Morocco Earthquake: ಮೃತರ ಸಂಖ್ಯೆ 2,900 ಕ್ಕೆ ಏರಿಕೆ, ಮುಂದುವರೆದ ರಕ್ಷಣಾ ಕಾರ್ಯಾಚರಣೆ
2,500 ಮೀರಿದ ಗಾಯಾಳುಗಳ ಸಂಖ್ಯೆ, ಮೂರು ದಿನ ಶೋಕಾಚರಣೆ
Team Udayavani, Sep 12, 2023, 1:03 PM IST
ರಬಾತ್: ಕಳೆದ ಶುಕ್ರವಾರ (ಸೆ. 8) ಮೊರಾಕೊದ ಮರ್ರಾಕೇಶ್‌ನಲ್ಲಿ ಸಂಭವಿಸಿದ ಭೂಕಂಪದಿಂದ ಸಾವನ್ನಪ್ಪಿದವರ ಸಂಖ್ಯೆ 2,900ಕ್ಕೆ ಏರಿಕೆಯಾಗಿದ್ದು ಜೊತೆಗೆ ಗಾಯಾಳುಗಳ ಸಂಖ್ಯೆಯೂ 2,500 ದಾಟಿದೆ ಎಂದು ಸುದ್ದಿ ಸಂಸ್ಥೆ ಅಲ್ ಜಜೀರಾ ವರದಿ ಮಾಡಿದೆ.
ಕಳೆದ ಶುಕ್ರವಾರ ಮೊರಾಕೊದ ಮರ್ರಾಕೇಶ್‌ನಲ್ಲಿ 6.8 ತೀವ್ರತೆಯ ಭೂಕಂಪ ಸಂಭವಿಸಿದೆ. ಭೂಕಂಪದ ಕೇಂದ್ರಬಿಂದುವು ನೈಋತ್ಯ ಪ್ರದೇಶದಲ್ಲಿ ಮರ್ರಾಕೇಶ್‌ನಿಂದ 72 ಕಿಲೋಮೀಟರ್ ದೂರದಲ್ಲಿದೆ ಎಂದು ಹೇಳಲಾಗಿದೆ.
ಅಟಲ್ ಪರ್ವತಗಳಲ್ಲಿ ಈ ಭೂಕಂಪಗಳು ಸಂಭವಿಸಿದ್ದು ಪ್ರದೇಶದಲ್ಲಿದ್ದ ಕಟ್ಟಡಗಳು ನೆಲಸಮಗೊಂಡಿದೆ ಎಂದು ವರದಿಯಾಗಿದೆ. ರಕ್ಷಣಾ ತಂಡ ಕಾರ್ಯಾಚರಣೆ ನಡೆಸುತ್ತಿದ್ದು ಭೂಕಂಪದ ಸಾವಿನ ಸಂಖ್ಯೆ 2,900 ಮೀರಿದೆ. ಗಾಯಾಳುಗಳ ಸಂಖ್ಯೆಯಲ್ಲಿಯೂ ಏರಿಕೆಯಾಗಿದೆ ಎಂದು ಹೇಳಲಾಗಿದೆ.
ಭೂಕಂಪ ಪ್ರದೇಶದಲ್ಲಿ ಪರಿಹಾರ ಕಾರ್ಯವನ್ನು ಚುರುಕುಗೊಳಿಸಲಾಗಿದೆ. ಬದುಕುಳಿದವರನ್ನು ಹುಡುಕಲು ಇನ್ನೂ ರಕ್ಷಣಾ ಕಾರ್ಯಾಚರಣೆಗಳು ನಡೆಯುತ್ತಿವೆ. ರಕ್ಷಣಾ ಕಾರ್ಯಕ್ಕೆ ಸ್ಪೇನ್, ಯುನೈಟೆಡ್ ಕಿಂಗ್‌ಡಮ್ ಮತ್ತು ಕತಾರ್‌ನ ತಂಡಗಳು ಪರಿಹಾರ ಕಾರ್ಯದಲ್ಲಿ ಸೇರಿಕೊಂಡಿವೆ ಎನ್ನಲಾಗಿದೆ.
ಮೂರು ದಿನಗಳ ಶೋಕಾಚರಣೆ
ಮೊರಾಕೊದಲ್ಲಿ ಸಂಭವಿಸಿದ ಭೂಕಂಪದಿಂದಾಗಿ, ಮಾರಾಕೇಶ್‌ನಿಂದ 60 ಕಿಲೋಮೀಟರ್ ದೂರದಲ್ಲಿರುವ ಪರ್ವತ ಹಳ್ಳಿಯ ಪ್ರತಿಯೊಂದು ಕಟ್ಟಡವೂ ನಾಶವಾಗಿದೆ. ಕಳೆದ ಶುಕ್ರವಾರದಿಂದ ರಕ್ಷಣಾ ತಂಡಗಳು ಹಗಲಿರುಳು ಶ್ರಮಿಸುತ್ತಿವೆ ಎನ್ನಲಾಗಿದೆ.
ಈ ಘಟನೆಯ ನಂತರ, ಮೊರೊಕೊ ಅಧಿಕಾರಿಗಳು ಮೂರು ದಿನಗಳ ರಾಷ್ಟ್ರೀಯ ಶೋಕಾಚರಣೆಯನ್ನು ಘೋಷಿಸಿದ್ದಾರೆ. ಮೊರಾಕೊದ ರಾಜ ಮೊಹಮ್ಮದ್ VI ಅವರು ವಿಶೇಷ ಶೋಧ ಮತ್ತು ಪಾರುಗಾಣಿಕಾ ತಂಡಗಳನ್ನು ಮತ್ತು ಶಸ್ತ್ರಚಿಕಿತ್ಸಾ ಕ್ಷೇತ್ರ ಆಸ್ಪತ್ರೆಯನ್ನು ನಿಯೋಜಿಸಲು ಸಶಸ್ತ್ರ ಪಡೆಗಳಿಗೆ ನಿರ್ದೇಶನ ನೀಡಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: Snake: ತುಂಗಾ ನದಿಯಲ್ಲಿ ಹೆಬ್ಬಾವು ಪತ್ತೆ…! ಜನರಲ್ಲಿ ಆತಂಕ… ಅರಣ್ಯ ಅಧಿಕಾರಿಗಳು ದೌಡು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.