14 ತುಂಬುವವರೆಗೆ ಮೊಬೈಲ್ ನಿಷೇಧ; ಇದು ಗೇಟ್ಸ್ ನಿಯಮ
Team Udayavani, Apr 23, 2017, 3:45 AM IST
ವಾಷಿಂಗ್ಟನ್: “ಊಹೂಂ, 14 ವರ್ಷ ತುಂಬದೇ ಮಕ್ಕಳ ಕೈಗೆ ಮೊಬೈಲ್ ಫೋನ್ ಕೊಡುವುದೇ ಇಲ್ಲ. ಹೋಂ ವರ್ಕ್ ಮಾಡೋ ಸಮಯದಲ್ಲಿ ಅದನ್ನು ಬಿಟ್ಟು ಬೇರೇನೂ ಮಾಡುವ ಹಾಗಿಲ್ಲ. ಶ್ರೀಮಂತಿಕೆಯ ಅಹಂ ಹತ್ತಿರ ಸುಳಿಯಬಾರದು. ಎಲ್ಲರ ಜೊತೆಯೂ ಸಾಮಾನ್ಯರಂತೆ ಬೆರೆಯಬೇಕು…’
ವೈಭೋಗದ ಜೀವನದ ಮೂಲಕ ಶ್ರೀಮಂತಿಕೆಯ ಪ್ರದರ್ಶನ ಮಾಡುವ ಕುಬೇರರೇ ತುಂಬಿರುವಂಥ ಈ ಜಗತ್ತಿನಲ್ಲಿ “ವಿಶ್ವದ ಅತಿ ಶ್ರೀಮಂತ ವ್ಯಕ್ತಿ’ ಎಂದು ಹೆಸರು ಗಳಿಸಿರುವ ಮೈಕ್ರೋಸಾಫ್ಟ್ ಸ್ಥಾಪಕ ಬಿಲ್ ಗೇಟ್ಸ್ ಅವರು ಪಾಲಿಸಿಕೊಂಡು ಬಂದಿರುವ ನೀತಿಯಿದು.
ಈ ಡಿಜಿಟಲ್ ಯುಗದ ತಂತ್ರಜ್ಞಾನ ಕ್ರಾಂತಿಯಲ್ಲಿ ಮಹತ್ವದ ಪಾತ್ರ ವಹಿಸಿರುವ ಗೇಟ್ಸ್ ಅವರು ತಮ್ಮ ಮಕ್ಕಳಿಗೆ 14 ವರ್ಷ ತುಂಬುವವರೆಗೂ ಸ್ಮಾರ್ಟ್‌ಫೋನ್ ಸಂಪರ್ಕಕ್ಕೆ ಬಾರದಂತೆ ನೋಡಿಕೊಂಡಿದ್ದಾರೆ. ಬ್ರಿಟನ್‌ನ ಪತ್ರಿಕೆ “ದಿ ಮಿರರ್’ಗೆ ನೀಡಿದ ಸಂದರ್ಶನದಲ್ಲಿ ಅವರೇ ಈ ಕುರಿತು ಹೇಳಿಕೊಂಡಿದ್ದಾರೆ.
ಮೊಬೈಲ್ ಬಳಕೆಗೆ ಮಿತಿ: “ನಮ್ಮ ಮಕ್ಕಳಾದ ಜೆನಿಫರ್(20), ರೋರಿ(17) ಮತ್ತು ಫೋಬೆ(14)ಗೆ ಹಲವು ಮಿತಿಗಳನ್ನು ಹೇರಿದ್ದೇವೆ. ಸಹಪಾಠಿಗಳೆಲ್ಲ ಮೊಬೈಲ್ ಹೊಂದಿದ್ದಾರೆ ಎಂದು ಎಷ್ಟು ಹಠ ಹಿಡಿದರೂ ಅವರಿಗೆ 14 ವರ್ಷ ತುಂಬುವವರೆಗೂ ಸ್ಮಾರ್ಟ್‌ಫೋನ್ ಕೊಡಿಸಿರಲಿಲ್ಲ. ಡಿನ್ನರ್ ಟೇಬಲ್ ಬಳಿಯಂತೂ ಮೊಬೈಲನ್ನು ತರುವ ಹಾಗಿಲ್ಲ.
ರಾತ್ರಿ ಮಲಗುವ ಸಮಯದಲ್ಲಿ ಅದು ಹತ್ತಿರ ಸುಳಿಯಲೂ ಕೂಡದು. ಸಾಮಾನ್ಯರಂತೆ ಇತರರೊಂದಿಗೆ ಬೆರೆಯಬೇಕು. ಹೋಂ ವರ್ಕ್ ಮಾಡಬೇಕು. ಹೆಚ್ಚು ಪಾಕೆಟ್ ಮನಿ ನೀಡುವುದಿಲ್ಲ. ಅವರನ್ನು ಸಾಮಾನ್ಯರ ಮಕ್ಕಳಂತೆ ಬೆಳೆಸಬೇಕೆಂಬುದು ನಮ್ಮ ಆಸೆ,’ ಎಂದಿದ್ದಾರೆ ಗೇಟ್ಸ್. ಇದೇ ವೇಳೆ, ಮ್ಯಾಕ್‌ಡೊನಾಲ್ಡ್, ಬರ್ಗರ್ ಕಿಂಗ್ ತಮ್ಮ ಫೇವರಿಟ್ ಎಂಬುದನ್ನು ಹೇಳಲು ಗೇಟ್ಸ್ ಮರೆಯಲಿಲ್ಲ.
10 ಡಾಲರ್‌ನ ವಾಚ್: ವಿಶೇಷವವೆಂದರೆ, ಸುಮಾರು 87 ಶತಕೋಟಿ ಡಾಲರ್(5.62 ಲಕ್ಷ ಕೋಟಿ ರೂ.) ಆಸ್ತಿ ಹೊಂದಿರುವ ಗೇಟ್ಸ್ ಅವರು ಸಂದರ್ಶನದ ಸಮಯದಲ್ಲೂ 10 ಡಾಲರ್(650 ರೂ.)ನ ಕ್ಯಾಸಿಯೋ ವಾಚ್ ಧರಿಸಿದ್ದರು ಎಂದು ದಿ ಮಿರರ್ ವರದಿ ಮಾಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sheikh ಹಸೀನಾರನ್ನು ಬಾಂಗ್ಲಾದೇಶಕ್ಕೆ ವಾಪಸ್ ಕಳುಹಿಸಿ: ಭಾರತಕ್ಕೆ ಬಾಂಗ್ಲಾ ಮನವಿ
You Tuber: ನೀಲಿ ಚಿತ್ರತಾರೆ ಆಗಲು ಪಿಎಚ್ ಡಿ ಕಲಿಕೆಯನ್ನೇ ತೊರೆದ ಖ್ಯಾತ ಯೂಟ್ಯೂಬರ್
Plane Mishap: ಲಘು ವಿಮಾನ ಪತನ… ಬ್ರೆಜಿಲ್ ನ ಉದ್ಯಮಿ ಸೇರಿ ಹತ್ತು ಮಂದಿ ಮೃತ್ಯು
Pope Francis; ಗಾಜಾಪಟ್ಟಿ ಮೇಲೆ ನಡೆದದ್ದು ಯುದ್ಧವಲ್ಲ, ಕ್ರೌರ್ಯ
Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Congress MP: ವಾರಕ್ಕೆ 70 ಗಂಟೆ ಬೇಡ, 4 ದಿನ ಕೆಲಸ ಸಾಕು: ತ.ನಾಡು ಸಂಸದ ಕಾರ್ತಿ
ಕರಾವಳಿಯಲ್ಲಿ “ಕರ್ನಾಟಕ ಕೂಟ’: ಜ. 17-23ರ ವರೆಗೆ ಮಂಗಳೂರು, ಉಡುಪಿಯಲ್ಲಿ
Uppinangady; ಕಾಡಾನೆ ಸಂಚಾರದಿಂದ ಹಿರೇಬಂಡಾಡಿ ಗ್ರಾಮಸ್ಥರು ಭಯಭೀತ
Vijay Hazare Trophy: ಕರ್ನಾಟಕಕ್ಕೆ ಸತತ 2ನೇ ಗೆಲುವಿನ ಸಿಹಿ
Udupi- Mangaluru; ವರ್ಷಾಂತ್ಯಕ್ಕೆ ಹೆಚ್ಚಿದ ಪ್ರವಾಸಿಗರು: ಟ್ರಾಫಿಕ್ ಜಾಮ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.