ಸೌದಿ ಅರಮನೆ ಛೇದಿಸಲು ಬಂದ ಕ್ಷಿಪಣಿ ಉಡೀಸ್
Team Udayavani, Dec 20, 2017, 7:40 AM IST
ರಿಯಾದ್: ಸೌದಿ ಅರೇಬಿಯಾ ಅರಮನೆಯನ್ನು ಗುರಿಯಾ ಗಿರಿಸಿಕೊಂಡು ಯೆಮೆನ್‌ನ ಹೌತಿಸ್ ಬಂಡುಕೋರರಿಂದ ಉಡಾಯಿಸಲಾಗಿರುವ ಕ್ಷಿಪಣಿಯನ್ನು ಮಧ್ಯದಲ್ಲೇ ಛೇದಿಸ ಲಾಗಿದೆ. ಸೌದಿ ನೇತೃತ್ವದ ಪಡೆಗಳು ಈ ಕೆಲಸ ಮಾಡಿವೆ ಎಂದು ಸರ್ಕಾರಿ ಚಾನೆಲ್ ಮಂಗಳವಾರ ಹೇಳಿಕೊಂಡಿದೆ.
ಬಂಡುಕೋರರು ಹಾರಿ ಬಿಟ್ಟಿರುವ ಕ್ಷಿಪಣಿಯ ಬಗ್ಗೆ ರಿಯಾದ್ ನಾಗರಿಕರು ದೃಶ್ಯಾವಳಿಯನ್ನು ಸಾಮಾಜಿಕ ಜಾಲದಲ್ಲಿ ಅಪ್‌ಲೋಡ್ ಮಾಡಿರುವಂತೆಯೇ ಸರ್ಕಾರದ ವತಿಯಿಂದಲೇ ಈ ಹೇಳಿಕೆ ಹೊರಬಿದ್ದಿದೆ. ಅರಮನೆಯಲ್ಲಿ ರಾಜಕುಮಾರ ಮೊಹಮ್ಮದ್ ಬಿನ್ ಸಲ್ಮಾನ್ ವಾರ್ಷಿಕ ಮುಂಗಡ ಪತ್ರದ ಬಗ್ಗೆ ಚರ್ಚೆ ನಡೆಸಲು ಪ್ರಮುಖರ ಜತೆ ಸೇರಿದ್ದಾಗಲೇ ಈ ಕೃತ್ಯ ನಡೆದಿದೆ. ಕ್ಷಿಪಣಿ ಛೇದಿಸಿದ್ದರಿಂದ ನಾಗರಿಕರಿಗೆ ಯಾವುದೇ ತೊಂದರೆ ಉಂಟಾಗಿಲ್ಲ. ಬಂಡು ಕೋರರಿಗೆ ಇರಾನ್‌ನಿಂದಲೇ ಕ್ಷಿಪಣಿ ಪೂರೈಕೆಯಾಗಿದೆ ಎಂದು ಸೌದಿ ಮತ್ತು ಅಮೆರಿಕ ಆರೋಪಿಸಿವೆ. ಈ ನಡುವೆ ಬಂಡುಕೋರರ ವಕ್ತಾರ ಟ್ವೀಟ್ ಮಾಡಿ “ವೋಲ್ಕಾನೋ ಎಚ್-2 ಕ್ಷಿಪಣಿಯನ್ನು ಅರಮನೆಯನ್ನು ಗುರಿಯಾಗಿರಿಸಿ ಕೊಂಡು ಉಡಾಯಿಸಿದ್ದೆವು’ ಎಂದು ಬರೆದುಕೊಂಡಿದ್ದಾನೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pakistan: ಪಾಕ್‌ನಲ್ಲಿ ಹಿಂಸಾಚಾರ; ಒಟ್ಟು 37 ಮಂದಿ ಸಾವು
Adani; ಆಸೀಸ್ ಕಲ್ಲಿದ್ದಲು ಗಣಿಯಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಆರೋಪ
London: ಶಂಕಾಸ್ಪದ ಲಗೇಜ್ ಪತ್ತೆ: ಲಂಡನ್ ಏರ್‌ಪೋರ್ಟ್ ಖಾಲಿ ಮಾಡಿಸಿ ತನಿಖೆ!
ಆಕಸ್ಮಿಕವಾಗಿ ಹಾರಿದ ಗುಂಡು: ಬರ್ತ್ ಡೇ ದಿನವೇ ಹಾರಿ ಹೋಯ್ತು ಭಾರತೀಯ ಮೂಲದ ವಿದ್ಯಾರ್ಥಿ ಜೀವ
Canada-India Row: ನಿಜ್ಜರ್ ಹತ್ಯೆ ಹಿಂದೆ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.