Moscow: ರಷ್ಯಾ ಮೇಲೆ ಉಕ್ರೇನ್ ಭಾರೀ ಡ್ರೋನ್ ದಾಳಿ!
ಎರಡೂವರೆ ವರ್ಷಗಳಲ್ಲಿ ನಡೆದ ಅತಿದೊಡ್ಡ ದಾಳಿ
Team Udayavani, Nov 11, 2024, 7:03 AM IST
ಮಾಸ್ಕೋ: ಉಕ್ರೇನ್ ಮತ್ತು ರಷ್ಯಾ ರವಿವಾರ ಮತ್ತೊಂದು ಭೀಕರ ಕಾಳಗಕ್ಕೆ ಸಾಕ್ಷಿಯಾಗಿದ್ದು, ರಷ್ಯಾ ರಾಜಧಾನಿ ಮಾಸ್ಕೋವನ್ನು ಗುರಿ ಯಾಗಿಸಿಕೊಂಡು ಉಕ್ರೇನ್ 32 ಡ್ರೋನ್‌ಗಳ ಮೂಲಕ ದಾಳಿ ನಡೆಸಿದೆ. ಪೂರ್ಣ ಪ್ರಮಾಣದ ಯುದ್ಧ ಆರಂಭ ವಾದ ಬಳಿಕ ರಷ್ಯಾ ಮೇಲೆ ಉಕ್ರೇನ್ ನಡೆಸಿದ ಅತಿದೊಡ್ಡ ದಾಳಿ ಇದಾಗಿದೆ.
ಈ ದಾಳಿಯ ಪರಿಣಾಮವೆಂಬಂತೆ ಮಾಸ್ಕೋದ ಡೊಮೆಡೆಡೊ, ಶೆರೆಮೆ ಟಿಯೆವೊ ಹಾಗೂ ಜಹು ಕೋವಿÕ$R ವಿಮಾನ ನಿಲ್ದಾಣಗಳನ್ನು ಸ್ವಲ್ಪ ಸಮಯ ದವರೆಗೆ ಮುಚ್ಚಲಾಗಿತ್ತು. ಈ ದಾಳಿ ವೇಳೆ 50 ವರ್ಷದ ಮಹಿಳೆಯೊಬ್ಬರು ಗಾಯ ಗೊಂಡಿದ್ದಾರೆ ಎನ್ನಲಾಗಿದೆ. ಮಾಸ್ಕೋ, ಅದರ ಹೊರ ವಲಯದ ನಗರಗಳಲ್ಲಿ 2.1 ಕೋಟಿ ಜನ ವಾಸವಾಗಿದ್ದಾರೆ.
ವಿಶೇಷವೆಂದರೆ ಉಕ್ರೇನ್ ಅಧ್ಯಕ್ಷ ಝೆಲೆನ್‌ಸ್ಕಿ ಅವ ರೊಂದಿಗೆ ಅಮೆರಿಕ ನಿಯೋಜಿತ ಅಧ್ಯಕ್ಷ ಟ್ರಂಪ್ ಅವರು ದೂರವಾಣಿ ಮಾತುಕತೆ ನಡೆಸಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.
ಉಕ್ರೇನ್‌ನ 32 ಡ್ರೋನ್‌ಗಳನ್ನುಹೊಡೆದುರುಳಿಸಿರುವುದಾಗಿ ಮಾಸ್ಕೋಮೇಯರ್ ಹೇಳಿದ್ದಾರೆ. ಮಾಸ್ಕೋದಲ್ಲಿ ಯಾರಿಗೂ ಗಾಯವಾಗಿಲ್ಲ. ಆದರೆ ಮಾಸ್ಕೋದ ಆಗ್ನೇಯಕ್ಕಿರುವ ಹಳ್ಳಿ ಯಲ್ಲಿ ಮಹಿಳೆಯೊಬ್ಬರು ಗಾಯ ಗೊಂಡಿದ್ದಾರೆ ಎಂದು ಅವರು ತಿಳಿಸಿ ದ್ದಾರೆ. ಮಾಸ್ಕೋದ ಹೊರ ವಲಯ ದಲ್ಲಿ ಉಕ್ರೇನ್ ಡ್ರೋನ್‌ಗಳ ಅವಶೇಷ ಗಳಿಂದ ಕೆಲವು ಮನೆಗಳು ಬೆಂಕಿಗೆ ತುತ್ತಾಗಿವೆ ಎಂಬ ಮಾಹಿತಿಯನ್ನು ಪ್ರತ್ಯಕ್ಷದರ್ಶಿಗಳು ಟೆಲಿಗ್ರಾಮ್ ಆ್ಯಪ್‌ನಲ್ಲಿ ಹಂಚಿಕೊಂಡಿದ್ದಾರೆ.
ಇದೇ ಆ್ಯಪ್‌ನಲ್ಲಿ ಡ್ರೋನ್ ದಾಳಿಯ ವೀಡಿಯೋಗಳನ್ನು ಹಲವರು ಹಂಚಿಕೊಂಡಿ ದ್ದಾರೆ. 2022ರ ಫೆಬ್ರವರಿಯಲ್ಲಿ ರಷ್ಯಾ ಆರಂಭಿಸಿದ ಯುದ್ಧದ ಬಳಿಕ ಇದೇ ಮೊದಲ ಬಾರಿಗೆ ಮಾಸ್ಕೋ ಭಾರೀ ಪ್ರಮಾಣದ ನಷ್ಟ ಅನುಭವಿಸಿದೆ ಎಂದು ಬ್ರಿಟನ್‌ನ ರಕ್ಷಣ ಅಧಿಕಾರಿಗಳು ತಿಳಿಸಿದ್ದಾರೆ.
ರಷ್ಯಾದಿಂದ ಪ್ರತಿದಾಳಿ
ಉಕ್ರೇನ್ ದಾಳಿಗೆ ಪ್ರತಿಯಾಗಿ ರಷ್ಯಾ ಕೂಡ 145 ಡ್ರೋನ್‌ಗಳ ಮೂಲಕ ದಾಳಿ ನಡೆಸಿದೆ. ಈ ಪೈಕಿ 62 ಡ್ರೋನ್‌ಗಳನ್ನು ಹೊಡೆದುರುಳಿಸಿರುವುದಾಗಿ ಉಕ್ರೇನ್ ಹೇಳಿಕೊಂಡಿದೆ. ರಷ್ಯಾದ ಬ್ರಿಯಾನ್ಸ್ ಪ್ರದೇಶದಲ್ಲಿರುವ ಸೇನಾ ಶಸ್ತ್ರಾಸ್ತ್ರ ಸಂಗ್ರಹಣ ಕೇಂದ್ರದ ಮೇಲೆಯೂ ದಾಳಿ ಮಾಡಿರುವುದಾಗಿ ಉಕ್ರೇನ್ ಹೇಳಿದೆ. ಈ ಪ್ರದೇಶದಲ್ಲಿ 14 ಡ್ರೋನ್‌ಗಳನ್ನು ಹೊಡೆದುರುಳಿಸಲಾಗಿದೆ ಎಂದು ವರದಿಯಾಗಿದೆ. ರಷ್ಯಾ ಸಂಸತ್ ಕಟ್ಟಡ ಕ್ರೆಮ್ಲಿನ್ ಇರುವ ಸ್ಥಳದಿಂದ ಆಗ್ನೇಯಕ್ಕೆ ಸುಮಾರು 45 ಕಿ.ಮೀ. ದೂರವಿರುವ ರಮೆನ್ಸೊಯ್ ಜಿಲ್ಲೆಯನ್ನು ಗುರಿ ಯಾಗಿಸಿಕೊಂಡು ಉಕ್ರೇನ್ ಸೆಪ್ಟಂಬರ್‌ನಲ್ಲಿ ನಡೆಸಿದ ದಾಳಿಯೇ ಈವರೆಗಿನ ಅತಿದೊಡ್ಡ ದಾಳಿಯಾಗಿತ್ತು. ಆಗ ಉಕ್ರೇನ್ 20 ಡ್ರೋನ್‌ಗಳ ಮೂಲಕ ದಾಳಿ ನಡೆಸಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮಡೋನಾಗೆ ಯೋಗ ಕಲಿಸಿದ್ದ ಅಂತಾರಾಷ್ಟ್ರೀಯ ಯೋಗ ಗುರು ಮೈಸೂರಿನ ಶರತ್ ನಿಧನ
US ಅಧಿಕಾರಶಾಹಿ ಸ್ವಚ್ಛಗೊಳಿಸಲು ಮಸ್ಕ್, ವಿವೇಕ್ ರಾಮಸ್ವಾಮಿ ಆಯ್ಕೆ ಮಾಡಿದ ಟ್ರಂಪ್
Jamaica: ನಗ್ನವಾಗಿ ಲಗ್ನವಾದ 29 ಜೋಡಿ
Big Bend: ವಿಶ್ವದ ಅತಿ ಉದ್ದದ ಕಟ್ಟಡ “ದಿ ಬಿಗ್ ಬೆಂಡ್’ ನಿರ್ಮಾಣಕ್ಕೆ ಅಮೆರಿಕ ಸಿದ್ಧತೆ
US; ಮೈಕ್ ವಾಲ್ಟ್ಜ್ ನೂತನ ಭದ್ರತಾ ಸಲಹೆಗಾರ; ಚೀನಾ ವಿರೋಧಿ ನಿಲುವುವುಳ್ಳ ನಾಯಕರಿಗೆ ಅಧಿಕಾರ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.