ಮೊಬೈಲ್ ಅಂದ್ರೆ ಬರೀ ಕೆಟ್ಟದ್ದಲ್ಲ, ಒಳ್ಳೆಯದೂ ಇದೆ..!
ಮಾನಸಿಕ,ದೈಹಿಕ ಒತ್ತಡ ತಿಳಿದುಕೊಳ್ಳಲು ಸಹಕಾರಿ
Team Udayavani, Nov 23, 2019, 4:52 PM IST
ಲಂಡನ್: ಮೊಬೈಲ್ ಅಂದ್ರೆ ಕೆಟ್ಟದ್ದು. ಅದರಿಂದ ಮನುಷ್ಯರಿಗೆ ಹಾನಿಯೇ ಹೆಚ್ಚು ಎಂಬ ಮಾತುಗಳು ಈಗ ಸಾಮಾನ್ಯ. ಆದರೆ ಮೊಬೈಲ್‌ನಿಂದಾಗಿ ಒಳಿತೂ ಇದೆ. ಇದರಿಂದ ಮನುಷ್ಯನ ದೈಹಿಕ, ಮಾನಸಿಕ ಆರೋಗ್ಯದ ಬಗ್ಗೆ ತಿಳಿದುಕೊಂಡು ಆತನನ್ನು ಸಂಭಾವ್ಯ ಅಪಾಯಗಳಿಂದ ಪಾರು ಮಾಡಬಹುದು ಎನ್ನುತ್ತಿದೆ. ಸಂಶೋಧನೆ.
ಸೆನ್ಸರ್‌ಗಳ ಕುರಿತಾಗಿ ಇರು ಸೆನ್ಸರ್ ಹೆಸರಿನ ನಿಯತಕಾಲಿಕೆಯಲ್ಲಿ ಸಂಶೋಧನೆಯ ಅಂಶಗಳನ್ನು ಪ್ರಕಟಿಸಲಾಗಿದೆ. ಇದರಲ್ಲಿ ಸ್ಮಾರ್ಟ್ ಫೋನ್ ಒಳಗಿರುವ ಅಕ್ಸಲೆರೋಮೀಟರ್ ಮೂಲಕ ಹೃದಯದ ಬಡಿತ, ಪ್ರತಿ ಹೃದಯ ಬಡಿತದಲ್ಲಿ ವ್ಯತ್ಯಾಸಗಳು ಆಗುತ್ತಿದ್ದರೆ, ಮಾನಸಿಕ ಒತ್ತಡವನ್ನು ವ್ಯಕ್ತಿ ಅನುಭವಿಸುತ್ತಿದ್ದರೆ ತಿಳಿದುಕೊಳ್ಳಬಹುದು ಎಂದು ಹೇಳಲಾಗಿದೆ.
ಇಟಲಿಯ ಸಂಶೋಧಕರ ತಂಡ ಈ ಸಂಶೋಧನೆ ಮಾಡಿದ್ದು, ಮೊಬೈಲ್ ಅನ್ನು ಕಿಸೆಯಲ್ಲಿ, ಸೊಂಟದಲ್ಲಿ ಇಟ್ಟುಕೊಂಡಾಗ ಅವುಗಳು ಮನುಷ್ಯನ ಆರೋಗ್ಯದ ಬಗ್ಗೆ ತಿಳಿಸುವ ಅಂಶಗಳ ಬಗ್ಗೆ ಶೋಧಿಸಲಾಗಿದೆ.
ಮೊಬೈಲಗಳ ಮೂಲಕ ಮನುಷ್ಯನ ಒತ್ತಡವನ್ನೂ ಲೆಕ್ಕಹಾಕಿ ಆತ ಎಷ್ಟು ಸಮಯದಿಂದ ಹೀಗಿದ್ದಾನೆ? ಯಾವ ಸಂದರ್ಭ ಹೆಚ್ಚು ಒತ್ತಡಕ್ಕೊಳಗಾಗುತ್ತಾನೆ ಎಂಬುದನ್ನೂ ತಿಳಿದುಕೊಳ್ಳಬಹುದು. ಇದು ಆತನ ಮಾನಸಿಕ ಸಾಮರ್ಥ್ಯದ ಬಗ್ಗೆಯೂ ತಿಳಿದುಕೊಳ್ಳಲು ಸಹಕಾರಿ ಎಂದು ಸಂಶೋಧಕರು ಹೇಳಿದ್ದಾರೆ. ಅಲ್ಲದೇ ಮೊಬೈಲ್ ಅನ್ನು ಸ್ವಯಂ ಆರೋಗ್ಯ ಪರಿಶೀಲನೆಯ ಮಾಪಕವಾಗಿ ಬಳಸಬಹುದು ಎಂದು ಹೇಳಲಾಗಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.