ಒಂಟಿತನಕ್ಕೂ ಸಚಿವಾಲಯ
Team Udayavani, Jan 22, 2018, 6:05 AM IST
ಲಂಡನ್: ಜನರನ್ನು ಮೂಲಭೂತವಾಗಿ ಕಾಡುವ ಸಮಸ್ಯೆಗಳಲ್ಲಿ ಒಂಟಿತನವೂ ಒಂದು. ಆದರೆ ಸರ್ಕಾರಗಳು ಇದನ್ನು ಸಮಸ್ಯೆ ಎಂದು ಪರಿಗಣಿಸುವುದೇ ಇಲ್ಲ. ಆದರೆ ಇದೇ ಮೊದಲ ಬಾರಿಗೆ ಬ್ರಿಟನ್ ಸರ್ಕಾರ ಅಂಥದ್ದೊಂದು ಕೆಲಸ ಮಾಡಿದೆ. ಒಂಟಿತನವನ್ನು ತೊಡೆದುಹಾಕಲು ಸಚಿವರೊಬ್ಬರನ್ನು ನೇಮಿಸಿದೆ. ಸದ್ಯ ಕ್ರೀಡಾ ಸಚಿವೆಯಾಗಿರುವ ಟ್ರೇಸಿ ಕ್ರೋಚ್ ಅವರು ಈಗ ಒಂಟಿತನ ನಿವಾರಣೆಯ ಹೊಣೆಯನ್ನೂ ಹೊತ್ತುಕೊಂಡಿದ್ದಾರೆ.
ದೇಶದಲ್ಲಿ 90 ಲಕ್ಷ ಮಂದಿ ಒಂಟಿತನದ ಸಮಸ್ಯೆ ಎದುರಿಸುತ್ತಿದ್ದಾರೆ. ಬಹಳಷ್ಟು ಜನರಿಗೆ ಒಂಟಿತನ ಎಂಬುದು ಆಧುನಿಕ ಜೀವನ ನೀಡಿರುವ ನೋವು ಎಂದು ಪ್ರಧಾನಿ ಥೆರೇಸಾ ಮೇ ಹೇಳಿದ್ದಾರೆ. “ಎಲ್ಲರೂ ಏಂಕಾಗಿನದ ವಿರುದ್ಧ ಹೋರಾಡಬೇಕು ಎಂದು ನಾನು ಬಯಸುತ್ತೇನೆ. ವೃದ್ಧರು, ಪ್ರೀತಿಪಾತ್ರರನ್ನು ಕಳೆದುಕೊಂಡಿರವವರು, ತಮ್ಮ ಕಷ್ಟ ಸುಖಗಳನ್ನು ಹಂಚಿಕೊಳ್ಳಲು ಯಾರನ್ನೂ ಹೊಂದಿಲ್ಲದವರ ಒಂಟಿತನವನ್ನು ಹೋಗಲಾಡಿಸಲು ಎಲ್ಲರೂ ಸಹಕರಿಬೇಕು ಎಂದು ಕೇಳಿಕೊಳ್ಳುತ್ತೇನೆ’ ಎಂದು ಅವರು ಹೇಳಿದ್ದಾರೆ.
ಮಾನವ ಹಕ್ಕುಗಳ ಪ್ರತಿಪಾದಕಿ ಜೊಕಾಕ್ಸ್ ನಿಧನರಾಗುವ ಮೊದಲು ಒಂಟಿತನ ನಿವಾರಣೆಗಾಗಿ ಆಯೋಗವನ್ನು ರಚಿಸಿದ್ದರು. ಅದನ್ನು ಸರ್ಕಾರ ಪುನಾರಂಭಿಸಲಿದೆ. ದೇಶದಲ್ಲಿರುವ 2 ಲಕ್ಷ ಹಿರಿಯರು ತಿಂಗಳಲ್ಲಿ ಬಂದು ಬಾರಿಯೂ ತಮ್ಮ ಸ್ನೇಹಿತರು ಮತ್ತು ಸಂಬಂಧಿಗಳ ಜೊತೆ ಮಾತನಾಡುವುದಿಲ್ಲ. ಶೇ.85ರಷ್ಟು ದಿವ್ಯಾಂಗಿಗಳು ಒಂಟಿತನದಿಂದ ಬಳಲುತ್ತಾರೆ. 18ರಿಂದ 35 ವರ್ಷದ ಒಳಗಿನ ಹಲವರು ಏಕಾಂಗಿತನದಿಂದ ತಮ್ಮ ಬದುಕಿನ ಸಂತೋಷವನ್ನು ಕಳೆದುಕೊಂಡಿದ್ದಾರೆ ಎಂದು ಸರ್ಕಾರ ಹೇಳಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Saudi Arabia: ಮೆಕ್ಕಾ-ಮದೀನಾ ಸೇರಿ ಹಲವೆಡೆ ದಾಖಲೆಯ ಧಾರಾಕಾರ ಮಳೆ; ಜನಜೀವನ ಅಸ್ತವ್ಯಸ್ತ
Earthquakes: ಎವರೆಸ್ಟ್ ತಪ್ಪಲಲ್ಲಿ ಪ್ರಬಲ ಭೂಕಂಪ; ಮೃತರ ಸಂಖ್ಯೆ 126ಕ್ಕೆ ಏರಿಕೆ
Updated: ಕೆನಡಾ ಮುಂದಿನ ಪ್ರಧಾನಿ ರೇಸ್ ನಲ್ಲಿ ಭಾರತೀಯ ಮೂಲದ ಅನಿತಾ ಸೇರಿ ಹಲವರ ಪೈಪೋಟಿ!
Facing Dissent: ಕೆನಡಾ ಪ್ರಧಾನಿ ಹುದ್ದೆಗೆ ಟ್ರುಡೋ ರಾಜೀನಾಮೆ
ಬ್ರಹ್ಮಪುತ್ರ ಅಣೆಕಟ್ಟಿಂದ ಭಾರತಕ್ಕೆ ಧಕ್ಕೆ ಆಗದು: ಚೀನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Forest Department: ಇದ್ದಲ್ಲಿಯೇ ಅರಣ್ಯ ಅಪರಾಧಗಳ ದಾಖಲು: “ಗರುಡಾಕ್ಷಿ’ಗೆ ಚಾಲನೆ
Commission: 60 ಪರ್ಸೆಂಟ್ ಕಮಿಷನ್: ಎಚ್‌ಡಿಕೆ ವಿರುದ್ಧ ಮುಗಿಬಿದ್ದ ಆಡಳಿತ ಪಕ್ಷ
illegal Investigation: ಬಿಬಿಎಂಪಿ ಮುಖ್ಯ ಎಂಜಿನಿಯರ್ ಕಚೇರಿ ಮೇಲೆ ಇ.ಡಿ. ದಾಳಿ
Waqf Report: ಅಮಿತ್ ಶಾ ಅಂಗಳಕ್ಕೆ ಭಿನ್ನರ ವಕ್ಫ್ ವರದಿ: ಕಿರಣ್ ರಿಜಿಜು ಮೂಲಕ ಸಲ್ಲಿಕೆ
Udupi:ಗೀತಾರ್ಥ ಚಿಂತನೆ 149: ಜಗತ್ತಿನಲ್ಲಿ ಇಷ್ಟೊಂದು ವ್ಯತ್ಯಾಸವೇಕೆ? ಪ್ರಶ್ನೆಗುತ್ತರವಿಲ್ಲ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.