ಹರ್ಲೆ ಡೆವಿಡ್‌ಸನ್‌ಗೆ ಹೆಚ್ಚು ತೆರಿಗೆ: ಟ್ರಂಪ್ ಕಿಡಿ
Team Udayavani, Feb 15, 2018, 10:05 AM IST
ವಾಷಿಂಗ್ಟನ್: ಭಾರತಕ್ಕೆ ಅಮೆರಿಕ ಸಾವಿರಾರು ಹರ್ಲೆ ಡೆವಿಡ್‌ಸನ್ ಬೈಕ್‌ಗಳನ್ನು ರಫ್ತು ಮಾಡುತ್ತಿದ್ದರೂ ಭಾರತ ಭಾರೀ ಮೊತ್ತದ ಆಮದು ತೆರಿಗೆಯನ್ನು ವಿಧಿಸುತ್ತಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಕ್ಷೇಪಿಸಿದ್ದಾರೆ.
ಉಕ್ಕು ಉದ್ದಿಮೆ ಬಗ್ಗೆ ಅಮೆರಿಕದ ಸಂಸತ್ತಿನಲ್ಲಿ ಮಾತನಾಡುತ್ತಾ ಈ ವಿಷಯ ಉಲ್ಲೇಖೀಸಿದ ಟ್ರಂಪ್, ಇತ್ತೀಚೆಗಷ್ಟೇ ಶೇ. 75ರಿಂದ ಶೇ. 50 ತೆರಿಗೆಯನ್ನು ಇಳಿಸಿರುವುದು ಸಾಲದು. ಕಳೆದ ವಾರ ಭಾರತದ ಪ್ರಧಾನಿ ನರೇಂದ್ರ ಮೋದಿ ಜತೆಗೆ ನಾನು ಮಾತುಕತೆ ನಡೆಸಿದಾಗ, ತೆರಿಗೆಯನ್ನು ಶೇ. 25ರಷ್ಟು ಇಳಿಕೆ ಮಾಡಲು ಅವರು ಒಪ್ಪಿದ್ದಾರೆ.
ಅಮೆರಿಕ ಮೋಟಾರ್‌ಸೈಕಲ್‌ಗಳ ಆಮದು ಮೇಲೆ ಯಾವುದೇ ತೆರಿಗೆ ವಿಧಿಸುವುದಿಲ್ಲ ಎಂದಿದ್ದಾರೆ. ಇದೇ ರೀತಿ ನಾವೂ ಸಮಾನ ತೆರಿಗೆ ನೀತಿಯನ್ನು ಹೊಂದಬೇಕು.
ಇದರಲ್ಲಿ ಭಾರತವನ್ನು ನಾನು ದೂರುತ್ತಿಲ್ಲ. ಬದಲಿಗೆ ನಾವು ಸಮಾನ ತೆರಿಗೆ ನೀತಿಯನ್ನು ಅಳವಡಿಸಿಕೊಳ್ಳಬೇಕು ಎಂದು ಅವರು ಅಮೆರಿಕ ಸಂಸತ್‌ಗೆ ಸಂಸತ್‌ನ ಉಕ್ಕಿನ ವಿಭಾಗಕ್ಕೆ ಸಂಬಂಧಿಸಿದ ಸಭೆಯಲ್ಲಿ ಅಧ್ಯಕ್ಷ ಟ್ರಂಪ್ ಈ ಮಾಹಿತಿ ನೀಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Trump warns; ಹಮಾಸ್ ಒತ್ತೆಯಾಳುಗಳನ್ನು ಬಿಡುಗಡೆ ಮಾಡದಿದ್ದರೆ ನರಕ…
Canada ಪ್ರಧಾನಿ ರೇಸ್ನಲ್ಲಿ ಭಾರತ ಮೂಲದ ಅನಿತಾ?
Pakistan; ಖರ್ಚು ಉಳಿಸಲು 6 ಸೋದರರಿಂದ 6 ಮಂದಿ ಸೋದರಿಯರ ವಿವಾಹ!
Saudi Arabia: ಮೆಕ್ಕಾ-ಮದೀನಾ ಸೇರಿ ಹಲವೆಡೆ ದಾಖಲೆಯ ಧಾರಾಕಾರ ಮಳೆ; ಜನಜೀವನ ಅಸ್ತವ್ಯಸ್ತ
Earthquakes: ಎವರೆಸ್ಟ್ ತಪ್ಪಲಲ್ಲಿ ಪ್ರಬಲ ಭೂಕಂಪ; ಮೃತರ ಸಂಖ್ಯೆ 126ಕ್ಕೆ ಏರಿಕೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.