ಕರಿನೆರಳಿನಲ್ಲಿ ಸೌಹಾರ್ದ ಮಂತ್ರ


Team Udayavani, Jul 8, 2017, 3:20 AM IST

Ping-7-7.jpg

ಹ್ಯಾಂಬರ್ಗ್‌: ಸಿಕ್ಕಿಂ ಗಡಿ ವಿಚಾರದಲ್ಲಿ ಭಾರತ ಮತ್ತು ಚೀನ ಯುದ್ದೋನ್ಮಾದದಲ್ಲಿ ವಾಕ್ಸಮರ ನಡೆಸಿರುವುದರ ಬೆನ್ನಲ್ಲೇ ಜರ್ಮನಿಯಲ್ಲಿ ಆರಂಭವಾದ ಜಿ20 ಶೃಂಗದಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಹಾಗೂ ಚೀನ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಪರಸ್ಪರ ಗುಣಗಾನ ಮಾಡಿಕೊಂಡಿದ್ದಾರೆ. ಅಲ್ಲದೆ, ಪರೋಕ್ಷವಾಗಿ ಗಡಿ ವಿವಾದಗಳನ್ನು ಶಾಂತಿಯುತವಾಗಿ ಬಗೆಹರಿಸಿಕೊಳ್ಳುವ ಮಾತುಗಳನ್ನು ಆಡಿದ್ದಾರೆ. ಶುಕ್ರವಾರ ಹ್ಯಾಂಬರ್ಗ್‌ನಲ್ಲಿ ಸೇರಿದ ಬ್ರಿಕ್ಸ್‌ ನಾಯಕರು ಅನೇಕ ವಿಚಾರಗಳ ಬಗ್ಗೆ ಮಾತುಕತೆ ನಡೆಸಿದರು. ಇದೇ ವೇಳೆ ಮುಖಾ ಮುಖೀಯಾದ ಮೋದಿ ಹಾಗೂ ಜಿನ್‌ಪಿಂಗ್‌ ಹಸ್ತಲಾಘವ ಮಾಡಿಕೊಂಡು, ಸೌಹಾರ್ದ ಮಾತುಕತೆ ನಡೆಸಿದರು.

ಶೃಂಗದಲ್ಲಿ ಭಯೋತ್ಪಾದನೆ ಬಗ್ಗೆ ಪ್ರಧಾನಿ ಮೋದಿ, ಪ್ರಖರವಾಗಿಯೇ ಭಾರತದ ನಿಲುವು ಸ್ಪಷ್ಟಪಡಿಸಿದರು. ಉಗ್ರವಾದವನ್ನು ಬೆಂಬಲಿಸುತ್ತಿರುವ ಪಾಕಿಸ್ಥಾನವನ್ನೇ ಗುರಿಯಾಗಿಸಿಕೊಂಡು ಮಾತನಾಡಿದ ಮೋದಿ, ಪರೋಕ್ಷವಾಗಿ ತರಾಟೆಗೆ ತೆಗೆದುಕೊಂಡರು. ಕೆಲವು ರಾಷ್ಟ್ರಗಳು ಉಗ್ರವಾದವನ್ನೇ ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುತ್ತಿವೆ. ಆದರೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಯೋತ್ಪಾದನೆ ವಿರುದ್ಧ ಹೋರಾಟಕ್ಕೆ ಬೆಂಬಲ ವ್ಯಕ್ತವಾಗಿದೆ ಎನ್ನುವ ಮೂಲಕ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ರಷ್ಯಾದ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್‌, ಚೀನ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಬಲ ಜತೆಗಿದೆ ಎಂದರು. ಇದೇ ವೇಳೆ ಭಯೋತ್ಪಾದನೆ ನಿಗ್ರಹಕ್ಕೆ ಸಂಬಂಧಿಸಿ ಪ್ರಧಾನಿ ಮೋದಿ ತನ್ನ 11 ಅಂಶಗಳ ಅಜೆಂಡಾವನ್ನು ಶೃಂಗದಲ್ಲಿ ಪ್ರಕಟಿಸಿದರು.

ಏಷ್ಯಾ ಆಳಲು ಹೊರಟಿದ್ದಾರೆ ಉಗ್ರರು: ಭಯೋತ್ಪಾದನೆ ನಿಗ್ರಹಕ್ಕೆ ಸಂಬಂಧಿಸಿ ಪ್ರಕಟಿಸಿದ ಅಂಶಗಳ ಬಗ್ಗೆ ವಿವರಿಸಿದ ಮೋದಿ, ‘ಲಷ್ಕರ್‌ ಎ-ತಯ್ಯಬಾ ಮತ್ತು ಜೈಷ್‌ ಎ-ಮೊಹಮ್ಮದ್‌’ ಉಗ್ರ ಸಂಘಟನೆಗಳು ಐಸಿಸ್‌ ಬೆಂಬಲಿತ ಸಂಘಟನೆ ಜತೆಗೂಡಿ ದಕ್ಷಿಣ ಏಷ್ಯಾವನ್ನೇ ಆಳಲು ಹೊರಟಿವೆ. ಅಲ್‌ ಕಾಯಿದಾ ಸಂಘಟನೆ ಮಧ್ಯ ಏಷ್ಯಾದಲ್ಲಿ ಕಾರ್ಯಾಚರಿಸುತ್ತಿದೆ. ಬೊಕೋ ಉಗ್ರರು ನೈಜೀರಿಯಾವನ್ನೇ ನಿಯಂತ್ರಿಸಲು ಮುಂದಾಗಿವೆ. ಇವರೆಲ್ಲರ ಉದ್ದೇಶ ಶಾಂತಿ ಕದಡುವುದೇ ಆಗಿದೆ’ ಎಂದಿದ್ದಾರೆ.

ಜಾಗತಿಕ ಹವಾಮಾನಕ್ಕೆ ಸ್ಪಂದಿಸಿ: ಜಾಗತಿಕ ಹವಾಮಾನ ಬದಲಾವಣೆಗೆ ಸ್ಪಂದಿಸಿ, ಪ್ಯಾರಿಸ್‌ ಒಪ್ಪಂದವನ್ನು ಗೌರವಿಸಬೇಕು ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಜಿ20 ಶೃಂಗದ ಭಾಗವಾಗಿ ಈ ಕುರಿತು ಪ್ರತಿಕ್ರಿಯಿಸಿರುವ ಮೋದಿ, ‘ಭಾರತ ಈ ವಿಚಾರದಲ್ಲಿ ನಿಲುವಿಗೆ ಬದ್ಧವಾಗಿದೆ. ಪ್ಯಾರಿಸ್‌ ಒಪ್ಪಂದದ ಪ್ರಕಾರ ದೇಶದಲ್ಲಿ ಕಡ್ಡಾಯವಾಗಿ ಹವಾಮಾನ ಬದಲಾವಣೆ ಬಗ್ಗೆ ಕ್ರಮ ಕೈಗೊಳ್ಳಲಿದೆ’ ಎಂದಿದ್ದಾರೆ. ಜಿ20 ಶೃಂಗದಲ್ಲಿ ಉಳಿದ ಬ್ರಿಕ್ಸ್‌ ರಾಷ್ಟ್ರಗಳಾದ ರಷ್ಯಾ, ಬ್ರೆಜಿಲ್‌ ಹಾಗೂ ದಕ್ಷಿಣ ಆಫ್ರಿಕಾ ದೇಶಗಳು ಪಾಲ್ಗೊಂಡಿದ್ದವು.

ಚೀನ ನಾಯಕತ್ವಕ್ಕೆ ಸಹಕಾರ -ನರೇಂದ್ರ ಮೋದಿ, ಭಾರತದ ಪ್ರಧಾನಿ
ಜಿನ್‌ಪಿಂಗ್‌ ಅವರ ನಾಯಕತ್ವದಲ್ಲಿರುವ ಬ್ರಿಕ್ಸ್‌ ನಲ್ಲಿ ನಮ್ಮ ನಡುವಿನ ಸಹಕಾರ ಮನೋಭಾವ ವೃದ್ಧಿಯಾಗಿದೆ. ಮುಂದೆ ಚೀನದ ನಾಯಕತ್ವದಲ್ಲಿ ನಡೆಯಲಿರುವ ಬ್ರಿಕ್ಸ್‌ ಸಮಾವೇಶಕ್ಕೆ ಭಾರತದ ಸಹಕಾರ ಮತ್ತು ಬೆಂಬಲವಿದೆ. ಏಷ್ಯಾ ರಾಷ್ಟ್ರಗಳು ಸೇರಿ ಇಡೀ ವಿಶ್ವಕ್ಕೇ ಪೆಡಂಭೂತವಾಗಿ ಕಾಡುತ್ತಿರುವ ಭಯೋತ್ಪಾದನೆ ನಿಗ್ರಹ ಹಾಗೂ ಜಾಗತಿಕ ಮಟ್ಟದ ಅರ್ಥವ್ಯವಸ್ಥೆಗೆ ಬ್ರಿಕ್ಸ್‌ ನಾಯಕತ್ವ ವಹಿಸಿಕೊಳ್ಳಬೇಕಿದೆ. ಭಯೋತ್ಪಾದಕರಿಗೆ ಆರ್ಥಿಕ ನೆರವನ್ನು ಎಲ್ಲಾ ರಾಷ್ಟ್ರಗಳೂ ವಿರೋಧಿಸಬೇಕಿದೆ. ಜಿ20 ರಾಷ್ಟ್ರಗಳೆಲ್ಲವೂ ಉಗ್ರವಾದದ ವಿರುದ್ಧ ಸಮರ ಸಾರಬೇಕಿದೆ.

ಭಾರತ ಪ್ರಗತಿಪಥದತ್ತ – ಕ್ಸಿ ಜಿನ್‌ಪಿಂಗ್‌,  ಚೀನ ಅಧ್ಯಕ್ಷ
‘ಮೋದಿ ಅವರ ನಾಯಕತ್ವದಲ್ಲಿ ಭಾರತ ಪ್ರಗತಿಯ ಪಥದಲ್ಲಿ ಸಾಗಿದೆ. ಭಯೋತ್ಪಾದನೆ ವಿಚಾರದಲ್ಲಿ ಭಾರತ-ಚೀನ ನಿಲುವು ಶ್ಲಾಘನೀಯ.  ಸೆಪ್ಟಂಬರ್‌ನಲ್ಲಿ ಚೀನದ ಕ್ಸಿಯಾಮೆನ್‌ನಲ್ಲಿ ನಡೆಯಲಿರುವ 9ನೇ ಬ್ರಿಕ್ಸ್‌ ಸಮ್ಮೇಳನಕ್ಕೆ ಭಾರತ ಸೇರಿ ಉಳಿದ ರಾಷ್ಟ್ರಗಳ ನಾಯಕರನ್ನು ಸ್ವಾಗತಿಸುವುದಾಗಿ ಹೇಳಿದ ಜಿನ್‌ಪಿಂಗ್‌, ಭಾರತ ಭಯೋತ್ಪಾದನೆಯ ವಿರುದ್ಧ ಬಲವಾದ ಧ್ವನಿಯೆತ್ತಿದೆ. ಇದಕ್ಕೆ ಬ್ರಿಕ್ಸ್‌ ಪೂರ್ಣ ಸಹಕಾರ ನೀಡಬೇಕಿದೆ’ ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಸಿಕ್ಕಿಂ ಗಡಿ ವಿವಾದದ ಬಗ್ಗೆ ಪರೋಕ್ಷವಾಗಿ ಮಾತನಾಡಿದ ಜಿನ್‌ಪಿಂಗ್‌, ‘ಪ್ರಾದೇಶಿಕ ಸಮಸ್ಯೆಗಳನ್ನು ಚೀನ ಶಾಂತಿಯಿಂದಲೇ ಬಗೆಹರಿಸಿಕೊಳ್ಳಲಿದೆ’ ಎಂದು ಹೇಳಿದರು.

ಟಾಪ್ ನ್ಯೂಸ್

1-raj

IPL 2025 ಮಾರ್ಚ್ 23 ರಿಂದ ಆರಂಭ: ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ

19-uv-fusion

UV Fusion: ನಮ್ಮಲ್ಲಿಯೂ ಕೊರತೆಗಳಿವೆ

Jaishankar

Trump ಅಧಿಕಾರ ಸ್ವೀಕಾರ ಸಮಾರಂಭದಲ್ಲಿ ಭಾರತ ಪ್ರತಿನಿಧಿಸಲಿರುವ ಜೈಶಂಕರ್

Elephant: ಆಹಾರ ಅರಸುತ್ತಾ ಹೊರಟ ಹೆಣ್ಣಾನೆ 70 ಅಡಿ ಆಳದ ಕಮರಿಗೆ ಬಿದ್ದು ಸಾ*ವು

Elephant: ಆಹಾರ ಅರಸುತ್ತಾ ಹೊರಟ ಹೆಣ್ಣಾನೆ 70 ಅಡಿ ಆಳದ ಕಮರಿಗೆ ಬಿದ್ದು ಸಾ*ವು

18-uv-fusion

Learning: ಪ್ರಯತ್ನ ಮತ್ತು ಪ್ರಮಾದ ಕಲಿಕೆಯ ಮೊದಲ ಮೆಟ್ಟಿಲು

1-deee

BJP ಗೆದ್ದರೆ ದೆಹಲಿಯ ಕೊಳೆಗೇರಿಗಳು ನೆಲಸಮ: ಅಮಿತ್ ಶಾ ವಿರುದ್ಧ ಕೇಜ್ರಿವಾಲ್ ವಾಗ್ದಾಳಿ

Jemimah’s maiden century: India women score record runs

INDWvsIREW: ಜೆಮಿಮಾ ಚೊಚ್ಚಲ ಶತಕ: ದಾಖಲೆಯ ರನ್‌ ಪೇರಿಸಿದ ಭಾರತ ವನಿತೆಯರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Los Angeles: ಹತೋಟಿಗೆ ಬಾರದ ಕಾಡ್ಗಿಚ್ಚು, ಸಾವಿರಾರು ಮನೆಗಳು ಆಹುತಿ, ಮೃತರ ಸಂಖ್ಯೆ 16ಕ್ಕೆ

Los Angeles: ಹತೋಟಿಗೆ ಬಾರದ ಕಾಡ್ಗಿಚ್ಚು, ಸಾವಿರಾರು ಮನೆಗಳು ಆಹುತಿ, ಮೃತರ ಸಂಖ್ಯೆ 16ಕ್ಕೆ

1-elon

Neuralink; ಮತ್ತೊಬ್ಬನ ಮೆದುಳಿಗೆ ಚಿಪ್‌ : ಏನಿದು ತಂತ್ರಜ್ಞಾನ?

1-bangle

Wildfires; ಲಾಸ್‌ ಏಂಜಲೀಸ್‌ ಬೆಂಕಿಗೆ 10000 ಕೋಟಿ ಬಂಗಲೆ ಭಸ್ಮ

joe-bidden

Donald Trump ಸೋಲಿಸುತ್ತಿದ್ದೆ, ಪಕ್ಷಕ್ಕಾಗಿ ಹಿಂದೆ ಸರಿದೆ: ಅಧ್ಯಕ್ಷ ಜೋ ಬೈಡೆನ್‌

1-bang

ಹವಾಮಾನ ಇಲಾಖೆಗೆ 150: ಕಾರ್ಯಕ್ರಮಕ್ಕೆ ಬರಲ್ಲ ಬಾಂಗ್ಲಾ

MUST WATCH

udayavani youtube

ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ

udayavani youtube

ಅಮೇರಿಕಾದಲ್ಲಿ ವೈಕುಂಠ ಏಕಾದಶಿ ಸಂಭ್ರಮ

udayavani youtube

ನಕ್ಸಲರ ಶರಣಾಗತಿಯಲ್ಲಿ ಸರಕಾರದ ನಡೆ ಸಂಶಯ ಮೂಡಿಸುವಂತಿದೆ: ಅಣ್ಣಾಮಲೈ |

udayavani youtube

ಹೇಗಿತ್ತು ಎಂ.ಜಿ.ಎಂ ಅಮೃತ ಮಹೋತ್ಸವ ಸಂಭ್ರಮ

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

ಹೊಸ ಸೇರ್ಪಡೆ

13

UV Fusion: ಬದಲಾವಣೆ ಜಗದ ನಿಯಮ

1-raj

IPL 2025 ಮಾರ್ಚ್ 23 ರಿಂದ ಆರಂಭ: ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ

12(1

UV Fusion: ನವ ವರುಷ ನವೋಲ್ಲಾಸ; ನಿರ್ಧಾರಗಳಿಗೆ ಬದ್ಧರಾಗಿರಿ

19-uv-fusion

UV Fusion: ನಮ್ಮಲ್ಲಿಯೂ ಕೊರತೆಗಳಿವೆ

Jaishankar

Trump ಅಧಿಕಾರ ಸ್ವೀಕಾರ ಸಮಾರಂಭದಲ್ಲಿ ಭಾರತ ಪ್ರತಿನಿಧಿಸಲಿರುವ ಜೈಶಂಕರ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.