಿದ ವರದಿಯ ಪ್ರಕಾರ, ರಾಖೈನ್, ಕಾಚಿನ್ ಮತ್ತು ಚಿನ್ ಸೇರಿದಂತೆ ಮ್ಯಾನ್ಮಾರ್ ನ ಗಡಿ ರಾಜ್ಯಗಳಲ್ಲಿ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿದೆ.
ಕಾಚಿನ್ ರಾಜ್ಯದ ಕೆಲವು ಟೌನ್ ಶಿಪ್ ಗಳಲ್ಲಿ ಅಕ್ಕಿ ಬೆಲೆ ಶೇಕಡಾ 43 ರಷ್ಟು ಮತ್ತು ಅಡುಗೆ ಎಣ್ಣೆಯಲ್ಲಿ ಶೇಕಡಾ 32 ರಷ್ಟು ಏರಿಕೆಯಾಗಿದೆ. ಇನ್ನು, ಇಂಧನ ಬೆಲೆ ದೇಶಾದ್ಯಂತ ಸುಮಾರು 30 ಪ್ರತಿಶತದಷ್ಟು ಹೆಚ್ಚಾಗಿದೆ ಎಂದು ಹೇಳಿದ್ದಲ್ಲದೇ, ಈ ಎಲ್ಲಾ ಸಮಸ್ಯೆಗಳಿಂದ ಮ್ಯಾನ್ಮಾರ್ ನಲ್ಲಿ ಮಿಲಿಟರಿ ದಂಗೆಯ ನಂತರದಲ್ಲಿ ಬಡತನದ ಸಮಸ್ಯೆ ಮತ್ತಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ ಎಂದು ವರದಿ ತಿಳಿಸಿದೆ.
ಫೆಬ್ರವರಿ 1 ರಂದು ಮ್ಯಾನ್ಮಾರ್ ನ ಸೈನ್ಯವು ಪ್ರಜಾಸತ್ತಾತ್ಮಕವಾಗಿ ಚುನಾಯಿತ ನಾಗರಿಕ ಸರ್ಕಾರದಿಂದ ಅಧಿಕಾರವನ್ನು ವಶಪಡಿಸಿಕೊಂಡಿದೆ. ಮ್ಯಾನ್ಮಾರ್ ನಲ್ಲಿ ನಡೆದ ನಾಗರಿಕ ಅಸಹಕಾರ ಚಳುವಳಿ ಯಕಾರಣದಿಂದಾಗಿ ಸುಮಾರು 700 ಮಂದಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
ಮ್ಯಾನ್ಮಾರ್ ನಲ್ಲಿ ಸೃಷ್ಟಿಯಾದ ಈ ಬಿಕ್ಕಟ್ಟಿನ ಪರಿಣಾಮದಿಂದಾಗಿ ಬ್ಯಾಂಕಿಂಗ್ ವ್ಯವಸ್ಥೆಯ ಮೇಲೂ ಕೂಡ ದೊಡ್ಡ ಮಟ್ಟದಲ್ಲಿ ಪರಿಣಾಮ ಉಂಟಾಗಿದ್ದು, ಬ್ಯಾಂಕಿಂಗ್ ವ್ಯವಸ್ಥೆ ಸ್ಥಗಿತಗೊಳ್ಳವಂತಾಗಿದೆ, ಬ್ಯಾಂಕ್ ಗಳು ಅನೇಕ ಶಾಖೆಗಳನ್ನು ಸ್ಥಗಿತಗೊಳಿಸಿದೆ, ಪಾವತಿ ಮಾಡಲು ಸಾಧ್ಯವಾಗುತ್ತಿಲ್ಲ ಮತ್ತು ಗ್ರಾಹಕರಿಗೆ ಹಣವನ್ನು ಹಿಂಪಡೆಯಲು ಸಾಧ್ಯವಾಗದಿರುವ ಪರಿಸ್ಥಿತಿ ಮ್ಯಾನ್ಮಾರ್ ನಲ್ಲಿ ಉಂಟಾಗಿದೆ.
ಒಟ್ಟಿನಲ್ಲಿ ಮಿಲಿಟರಿ ಆಡಳಿತದ ಕಾರಣದಿಂದಾಗಿ ಮ್ಯಾನ್ಮಾರ್ ನಲ್ಲಿ ಸಂಕಷ್ಟದ ಪರಿಸ್ಥಿತಿ ಉಂಟಾಗಿದ್ದು, ನಾಗರಿಕ ವ್ಯವಸ್ಥೆ ಪರಿತಪಿಸುತ್ತಿದೆ ಎಂಬುದಾಗಿ ಅಂತರಾಷ್ಟ್ರೀಯ ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.
ಇದನ್ನೂ ಓದಿ : ನೆನಪಿಡಿ… ನಿಮ್ಮ ಬದುಕು ನಿಮ್ಮನ್ನು ಚೆಂದಾಗಿ ಬದುಕಿಸುತ್ತದೆ..!
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Adani; ಆಸೀಸ್ ಕಲ್ಲಿದ್ದಲು ಗಣಿಯಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಆರೋಪ
London: ಶಂಕಾಸ್ಪದ ಲಗೇಜ್ ಪತ್ತೆ: ಲಂಡನ್ ಏರ್‌ಪೋರ್ಟ್ ಖಾಲಿ ಮಾಡಿಸಿ ತನಿಖೆ!
ಆಕಸ್ಮಿಕವಾಗಿ ಹಾರಿದ ಗುಂಡು: ಬರ್ತ್ ಡೇ ದಿನವೇ ಹಾರಿ ಹೋಯ್ತು ಭಾರತೀಯ ಮೂಲದ ವಿದ್ಯಾರ್ಥಿ ಜೀವ
Canada-India Row: ನಿಜ್ಜರ್ ಹತ್ಯೆ ಹಿಂದೆ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ
Khalistan; ಕೆನಡಾ ಹಿಂದೂಗಳ ಮೇಲೆ ದಾಳಿ: ಉಗ್ರರ ಹೊಸ ಬೆದರಿಕೆ
MUST WATCH
ಹೊಸ ಸೇರ್ಪಡೆ
Bengaluru: ಹನಿಟ್ರ್ಯಾಪ್: ಪ್ರೊಫೆಸರ್‌ಗೆ 3 ಕೋಟಿ ಸುಲಿಗೆ; ಉಡುಪಿ, ಕಾರ್ಕಳ ಮೂಲದವರ ಬಂಧನ
By Poll: ಇಬ್ಬರು ಮಾಜಿ ಸಿಎಂಗಳ ಪುತ್ರರಿಗೂ ಸೋಲಿನ ರುಚಿ ತೋರಿಸಿದ ಮತದಾರ; ಎಡವಿದ್ದೆಲ್ಲಿ?
Karnataka Bypoll Results:ಮೂರು ಕ್ಷೇತ್ರಗಳಲ್ಲೂ “ಕೈ” ಮೇಲುಗೈ, ಬಿಜೆಪಿ ಮೈತ್ರಿಗೆ ಮುಖಭಂಗ
ಸಹಕಾರ ಭಾರತಿ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಸಾಣೂರು ನರಸಿಂಹ ಕಾಮತ್ ಆಯ್ಕೆ
ಶೋರೂಮ್ ನಿಂದ ಕದ್ದು ಬಾಂಗ್ಲಾದೇಶಕ್ಕೆ ಕಳ್ಳಸಾಗಣೆ ಮಾಡುತ್ತಿದ್ದ 2 ಕೋಟಿ ಮೌಲ್ಯದ ಐಫೋನ್ ವಶ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.