ಮೋದಿ ಅಮೆರಿಕ ಪ್ರವಾಸ 


Team Udayavani, Sep 21, 2021, 6:30 AM IST

ಮೋದಿ ಅಮೆರಿಕ ಪ್ರವಾಸ 

ಬಾಂಗ್ಲಾದೇಶ ಹೊರತುಪಡಿಸಿದರೆ,  2020ರ ಅನಂತರ  ಪ್ರಧಾನಿ ನರೇಂದ್ರ ಮೋದಿ ವಿದೇಶಕ್ಕೆ ಹೋದದ್ದೇ ಇಲ್ಲ. ಇದಕ್ಕೆ ಕಾರಣ ಕೊರೊನಾ.  ಈ ವರ್ಷದ ಆರಂಭದಲ್ಲಿ ಬಾಂಗ್ಲಾಗೆ ಭೇಟಿ ನೀಡಿದ್ದ ಮೋದಿ ಅವರು, ಬಾಂಗ್ಲಾ ವಿಮೋಚನ ದಿನಾಚರಣೆಯಲ್ಲಿ ಭಾಗಿಯಾಗಿದ್ದರು. ಈಗ ನಾಳೆಯಿಂದ ಮೋದಿ ಅವರು ಅಮೆರಿಕ ಪ್ರವಾಸ ಕೈಗೊಳ್ಳುತ್ತಿದ್ದು, ಅಫ್ಘಾನಿಸ್ಥಾನ ಬೆಳವಣಿಗೆ, ಕ್ವಾಡ್‌ ಶೃಂಗ ಸೇರಿದಂತೆ ಪ್ರಮುಖ ವಿಚಾರಗಳ ಬಗ್ಗೆ ಚರ್ಚೆಯಾಗಲಿದೆ. 

ಕ್ವಾಡ್‌ ಶೃಂಗ :

ಈಗಾಗಲೇ ಚೀನದ ನಿದ್ದೆಗೆಡಿಸಿರುವ ಕ್ವಾಡ್‌ ಒಕ್ಕೂಟದ ಶೃಂಗವೂ ಈ ಬಾರಿಯ ಮೋದಿ ಪ್ರವಾಸದ ವಿಶೇಷ. ಈ ಕ್ವಾಡ್‌ ಒಕ್ಕೂಟ ರಚನೆಯಾದ ಮೇಲೆ ಭಾರತ, ಅಮೆರಿಕ, ಜಪಾನ್‌ ಮತ್ತು ಆಸ್ಟ್ರೇಲಿಯ ದೇಶಗಳ ನಾಯಕರು ಒಂದು ಕಡೆ ಸೇರಿಲ್ಲ. ಕೇವಲ ವಚ್ಯುìವಲ್‌ ಆಗಿ ಮಾತ್ರ ಸಭೆ ನಡೆದಿದೆ. ಇದೇ ಮೊದಲ ಬಾರಿಗೆ ಈ ನಾಲ್ಕೂ ದೇಶಗಳ ನಾಯಕರು ಒಟ್ಟಿಗೆ ಕುಳಿತು  ಚರ್ಚೆ ನಡೆಸಲಿದ್ದಾರೆ.  ದಕ್ಷಿಣ ಏಷ್ಯಾದಲ್ಲಿ ಚೀನದ ಪ್ರಾಬಲ್ಯದ ಬಗ್ಗೆ ಪ್ರಮುಖವಾಗಿ ಚರ್ಚೆಯಾಗುವ ಸಾಧ್ಯತೆ ಇದೆ. ಜೋ ಬೈಡೆನ್‌ ಅವರೇ ಈ ಕ್ವಾಡ್‌ ಶೃಂಗದ ಆತಿಥ್ಯ ವಹಿಸಲಿದ್ದಾರೆ. ಸೆ.24ರಂದು ಈ ಶೃಂಗಸಭೆ ನಡೆಯಲಿದೆ. ಆಸ್ಟ್ರೇಲಿಯ ಪ್ರಧಾನಿ ಸ್ಕಾಟ್‌ ಮಾರಿಸನ್‌, ಜಪಾನ್‌ ಪ್ರಧಾನಿ ಯೋಶಿಹಿದೆ ಸುಗಾ ಕೂಡ ಇದರಲ್ಲಿ ಭಾಗಿಯಾಗಲಿದ್ದಾರೆ.

ಶೃಂಗದಲ್ಲಿ ನಡೆಯಲಿರುವ ಚರ್ಚೆ :

  • ಸೂಕ್ಷ್ಮ ಮತ್ತು ಉದಯೋನ್ಮುಖ ತಂತ್ರಜ್ಞಾನ
  • ಸಂಪರ್ಕ ಮತ್ತು ಮೂಲಸೌಕರ್ಯ
  • ಸೈಬರ್‌ ಭದ್ರತೆ  l ನೌಕಾ ಭದ್ರತೆ
  • ಮಾನವೀಯ ನೆರವು/ವಿಪತ್ತು ಪರಿಹಾರ
  • ಹವಾಮಾನ ಬದಲಾವಣೆ ಮತ್ತು ಶಿಕ್ಷಣ

ಕ್ವಾಡ್‌ ನಾಯಕರ ಜತೆ ಪ್ರತ್ಯೇಕ ಚರ್ಚೆ:

ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ಅವರ ಜತೆ ಚರ್ಚೆ ನಡುವೆಯೇ, ಕ್ವಾಡ್‌ನ‌ ಇತರ ನಾಯಕರಾದ ಸುಗಾ, ಮಾರಿಸನ್‌ ಅವರ ಜತೆಗೂ ಮೋದಿ ಅವರು ಪ್ರತ್ಯೇಕವಾಗಿ ಚರ್ಚೆ ನಡೆಸಲಿದ್ದಾರೆ. ಅದರಲ್ಲೂ ಆಸ್ಟ್ರೇಲಿಯ ಪ್ರಧಾನಿ ಸ್ಕಾಟ್‌ ಮಾರಿಸನ್‌ ಅವರು, ಎಯುಕೆಯುಎಸ್‌(ಆಕುಸ್‌) ಒಕ್ಕೂಟದ ಅಗತ್ಯತೆಯ ಬಗ್ಗೆ ಮೋದಿ ಅವರಿಗೆ ಮನವರಿಕೆ ಮಾಡಿಕೊಡಲಿದ್ದಾರೆ. ಈ ಒಕ್ಕೂಟದ ಬಗ್ಗೆ ಈಗಾಗಲೇ ಫ್ರಾನ್ಸ್‌ ಮತ್ತು ಐರೋಪ್ಯ ಒಕ್ಕೂಟ ಅಸಮಾಧಾನ ವ್ಯಕ್ತಪಡಿಸಿದೆ. ಆಕುಸ್‌ ಅನ್ನು ಅಮೆರಿಕ, ಆಸ್ಟ್ರೇಲಿಯ ಮತ್ತು ಬ್ರಿಟನ್‌ ದೇಶಗಳು ಮಾಡಿಕೊಂಡಿವೆ.

ಜೋ ಬೈಡೆನ್‌-ಮೋದಿ ದ್ವಿಪಕ್ಷೀಯ ಸಭೆ :

ಸೆ.24ರಂದು ಜೋ ಬೈಡೆನ್‌ ಮತ್ತು ನರೇಂದ್ರ ಮೋದಿ ಅವರು ದ್ವಿಪಕ್ಷೀಯ ಸಂಬಂಧದ ಕುರಿತಂತೆ ಚರ್ಚೆ ನಡೆಸಲಿದ್ದಾರೆ. ಇವರ ಮಾತುಕತೆ ವೇಳೆ, ಭಯೋತ್ಪಾದನೆ, ಅಫ್ಘಾನಿಸ್ಥಾನ ಬೆಳವಣಿಗೆ, ಕೊರೊನಾ, ಹವಾಮಾನ ಬದಲಾವಣೆ, ಇಂಡೋ-ಫೆಸಿಫಿಕ್‌ ವಿಷಯಗಳು ಪ್ರಸ್ತಾವವಾಗುವ ಸಾಧ್ಯತೆ ಇದೆ.

ಕಮಲಾ ಹ್ಯಾರೀಸ್‌ ಜತೆ ಚರ್ಚೆ :

ಅಮೆರಿಕ ಪ್ರವಾಸದ ಆರಂಭದಲ್ಲಿಯೇ ಭಾರತೀಯ ಮೂಲದ ಅಮೆರಿಕ ಉಪಾಧ್ಯಕ್ಷೆ ಕಮಲಾ ಹ್ಯಾರೀಸ್‌ ಅವರನ್ನು ಭೇಟಿಯಾಗಲಿದ್ದಾರೆ. ಬಳಿಕ ಆ್ಯಪಲ್‌ ಸಿಇಓ ಟಿಮ್‌ ಕುಕ್‌ ಸೇರಿದಂತೆ ಹಲವಾರು ಉದ್ಯಮಿಗಳನ್ನು ಭೇಟಿಯಾಗಲಿದ್ದಾರೆ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿವೆ.

ಮೋದಿಗೆ ಇದು 2ನೇ ವಿದೇಶಿ ಪ್ರವಾಸ :

ಮಾರ್ಚ್‌ನಲ್ಲಿ ಬಾಂಗ್ಲಾದೇಶ ವಿಮೋಚನೆಯ 50ನೇ ವಾರ್ಷಿಕೋತ್ಸವ ಮತ್ತು ಬಾಂಗ್ಲಾದೇಶದ ರಾಷ್ಟ್ರಪಿತ ಮುಜೀಬ್‌ ಬಸೋì ಅವರ ಜನ್ಮದಿನದ ಶತಮಾನೋತ್ಸವದ ಅಂಗವಾಗಿ ಪ್ರಧಾನಿ ಮೋದಿ ಅವರು ಶೇಕ್‌ ಹಸೀನಾ ಅವರ ಆಹ್ವಾನದ ಮೇರೆಗೆ ಹೋಗಿದ್ದರು. ಕೊರೊನಾ ನಂತರದಲ್ಲಿ ಮೋದಿ ಅವರು ಕೈಗೊಂಡ ಮೊದಲ ವಿದೇಶಿ ಪ್ರವಾಸವಾಗಿತ್ತು. ಅಲ್ಲದೇ, 2020ರಲ್ಲಿ ಮೋದಿ ಅವರು ಯಾವುದೇ ವಿದೇಶ ಪ್ರವಾಸ ಕೈಗೊಂಡಿರಲಿಲ್ಲ. ವಚ್ಯುìವಲ್‌ ಮೂಲಕವೇ  ವಿಶ್ವಸಂಸ್ಥೆ ಅಧಿವೇಶನವನ್ನು ಉದ್ದೇಶಿಸಿ ಭಾಷಣ ಮಾಡಿದ್ದರು.

ಕೊರೊನಾ ಚರ್ಚೆ :

ಎಲ್ಲದಕ್ಕಿಂತ ಪ್ರಮುಖವಾಗಿ ಈ ಎರಡು ವರ್ಷ ಇಡೀ ಜಗತ್ತನ್ನು ಕಾಡಿರುವ ಕೊರೊನಾ ಬಗ್ಗೆಯೂ ಮೋದಿ ಅವರ ಅಮೆರಿಕ ಪ್ರವಾಸದ ವೇಳೆ ಚರ್ಚೆಯಾಗುವ ಸಾಧ್ಯತೆ ಇದೆ. ಈ ಪ್ರವಾಸದ ಬೆನ್ನಲ್ಲೇ ಮುಂದಿನ ತಿಂಗಳಿಂದ ಬೇರೆ ದೇಶಗಳಿಗೆ ಲಸಿಕೆಯನ್ನು ರಫ್ತು ಮಾಡಲು ಭಾರತ ಚಿಂತನೆ ನಡೆಸಿದೆ. ಅದೇ ರೀತಿಯಲ್ಲಿ ಮುಂದುವರಿದ ದೇಶಗಳು, ಹಿಂದುಳಿದ ದೇಶಗಳಿಗೆ ಲಸಿಕೆ ನೀಡುವ ಬಗ್ಗೆ ಮತ್ತು ಕೊರೊನಾ ವೇಳೆ ನಷ್ಟಕ್ಕೀಡಾಗಿರುವ ದೇಶಗಳಿಗೆ ಅಗತ್ಯ ನೆರವು ನೀಡಬೇಕು ಎಂದು ಒತ್ತಾಯಿಸುವ ಸಾಧ್ಯತೆ ಇದೆ.

ವಿಶ್ವಸಂಸ್ಥೆಯಲ್ಲಿ ಭಾಷಣ :

ಕಳೆದ ವರ್ಷ ವಿಶ್ವಸಂಸ್ಥೆಯ ಸಾಮಾನ್ಯ ಅಧಿವೇಶನ ವಚ್ಯುìವಲ್‌ ಆಗಿಯೇ ನಡೆದಿತ್ತು. ಈಗ ಕೊರೊನಾ ಇಳಿಮುಖವಾಗಿರುವ ಹಿನ್ನೆಲೆಯಲ್ಲಿ ಜಗತ್ತಿನ 119 ದೇಶಗಳ ನಾಯಕರು ಮತ್ತು ಪ್ರತಿನಿಧಿಗಳು ಭೌತಿಕವಾಗಿಯೇ ಪಾಲ್ಗೊಳ್ಳಲಿದ್ದಾರೆ. ಸೆ.21ರಿಂದ ಆರಂಭವಾಗಲಿದ್ದು, ಸೆ.27ರವರೆಗೆ ಈ ಅಧಿವೇಶನ ಮುಂದುವರಿಯಲಿದೆ.  ಅಫ್ಘಾನ್‌ ವಿಚಾರದಲ್ಲಿ ಚೀನ ಮತ್ತು ಪಾಕಿಸ್ಥಾನ ದೇಶಗಳು ತೋರುತ್ತಿರುವ ಕುತ್ಸಿತ ಬುದ್ಧಿ, ಗಡಿಯಾಚೆಗಿನ ಭಯೋತ್ಪಾದನೆ ಕುರಿತಂತೆ ಪ್ರಧಾನಿ ನರೇಂದ್ರ ಮೋದಿ ಅವರು ಪ್ರಸ್ತಾಪಿಸಲಿದ್ದಾರೆ. ಅಲ್ಲದೆ, ಪಾಕಿಸ್ಥಾನ ಪ್ರಾಯೋಜಿತ ಭಯೋತ್ಪಾದನೆಯಿಂದ ಇಡೀ ಜಗತ್ತು ಅನುಭವಿಸುತ್ತಿರುವ ಕಷ್ಟದ ಬಗ್ಗೆಯೂ ವಿಶ್ವಸಂಸ್ಥೆ ಮಹಾಅಧಿವೇಶನದಲ್ಲಿ ಎಲ್ಲರ ಗಮನ ಸೆಳೆಯಲಿದ್ದಾರೆ.

ಬೋರಿಸ್‌ ಜಾನ್ಸನ್‌ ಭೇಟಿ  :

ಸೆ.22ರಂದು ವಾಷಿಂಗ್ಟನ್‌ ಡಿ.ಸಿ.ಗೆೆ ನೇರವಾಗಿ ತೆರಳಲಿರುವ ಮೋದಿ ಅವರು, ಸೆ.24ರ ವರೆಗೂ ಅಲ್ಲೇ ಇರಲಿದ್ದಾರೆ. ಇದರಲ್ಲಿ ಒಂದು ದಿನ ಇಂಗ್ಲೆಂಡ್‌ ಪ್ರಧಾನಿ ಬೋರಿಸ್‌ ಜಾನ್ಸನ್‌ ಅವರ ಜತೆಗೆ ಡಿನ್ನರ್‌ ಕೂಟ ನಿಗದಿಯಾಗಿದೆ. ಈ ಸಂದರ್ಭದಲ್ಲಿ ಇಬ್ಬರೂ ನಾಯಕರು ದ್ವಿಪಕ್ಷೀಯ ಸಂಬಂಧ ಕುರಿತಂತೆ ಚರ್ಚೆ ನಡೆಸುವ ಸಾಧ್ಯತೆ ಇದೆ.

ಪ್ರವಾಸದ ವಿವರ  :

ಸೆ.22 : ವಾಷಿಂಗ್ಟನ್‌ ಡಿಸಿಗೆ ಮೋದಿ ಆಗಮನ

ಸೆ.23 : ಅಮೆರಿಕ ಸಿಇಓಗಳ ಜತೆ  ಮಾತುಕತೆ , ಆ್ಯಪಲ್‌ ಸಿಇಓ ಟಿಮ್‌ ಕುಕ್‌ ಜತೆಗೆ ಚರ್ಚೆ  ಅಮೆರಿಕ ಉಪಾಧ್ಯಕ್ಷೆ ಕಮಲಾ ಹ್ಯಾರೀಸ್‌, ಜಪಾನ್‌ ಪ್ರಧಾನಿ ಯೋಶಿಹಿದೆ ಸುಗಾ, ಆಸ್ಟ್ರೇಲಿಯ ಪ್ರಧಾನಿ ಸ್ಕಾಟ್‌ ಮಾರಿಸನ್‌, ಬ್ರಿಟನ್‌ ಪ್ರಧಾನಿ ಬೋರಿಸ್‌ ಜಾನ್ಸನ್‌ ಭೇಟಿ

ಸೆ.24:   ಜೋ ಬೈಡೆನ್‌ ಜತೆಗೆ ದ್ವಿಪಕ್ಷೀಯ ಮಾತುಕತೆ  , ಕ್ವಾಡ್‌ ಶೃಂಗಸಭೆಯಲ್ಲಿ ಭಾಗಿ – ವಾಷಿಂಗ್ಟನ್‌ನಿಂದ ನ್ಯೂಯಾರ್ಕ್‌ಗೆ ಪ್ರಯಾಣ

ಸೆ.25:   ವಿಶ್ವಸಂಸ್ಥೆಯಲ್ಲಿ ಭಾಷಣ

ಟಾಪ್ ನ್ಯೂಸ್

Kanadka-Dooja

Surathkal: ಆರು ಬಾರಿಯ ಚಾಂಪಿಯನ್‌, ಕಂಬಳ ವೀರ ಕಾನಡ್ಕ ದೂಜನಿಗೆ ಸಮ್ಮಾನ

Yakshagana-Academy

Udupi: ಮಕ್ಕಳಲ್ಲಿ ತಾಳ್ಮೆ, ಏಕಾಗ್ರತೆ ಬೆಳೆಸಲು ಯಕ್ಷಗಾನ ತರಬೇತಿ ಅವಶ್ಯ: ಯು.ಟಿ. ಖಾದರ್‌

Sulya-1

Sulya: ಪೈಪ್‌ಲೈನ್‌ ಕಾಮಗಾರಿಯಿಂದ ರಸ್ತೆಗೆ ಹಾನಿ ಬಗ್ಗೆ ಚರ್ಚಿಸಿ ಕ್ರಮ: ಸತೀಶ್‌ ಜಾರಕಿಹೊಳಿ

Arebashe-Academy

Madikeri: ಆರು ಮಂದಿಗೆ ಅರೆಭಾಷೆ ಅಕಾಡೆಮಿ ಗೌರವ ಪ್ರಶಸ್ತಿ ಪ್ರಕಟ; ಫೆ.28ಕ್ಕೆ ಪ್ರದಾನ

Santhe-last

Manipal: ಕಡೇ ದಿನವೂ ಉತ್ತಮ ಸ್ಪಂದನೆ; ಹಾಡು, ನೃತ್ಯದೊಂದಿಗೆ ʼನಮ್ಮ ಸಂತೆʼಗೆ ತೆರೆ

kambala2

Kambala: ದಾಖಲೆ ಬರೆದ ವಾಮಂಜೂರು ತಿರುವೈಲುಗುತ್ತು ಕಂಬಳ

Arrest

Davanagere: ಪೂಜೆಯಿಂದ ಕಷ್ಟ ಪರಿಹರಿಸುವ ನೆಪದಲ್ಲಿ ಮನೆಯಿಂದ ಕಳವು: ಇಬ್ಬರ ಬಂಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Obama Is Queer: ಮಾಜಿ ಅಧ್ಯಕ್ಷ ಒಬಾಮಾ ಪತ್ನಿ ಮಿಚೆಲ್‌ ಗಂಡಸು: ಮಸ್ಕ್ ತಂದೆ

Obama Is Queer: ಮಾಜಿ ಅಧ್ಯಕ್ಷ ಒಬಾಮಾ ಪತ್ನಿ ಮಿಚೆಲ್‌ ಗಂಡಸು: ಮಸ್ಕ್ ತಂದೆ

Trump-musk

Cut Down: ವೆಚ್ಚ ಕಡಿತ: ಅಮೆರಿಕ ಸರಕಾರಿ ಉದ್ಯೋಗಿಗಳೇ ವಜಾ!

Mexico:ಯುರೋಪ್‌ ನ Most ವಾಂಟೆಡ್‌ ಕ್ರಿ*ಮಿನಲ್‌, ಡ್ರ*ಗ್‌ ಕಿಂಗ್‌ ಪಿನ್‌ ಮಾರ್ಕೋ ಹತ್ಯೆ

Mexico:ಯುರೋಪ್‌ ನ Most ವಾಂಟೆಡ್‌ ಕ್ರಿ*ಮಿನಲ್‌, ಡ್ರ*ಗ್‌ ಕಿಂಗ್‌ ಪಿನ್‌ ಮಾರ್ಕೋ ಹ*ತ್ಯೆ

India cuts import duty on American Bourbon Whiskey

Bourbon Whiskey: ಅಮೆರಿಕದ ಬೌರ್ಬನ್ ವಿಸ್ಕಿ ಆಮದು ಸುಂಕ ಕಡಿತ ಮಾಡಿದ ಭಾರತ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Kanadka-Dooja

Surathkal: ಆರು ಬಾರಿಯ ಚಾಂಪಿಯನ್‌, ಕಂಬಳ ವೀರ ಕಾನಡ್ಕ ದೂಜನಿಗೆ ಸಮ್ಮಾನ

Yakshagana-Academy

Udupi: ಮಕ್ಕಳಲ್ಲಿ ತಾಳ್ಮೆ, ಏಕಾಗ್ರತೆ ಬೆಳೆಸಲು ಯಕ್ಷಗಾನ ತರಬೇತಿ ಅವಶ್ಯ: ಯು.ಟಿ. ಖಾದರ್‌

Sulya-1

Sulya: ಪೈಪ್‌ಲೈನ್‌ ಕಾಮಗಾರಿಯಿಂದ ರಸ್ತೆಗೆ ಹಾನಿ ಬಗ್ಗೆ ಚರ್ಚಿಸಿ ಕ್ರಮ: ಸತೀಶ್‌ ಜಾರಕಿಹೊಳಿ

Arebashe-Academy

Madikeri: ಆರು ಮಂದಿಗೆ ಅರೆಭಾಷೆ ಅಕಾಡೆಮಿ ಗೌರವ ಪ್ರಶಸ್ತಿ ಪ್ರಕಟ; ಫೆ.28ಕ್ಕೆ ಪ್ರದಾನ

Santhe-last

Manipal: ಕಡೇ ದಿನವೂ ಉತ್ತಮ ಸ್ಪಂದನೆ; ಹಾಡು, ನೃತ್ಯದೊಂದಿಗೆ ʼನಮ್ಮ ಸಂತೆʼಗೆ ತೆರೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.