ನಾವ್ಯಾರೂ ಮೂಲತಃ ಭಾರತೀಯರೇ ಅಲ್ವಂತೆ!

Team Udayavani, May 12, 2017, 1:46 AM IST

Indians-11-5.jpg

ಲಂಡನ್‌: ಭಾರತದ ಮೂಲ ನಿವಾಸಿಗರು ಯಾರು? ರ್ಯರೋ ಇಲ್ಲಾ ದ್ರಾವಿಡರೋ? ಈ ರೀತಿಯ ಎಲ್ಲ ಪ್ರಶ್ನೆ, ಗೊಂದಲ, ಜಿಜ್ಞಾಸೆಗಳಿಗೆ ವಿಜ್ಞಾನಿಗಳು ಹೊಸ ವಾದ ಮಂಡಿಸಿದ್ದಾರೆ. ವರದಿ ಪ್ರಕಾರ, ನಮ್ಮ ಪೂರ್ವಜರಾದಿಯಾಗಿ ಭರತಖಂಡದಲ್ಲಿ ನೆಲೆಸಿರುವ ನಮ್ಮ ಪೀಳಿಗೆ ಮತ್ತು ನಾವ್ಯಾರೂ ಇಲ್ಲಿನ ಮೂಲ ನಿವಾಸಿಗಳಲ್ಲ. ಆರ್ಯರು, ದ್ರಾವಿಡರು ಸೇರಿದಂತೆ ಎಲ್ಲರೂ ಜಗತ್ತಿನ ಬೇರೆ ಬೇರೆ ಭಾಗಗಳಿಂದ ವಲಸೆ ಬಂದವರೇ. ಈ ಅಂಶವನ್ನು ದಾಖಲೆಗಳ ಸಹಿತ ವಾದಿಸಿರುವುದು ಬ್ರಿಟನ್‌ನ ಯೂನಿವರ್ಸಿಟಿ ಆಫ್ ಹುಡ್ಡರ್ಫೀಲ್ಡ್‌.

ನಮ್ಮೆಲ್ಲರ ಪೂರ್ವಜರು ಆಫ್ರಿಕಾ, ಇರಾನ್‌ ಅಥವಾ ಮಧ್ಯ ಏಷ್ಯಾದಿಂದ ವಲಸೆ ಬಂದಿದ್ದಾರೆ. ದೇಶದ ನೆಲದ ಮೇಲೆ ಮೊದಲು ಕಾಲಿರಿಸಿದ್ದು ಆಫ್ರಿಕನ್ನರು. ಸುಮಾರು 50,000 ವರ್ಷಗಳ ಹಿಂದೆ ಆಫ್ರಿಕನ್ನರು ಭಾರತಕ್ಕೆ ಬಂದಿದ್ದು, ಬೇಟೆಯಾಡುವ ಮೂಲಕ ಜೀವನ ಸಾಗಿಸುತ್ತಿದ್ದ ಇವರೇ ಇಲ್ಲಿ ಆಧುನಿಕ ನಾಗರಿಕತೆಗೆ ನಾಂದಿ ಹಾಡಿದ್ದಾರೆ ಎಂದು ವಿಜ್ಞಾನಿಗಳು ಹೇಳುತ್ತಾರೆ. ಅನಂತರ ಈಗ್ಗೆ ಸುಮಾರು 10ರಿಂದ 20 ಸಾವಿರ ವರ್ಷಗಳ ಹಿಂದೆ ಇಲ್ಲಿಗೆ ವಲಸೆ ಬಂದ ಇರಾನ್‌ ಮಂದಿ, ಭಾರತದಲ್ಲಿ ಕೃಷಿ ಅಥವಾ ವ್ಯವಸಾಯವನ್ನು ಪರಿಚಯಿಸಿ, ದುಡಿಮೆ ಸಂಸ್ಕೃತಿಗೆ ಬುನಾದಿ ಹಾಕಿದರು. ಈ ಎಲ್ಲ ಕುರುಹುಗಳನ್ನು ಮೈಟೋಕಾಂಡ್ರಿಯಾದ ಡಿಎನ್‌ಎಯಲ್ಲಿ ಸ್ಪಷ್ಟವಾಗಿ ಕಾಣಬಹುದಾಗಿದ್ದು, ಸ್ತ್ರೀ ಕುಲದ ಕುರುಹುಗಳು ಕೂಡ ಇಲ್ಲಿ ಸ್ಪಷ್ಟವಾಗಿವೆ. ಇನ್ನೊಂದೆಡೆ ಪುರುಷರ ಸಂತತಿಯ ಕುರುಹುಗಳನ್ನು ದೃಢಪಡಿಸುವ ವೈ-ಕ್ರೋಮೋಜೋಮ್‌ಗಳು ಅತ್ಯಂತ ವಿಭಿನ್ನವಾಗಿವೆ ಎಂದು ಅಧ್ಯಯನದ ವರದಿಯಲ್ಲಿ ಹೇಳಲಾಗಿದೆ. ‘ಅಧ್ಯಯನದ ವೇಳೆ ದೊರೆತಿರುವ ಕೆಲ ಕುರುಹುಗಳು ತೀರಾ ಇತ್ತೀಚಿನವುಗಳಾಗಿವೆ. ಸುಮಾರು 5 ಸಾವಿರ ವರ್ಷಗಳ ಹಿಂದಷ್ಟೇ ಮಧ್ಯ ಏಷ್ಯಾದಿಂದ ಜನಸಮೂಹ ಭಾರತಕ್ಕೆ ವಲಸೆ ಬಂದಿರುವುದನ್ನು ದೃಢೀಕರಿಸುವ ಸಂಕೇತಗಳು ಸ್ಪಷ್ಟವಾಗಿವೆ’ ಎಂದು ಅಧ್ಯಯನದ ಸಹ ಲೇಖಕರಾಗಿರುವ ಮರೀನಾ ಸಿಲ್ವಾ ಹೇಳುತ್ತಾರೆ.

‘ಇಂಡೋ ಯುರೋಪಿಯನ್‌ ಭಾಷೆ ಮಾತನಾಡುವವರು ತಾಮ್ರ ಯುಗದ ಸಂದರ್ಭದಲ್ಲಿ ಮೊದಲು ಕಾಣಿಸಿಕೊಂಡಿರುವ ಸಾಧ್ಯತೆಗಳಿವೆ. ಇವರು ಕಪ್ಪು ಸಾಗರ ಮತ್ತು ಕಾಸ್ಪಿಯನ್‌ ಸಮುದ್ರದ ಮಧ್ಯೆ ಇರುವ ಕಾಕಸಸ್‌ನ ಉತ್ತರ ಹುಲ್ಲುಗಾವಲು ಪ್ರದೇಶದಿಂದ ಬಂದವರಾಗಿದ್ದು, ಕುಟುಂಬಗಳಲ್ಲಿ ಪುರುಷ ಪ್ರಾಧಾನ್ಯ ಇತ್ತು. ಕುದುರೆ ಪಳಗಿಸಿಕೊಂಡು ಬಳಸುತ್ತಿದ್ದ ಈ ಸಮುದಾಯದ ಜನ, ಹಿಂದೂ ಸಾಂಪ್ರದಾಯಿಕ ಭಾಷೆಯಾಗಿರುವ ಸಂಸ್ಕೃತವನ್ನು ಮಾತನಾಡುತ್ತಿದ್ದರು’ ಎಂದು ಸಿಲ್ವಾ ಅಭಿಪ್ರಾಯಪಡುತ್ತಾರೆ. ಭಾರತೀಯರ ಮೂಲದ ಕುರಿತು ವಿದ್ವಾಂಸರು ಮತ್ತು ವಿಜ್ಞಾನಿಗಳ ನಡುವೆ ಸಾಕಷ್ಟು ಭಿನ್ನಾಭಿಪ್ರಾಯಗಳಿವೆ. ಅಲ್ಲದೆ ಭಾರತೀಯರ ಮೂಲದ ಕುರಿತು ಅಧ್ಯಯನ ನಡೆಸಲು ಪೂರ್ವಜರ ಡಿಎನ್‌ಎ ಒದಗಿಸುವ ಮೂಲಗಳ ಕೊರತೆ ಇದೆ ಎಂದು ಸಂಶೋಧಕರ ತಂಡ ಅಭಿಪ್ರಾಯಪಟ್ಟಿದೆ.

ಯಾರು ಯಾವಾಗ ಬಂದ್ರು?
50,000ವರ್ಷ ಹಿಂದೆ : ಆಫ್ರಿಕನ್ನರು
20,000ವರ್ಷ ಹಿಂದೆ : ಇರಾಕಿಗಳು
5,000ವರ್ಷ ಹಿಂದೆ : ಮಧ್ಯ ಏಷ್ಯನ್ನರು

ಟಾಪ್ ನ್ಯೂಸ್

Pro Kabaddi: ಬೆಂಗಳೂರು ಬುಲ್ಸ್‌ಗೆ 19ನೋ ಸೋಲು

Pro Kabaddi: ಬೆಂಗಳೂರು ಬುಲ್ಸ್‌ಗೆ 19ನೋ ಸೋಲು

World Rapid Chess: ಕಡೆಗೂ ಅರ್ಜುನ್‌ ಎರಿಗೈಸಿಗೆ ಅಮೆರಿಕ ವೀಸಾ

World Rapid Chess: ಕಡೆಗೂ ಅರ್ಜುನ್‌ ಎರಿಗೈಸಿಗೆ ಅಮೆರಿಕ ವೀಸಾ

Women’s ODI: ಹರ್ಲೀನ್ ಶತಕ; ವಿಂಡೀಸ್‌ ವಿರುದ್ಧ ಭಾರತಕ್ಕೆ 2-0 ಸರಣಿ ಜಯ

Women’s ODI: ಹರ್ಲೀನ್ ಶತಕ; ವಿಂಡೀಸ್‌ ವಿರುದ್ಧ ಭಾರತಕ್ಕೆ 2-0 ಸರಣಿ ಜಯ

BBK11: ಬಿಗ್ ಬಾಸ್ ರೆಸಾರ್ಟ್ ನಲ್ಲಿ ಹೆಣ್ಮಕ್ಕಳ ಬಟ್ಟೆ ಒಗೆದ ರಜತ್ – ತ್ರಿವಿಕ್ರಮ್

BBK11: ಬಿಗ್ ಬಾಸ್ ರೆಸಾರ್ಟ್ ನಲ್ಲಿ ಹೆಣ್ಮಕ್ಕಳ ಬಟ್ಟೆ ಒಗೆದ ರಜತ್ – ತ್ರಿವಿಕ್ರಮ್

Bhalla,-VK-Singh-Gov.

New Appointment: ಐದು ರಾಜ್ಯಗಳಿಗೆ ಹೊಸ ರಾಜ್ಯಪಾಲರ ನೇಮಿಸಿದ ಕೇಂದ್ರ ಸರ್ಕಾರ

CTRavi

Derogatory Remark: ಧರ್ಮಸ್ಥಳದಲ್ಲಿ ಆಣೆ, ಪ್ರಮಾಣ ಮುಗಿದ ಕತೆ: ಸಿ.ಟಿ.ರವಿ

ಬಾಂಗ್ಲಾದಿಂದ ಅಕ್ರಮ ವಲಸೆ: ಮುಂಬೈಯಲ್ಲಿ 10, ದೆಹಲಿಯಲ್ಲಿ 11 ಮಂದಿ ಸೆರೆ

Police: ಬಾಂಗ್ಲಾದಿಂದ ಅಕ್ರಮ ವಲಸೆ: ಮುಂಬೈಯಲ್ಲಿ10,ದೆಹಲಿಯಲ್ಲಿ11 ಮಂದಿ ಸೆರೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

‌America: ಪ್ರತೀಕಾರ- ಭಾರತದ ನಟೋರಿಯಸ್‌ ಡ್ರ*ಗ್ಸ್‌ ಸ್ಮಗ್ಲರ್‌ ಶೂಟೌಟ್‌ ನಲ್ಲಿ ಹ*ತ್ಯೆ

‌America: ಪ್ರತೀಕಾರ- ಭಾರತದ ನಟೋರಿಯಸ್‌ ಡ್ರ*ಗ್ಸ್‌ ಸ್ಮಗ್ಲರ್‌ ಶೂಟೌಟ್‌ ನಲ್ಲಿ ಹ*ತ್ಯೆ

Ex-US President: ಅಮೆರಿಕದ ಮಾಜಿ ಅಧ್ಯಕ್ಷ ಬಿಲ್ ಕ್ಲಿಂಟನ್ ಆಸ್ಪತ್ರೆಗೆ ದಾಖಲು

Ex-US President: ಅಮೆರಿಕದ ಮಾಜಿ ಅಧ್ಯಕ್ಷ ಬಿಲ್ ಕ್ಲಿಂಟನ್ ಆಸ್ಪತ್ರೆಗೆ ದಾಖಲು

Bangla–Pak

Revival: ಭಾರತಕ್ಕೆ ಬಾಂಗ್ಲಾದೇಶ ಸೆಡ್ಡು: ಪಾಕಿಸ್ಥಾನ ಜತೆ ವಹಿವಾಟಿಗೆ ಸಜ್ಜು!

ಶ್ವೇತಭವನ ಎಐ ಹಿರಿಯ ಸಲಹೆಗಾರರಾಗಿ ಭಾರತ ಮೂಲದ ವ್ಯಕ್ತಿ ನೇಮಕ

White House; ಎಐ ಹಿರಿಯ ಸಲಹೆಗಾರರಾಗಿ ಭಾರತ ಮೂಲದ ವ್ಯಕ್ತಿ ನೇಮಕ

ಸಿರಿಯಾ ಮಾಜಿ ಅಧ್ಯಕ್ಷ ಅಸಾದ್‌ಗೆ ವಿಚ್ಛೇದನ ಕೊಡಲು ಪತ್ನಿ ಚಿಂತನೆ?

Syria ಮಾಜಿ ಅಧ್ಯಕ್ಷ ಅಸಾದ್‌ಗೆ ವಿಚ್ಛೇದನ ಕೊಡಲು ಪತ್ನಿ ಚಿಂತನೆ?

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Pro Kabaddi: ಬೆಂಗಳೂರು ಬುಲ್ಸ್‌ಗೆ 19ನೋ ಸೋಲು

Pro Kabaddi: ಬೆಂಗಳೂರು ಬುಲ್ಸ್‌ಗೆ 19ನೋ ಸೋಲು

World Rapid Chess: ಕಡೆಗೂ ಅರ್ಜುನ್‌ ಎರಿಗೈಸಿಗೆ ಅಮೆರಿಕ ವೀಸಾ

World Rapid Chess: ಕಡೆಗೂ ಅರ್ಜುನ್‌ ಎರಿಗೈಸಿಗೆ ಅಮೆರಿಕ ವೀಸಾ

Women’s ODI: ಹರ್ಲೀನ್ ಶತಕ; ವಿಂಡೀಸ್‌ ವಿರುದ್ಧ ಭಾರತಕ್ಕೆ 2-0 ಸರಣಿ ಜಯ

Women’s ODI: ಹರ್ಲೀನ್ ಶತಕ; ವಿಂಡೀಸ್‌ ವಿರುದ್ಧ ಭಾರತಕ್ಕೆ 2-0 ಸರಣಿ ಜಯ

k

Udupi: ʼಭಾರತೀಯ ಸಂಸ್ಕೃತಿ, ಭಗವದ್ಗೀತೆʼ ಕುರಿತು ಕೆ.ಪಿ.ಪುತ್ತೂರಾಯ ಉಪನ್ಯಾಸ

BBK11: ಬಿಗ್ ಬಾಸ್ ರೆಸಾರ್ಟ್ ನಲ್ಲಿ ಹೆಣ್ಮಕ್ಕಳ ಬಟ್ಟೆ ಒಗೆದ ರಜತ್ – ತ್ರಿವಿಕ್ರಮ್

BBK11: ಬಿಗ್ ಬಾಸ್ ರೆಸಾರ್ಟ್ ನಲ್ಲಿ ಹೆಣ್ಮಕ್ಕಳ ಬಟ್ಟೆ ಒಗೆದ ರಜತ್ – ತ್ರಿವಿಕ್ರಮ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.