ಭಾರತಕ್ಕೆ ಫೈಜರ್ ನಿಂದ 50ಮಿಲಿಯನ್ ಡೋಸ್ ರಫ್ತಿಗೆ ಸಿದ್ಧ, ಮಾಡೆರ್ನಾ ಲಸಿಕೆ ಈ ವರ್ಷಕ್ಕಿಲ್ಲ!
Team Udayavani, May 26, 2021, 7:00 PM IST
ಪ್ರಾತಿನಿಧಿಕ ಚಿತ್ರ
ವಾಷಿಂಗ್ಟನ್ : ಮಾಡರ್ನಾ ಸಿಂಗಲ್ ಡೋಸ್ ಕೋವಿಡ್ 19 ಲಸಿಕೆಯನ್ನು ಮುಂದಿನ ವರ್ಷ ಭಾಋತದಲ್ಲಿ ಬಿಡುಗಡೆ ಮಾಡುವ ನಿರೀಕ್ಷೆಯಲ್ಲಿದೆ ಆದಾಗ್ಯೂ, ಸಿಪ್ಲಾಹಾಗೂ ಇತತೆ ಭಾರತೀಯ ಸಂಸ್ಥೆಗಳ ನಡುವೆ ಮಾತುಕತೆ ನಡೆಸುತ್ತಿದೆ ಎಂಬ ವರದಿ ಹೊರಬಂದಿದೆ.
ಆದರೆ ಯುಎಸ್ ಮೂಲದ ದೈತ್ಯ ಔಷಧ ಉತ್ಪಾದನಾ ಕಂಪೆನಿ ಫೈಜರ್ 2021 ರಲ್ಲಿಯೇ 50 ಮಿಲಿಯನ್ ಡೋಸ್ ಗಳನ್ನು ನೀಡಲು ಸಿದ್ಧವಾಗಿದೆ ಎಂದು ಸುದ್ದಿ ಮೂಲಗಳು ತಿಳಿಸಿವೆ.
ಇದನ್ನೂ ಓದಿ : ಕೋವಿಡ್ ಪಾಸಿಟಿವ್ ಆಗಿ ಗುಣಮುಖನಾಗಿದ್ದ ಖೈದಿ ಆಸ್ಪತ್ರೆಯಲ್ಲಿ ಸಾವು
ಇನ್ನು, ಮಾಡರ್ನಾ ಈ ವರ್ಷದಲ್ಲಿ ಅಂದರೇ, 2021 ರಲ್ಲಿ ಹೆಚ್ಚುವರಿ ಲಸಿಕೆಗಳನ್ನು ಒದಗಿಸಲು ಸಾಧ್ಯವಿಲ್ಲ ಎಂದು ಭಾರತಕ್ಕೆ ತಿಳಿಸಿದೆ. ಆದರೇ, ಜಾನ್ಸನ್ ಆ್ಯಂಡ್ ಜಾನ್ಸನ್ ಮುಂದಿನ ದಿನಗಳಲ್ಲಿ ಯುಎಸ್ ನಿಂದ ಇತರ ದೇಶಗಳಿಗೆ ತನ್ನ ಲಸಿಕೆಗಳನ್ನು ರಫ್ತು ಮಾಡುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.
ದೇಶದಲ್ಲಿ ಕೋವಿಡ್ ಸೋಂಕಿನ ಹಠಾತ್ ಏರಿಕೆಯ ಕಾರಣದಿಂದ ತತ್ತರಿಸಿತ್ತು. ಲಸಿಕೆಗಳ ಅಭಾವವನ್ನು ನೀಗಿಸುವ ಉದ್ದೇಶದಿಂದ ಕ್ಯಾಬಿನೆಟ್ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ಎರಡು ಸುತ್ತಿನ ಉನ್ನತ ಮಟ್ಟದ ಸಭೆಗಳು ಜಾಗತಿಕ ಮತ್ತು ದೇಶೀಯ ಮಾರುಕಟ್ಟೆಗಳಲ್ಲಿ ಲಸಿಕೆಗಳ ಲಭ್ಯತೆಯ ಬಗ್ಗೆ ಕಳೆದ ವಾರ ನಡೆದಿದ್ದವು.
ಪ್ರಸ್ತುತ, ದೇಶವು ಮೇಡ್ ಇನ್ ಇಂಡಿಯಾ ‘ಲಸಿಕೆಳನ್ನು ಬಳಸುತ್ತಿದೆ. ಜನವರಿಯಲ್ಲಿ ವಿಶ್ವದ ಅತಿದೊಡ್ಡ ಲಸಿಕೆ ಅಭಿಯಾನ ಆರಂಭಿಸಿದಾಗಿನಿಂದ ಲಸಿಕೆಯನ್ನು ನೀಡುತ್ತಾ ಬಂದಿದೆಯಾದರೂ ದೇಶದಲ್ಲಿ ಲಸಿಕೆಯ ಅಭಾವ ಕಾಣಿಸುತ್ತಿದೆ. ಮೂರನೇ ಲಸಿಕೆ, ರಷ್ಯಾ ಮೂಲದ ಸ್ಪುಟ್ನಿಕ್ ವಿ, ಭಾರತ ಸರ್ಕಾರದಿಂದ ಅನುಮೋದನೆ ಪಡೆದಿದೆ ಮತ್ತು ಪ್ರಸ್ತುತ ಇದನ್ನು ಸಣ್ಣ ಪ್ರಮಾಣದಲ್ಲಿ ನೀಡಲಾಗುತ್ತಿದೆ.
ಸಿಪ್ಲಾ ಈಗಾಗಲೇ 2022 ರಲ್ಲಿ ಮಾಡರ್ನಾದಿಂದ 50 ಮಿಲಿಯನ್ ಡೋಸ್ ಗಳನ್ನು ಸಂಗ್ರಹಿಸಲು ಆಸಕ್ತಿ ತೋರಿಸಿದೆ. ಆದರೇ, ವ್ಯಾಪಾರ ವಹಿವಾಟಿನ ಒಪ್ಪಂದಕ್ಕೆ ಸಂಬಂಧಿಸಿದ ವಿಚಾರಕ್ಕೆ ಕೇಂದ್ರ ಸರ್ಕಾರದ ದೃಢಿಕರಣವನ್ನು ಕೋರಿದೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ : ಮಸೀದಿಗಳ ಇಮಾಮರು ಮತ್ತು ಮೋಜಿನ್ ರಿಗೆ ಕೋವಿಡ್ ಪರಿಹಾರ ನೀಡುವಂತೆ ಮನವಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
S.Korea: ರನ್ ವೇಯಲ್ಲಿ ಸ್ಕಿಡ್ ಆಗಿ ಗೋಡೆಗೆ ಅಪ್ಪಳಿಸಿದ ವಿಮಾನ: ಇಲ್ಲಿದೆ ನೋಡಿ ವಿಡಿಯೋ
Plane Crash: ದಕ್ಷಿಣ ಕೊರಿಯಾದಲ್ಲಿ ವಿಮಾನ ಪತನ; 28 ಮಂದಿ ಮೃತ್ಯು, ಇಬ್ಬರು ಗಂಭೀರ
Putin Apologizes: ಅಜರ್‌ಬೈಜಾನ್ ವಿಮಾನ ದುರಂತ… ಕ್ಷಮೆಯಾಚಿಸಿದ ರಷ್ಯಾ ಅಧ್ಯಕ್ಷ !
Qatar: ಕತಾರ್ ರಾಜಕುಮಾರಿಯ ಹಿಂಬಾಲಿಸಿ, ಗಿಫ್ಟ್ ಕೊಟ್ಟು ಕಿರುಕುಳ… ಚಾಲಕನಿಗೆ ಶಿಕ್ಷೆ
NASA ಹನುಮ ಸಾಹಸ: ಸೂರ್ಯನ ಬಳಿ ಸುಳಿದು ಸುಡದೆ ಪಾರು!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mangaluru: ಕರಾವಳಿ ಉತ್ಸವ; ಮತ್ಸ್ಯ ಲೋಕದೊಳಗೆ ನಾವು!
Kundapura: ಮೆಟ್ಟಿಲು ಹತ್ತುವಾಗಲೇ ಶುಚಿಯಾಗುವ ಶೌಚಾಲಯ!
ಮಾನಸಿಕ ಅಸ್ವಸ್ಥ ಬಾಲಕಿ ಮೇಲೆ ಲೈಂಗಿಕದೌರ್ಜನ್ಯ: ಆರೋಪಿ ವಿಚಾರಣೆ ರದ್ದತಿಗೆ ಹೈಕೋರ್ಟ್ ನಕಾರ
ICC ಏಕದಿನ, ಟಿ20 ಕ್ರಿಕೆಟಿಗ ಪ್ರಶಸ್ತಿ ನಾಮಿನೇಶನ್ ಪಟ್ಟಿ ಬಿಡುಗಡೆ; ಬುಮ್ರಾ ಹೆಸರಿಲ್ಲ
Bronchiolitis: ಮಕ್ಕಳಲ್ಲಿ ಬ್ರೊಂಕೊಲೈಟಿಸ್; ಹೆತ್ತವರು ತಿಳಿದಿರಬೇಕಾದ ಅಂಶಗಳು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.