ಶಾಶ್ವತವಾಗಿ ನಿಂತ ಮೊನಾರ್ಕ್ ವಿಮಾನಗಳ ಹಾರಾಟ
Team Udayavani, Oct 3, 2017, 6:30 AM IST
ಲಂಡನ್: ಬ್ರಿಟನ್‌ನ ಪ್ರಮುಖ ವಿಮಾನಯಾನ ಸಂಸ್ಥೆ, ಮೊನಾರ್ಕ್ ಏರ್‌ಲೈನ್ಸ್ ಸೋಮವಾರದಿಂದ ತನ್ನ ಕಾರ್ಯಾ ಚರಣೆ ಸ್ಥಗಿತಗೊಳಿಸಿದೆ. ಈ ಮೂಲಕ ಏರ್‌ಲೈನ್‌ನ ಭವಿಷ್ಯದ ಎಲ್ಲ ವಿಮಾನ ಯಾನಗಳೂ ರದ್ದಾಗಿದ್ದು, 3 ಲಕ್ಷಕ್ಕೂ ಅಧಿಕ ಪ್ರಯಾಣಿಕರು ಆತಂಕಕ್ಕೀಡಾಗಿದ್ದಾರೆ.
ಇದರೊಂದಿಗೆ ರಜೆ ಕಳೆಯಲೆಂದು ವಿವಿಧ ದೇಶಗಳಿಗೆ ತೆರಳಿರುವ 1.10 ಲಕ್ಷ ಪ್ರಯಾಣಿಕರನ್ನು ದೇಶಕ್ಕೆ ಮರಳಿ ಕರೆತರಲು 30 ವಿಮಾನಗಳನ್ನು ನಿಯೋಜಿಸುವಂತೆ ಅಲ್ಲಿನ ನಾಗರಿಕ ವಿಮಾನ ಯಾನ ಪ್ರಾಧಿಕಾರಕ್ಕೆ (ಸಿಎಎ) ಬ್ರಿಟನ್ ಸರಕಾರ ಸೂಚಿಸಿದೆ. ಈ ನಿರ್ಧಾರಕ್ಕೆ ಪ್ರಯಾಣಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾರಣ, ಈಗಾಗಲೇ 3 ಲಕ್ಷಕ್ಕೂ ಅಧಿಕ ಪ್ರಯಾಣಿಕರು ಮೊನಾರ್ಕ್ ಏರ್‌ಲೈನ್ಸ್ ಮೂಲಕ ವಿವಿಧ ದೇಶ, ಪ್ರದೇಶಗಳಿಗೆ ತೆರಳಲು ಮುಂಗಡವಾಗಿ ಟಿಕೆಟ್ ಕಾಯ್ದಿರಿಸಿದ್ದರು. ಸಂಸ್ಥೆಯನ್ನು ಮುಚ್ಚುವ ಈ ನಿರ್ಧಾರದಿಂದಾಗಿ ಪ್ರಸ್ತುತ ಈ ಎಲ್ಲ ಪ್ರಯಾಣಿಕರ ಬುಕಿಂಗ್ ರದ್ದಾಗಲಿದೆ.
2,100 ನೌಕರರಿಗೆ ಉದ್ಯೋಗ ನೀಡಿರುವ ಮೊನಾರ್ಕ್ ಏರ್‌ಲೈನ್ಸ್, ಕೆಲ ವರ್ಷಗಳಿಂದ ಉಂಟಾಗಿರುವ ತೀವ್ರ ಸ್ವರೂಪದ ಸ್ಪರ್ಧೆಯಿಂದಾಗಿ ಕಳೆದ ಆರ್ಥಿಕ ವರ್ಷದಲ್ಲಿ 25 ಸಾವಿರ ಕೋಟಿ ರೂ. ನಷ್ಟ ಅನುಭವಿಸಿತ್ತು ಎನ್ನಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sri Lanka Election Result:ಸಂಸತ್ ಚುನಾವಣೆ-ಅಧ್ಯಕ್ಷ ಅನುರಾ ದಿಸ್ಸಾನಾಯಕೆ ಪಕ್ಷ ಜಯಭೇರಿ
Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್ ರಾಷ್ಟ್ರ?
Marriage: ಕ್ರಿಸ್ಮಸ್‌ಗೆ ಅಮೆಜಾನ್ ಸಿಇಒ ಅದ್ಧೂರಿ ವಿವಾಹ?
Washington: ಅಮೆರಿಕ ಗುಪ್ತಚರ ಸಂಸ್ಥೆಗೆ ತುಳಸಿ ಗಬಾರ್ಡ್ ಮುಖ್ಯಸ್ಥೆ
America: ಬೋಯಿಂಗ್ ಸಂಸ್ಥೆಯ 17,000 ಉದ್ಯೋಗಿಗಳು ಶೀಘ್ರವೇ ವಜಾ
MUST WATCH
ಹೊಸ ಸೇರ್ಪಡೆ
Mangaluru: ತೆರೆದ ತೋಡಿನಲ್ಲಿ ಕೊಳಚೆ ನೀರು ಹರಿಯುವುದು ನಿಂತಿಲ್ಲ
Karkala: ಅಣ್ಣನ ತಿಥಿಗೆ ಬಂದಿದ್ದ ತಂಗಿ ವಿದ್ಯುತ್ ಆಘಾತದಿಂದ ಮೃ*ತ್ಯು
Mangaluru: ಪಂಪ್‌ವೆಲ್-ಪಡೀಲ್ ನಡುವಿನ ಚತುಷ್ಪಥ ಕಾಮಗಾರಿ 3 ವರ್ಷ ಕಳೆದರೂ ಅಪೂರ್ಣ
Thirthahalli: ಶಾಸಕ ಸ್ಥಾನವನ್ನು ಗಿರವಿ ಇಟ್ಟರಾ ಆರಗ ಜ್ಞಾನೇಂದ್ರ ?
Kundapura: ಅಕಾಲಿಕ ಮಳೆ; ಭತ್ತ ಕಟಾವಿಗೆ ಅಡ್ಡಿ; ಬೆಳೆ ನಾಶದ ಭೀತಿಯಲ್ಲಿ ರೈತರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.