ಬರೋಬ್ಬರಿ 8 ತಿಂಗಳಿಗಾಗುವ ಊಟ ಸಿದ್ಧಪಡಿಸಿ ಇಟ್ಟುಕೊಂಡಿರುವ ಮಹಿಳೆ!
Team Udayavani, Aug 30, 2022, 7:50 AM IST
ವಾಷಿಂಗ್ಟನ್: ಪ್ರತಿನಿತ್ಯ ಅಡುಗೆ ಮಾಡುವುದೇ ಒಂದು ದೊಡ್ಡ ಸಮಸ್ಯೆ. ಆದರೆ ಅಮೆರಿಕದ ಇಂಡಿಯಾನಾದ ಮಹಿಳೆ ಕೆಲ್ಸೆ ಶಾ(30)ಗೆ ಈ ತಲೆನೋವಿಲ್ಲ. ಏಕೆಂದರೆ ಅವರು ಈಗಾಗಲೇ ಬರೋಬ್ಬರಿ 8 ತಿಂಗಳಿಗಾಗುವಷ್ಟು ಅಡುಗೆ ತಯಾರಿಸಿಟ್ಟುಕೊಂಡಿದ್ದಾರಂತೆ!
ಹೌದು. ಕೆಲ್ಸೆ 2017ರಲ್ಲಿ ಪತಿಯೊಂದಿಗೆ ತೋಟದಲ್ಲಿಯೇ ಮನೆ ಮಾಡಿಕೊಂಡು ಜೀವನ ಆರಂಭಿಸಿದ್ದಾರೆ. ಅಲ್ಲಿ ಅವರು ಎಲ್ಲ ರೀತಿಯ ತರಕಾರಿ ಮತ್ತು ಹಣ್ಣುಗಳನ್ನು ಬೆಳೆಯುತ್ತಾರೆ. ಮುಂದಿನ 8 ತಿಂಗಳ ದಿನಕ್ಕೆ ಎರಡು ಬಾರಿ ತಿನ್ನುವುದಕ್ಕೆ ಆಗುವಷ್ಟು ಹಣ್ಣು ಮತ್ತು ತರಕಾರಿಯನ್ನು ಕೆಲ್ಸೆ ಸಂಗ್ರಹಿಸಿಟ್ಟುಕೊಂಡಿದ್ದಾರೆ. ಅವುಗಳು ಕೆಡದಂತೆ ಒಣಸಿ, ಉಪ್ಪಿನಕಾಯಿ ಮಾಡಿಕೊಂಡು ಅಥವಾ ಪುಡಿ ಮಾಡಿ ಇಟ್ಟುಕೊಂಡಿದ್ದಾರೆ. ಅವುಗಳನ್ನು ಕೆಡದಂತೆ ದೀರ್ಘಾವಧಿ ಕಾಲ ಉಳಿಸಿಕೊಳ್ಳುವುದಕ್ಕೇ ಕೆಲ್ಸೆ ವಿಶೇಷ ತರಬೇತಿಯನ್ನೂ ಪಡೆದಿದ್ದಾರೆ. ಅದರಿಂದಾಗಿ ಕೊರೊನಾ ಸಮಯದಲ್ಲಿ ನಮಗೆ ಊಟದ ಸಮಸ್ಯೆಯೇ ಬರಲಿಲ್ಲ ಎನ್ನುತ್ತಾರೆ ಕೆಲ್ಸೆ.
ಅಕ್ಕಿ, ಗೋಧಿಯಂತಹ ಕೆಲವು ಅವಶ್ಯ ಸಾಮಾಗ್ರಿಗಳನ್ನು ತರುವುದಕ್ಕೆ ಎರಡು ವಾರಗಳಿಗೊಮ್ಮೆ ಪೇಟೆಗೆ ಹೋಗಿ ಬರುವ ಅಭ್ಯಾಸ ಈ ದಂಪತಿಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Canada-India Row: ನಿಜ್ಜರ್ ಹತ್ಯೆ ಹಿಂದೆ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ
Khalistan; ಕೆನಡಾ ಹಿಂದೂಗಳ ಮೇಲೆ ದಾಳಿ: ಉಗ್ರರ ಹೊಸ ಬೆದರಿಕೆ
Prime Minister Modi; ಗಯಾನಾ, ಡೊಮಿನಿಕಾ ಗೌರವ ಪ್ರದಾನ
Pakistan; ಶಿಯಾ ಮುಸ್ಲಿಮರನ್ನು ಗುರಿಯಾಗಿರಿಸಿ ಗುಂಡಿನ ದಾಳಿ: ಕನಿಷ್ಠ 50 ಬ*ಲಿ
Netanyahu ವಿರುದ್ಧ ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯದಿಂದ ಬಂಧನ ವಾರಂಟ್
MUST WATCH
ಹೊಸ ಸೇರ್ಪಡೆ
Mangaluru: ಜೀವನ ಶೈಲಿ ಸಂಬಂಧಿ ಕಾಯಿಲೆಗೆ ಪರಿಹಾರ ಅಗತ್ಯ
Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ
Someshwara ದೇಗುಲ: ಶಿವಪಂಚಾಕ್ಷರಿ ಕೋಟಿ ನಾಮಜಪ ಯಜ್ಞ ಸಂಪನ್ನ
Maryade Prashne: ಮಧ್ಯಮ ವರ್ಗದ ಸುತ್ತ ಹೀಗೊಂದು ಚಿತ್ರ
Crocodile: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ… ನಿಟ್ಟುಸಿರು ಬಿಟ್ಟ ಗ್ರಾಮಸ್ಥರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.