ಶವಾಗಾರಗಳಾಗಿ ಬದಲಾದ ಕಂಟೈನರ್‌ಗಳು!
ಹಾಂಕಾಂಗ್‌ನಲ್ಲಿ ಹೆಚ್ಚಾಗಿರುವ ಒಮಿಕ್ರಾನ್ ಸಾವಿನ ಸಂಖ್ಯೆ
Team Udayavani, Mar 17, 2022, 7:25 AM IST
ಹಾಂಕಾಂಗ್: ಚೀನದ ಆಡಳಿತವಿರುವ ಹಾಂಕಾಂಗ್ ಪಟ್ಟಣದಲ್ಲಿ ಕೊರೊನಾ ರೂಪಾಂತರಿ ಒಮಿಕ್ರಾನ್‌ನ ಹಾವಳಿ ತೀವ್ರವಾಗಿದ್ದು, ಕಳೆದ 3 ತಿಂಗಳಿನಲ್ಲಿ 4,600 ಸಾವು ಸಂಭವಿಸಿದೆ. ಅಲ್ಲಿನ ಶವಾಗಾರಗಳೆಲ್ಲವೂ ಭರ್ತಿಯಾಗಿದ್ದು, ಒಮಿಕ್ರಾನ್‌ನಿಂದಾಗಿ ಇತ್ತೀಚೆಗೆ ಅಸುನೀಗುತ್ತಿರುವವರನ್ನು ವೈದ್ಯಕೀಯ ಸಿಬ್ಬಂದಿಯು ಹಡಗುಗಳಲ್ಲಿ ಸರಕು ಸಾಗಣೆಗಾಗಿ ಬಳಸಲಾಗುವ ಕಂಟೈನರ್‌ಗಳಲ್ಲಿ ಇರಿಸಲಾರಂಭಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಸುರಕ್ಷಾ ಕವಚಗಳನ್ನು (ಪಿಪಿಇ ಕಿಟ್) ಧರಿಸಿರುವ ವೈದ್ಯಕೀಯ ಸಿಬ್ಬಂದಿಯು, ಶವಗಳನ್ನು ಕೊಂಡೊಯ್ದು ಕಂಟೈನರ್‌ಗಳಲ್ಲಿ ಇರಿಸಿ ಬರುತ್ತಿದ್ದಾರೆ. ಫುಶಾನ್ ಶವಾಗಾರದ ಮುಂದೆಯೂ ಒಂದು ಕಂಟೈನರ್ ಇರಿಸಲಾಗಿದ್ದು ಅಲ್ಲಿ ಶವಗಳನ್ನು ಕಪ್ಪು ಟಾರ್ಪಾಲಿನ್‌ನಲ್ಲಿ ಸುತ್ತಿ ಹೋಗಿ ಸಾಲಾಗಿ ಇಟ್ಟುಬರಲಾಗುತ್ತಿದೆ. ಒಮಿಕ್ರಾನ್‌ನಿಂದ ಅಸುನೀಗಿರುವವರಲ್ಲಿ ಲಸಿಕೆ ಪಡೆಯದ ವಯೋವೃದ್ಧರೇ ಸೇರಿದ್ದಾರೆ ಎಂದು ಹೇಳಲಾಗಿದೆ.
ಹಾಂಕಾಂಗ್‌ನಲ್ಲೀಗ ಸೋಂಕಿತರ ಸಂಖ್ಯೆ 10 ಲಕ್ಷ ದಾಟಿದೆ. ಸಾವಿನ ಸಂಖ್ಯೆಯೂ ಅಧಿಕವಾಗಿದ್ದು, ಶವಸಂಸ್ಕಾರಕ್ಕೆ ಬೇಕಾದ ಕಫಿನ್‌ಗಳ ಕೊರತೆ ಕಂಡುಬಂದಿದೆ ಎಂದು ಅಂತ್ಯಸಂಸ್ಕಾರ ವಿಧಿವಿಧಾನಗಳನ್ನು ನಡೆಸಿಕೊಂಡುವ ಸಂಸ್ಥೆಯೊಂದು ಹೇಳಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.