ಲಂಡನ್: ಷರೀಫ್ ಮೇಲೆ ದಾಳಿಗೆ ಯತ್ನಿಸಿದ ಉದ್ರಿಕ್ತ ಸಮೂಹ
Team Udayavani, Jul 10, 2018, 5:00 PM IST
ಲಂಡನ್ : ಪಾಕಿಸ್ಥಾನ ಕೋರ್ಟಿನಿಂದ ಭ್ರಷ್ಟಾಚಾರದ ಅಪರಾಧಕ್ಕಾಗಿ ಹತ್ತು ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿರುವ ಪಾಕ್ ಪದಚ್ಯುತ ಪ್ರಧಾನಿ ನವಾಜ್ ಷರೀಫ್ ಅವರು ಮೊನ್ನೆ ಭಾನುವಾರ ಇಲ್ಲಿನ ಏವನ್‌ಫೀಲ್ಡ್‌ನಲ್ಲಿನ ತಮ್ಮ ಪುತ್ರನ ಮನೆಯನ್ನು ಪ್ರವೇಶಿಸುವ ಸಂದರ್ಭದಲ್ಲಿ ಉದ್ರಿಕ್ತರ ಗುಂಪೊಂದು ಅವರ ಮೇಲೆ ದಾಳಿ ನಡೆಸಲು ಯತ್ನಿಸಿದ ಘಟನೆಯ ವಿಡಿಯೋ ಪಾಕ್ ಮಾಧ್ಯಮದಲ್ಲಿ ಕಾಣಿಸಿಕೊಂಡಿದೆ.
ಡಾನ್ ಮತ್ತು ಜಿಯೋ ನ್ಯೂಸ್ ಈ ವಿಡಿಯೋ ಚಿತ್ರಿಕೆಗಳನ್ನು ಬಿಡುಗಡೆ ಮಾಡಿವೆ. ಷರೀಫ್ ಮೇಲೆ ಕೆಟ್ಟ ಬೈಗುಳಗಳ ಸುರಿಮಳೆಗೈದು ಮನೆಯ ಬಾಗಿಲನ್ನು ಕಾಲಿನಿಂದ ಒದ್ದು ಕೈಗೆ ಸಿಕ್ಕ ವಸ್ತುಗಳನ್ನು ಮನೆಯ ಮೇಲೆ ಎಸೆವ ದುಷ್ಕೃತ್ಯವನ್ನು ಉದ್ರಿಕ್ತ ಸಮೂಹ ಮಾಡಿರುವುದು ವಿಡಿಯೋದಲ್ಲಿ ದಾಖಲಾಗಿದೆ.
ಈ ದಾಳಿಗೆ ಪಾಕಿಸ್ಥಾನದ ತೆಹರೀಕ್ ಎ ಇನ್ಸಾಫ್ ಪಕ್ಷದ ಮುಖ್ಯಸ್ಥ ಇಮ್ರಾನ್ ಖಾನ್ ಅವರ ಚಿತಾವಣೆಯೇ ಕಾರಣ ಎಂದು ಷರೀಫ್ ಪುತ್ರಿ ಮರಿಯಾಮ್ ಆರೋಪಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Nimma Vasthugalige Neeve Javaabdaararu review: ಜವಾಬ್ದಾರಿಯಿಂದ ಸಿನಿಮಾ ನೋಡಿ
Bangladesh: ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿದ ತಮೀಮ್ ಇಕ್ಬಾಲ್
Mangaluru: ಹಿಂದಿ ರಾಷ್ಟ್ರ ಭಾಷೆ ಅಲ್ಲ… ಆರ್.ಅಶ್ವಿನ್ ಹೇಳಿಕೆಗೆ ಅಣ್ಣಾಮಲೈ ಹೇಳಿದ್ದೇನು?
Mudhol: ರೈತರ ಜಮೀನಿನಲ್ಲಿ ಮೊಸಳೆ ಪ್ರತ್ಯಕ್ಷ
Choo Mantar Review: ಬಂಗಲೆಯಲ್ಲೊಂದು ಭಯಾನಕ ಕಥೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.