ಲಂಡನ್‌ನಲ್ಲಿ ಭಾರತೀಯರ ಮನೆಗಳೇ ಹೆಚ್ಚು! ಬ್ಯಾರಾಟ್ ಲಂಡನ್‌ನ ಅಧ್ಯಯನದಲ್ಲಿ ಉಲ್ಲೇಖ
ವಸತಿಗೆ ಹೆಚ್ಚಿನ ಪ್ರಾಧಾನ್ಯತೆ ನೀಡುವುದೇ ಇದಕ್ಕೆ ಕಾರಣ; ವಲಸಿಗರ ಸಂಖ್ಯೆ ಹೆಚ್ಚಳವೂ ಕಾರಣ
Team Udayavani, Sep 5, 2022, 7:35 AM IST
ಲಂಡನ್: ಲಂಡನ್ ಅಲ್ಲಿ ಅತಿ ಹೆಚ್ಚು ಪ್ರಮಾಣದಲ್ಲಿ ಭಾರತೀಯರಿದ್ದಾರೆ. ನಗರದಲ್ಲಿರುವ ಮನೆಗಳಲ್ಲಿ ಭಾರತೀಯರದ್ದೇ ಅತಿ ಹೆಚ್ಚು ಮನೆಗಳಿವೆ ಎಂದು ಲಂಡನ್‌ನ ಬ್ಯಾರಾಟ್ ಲಂಡನ್ ಸಂಸ್ಥೆ ಹೇಳಿದೆ.
“ಭಾರತೀಯರು ಲಂಡನ್‌ನಲ್ಲಿ ಮನೆಗಳ ಮೇಲೆ ಹೂಡಿಕೆ ಮಾಡುವುದಕ್ಕೆ ಮುಂಚೂಣಿಯಲ್ಲಿದ್ದಾರೆ. ಮನೆಗೆಂದೇ 2.60 ಕೋಟಿ ರೂ.ನಿಂದ 4.12 ಕೋಟಿ ರೂ.ವರೆಗೂ ಖರ್ಚು ಮಾಡುವುದಕ್ಕೆ ಸಿದ್ಧರಿದ್ದಾರೆ. ಬ್ರಿಟನ್ ರಾಜಧಾನಿಯಲ್ಲಿ ಬ್ರಿಟನ್ ನಾಗರಿಕರ ಮನೆಗಳಿಗಿಂತ ಹೆಚ್ಚು ಮನೆಗಳು ಭಾರತೀಯರದ್ದೇ ಆಗಿವೆ’ ಎಂದು ಸಂಸ್ಥೆ ಹೇಳಿದೆ.
ಬೇರೆ ಎಲ್ಲರೂ ಲಂಡನ್ ನಗರದಿಂದ ಹೊರಭಾಗದಲ್ಲಿ ಮನೆ ಖರೀದಿಸಿ ಅಲ್ಲಿ ವಾಸ ಹೂಡುತ್ತಿದ್ದರೆ, ಭಾರತೀಯರು ಮಾತ್ರ ಲಂಡನ್ ಅನ್ನೇ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ.
ಕಾರಣವೇನು?
ಭಾರತೀಯರು ಬೇರೆ ಯಾವುದೇ ಕ್ಷೇತ್ರಕ್ಕಿಂತ ಅತಿ ಹೆಚ್ಚು ಪ್ರಾಮುಖ್ಯತೆಯನ್ನು ವಸತಿಗೆ ಕೊಡುತ್ತಿದ್ದಾರೆ ಎನ್ನುವುದು ಸಂಸ್ಥೆಯ ವರದಿ. ಅದಕ್ಕೆ ಕಾರಣ ಅಲ್ಲಿ ಆ ಕ್ಷೇತ್ರಕ್ಕಿರುವ ಬೆಲೆ. ವಿಶ್ವದ ಎಲ್ಲ ಮೂಲೆಗಳಿಂದಲೂ ಜನರು ಲಂಡನ್‌ಗೆ ಬರುತ್ತಾರೆ. ಹಾಗಾಗಿ ಭಾರತೀಯರು ಅತಿ ಹೆಚ್ಚು ಮನೆಗಳನ್ನು ಖರೀದಿಸಿ ಅದನ್ನು ಬಾಡಿಗೆ ಕೊಡುವ ಅಭ್ಯಾಸ ಮಾಡಿಕೊಂಡಿದ್ದಾರೆ. ಮುಂದೊಂದು ದಿನ ಮನೆಯನ್ನು ಮಾರಬೇಕೆಂದರೂ ಹೆಚ್ಚಿನ ಹಣವೇ ಅವರಿಗೆ ಹರಿದುಬರುತ್ತದೆ ಎಂದು ಸಂಸ್ಥೆ ಹೇಳಿದೆ.
ವಲಸಿಗರ ಸಂಖ್ಯೆಯೂ ಏರಿಕೆ:
ಅದೇ ರೀತಿ ಭಾರತದಿಂದ ಲಂಡನ್‌ಗೆ ಬಂದು ನೆಲೆಸುತ್ತಿರುವವ ಸಂಖ್ಯೆಯಲ್ಲೂ ಭಾರೀ ಏರಿಕೆ ಕಂಡುಬರುತ್ತಿದೆ. ಲಂಡನ್ ಕಾಲೇಜುಗಳಲ್ಲಿ ವಿದ್ಯಾಭ್ಯಾಸ ಮಾಡಲು ಬರುವ ಭಾರತೀಯ ವಿದ್ಯಾರ್ಥಿಗಳ ಸಂಖ್ಯೆ ಕಳೆದ ಒಂದು ವರ್ಷದಲ್ಲಿ ಬರೋಬ್ಬರಿ ಶೇ.128 ಏರಿಕೆಯಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Maulana Masood: 26/11 ದಾಳಿಯ ಮಾಸ್ಟರ್ ಮೈಂಡ್: ಭಯೋ*ತ್ಪಾದಕ ಮಸೂದ್ ಗೆ ಹೃದಯಾಘಾತ
Kazakhstan: ವಿಮಾನ ದುರಂತ ಸಂದರ್ಭದ ಕೊನೆಯ ಕ್ಷಣದ ಭಯಾನಕ ವಿಡಿಯೋ ವೈರಲ್…
ಬಾಹ್ಯಾಕಾಶದಲ್ಲಿ ಕ್ರಿಸ್ಮಸ್ ಆಚರಿಸಿದ ಸುನೀತಾ ವಿಲಿಯಮ್ಸ್
Kazakhstan: ಅಜೆರ್ಬೈಜಾನ್ ಏರ್ ಲೈನ್ಸ್ ಪತನ, 25ಕ್ಕೂ ಅಧಿಕ ಪ್ರಯಾಣಿಕರ ಮೃತ್ಯು?
Afghanistan: ತಾಲಿಬಾನ್ ನೆಲೆಗಳ ಮೇಲೆ ಪಾಕಿಸ್ತಾನ ವೈಮಾನಿಕ ದಾಳಿ? 25ಕ್ಕೂ ಅಧಿಕ ಸಾ*ವು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.