ಮೋದಿಗೆ ನೀರು ಶುದ್ಧೀಕರಣ ಜೀಪ್ ಗಿಫ್ಟ್
Team Udayavani, Jan 5, 2018, 7:00 AM IST
ಜೆರುಸಲೇಂ: ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು 14ರಂದು ಭಾರತಕ್ಕೆ ಆಗಮಿಸಲಿದ್ದು, ನೀರು ಶುದ್ಧೀಕರಣ ವಾಹನವನ್ನು ಪ್ರಧಾನಿ ಮೋದಿಗೆ ಉಡುಗೊರೆ ನೀಡಲು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಕಳೆದ ವರ್ಷ ಜುಲೈನಲ್ಲಿ ಪ್ರಧಾನಿ ಮೋದಿ ಇಸ್ರೇಲ್‌ಗೆ ಪ್ರಯಾಣಿಸಿದ್ದಾಗ ನೆತನ್ಯಾಹು ಜತೆಗೆ ಇದೇ ಜೀಪ್‌ನಲ್ಲಿ ಮೆಡಿಟರೇನಿಯನ್ ಸಮುದ್ರದಲ್ಲಿ ಪ್ರಯಾಣಿಸಿದ್ದರು. ನೇತನ್ಯಾಹು 4 ದಿನಗಳ ಭಾರತ ಭೇಟಿಗೆ ಆಗಮಿಸಲಿದ್ದು, ಈಗಾಗಲೇ ಈ ಜೀಪ್ ಭಾರತಕ್ಕೆ ಹೊರಟಿದೆ. ಅವರು ಆಗಮಿಸುವ ವೇಳೆಗೆ ಇದು ಭಾರತಕ್ಕೆ ತಲುಪಿರಲಿದೆ. ಈ ಜೀಪ್‌ನ ಮಾರುಕಟ್ಟೆ ಬೆಲೆ ಸುಮಾರು 70 ಲಕ್ಷ ರೂ. ಆಗಿರಲಿದೆ. ಗಾಲ್ ಮೊಬೈಲ್ ಜೀಪ್ ಒಂದು ಸ್ವತಂತ್ರ, ಸಮಗ್ರ ನೀರು ಶುದ್ಧೀಕರಣ ವಾಹನವಾಗಿದೆ. ಇದು ಉತ್ತಮ ಗುಣಮಟ್ಟದ ನೀರನ್ನು ಶುದ್ಧೀಕರಿಸಬಲ್ಲದು. ನೈಸರ್ಗಿಕ ವಿಪತ್ತಿನ ವೇಳೆ ಇದು ಅತ್ಯಂತ ಉಪಯುಕ್ತ. ಪ್ರವಾಹ, ಭೂಕಂಪವಾದಾಗ ಕುಡಿಯುವ ನೀರಿನ ಕೊರತೆ ಎದುರಾದಾಗ ಈ ಜೀಪ್‌ನಿಂದ ನೀರು ಒದಗಿಸಬಹುದಾಗಿದೆ. ಅಷ್ಟೇ ಅಲ್ಲ, ಇದು ಸೇನೆಯ ಬಳಕೆಗೂ ಅನುಕೂಲವಾಗಿದೆ. ಒಂದು ದಿನಕ್ಕೆ ಇದು 20 ಸಾವಿರ ಲೀ. ಸಮುದ್ರ ನೀರನ್ನು ಶುದ್ಧೀಕರಿಸಬಲ್ಲದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bantwal: ಕಾಂಟ್ರಾಕ್ಟ್ ಕ್ಯಾರೇಜ್ ಬಸ್ ಪ್ರಯಾಣ ದರ ಏರಿಕೆ
Special Train ಮಕರ ಸಂಕ್ರಾಂತಿ: ಇಂದು ಬೆಂಗಳೂರಿನಿಂದ ಕರಾವಳಿಗೆ ವಿಶೇಷ ರೈಲು
Daily Horoscope: ಅನಿರೀಕ್ಷಿತ ಧನಾಗಮ, ಅವಿವಾಹಿತರಿಗೆ ಯೋಗ್ಯ ಸಂಗಾತಿ ಲಭ್ಯ
ಕಾಂಗ್ರೆಸ್‌ಗೆ ಬಿಸಿ ಊಟ: ಪರಂಗೆ ಹೈ ಬುಲಾವ್?ವಿವಾದ ಬೆನ್ನಲ್ಲೇ ದಿಲ್ಲಿಗೆ ಕರೆದ ಹೈಕಮಾಂಡ್
California Wildfire: “ಮನೆಯ ಅಂಗಳದಲ್ಲೇ ಬೆಂಕಿ ಕುಣಿದಂತಿದೆ’
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.