ಅಮೆರಿಕ ಕಾಲ್‌ಸೆಂಟರ್ ಕೇಸ್: 21 ಭಾರತೀಯರಿಗೆ ಜೈಲು
Team Udayavani, Jul 22, 2018, 6:00 AM IST
ನ್ಯೂಯಾರ್ಕ್: ಅಮೆರಿಕದಲ್ಲಿ ನಡೆದ ಬಹುಕೋಟಿ ಕಾಲ್‌ಸೆಂಟರ್ ಹಗರಣವೊಂದರಲ್ಲಿ 21 ಅನಿವಾಸಿ ಭಾರತೀಯರಿಗೆ ಜೈಲು ಶಿಕ್ಷೆ ವಿಧಿಸಲಾಗಿದೆ.
ಭಾರತೀಯ ಮೂಲದ ಕಾಲ್‌ಸೆಂಟರ್‌ನಿಂದ ಸಹಸ್ರಾರು ಅಮೆರಿಕದ ನಾಗರಿಕರಿಗೆ ಕೋಟ್ಯಂತರ ರೂ. ವಂಚಿಸುವ ಪ್ರಕರಣ ಇದಾಗಿದ್ದು, ಇಲ್ಲಿನ ನ್ಯಾಯಾಲಯ ದೋಷಿಗಳಿಗೆ ಕನಿಷ್ಠ 4 ರಿಂದ ಗರಿಷ್ಠ 20 ವರ್ಷ ಜೈಲು ಶಿಕ್ಷೆ ವಿಧಿಸಿದೆೆ ಎಂದು ನ್ಯಾಯಾಂಗ ವಿಭಾಗ ತಿಳಿಸಿದೆ.
ಈ ಪೈಕಿ ಹಲವರನ್ನು ಶಿಕ್ಷೆ ಪೂರ್ಣಗೊಂಡ ಬಳಿಕ ಭಾರತಕ್ಕೆ ಗಡೀಪಾರು ಮಾಡಲಾಗುತ್ತದೆ. ಅಹ್ಮದಾಬಾದ್‌ನ ಕಾಲ್ ಸೆಂಟರ್ ಒಂದರ ನಕಲಿ ಟೆಲಿಫೋನ್‌ಗಳಿಂದ ಅಮೆರಿಕ ಹಿರಿಯ ನಾಗರಿಕರು, ವಲಸಿಗರನ್ನು ವಂಚಿಸಲಾಗಿತ್ತು. ಇಂಟರ್‌ನಲ್ ರೆವಿನ್ಯೂ ಸರ್ವೀಸ್, ಅಮೆರಿಕ ಸಿಟಿಜನ್‌ಶಿಪ್ ಹಾಗೂ ಇಮಿಗ್ರೇಷನ್ ಸರ್ವಿಸ್ ಹೆಸರಿನಲ್ಲಿ ಕರೆ ಮಾಡಿ ನಾಗರಿಕರನ್ನು ಬೆದರಿಸುತ್ತಿದ್ದರು. ಹಣ ಕೊಡದಿದ್ದರೆ ಬಂಧಿಸುವುದಾಗಿ, ದಂಡ ವಿಧಿಸುವುದಾಗಿ ಹಾಗೂ ಗಡೀಪಾರು ಮಾಡುವುದಾಗಿ ಬೆದರಿಕೆ ಒಡ್ಡುತ್ತಿದ್ದರು. ಹಣವನ್ನು ಸ್ಟೋರ್ಡ್ ವ್ಯಾಲ್ಯೂ ಕಾರ್ಡ್‌ಗಳು ಅಥವಾ ವೈರ್ ಟ್ರಾನ್ಸ್‌ಫರ್ ಮೂಲಕ ಪಡೆದಿದ್ದರು. ಈ ಕುರಿತು ಭಾರತೀಯ ಮೂಲದ 32 ಮಂದಿ ಹಾಗೂ 5 ಕಾಲ್‌ಸೆಂಟರ್ ವಿರುದ್ಧ ಸಾಮೂಹಿಕ ಮೋಸ ಹಾಗೂ ಅಕ್ರಮ ಹಣ ವರ್ಗಾವಣೆ ಪ್ರಕರಣ ದಾಖಲಿಸಲಾಗಿತ್ತು. ಇದಕ್ಕೂ ಮುನ್ನ ಇಂತಹದ್ದೇ ಪ್ರಕರಣದಲ್ಲಿ ಮೂವರು ಭಾರತೀಯರಿಗೆ ಜೈಲು ಶಿಕ್ಷೆ ವಿಧಿಸಲಾಗಿತ್ತು.
ಕನಿಷ್ಠ 4ರಿಂದ ಗರಿಷ್ಠ 20 ವರ್ಷ ಜೈಲು ಶಿಕ್ಷೆ
ಅಮೆರಿಕದ ಸಹಸ್ರಾರು ನಾಗರಿಕರಿಗೆ ವಂಚಿಸಿದ ಆರೋಪ
ಶಿಕ್ಷೆ ಪೂರ್ಣಗೊಂಡ ಬಳಿಕ
ಭಾರತಕ್ಕೆ ಗಡೀಪಾರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Adani; ಆಸೀಸ್ ಕಲ್ಲಿದ್ದಲು ಗಣಿಯಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಆರೋಪ
London: ಶಂಕಾಸ್ಪದ ಲಗೇಜ್ ಪತ್ತೆ: ಲಂಡನ್ ಏರ್‌ಪೋರ್ಟ್ ಖಾಲಿ ಮಾಡಿಸಿ ತನಿಖೆ!
ಆಕಸ್ಮಿಕವಾಗಿ ಹಾರಿದ ಗುಂಡು: ಬರ್ತ್ ಡೇ ದಿನವೇ ಹಾರಿ ಹೋಯ್ತು ಭಾರತೀಯ ಮೂಲದ ವಿದ್ಯಾರ್ಥಿ ಜೀವ
Canada-India Row: ನಿಜ್ಜರ್ ಹತ್ಯೆ ಹಿಂದೆ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ
Khalistan; ಕೆನಡಾ ಹಿಂದೂಗಳ ಮೇಲೆ ದಾಳಿ: ಉಗ್ರರ ಹೊಸ ಬೆದರಿಕೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.