ದುಬೈ: ವಿಶ್ವದ ಅತಿ ಸುಂದರ ಕಟ್ಟಡ’ ಅನಾವರಣ
ಮೊಟ್ಟೆಯಾಕಾರದ ಕಟ್ಟಡದ ಒಳಗಿದೆ ಭವಿಷ್ಯದ ಮ್ಯೂಸಿಯಂ
Team Udayavani, Feb 24, 2022, 7:25 AM IST
ದುಬೈನಲ್ಲಿ ನಿರ್ಮಿಸಲಾಗಿರುವ ಜಗತ್ತಿನ ಅತಿ ಸುಂದರವಾದ ಕಟ್ಟಡವೆಂಬ ಹೆಗ್ಗಳಿಕೆ ಪಡೆದಿರುವ ಮೊಟ್ಟೆಯಾಕಾರದ ಕಟ್ಟಡವೊಂದನ್ನು “ಯುನೈಟೆಡ್ ಅರಬ್ ಎಮಿರೇಟ್ಸ್’ (ಯುಎಇ) ಸರ್ಕಾರ, ಬುಧವಾರ ಲೋಕಾರ್ಪಣೆಗೊಳಿಸಿದೆ.
ಇದರಲ್ಲಿ ಮನುಕುಲದ ಭವಿಷ್ಯಕ್ಕೆ ಸ್ಫೂರ್ತಿ ತುಂಬುವಂಥ ಪರಿಕರಗಳ ವಸ್ತುಸಂಗ್ರಹಾಲಯ ಸ್ಥಾಪಿಸಲಾಗುತ್ತದೆ ಎಂದು ಸರ್ಕಾರ ತಿಳಿಸಿದೆ. ಈ ಕಟ್ಟಡದ 9 ವರ್ಷ ತಗುಲಿದೆ. ಜಗತ್ತಿನ ಅತಿ ಎತ್ತರದ ಕಟ್ಟಡವೆನಿಸಿರುವ ಬುರ್ಜ್ ಖಲೀಫಾದಿಂದ ಕೂಗಳೆತೆಯ ದೂರದಲ್ಲಿದೆ ಈ ಕಟ್ಟಡ. “ದುಬೈ ಸ್ಕೈಲೈನ್’ ಯೋಜನೆಯಲ್ಲಿ ನಿರ್ಮಾಣಗೊಂಡ ಕಣ್ಮನ ಸೆಳೆಯುವ ಕಟ್ಟಡಗಳ ಪಟ್ಟಿಗೆ ಇದು ಹೊಸ ಸೇರ್ಪಡೆಯಾಗಿದೆ.
ಮೊಟ್ಟೆಯ ಆಕಾರ
ಇದೊಂದು ಮೊಟ್ಟೆಯಾಕಾರದ, ಕಂಬ ರಹಿತ (ಪಿಲ್ಲರ್ ಫ್ರೀ) ಕಟ್ಟಡ. ಇದರ ಮೇಲ್ಮೈಗೆ ಉಕ್ಕಿನ ಕವಚ ಹೊದಿಸಲಾಗಿದೆ. ಅದರ ಮೇಲೆ ಅರೇಬಿಕ್ ಲಿಪಿಯಲ್ಲಿ ಯುಎಇ ರಾಜ, ಅಧ್ಯಕ್ಷ, ಪ್ರಧಾನಿ ನೀಡಿರುವ ಸುಭಾಷಿತಗಳನ್ನು ಕೆತ್ತಲಾಗಿದೆ. ಪ್ರತಿದಿನ ಸಂಜೆ, ಕಟ್ಟಡದ ಆವರಣದಲ್ಲಿ ಲೇಸರ್ ಷೋ ನಡೆಸಲಾಗುತ್ತದೆ.
ಏನಿರಲಿದೆ ಒಳಗಡೆ?
ಕಟ್ಟಡದೊಳಗೆ ಏನೇನಿರಲಿದೆ ಎಂಬುದರ ಬಗ್ಗೆ ವಿಸ್ತೃತ ವರದಿಯನ್ನು ಯುಎಇ ಸರ್ಕಾರ ನೀಡಿಲ್ಲ. ಆದರೆ, ಕಟ್ಟಡದಲ್ಲೊಂದು ವಿಶಾಲವಾದ ವಸ್ತುಸಂಗ್ರಹಾಲಯವಿರಲಿದೆ ಎಂಬ ವಿಚಾರವನ್ನು ಸರ್ಕಾರ ತಿಳಿಸಿದೆ. ಅಲ್ಲಿ, 2071ರ ಕಡೆಗೆ ಮನುಕುಲದ ಪಯಣ ಎಂಬ ಪರಿಕಲ್ಪನೆಯಡಿ, ಈವರೆಗೆ ಹಾಗೂ ಇನ್ನು ಮುಂದೆ ಆಗಲಿರುವ ವೈಜ್ಞಾನಿಕ ಸಂಶೋಧನೆಗಳು, ವೈಜ್ಞಾನಿಕ ಪರಿಕರಗಳನ್ನು ಈ ಮ್ಯೂಸಿಯಂನಲ್ಲಿ ಸಂಗ್ರಹಿಸಲಾಗುತ್ತದೆ. ಇದಲ್ಲದೆ, ಹೊಸ ಮಾದರಿಯ ಅಭಿವೃದ್ಧಿಗೆ ಪೂರಕವಾದ ತಂತ್ರಜ್ಞಾನಗಳು- ಸಿದ್ಧಾಂತಗಳನ್ನು ಇಲ್ಲಿ ಕಾಪಿಡಲಾಗುತ್ತದೆ ಎಂದು ಯುಎಇ ತಿಳಿಸಿದೆ.
ಅಂಕಿ-ಅಂಶ:
30,000 ಚದರ ಅಡಿ- ಹೊಸ ಕಟ್ಟಡದ ವಿಸ್ತೀರ್ಣ.
252.6 ಅಡಿ – ಹೊಸ ಕಟ್ಟಡದ ಎತ್ತರ.
9 ವರ್ಷ – ಕಟ್ಟಡ ನಿರ್ಮಾಣಕ್ಕೆ ತಗುಲಿದ ಕಾಲಾವಧಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Plane Mishap: ಲಘು ವಿಮಾನ ಪತನ… ಬ್ರೆಜಿಲ್ ನ ಉದ್ಯಮಿ ಸೇರಿ ಹತ್ತು ಮಂದಿ ಮೃತ್ಯು
Pope Francis; ಗಾಜಾಪಟ್ಟಿ ಮೇಲೆ ನಡೆದದ್ದು ಯುದ್ಧವಲ್ಲ, ಕ್ರೌರ್ಯ
Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
Sheikh Hasina ಅವಧಿಯಲ್ಲಾದ ಅಪಹರಣಗಳಿಗೆ ಭಾರತ ಕುಮ್ಮಕ್ಕು: ಬಾಂಗ್ಲಾ ವರದಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Chhattisgarh: ವಿವಾಹಿತ ಮಹಿಳೆಯರ ಖಾತೆಗೆ ಹಣ-ಸನ್ನಿ ಲಿಯೋನ್ ಹೆಸರಲ್ಲಿ ವಂಚನೆ!
Hubli: ಅಯ್ಯಪ್ಪ ಶಿಬಿರದಲ್ಲಿ ಅಗ್ನಿ ಆಕಸ್ಮಿಕ: ಒಂಬತ್ತು ವೃತಧಾರಿಗಳಿಗೆ ಗಂಭೀರ ಗಾಯ
Punjab ಪೊಲೀಸರ ಮೇಲೆ ಗ್ರೆನೇಡ್ ದಾಳಿ ನಡೆಸಿದ್ದ ಮೂವರು ಖಲಿಸ್ತಾನಿ ಉ*ಗ್ರರ Encounter
Tollywood: ‘ಗೇಮ್ ಚೇಂಜರ್ʼಗೆ ರಾಮ್‌ಚರಣ್ ರಾಷ್ಟ್ರ ಪ್ರಶಸ್ತಿ ಪಡೆಯುತ್ತಾರೆ – ಸುಕುಮಾರ್
Mudigere: ಹೊರನಾಡು ದೇವರ ದರ್ಶನಕ್ಕೆ ಬರುತ್ತಿದ್ದವರ ವಾಹನ ಪಲ್ಟಿ… ನಾಲ್ವರಿಗೆ ಗಂಭೀರ ಗಾಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.