ಕ್ರಿಪ್ಟೋ ಸಮಸ್ಯೆ ಪರಿಹಾರಕ್ಕೆ ಆದ್ಯತೆ ಅಗತ್ಯ: ಸಚಿವೆ Nirmala Sitharaman ಸಲಹೆ
Team Udayavani, Apr 16, 2023, 7:20 AM IST
ವಾಷಿಂಗ್ಟನ್: ಜಿ20 ರಾಷ್ಟ್ರಗಳ ನಡುವಿನ ಪ್ರಮುಖ ಚರ್ಚಾ ವಿಷಯವಾಗಿ ಕ್ರಿಪ್ಟೋ ಆಸ್ತಿ ಮುನ್ನೆಲೆಗೆ ಬಂದಿದ್ದು, ಇದಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ವಿಶೇಷ ಆದ್ಯತೆ ನೀಡಬೇಕಿದೆ. ಅಲ್ಲದೇ, ಇದರಿಂದ ಆರ್ಥಿಕತೆ ಮೇಲೆ ಯಾವುದೇ ಪ್ರತಿಕೂಲ ಪರಿಣಾಮ ಬೀರದಂತೆ ಗಮನಹರಿಸುವ ಅಗತ್ಯವಿದೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಸಲಹೆ ನೀಡಿದ್ದಾರೆ.
ಅಮೆರಿಕದ ವಾಷಿಂಗ್ಟನ್‌ನಲ್ಲಿರುವ ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಕೇಂದ್ರ ಕಚೇರಿಯಲ್ಲಿ “ಕ್ರಿಪ್ಟೋ ಆಸ್ತಿಗಳ ಅತಿಸೂಕ್ಷ್ಮ ಆರ್ಥಿಕ ಪರಿಣಾಮಗಳು’ ವಿಷಯದ ಕುರಿತು ನಡೆದ ಜಿ20 ಹಣಕಾಸು ಸಚಿವರು ಹಾಗೂ ಕೇಂದ್ರ ಬ್ಯಾಂಕ್ ಗವರ್ನರ್‌ಗಳ ಸಭೆಯಲ್ಲಿ ಸಚಿವೆ ಭಾಗಿಯಾಗಿದ್ದರು.
ಈ ವೇಳೆ ಕ್ರಿಪ್ಟೋ ಈಗ ಬಹುದೊಡ್ಡ ಚರ್ಚಾ ವಿಷಯವಸ್ತುವಾಗಿದ್ದು, ಇದರ ನಿಯಂತ್ರಣ ಕ್ರಮಗಳಿಗೆ ಜಿ20 ಸರ್ವಾನುಮತವಿದೆ. ಇದಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸಲು ಪ್ರಮುಖ್ಯ ಆದ್ಯತೆ ನೀಡಿ, ಐಎಂಎಫ್ ಮತ್ತು ಎಫ್ಎಸ್‌ಬಿ ನೀತಿ-ನಿಯಂತ್ರಣಗಳನ್ನು ರೂಪಿಸಿದರೆ ಅದನ್ನು ಜಿ20 ಅಂಗೀಕರಿಸಲಿದೆ ಎಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pakistan; ಶಿಯಾ ಮುಸ್ಲಿಮರನ್ನು ಗುರಿಯಾಗಿರಿಸಿ ಗುಂಡಿನ ದಾಳಿ: ಕನಿಷ್ಠ 38 ಬ*ಲಿ
Netanyahu ವಿರುದ್ಧ ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯದಿಂದ ಬಂಧನ ವಾರಂಟ್
Russia ದಿಂದ ಉಕ್ರೇನ್ ಮೇಲೆ ICBM ದಾಳಿ; ನ್ಯೂಕ್ಲಿಯರ್ ದಾಳಿ ಉದ್ವಿಗ್ನತೆ ಹೆಚ್ಚಳ
Chrome Browser: ಗೂಗಲ್ ಸರ್ಚ್ ಎಂಜಿನ್ ಕ್ರೋಮ್ ಮಾರಾಟ?
ವಾಯುವ್ಯ ಅಮೆರಿಕಕ್ಕೆ ಅಪ್ಪಳಿಸಿದ ಬಾಂಬ್ ಸೈಕ್ಲೋನ್, 6 ಲಕ್ಷ ಮನೆಗಳಿಗೆ ವಿದ್ಯುತ್ ಕಡಿತ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.