ಇನ್ನು ಯುಎಇಯಲ್ಲೂ ರೂಪೇ ಕಾರ್ಡ್ ಬಳಸಿ
Team Udayavani, Aug 24, 2019, 8:30 PM IST
ಅಬುಧಾಬಿ: ಭಾರತದ ಸರಕಾರಿ ಸ್ವಾಮ್ಯದ ರೂಪೇ ಕಾರ್ಡ್ ಅನ್ನು ಇನ್ನು ಯುಎಇನಲ್ಲೂ ಬಳಸಬಹುದು.ಗಲ್ಫ್ ರಾಷ್ಟ್ರಗಳಲ್ಲೇ ಇದೇ ಮೊದಲ ಬಾರಿಗೆ ರೂಪೇ ಕಾರ್ಡನ್ನು ಯುಎಇನಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಉದ್ಘಾಟಿಸಿ ಪರಿಚಯಿಸಿದರು.
ಇದರೊಂದಿಗೆ ಭಾರತ ಯುಎಇನ 1.75 ಲಕ್ಷ ಮಾರಾಟ ತಾಣಗಳು, 21 ಉದ್ದಿಮೆಗಳು ಮತ್ತು 5 ಸಾವಿರ ಎಟಿಎಂಗಳಲ್ಲಿ ಹಣ ವಿತ್‌ಡ್ರಾ ಮಾಡಲು ಅನುಕೂಲವಾಗುವಂತೆ ಒಪ್ಪಂದ ಮಾಡಿಕೊಂಡಿದೆ.
ಇದರಿಂದಾಗಿ ಭಾರತದಿಂದ ಯುಎಇಗೆ ಹೋದವರು ರೂಪೇ ಕಾರ್ಡ್ ಬಳಸಿಯೇ ವ್ಯವಹಾರ ನಡೆಸಬಹುದು. ಜತೆಗೆ ಅನಿವಾಸಿ ಭಾರತೀಯರಿಗೂ ಇದು ಅವಕಾಶ ಕಲ್ಪಿಸಿದೆ.
ಯುಎಇ ಬ್ಯಾಂಕ್‌ಗಳಿಂದ ನೀಡಿಕೆ
ರೂಪೇ ಕಾರ್ಡ್‌ಗಳನ್ನು ಯುಎಇಯ ಬ್ಯಾಂಕ್‌ಗಳೂ ನೀಡಲಿವೆ. ಎಮಿರೇಟ್ಸ್ ಎನ್‌ಬಿಡಿ, ಫಸ್ಟ್ ಅಬುಧಾಬಿ ಬ್ಯಾಂಕ್ ಮತ್ತು ಬ್ಯಾಂಕ್ ಆಫ್ ಬರೋಡಾಗಳು ರೂಪೇ ನೀಡಲಿವೆ. ರೂಪೇ ಕಾರ್ಡ್ ಅನ್ನು ಈವರೆಗೆ ವಿದೇಶಿ ನೆಲದಲ್ಲಿ ಭೂತಾನ್, ಸಿಂಗಾಪುರ, ಮಾಲ್ಡೀವ್ಸ್‌ಗಳಲ್ಲಿ ಪರಿಚಯಿಸಲಾಗಿದೆ. ರೂಪೇ ಕಾರ್ಡ್‌ನಿಂದಾಗಿ ಮರ್ಚೆಂಟ್ ಕಾರ್ಡ್ ಕಂಪೆನಿಗಳಾದ ಮಾಸ್ಟರ್ ಕಾರ್ಡ್, ವೀಸಾ ಕಾರ್ಡ್‌ಗಳ ಮೇಲೆ ಅವಲಂಬನೆ ತಪ್ಪಲಿದ್ದು, ಭಾರತದ ಬ್ಯಾಂಕುಗಳು ಇವುಗಳಿಗೆ ನೀಡುತ್ತಿರುವ ಅಪಾರ ಪ್ರಮಾಣದ ಶುಲ್ಕ ದೇಶದ ಬೊಕ್ಕಸಕ್ಕೇ ಹೋಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Russia; ಅಭಿವೃದ್ಧಿಪಡಿಸಲಾದ ಕ್ಯಾನ್ಸರ್ ಲಸಿಕೆ ಉಚಿತವಾಗಿ ಲಭ್ಯ
Israel ನಡೆಸಿದ ಭಾರೀ ದಾಳಿಗೆ ಸಿರಿಯಾದಲ್ಲಿ ಲಘು ಭೂಕಂಪನ!
New York: ಅಮೆರಿಕದಲ್ಲಿ ಶೂಟೌಟ್: ಇಬ್ಬರ ಕೊಂದು ವಿದ್ಯಾರ್ಥಿನಿ ಆತ್ಮಹ*ತ್ಯೆ
Moscow: ಕೆಮಿಕಲ್ ಅಸ್ತ್ರ ಬಳಸಿದ್ದ ರಷ್ಯಾ ಪರಮಾಣು ರಕ್ಷಣಾಪಡೆ ಮುಖ್ಯಸ್ಥನ ಹತ್ಯೆ
Watch Video: ದ್ವೀಪರಾಷ್ಟ್ರ ವನವಾಟುನಲ್ಲಿ ಪ್ರಬಲ ಭೂಕಂಪ, ಹಲವಾರು ಕಟ್ಟಡ ಕುಸಿತ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.