ಪತ್ತೆಯಾದ ನೇಪಾಳ ವಿಮಾನ: ಲಾಮ್ಚೆ ನದಿಯಲ್ಲಿ ಪತನಗೊಂಡ 22 ಜನರಿದ್ದ ತಾರಾ ಏರ್ ಕ್ರಾಫ್ಟ್
Team Udayavani, May 29, 2022, 4:42 PM IST
ಕಾಠ್ಮಂಡು: ನಾಲ್ವರು ಭಾರತೀಯರು ಸೇರಿದಂತೆ 22 ಜನರಿದ್ದ ನೇಪಾಳ ಏರ್ ಲೈನ್ ನ ಸಣ್ಣ ವಿಮಾನವು ಪತನಗೊಂಡಿರುವ ಸ್ಥಳವನ್ನು ನೇಪಾಳ ಸೇನೆಯ ಹೆಲಿಕಾಪ್ಟರ್ ಪತ್ತೆ ಮಾಡಿದೆ ಎಂದು ದೇಶದ ನಾಗರಿಕ ವಿಮಾನಯಾನ ಪ್ರಾಧಿಕಾರವನ್ನು ಉಲ್ಲೇಖಿಸಿ ಮಾಧ್ಯಮ ವರದಿಗಳು ತಿಳಿಸಿವೆ.
ಸ್ಥಳೀಯರು ನೇಪಾಳ ಸೇನೆಗೆ ನೀಡಿದ ಮಾಹಿತಿಯ ಪ್ರಕಾರ, ತಾರಾ ಏರ್ ವಿಮಾನವು ಮಾನಪತಿ ಹಿಮಾಲ್ ಭೂಕುಸಿತದ ಅಡಿಯಲ್ಲಿ ಲಾಮ್ಚೆ ನದಿಯಲ್ಲಿ ಪತನಗೊಂಡಿದೆ. ನೇಪಾಳ ಸೇನೆಯು ನೆಲ ಮತ್ತು ವಾಯು ಮಾರ್ಗದಿಂದ ಘಟನಾ ಸ್ಥಳದ ಕಡೆಗೆ ಚಲಿಸುತ್ತಿದೆ ಎಂದು ಸೇನಾ ವಕ್ತಾರ ನಾರಾಯಣ ಸಿಲ್ವಾಲ್ ಮಾಹಿತಿ ನೀಡಿದ್ದಾರೆ.
ನೇಪಾಳದ ತಾರಾ ಏರ್ ಗೆ ಸೇರಿದ ಟ್ವಿನ್ ಓಟರ್ 9ಎನ್-ಎಇಟಿ ವಿಮಾನವು ಪೋಖರಾದಿಂದ ಬೆಳಿಗ್ಗೆ 9:55 ಕ್ಕೆ ಹೊರಟಿತು ಮತ್ತು 15 ನಿಮಿಷಗಳ ನಂತರ ನಿಯಂತ್ರಣ ಗೋಪುರದ ಸಂಪರ್ಕವನ್ನು ಕಳೆದುಕೊಂಡಿತು ಎಂದು ಏರ್‌ಲೈನ್ ವಕ್ತಾರರು ತಿಳಿಸಿದ್ದಾರೆ.
“ಕಾಣೆಯಾದ ವಿಮಾನದ ಕ್ಯಾಪ್ಟನ್ ಘಿಮಿರೆ ಅವರ ಸೆಲ್ ಫೋನ್ ರಿಂಗಣಿಸುತ್ತಿದೆ. ನೇಪಾಳ ಟೆಲಿಕಾಂನಿಂದ ಕ್ಯಾಪ್ಟನ್ ಫೋನನ್ನು ಟ್ರ್ಯಾಕ್ ಮಾಡಿದ ನಂತರ ನೇಪಾಳ ಸೇನೆಯ ಹೆಲಿಕಾಪ್ಟರ್ ಅಪಘಾತದ ಪ್ರದೇಶದಲ್ಲಿ ಇಳಿದಿದೆ” ಎಂದು ವರದಿಯಾಗಿದೆ.
ಇದನ್ನೂ ಓದಿ:ತಾಜ್ ಮಹಲ್ ಅಡಿಯಲ್ಲಿ ಪ್ರಧಾನಿಯ ಡಿಗ್ರಿ ಹುಡುಕುತ್ತಿದ್ದಾರೆ: ಓವೈಸಿ ವ್ಯಂಗ್ಯ
ಮೈ ರಿಪಬ್ಲಿಕಾ ಪತ್ರಿಕೆಯ ಪ್ರಕಾರ, 10 ಸೈನಿಕರು ಮತ್ತು ನಾಗರಿಕ ವಿಮಾನಯಾನ ಪ್ರಾಧಿಕಾರದ ಇಬ್ಬರು ಉದ್ಯೋಗಿಗಳನ್ನು ಹೊತ್ತ ನೇಪಾಳ ಸೇನೆಯ ಹೆಲಿಕಾಪ್ಟರ್ ಅಪಘಾತದ ಸಂಭವನೀಯ ಸ್ಥಳವಾದ ನಾರ್ಶಾಂಗ್ ಮಠದ ಬಳಿ ನದಿಯ ದಡದಲ್ಲಿ ಇಳಿಯಿತು. ನೇಪಾಳ ಟೆಲಿಕಾಂ ಗ್ಲೋಬಲ್ ಪೊಸಿಷನಿಂಗ್ ಸಿಸ್ಟಮ್ (ಜಿಪಿಎಸ್) ನೆಟ್‌ವರ್ಕ್ ಮೂಲಕ ವಿಮಾನದ ಕ್ಯಾಪ್ಟನ್ ಪ್ರಭಾಕರ್ ಘಿಮಿರೆ ಅವರ ಸೆಲ್‌ಫೋನ್ ಅನ್ನು ಪತ್ತೆಹಚ್ಚಿದ ನಂತರ ವಿಮಾನವನ್ನು ಪತ್ತೆ ಮಾಡಲಾಗಿದೆ.
According to the information given by the locals to the Nepal Army, the Tara Air plane crashed at the mouth of the Lamche river under the landslide of Manapathi Himal. Nepal Army is moving towards the site from the ground and air route: Army spokesperson Narayan Silwal
— ANI (@ANI) May 29, 2022
“ನಾವು ನೇಪಾಳ ಸೇನೆ ಮತ್ತು ನೇಪಾಳ ಪೊಲೀಸ್ ಸಿಬ್ಬಂದಿಯನ್ನು ಹುಡುಕಾಟಕ್ಕಾಗಿ ಕಾಲ್ನಡಿಗೆಯಲ್ಲಿ ಕಳುಹಿಸಿದ್ದೇವೆ” ಎಂದು ತ್ರಿಭುವನ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಜನರಲ್ ಮ್ಯಾನೇಜರ್ ಪ್ರೇಮನಾಥ್ ಠಾಕೂರ್ ಹೇಳಿದರು.
ಥಾಣೆಯ ದಂಪತಿ, ಮಕ್ಕಳು ?
ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ನಾಲ್ವರು ಭಾರತೀಯರನ್ನು ಅಶೋಕ್ ಕುಮಾರ್ ತ್ರಿಪಾಠಿ, ಅವರ ಪತ್ನಿ ವೈಭವಿ ತ್ರಿಪಾಠಿ ಹಾಗೂ ಇವರ ಮಕ್ಕಳಾದ ಧನುಷ್ ಹಾಗೂ ರಿತಿಕಾ ಎಂದು ಗುರುತಿಸಲಾಗಿದೆ. ಅವರು, ಮಹಾರಾಷ್ಟ್ರದ ಥಾಣೆಯ ನಿವಾಸಿಗಳು ಎಂದು ಪೊಲೀಸರು ತಿಳಿಸಿದ್ದಾರೆ. ಈ ಕುರಿತಂತೆ ಮಾಹಿತಿ ನೀಡಿದ ಥಾಣೆಯ ಪೊಲೀಸ್ ಅಧಿಕಾರಿಯೊಬ್ಬರು, “ವಿಮಾನ ಅಪಘಾತವಾಗಿರುವ ವಿಚಾರ ತಿಳಿಯುತ್ತಿದ್ದಂತೆ, ನೇಪಾಳದಲ್ಲಿರುವ ಭಾರತೀಯ ರಾಜತಾಂತ್ರಿಕ ಕಚೇರಿಯು ತಕ್ಷಣವೇ ಮುಂಬೈ ಪೊಲೀಸರನ್ನು ಸಂಪರ್ಕಿಸಿ, ವಿಮಾನದಲ್ಲಿದ್ದ ಭಾರತೀಯರ ಮಾಹಿತಿಯನ್ನು ನೀಡಿ, ಇವರ ಬಗ್ಗೆ ಮಾಹಿತಿ ನೀಡಬೇಕೆಂದು ಕೋರಿದರು. ತಕ್ಷಣವೇ, ರಾಜತಾಂತ್ರಿಕ ಅಧಿಕಾರಿಗಳು ನೀಡಿದ್ದ ಮುಂಬೈನ ಹೊರವಲಯದಲ್ಲಿರುವ ಬೋರಿವಲಿಯಲ್ಲಿರುವ ವೈಭವಿ ಅವರ ಮನೆಗೆ ಹೋಗಿ ನೋಡಿದಾಗ ಅವರ ಮನೆಯು ಬೀಗ ಹಾಕಿದ್ದು ಗೋಚರಿಸಿತು. ಆಗ ಅವರು ವಿದೇಶ ಪ್ರಯಾಣದಲ್ಲಿರುವುದು ಖಾತ್ರಿಯಾಗಿ, ಈ ಕುರಿತಂತೆ ಕಠ್ಮಂಡುವಿನಲ್ಲಿರುವ ರಾಜತಾಂತ್ರಿಕ ಕಚೇರಿಗೆ ಮಾಹಿತಿ ನೀಡಲಾಗಿದೆ ಎಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
BCCI 10-point ಆದೇಶ ಸಮಸ್ಯೆ; ಮೀಸಲಾತಿ ಹೊಂದಿದ್ದೇವೆ ಎಂದು ರೋಹಿತ್ ಸುಳಿವು
Ranji Trophy; ಸೌರಾಷ್ಟ್ರ ವಿರುದ್ಧ ರಣಜಿ ಪಂದ್ಯದಿಂದ ಹೊರಗುಳಿದ ಕೊಹ್ಲಿ
ವಿಜಯೇಂದ್ರ ಪೂರ್ಣಾವಧಿ ಬಿಜೆಪಿ ಅಧ್ಯಕ್ಷರಾಗಿರ್ತಾರೆನ್ನುವ ವಿಶ್ವಾಸವಿದೆಯಾ?: ಎಂ.ಬಿ.ಪಾಟೀಲ್
Puthige Matha: ವಿಶ್ವ ಗೀತಾ ಪರ್ಯಾಯಕ್ಕೆ ಇಂದಿಗೆ ವರ್ಷ ಪೂರ್ಣ
Saif Ali Khan ಪ್ರಕರಣ: ಶಂಕಿತ ಆರೋಪಿ ಛತ್ತೀಸ್‌ಘಡದಲ್ಲಿ ರೈಲ್ವೆ ಪೊಲೀಸರ ಬಲೆಗೆ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.