Sherika De Armas: ಗರ್ಭಕಂಠದ ಕ್ಯಾನ್ಸರ್; 26ರ ಹರೆಯದಲ್ಲಿ ಇಹಲೋಕ ತ್ಯಜಿಸಿದ ರೂಪದರ್ಶಿ
Team Udayavani, Oct 16, 2023, 1:54 PM IST
ನವದೆಹಲಿ: ಕ್ಯಾನ್ಸರ್ ಕಾಯಿಲೆಯಿಂದ ಸಣ್ಣ ವಯಸ್ಸಿನಲ್ಲೇ ರೂಪದರ್ಶಿಯೊಬ್ಬರು ನಿಧನರಾಗಿದ್ದಾರೆ.
ದಕ್ಷಿಣ ಅಮೆರಿಕಾದ ಉರುಗ್ವೆ ದೇಶದ ಶೆರಿಕಾ ಡಿ ಅರ್ಮಾಸ್(26) ಬಾಳಿ ಬದುಕಬೇಕಾದ ವಯಸ್ಸಿನಲ್ಲೇ ಭಯಾನಕ ಕ್ಯಾನ್ಸರ್ ಕಾಯಿಲೆಗೆ ತುತ್ತಾಗಿ ಇಹಲೋಕ ತ್ಯಜಿಸಿದ್ದಾರೆ.
2015 ರಲ್ಲಿ ನಡೆದ ಮಿಸ್ ವರ್ಲ್ಡ್ ಸ್ಪರ್ಧೆಯಲ್ಲಿ ಉರುಗ್ವೆಯನ್ನು ಪ್ರತಿನಿಧಿಸಿ ಶೆರಿಕಾ ಡಿ ಅರ್ಮಾಸ್ ಗಮನ ಸೆಳೆದಿದ್ದರು.
2015 ರಲ್ಲಿ ಚೀನಾದಲ್ಲಿ ನಡೆದ ವಿಶ್ವ ಸುಂದರಿ ಸ್ಪರ್ಧೆಯಲ್ಲಿ ಶೆರಿಕಾ ಡಿ ಅರ್ಮಾಸ್ ಸ್ಪರ್ಧಿಯಾಗಿ ವೇದಿಕೆ ಮೇಲೆ ಹೆಜ್ಜೆ ಹಾಕಿದ್ದರು. ಆದರೆ ಅವರು ಟಾಪ್ 30 ಯಲ್ಲಿ ಇರಲಿಲ್ಲ. 18 ವರ್ಷದವರ 6 ಸ್ಪರ್ಧಿಗಳಲ್ಲಿ ಶೆರಿಕಾ ಡಿ ಅರ್ಮಾಸ್ ಕೂಡ ಒಬ್ಬರಾಗಿದ್ದರು.
ಕಳೆದ 2 ವರ್ಷಗಳಿಂದ ಶೆರಿಕಾ ಡಿ ಅರ್ಮಾಸ್ ಅವರು ಗರ್ಭಕಂಠದ ಕ್ಯಾನ್ಸರ್ ನಿಂದ ಬಳಲುತ್ತಿದ್ದರು. ಈ ಕಾರಣದಿಂದ ಅವರೊಬ್ಬ ರೂಪದರ್ಶಿ ಆಗಿ ಮಿಂಚುವ ಕನಸಿಗೆ ಕ್ಯಾನ್ಸರ್ ಅಡ್ಡಿಯಾಗಿತ್ತು. ಅಕ್ಟೋಬರ್ 13 ರಂದು ಅವರು ನಿಧನರಾಗಿದ್ದಾರೆ. ಇತ್ತೀಚೆಗೆ ಅವರು ಕೀಮೋಥೆರಪಿ ಮತ್ತು ರೇಡಿಯೊಥೆರಪಿ ಚಿಕಿತ್ಸೆಗೆ ಒಳಗಾಗಿದ್ದರು ಎಂದು ʼನ್ಯೂಯಾರ್ಕ್ ಪೋಸ್ಟ್ʼ ವರದಿ ಮಾಡಿದೆ.
ಅವರ ನಿಧನ ಸುದ್ದಿ ಕೇಳಿ ಉರುಗ್ವೆ ಹಾಗೂ ಫ್ಯಾಷನ್ ಲೋಕ ಶಾಕ್ ಆಗಿದೆ. ಪ್ರಸ್ತುತ ಮಿಸ್ ಉರುಗ್ವೆ ಆಗಿರುವ ಕಾರ್ಲಾ ರೊಮೆರೊ ಶೆರಿಕಾ ಅವರ ಸಾವಿಗೆ ಸಂತಾಪ ಸೂಚಿಸಿದ್ದಾರೆ ಮತ್ತು ಅವರು ” ನನ್ನ ಜೀವನದಲ್ಲಿ ನಾನು ಭೇಟಿಯಾದ ಅತ್ಯಂತ ಸುಂದರ ಮಹಿಳೆಯರಲ್ಲಿ ಒಬ್ಬರು” ಎಂದಿದ್ದಾರೆ.
“ಬ್ಯೂಟಿ ಮಾಡೆಲ್ ಆಗಿರಲಿ, ಜಾಹೀರಾತು ಮಾಡೆಲ್ ಆಗಿರಲಿ ಅಥವಾ ಕ್ಯಾಟ್‌ವಾಕ್ ಮಾಡೆಲ್ ಆಗಿರಲಿ ನಾನು ಯಾವಾಗಲೂ ಮಾಡೆಲ್ ಆಗಲು ಬಯಸುತ್ತೇನೆ”ಎಂದು ಈ ಹಿಂದೆ ಸಂದರ್ಶನವೊಂದರಲ್ಲಿ ಶೆರಿಕಾ ಡಿ ಅರ್ಮಾಸ್ ಹೇಳಿದ್ದರು.
ಇದಲ್ಲದೆ ಅವರು ಮೇಕಪ್ ಲೈನ್ , ಕೂದಲು ಮತ್ತು ವೈಯಕ್ತಿಕ ಆರೈಕೆಗೆ ಸಂಬಂಧಿಸಿದ ಉತ್ಪನ್ನಗಳನ್ನು ಮಾರಾಟ ಮಾಡುವ ʼಶೇ ಡಿ ಅರ್ಮಾಸ್ ಸ್ಟುಡಿಯೋʼವನ್ನು ಪ್ರಾರಂಭಿಸಿದ್ದರು.
ಕ್ಯಾನ್ಸರ್ ಹೊಂದಿರುವ ಮಕ್ಕಳಿಗೆ ಚಿಕಿತ್ಸೆ ನೀಡುವ ʼಪೆರೆಜ್ ಸ್ಕ್ರೆಮಿನಿ ಫೌಂಡೇಶನ್ʼಗೆ ಆರ್ಥಿಕವಾಗಿ ಸಹಾಯ ಮಾಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Social Media: ಈ ದೇಶದಲ್ಲಿ 16 ವರ್ಷದೊಳಗಿನವರು ಇನ್ಸ್ಟಾಗ್ರಾಮ್, ಫೇಸ್‌ಬುಕ್ ಬಳಸುವಂತಿಲ್ಲ!
Sydney; ಮಿಲಿಸೆಕೆಂಡಲ್ಲೇ ವಾಸನೆ ಪತ್ತೆ ಹಚ್ಚುವ ರೋಬೋಟ್ ಸೃಷ್ಟಿ!
Canada-India: ಕಾನ್ಸುಲರ್ ಕ್ಯಾಂಪ್ ರದ್ದು; ಕೆನಡಾಗೆ ಭಾರತ ತಿರುಗೇಟು
Australia: ಜಾಲತಾಣ ಬಳಕೆಗೆ ಕನಿಷ್ಠ 16 ವರ್ಷ ಮಿತಿ ನಿಗದಿ?
US: ಮೊದಲ ದಿನವೇ ಜಗತ್ತಿಗೆ ಟ್ರಂಪ್ “ಎನರ್ಜಿ’ ಶಾಕ್!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.