Modi USA tour; ಭಾರತದ ಸೆಮಿಕಂಡಕ್ಟರ್‌ ಕನಸಿಗೆ ಈಗ ಹೊಸ ‘ಶಕ್ತಿ’

ನಮ್ಮ ನಿಗ್ರಹಕ್ಕಾಗಿ ಕ್ವಾಡ್‌ ಅಸ್ತ್ರ: ಚೀನ ಕಿಡಿ

Team Udayavani, Sep 24, 2024, 6:45 AM IST

1-reess

ವಾಷಿಂಗ್ಟನ್‌: ರಾಷ್ಟ್ರೀಯ ಭದ್ರತೆಗೆ ಬಲ ನೀಡುವಂಥ ದೇಶದ ಮೊದಲ ಅತ್ಯಾ ಧುನಿಕ ಸೆಮಿಕಂಡಕ್ಟರ್‌ ಫ್ಯಾಬ್ರಿಕೇಶನ್‌ ಘಟಕ “ಶಕ್ತಿ’ ಶೀಘ್ರವೇ ಭಾರತದಲ್ಲಿ ಸ್ಥಾಪನೆ ಗೊಳ್ಳಲಿದ್ದು, ಇದಕ್ಕೆ ಅಮೆರಿಕ ಪಾಲುದಾರಿಕೆ ವಹಿಸಲಿದೆ.

ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ನಡುವಿನ ದ್ವಿಪಕ್ಷೀಯ ಸಭೆಯಲ್ಲಿ ಈ ವಿಚಾರವನ್ನು ಉಭಯ ರಾಷ್ಟ್ರಗಳು ಘೋಷಿಸಿವೆ. ವಿಶ್ವದ ಮೊದಲ ಮಲ್ಟಿ ಮೆಟಿರಿಯಲ್‌  ಫ್ಯಾಬ್ರಿ ಕೇಶನ್‌ ಘಟಕ ಇದಾಗಿರಲಿದ್ದು, ಉತ್ತರ ಪ್ರದೇಶದಲ್ಲೇ ಘಟಕ ಸ್ಥಾಪನೆಯ ನಿರೀಕ್ಷೆ ಇದೆ. ಭದ್ರತೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಆಧುನಿಕ ಯುದ್ಧಕ್ಕೂ ಸಹಾಯಕವಾಗುವ ಸುಧಾರಿತ ಸಂವೇದನ ತಂತ್ರಜ್ಞಾನ, ಸಂವಹನ ಮತ್ತು ಪವರ್‌ ಎಲೆಕ್ಟ್ರಾನಿಕ್ಸ್‌ ಕ್ಷೇತ್ರ ಕೇಂದ್ರೀಕರಿಸಿ ಈ ಘಟಕ ಸ್ಥಾಪಿಸಲಾಗುತ್ತಿದೆ. ಇನ್‌ಫ್ರಾರೆಡ್‌, ಗ್ಯಾಲಿಯಂ ನೈಟ್ರೇಡ್‌, ಸಿಲಿಕಾನ್‌ ಕಾರ್ಬೈಡ್‌ ಸೆಮಿಕಂಡಕ್ಟರ್‌ಗಳ ನ್ನು ಘಟಕ ಉತ್ಪಾದಿಸಲಿದೆ. ಇಂಡಿಯನ್‌ ಸೆಮಿಕಂಡಕ್ಟರ್‌ ಮಿಷನ್‌, ಭಾರತ್‌ ಸೆಮಿ, 3ಆರ್‌ಡಿಐ, ಅಮೆರಿಕ ಸ್ಪೇಸ್‌ ಫೋರ್ಸ್‌ ಸಹಭಾಗಿತ್ವವೂ ಇರಲಿದೆ. ತಯಾರಾಗುವ ಚಿಪ್‌ಗ್ಳನ್ನು ಎರಡೂ ರಕ್ಷಣ ಮಿಲಿಟರಿ ಹಾರ್ಡ್‌ವೇರ್‌ ನಲ್ಲಿ ಬಳಸಲಿವೆ.

ಟೆಕ್‌ ಸಿಇಒಗಳ ಜತೆ ಸಭೆ: ಕೃತಕ ಬುದ್ಧಿಮತ್ತೆ, ಕ್ವಾಂಟಮ್‌ ಕಂಪ್ಯೂಟಿಂಗ್‌, ಸೆಮಿಕಂಡಕ್ಟರ್‌ ಸೇರಿದಂತೆ ಪ್ರಮುಖ ತಂತ್ರಜ್ಞಾನ ಕ್ಷೇತ್ರಗಳ  ಅಮೆರಿಕ 15 ಸಿಇಒಗಳು ಜತೆಗೆ ಮೋದಿ ನ್ಯೂಯಾರ್ಕ್‌ನಲ್ಲಿ ಸೋಮವಾರ ದುಂಡು ಮೇಜಿನ ಸಭೆ ನಡೆಸಿದ್ದಾರೆ. ಭಾರತದ ಅಭಿವೃದ್ಧಿಗೆ ಅನುವಾಗುವಂತೆ ತಂತ್ರಜ್ಞಾನ, ನಾವೀನ್ಯತೆ ಸೇರಿದಂತೆ ವಿವಿಧ ಕ್ಷೇತ್ರಗಳ ದ್ವಿಪಕ್ಷೀಯ ಸಹಯೋಗ ಉತ್ತೇಜಿಸುವ ಹಲವು ಕ್ರಮಗಳ ಬಗ್ಗೆಯೂ ಈ ವೇಳೆ ಚರ್ಚಿಸಿದ್ದಾರೆ.

ಡಿಜಿಟಲ್‌ ಇಂಡಿಯಾ ದೃಷ್ಟಿಕೋನದೊಂದಿಗೆ ಭಾರತ ಪರಿವರ್ತನೆಗೆ ಮೋದಿ ಎದುರು ನೋಡುತ್ತಿದ್ದಾರೆ. ಮೂಲಭೂತ ಸೌಕರ್ಯಕ್ಕೆ ಒತ್ತು ನೀಡಲು ಎಐ ಆ್ಯಪ್‌ಗ್ಳನ್ನು ಅಭಿವೃದ್ಧಿ ಪಡಿಸುವಂತೆ ಹುರಿದುಂಬಿಸಿದ್ದಾರೆ. ಪಿಕ್ಸೆಲ್‌ ಫೋನ್‌ಗಳನ್ನು ಭಾರತದಲ್ಲಿ ಉತ್ಪಾದಿಸಲು ಹೆಮ್ಮೆಯಾಗುತ್ತಿದೆ.

ಸುಂದರ್‌ ಪಿಚೈ, ಗೂಗಲ್‌

ಹನುಮಾನ್‌ಕೈಂಡ್‌ ಪ್ರದರ್ಶನಕ್ಕೆ “ಜೈ ಹನುಮಾನ್‌’ ಎಂದ ಪ್ರಧಾನಿ

ಅಮೆರಿಕದಲ್ಲಿರುವ ಭಾರತೀಯ ಸಮುದಾಯದೊಂದಿಗೆ ಪ್ರಧಾನಿ ಮೋದಿಯವರ ಸಂವಾದ ಕಾರ್ಯಕ್ರಮ “ಮೋದಿ ಆ್ಯಂಡ್‌ಯುಎಸ್‌’ನಲ್ಲಿ ಭಾರತೀಯ ರ್ಯಾಪರ್‌ ಹನುಮಾನ್‌ಕೈಂಡ್‌ ತಮ್ಮ ವಿಶಿಷ್ಟ ರ್ಯಾಪ್‌ ಮೂಲಕ ಪ್ರಧಾನಿ ಮೋದಿಯ ಮೆಚ್ಚುಗೆ ಗಳಿಸಿದರು. ಅವರ ಪ್ರದರ್ಶನದ ಬಳಿಕ ಹನುಮಾನ್‌ಕೈಂಡ್‌ ಅವರ ಕೈ ಕುಲುಕಿ, ಅಪ್ಪುಗೆ ನೀಡಿದ ಮೋದಿ, “ಜೈ ಹನುಮಾನ್‌’ ಎಂದು ಹೇಳಿ ಅವರಿಗೆ ಶುಭ ಕೋರಿದ್ದಾರೆ.

ನಮ್ಮ ನಿಗ್ರಹಕ್ಕಾಗಿ ಕ್ವಾಡ್‌ ಅಸ್ತ್ರ: ಚೀನ ಕಿಡಿ

ಅಮೆರಿಕದಲ್ಲಿ ಯಶಸ್ವಿಯಾಗಿ ನಡೆದ ಕ್ವಾಡ್‌ ಶೃಂಗಸಭೆಯನ್ನು ಚೀನಕ್ಕೆ ಅರಗಿಸಿಕೊಳ್ಳಲಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಕೆರಳಿ ಕೆಂಡವಾಗಿರುವ ಚೀನ, “ಬೀಜಿಂಗ್‌ ಅನ್ನು ನಿಗ್ರಹಿಸಲೆಂದೇ ಈ ಶೃಂಗಸಭೆಯನ್ನು ಅಮೆರಿಕ ಅಸ್ತ್ರವನ್ನಾಗಿ ಬಳಸುತ್ತಿದೆ’ ಎಂದು ಆರೋಪಿಸಿದೆ. ದಕ್ಷಿಣ ಹಾಗೂ ಪೂರ್ವ ಚೀನ ಸಮುದ್ರಗಳ ಮೇಲೆ ತನ್ನ ಸಾರ್ವಭೌಮತೆ ಹಾಗೂ ಕಡಲ ಹಕ್ಕುಗಳನ್ನು ಯಾವುದೇ ಬಾಹ್ಯ ಶಕ್ತಿಯಿಂದಲೂ ಅಲುಗಾಡಿಸಲಾಗುವುದಿಲ್ಲ ಎಂದು ಚೀನ ಉದ್ಗರಿಸಿದೆ. ಕಡಲಿಗೆ ಸಂಬಂಧಿಸಿದ ವಿಷಯಗಳ ನೆಪದಲ್ಲಿ ಭದ್ರತಾ ಸಹಕಾರಗಳನ್ನು ಪಡೆದು ಅಮೆರಿಕವು ದೇಶಗಳನ್ನು ಒಗ್ಗೂಡಿಸುತ್ತಿದೆ. ಇದಲ್ಲದೇ ಚೀನ ಅಪಾಯಕಾರಿ ಎಂದು ಬಿಂಬಿಸುತ್ತಾ ನಮ್ಮನ್ನು  ನಿಗ್ರಹಿಸಲು ಪ್ರಯತ್ನಿಸುತ್ತಿದೆ. ಇದಕ್ಕೆ ನಾವು ಎಂದಿಗೂ ಅವಕಾಶ ನೀಡುವುದಿಲ್ಲ ಎಂದು ವಿದೇಶಾಂಗ ಇಲಾಖೆ ವಕ್ತಾರ ಲಿನ್‌ ಜಿಯಾನ್‌ ಆರೋಪಿಸಿದ್ದಾರೆ.

ಟಾಪ್ ನ್ಯೂಸ್

Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!

Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!

Stories: ಹಾಡಿನಂಥ ಕಾಡುವಂಥ ಕಥೆಗಳು

Stories: ಹಾಡಿನಂಥ ಕಾಡುವಂಥ ಕಥೆಗಳು

Pushpa-2: ಸಂಕ್ರಾಂತಿಗೆ ಓಟಿಟಿಗೆ ಬರುತ್ತಾ ʼಪುಷ್ಪ-2ʼ?: ಸ್ಪಷ್ಟನೆ ನೀಡಿದ ನಿರ್ಮಾಣ ಸಂಸ್ಥೆ

Pushpa-2: ಸಂಕ್ರಾಂತಿಗೆ ಓಟಿಟಿಗೆ ಬರುತ್ತಾ ʼಪುಷ್ಪ-2ʼ?: ಸ್ಪಷ್ಟನೆ ನೀಡಿದ ನಿರ್ಮಾಣ ಸಂಸ್ಥೆ

Bengaluru: ಚಿನ್ನದಂಗಡಿಯಲ್ಲಿ 3 ಕೆಜಿ ಚಿನ್ನ ದೋಚಿದ ಮಹಿಳೆ

Bengaluru: ಚಿನ್ನದಂಗಡಿಯಲ್ಲಿ 3 ಕೆಜಿ ಚಿನ್ನ ದೋಚಿದ ಮಹಿಳೆ

Expensive wedding: ಭಾರತದ ಅದ್ಧೂರಿ ಮದುವೆ ಮೇಲೆ ಈಗ ಐಟಿ ಕಣ್ಣು!

Expensive wedding: ಭಾರತದ ಅದ್ಧೂರಿ ಮದುವೆ ಮೇಲೆ ಈಗ ಐಟಿ ಕಣ್ಣು!

T20 Asia Cup: ಬಾಂಗ್ಲಾ ವಿರುದ್ದ ಅಂಡರ್‌ 19 ವನಿತಾ ಏಷ್ಯಾಕಪ್‌ ಚಾಂಪಿಯನ್‌ ಆದ ಭಾರತ

T20 Asia Cup: ಬಾಂಗ್ಲಾ ವಿರುದ್ದ ಅಂಡರ್‌ 19 ವನಿತಾ ಏಷ್ಯಾಕಪ್‌ ಚಾಂಪಿಯನ್‌ ಆದ ಭಾರತ

BBK11: ವೀಕ್ಷಕರಿಗೆ ಸರ್ಪ್ರೈಸ್;‌ ಮತ್ತೆ‌ ಬಿಗ್ ಬಾಸ್‌ಗೆ ಗೋಲ್ಡ್‌ ಸುರೇಶ್

BBK11: ವೀಕ್ಷಕರಿಗೆ ಸರ್ಪ್ರೈಸ್;‌ ಮತ್ತೆ‌ ಬಿಗ್ ಬಾಸ್‌ಗೆ ಗೋಲ್ಡ್‌ ಸುರೇಶ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sheik Hasina

Sheikh Hasina ಅವಧಿಯಲ್ಲಾದ ಅಪಹರಣಗಳಿಗೆ ಭಾರತ ಕುಮ್ಮಕ್ಕು: ಬಾಂಗ್ಲಾ ವರದಿ

ravishankar-guruji

Meditation; ಜಾಗತಿಕ ಶಾಂತಿ, ಏಕತೆಗೆ ಧ್ಯಾನ ಮುಖ್ಯ ಸಾಧನ: ಶ್ರೀ ಶ್ರೀ ರವಿಶಂಕರ್‌

iran

Israel ಮೇಲೆ ದಾಳಿಗೆ ಇರಾನ್‌ನಿಂದ ಮಕ್ಕಳ ಬಳಕೆ?

canada

Canada; ಟ್ರಾಡೊ ಸರಕಾರ ಪತನಕ್ಕೆ ಸಿದ್ಧ: ಸಂಸದ ಘೋಷಣೆ

1-modi-bg

Hala Modi; ಮಿನಿ ಹಿಂದೂಸ್ಥಾನಕ್ಕೆ ಸಾಕ್ಷಿಯಾಗುತ್ತಿದ್ದೇನೆ: ಕುವೈಟ್ ನಲ್ಲಿ ಮೋದಿ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Kalaburagi; ಜಾಹೀರಾತು, ಫಲಕದಲ್ಲಿ ಹೆಸರಿಲ್ಲ: ಶಾಸಕ ಅಲ್ಲಮಪ್ರಭು ಬೆಂಬಲಿಗರಿಂದ ಪ್ರತಿಭಟನೆ

Kalaburagi; ಜಾಹೀರಾತು, ಫಲಕದಲ್ಲಿ ಹೆಸರಿಲ್ಲ: ಶಾಸಕ ಅಲ್ಲಮಪ್ರಭು ಬೆಂಬಲಿಗರಿಂದ ಪ್ರತಿಭಟನೆ

Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!

Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!

Siddaramaiah

Kalaburagi: ವರದಿ ನಂತರ ತೊಗರಿ ಹಾನಿಗೆ ಪರಿಹಾರ ನಿರ್ಧಾರ: ಸಿಎಂ ಸಿದ್ದರಾಮಯ್ಯ

ಕೊಡುವುದರಿಂದ ಕೊರತೆಯಾಗದು!

ಕೊಡುವುದರಿಂದ ಕೊರತೆಯಾಗದು!

Stories: ಹಾಡಿನಂಥ ಕಾಡುವಂಥ ಕಥೆಗಳು

Stories: ಹಾಡಿನಂಥ ಕಾಡುವಂಥ ಕಥೆಗಳು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.