ಲವ್ ಜೆಹಾದ್ ವಿರುದ್ಧ ಪಾಕ್ ನಲ್ಲಿ ಚಳವಳಿ
Team Udayavani, Mar 12, 2021, 8:31 AM IST
ಸಾಂದರ್ಭಿಕ ಚಿತ್ರ
ಇಸ್ಲಾಮಾಬಾದ್: “ನಮ್ಮ ಮಗಳನ್ನು ರಕ್ಷಿಸಿ’, “ನಮ್ಮನ್ನು ಕಾಪಾಡಿ’- ಮಾ.8ರ ಮಹಿಳಾ ದಿನದಂದು ಇಂಥ ಫಲಕಗಳನ್ನು ಹಿಡಿದು ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್, ಸಿಕ್ಖ್ ಜನಾಂಗದ ನೂರಾರು ಮಂದಿ ಪಾಕಿಸ್ಥಾನದ ಲಾಹೋರ್ ಪ್ರಸ್‌ಕ್ಲಬ್ ಮುಂದೆ ಜಮಾಯಿಸಿದ್ದರು. ಅವರೆಲ್ಲರ ಧ್ವನಿ ಒಂದೇ… “ಮದುವೆಗಾಗಿ ಲವ್ ಜೆಹಾದಿ ನಿಲ್ಲಿಸಿ’! ಇದು ಪಾಕ್‌ನಲ್ಲಿ ತೀವ್ರಗೊಂಡಿರುವ “ಸಹಿಷ್ಣುತೆಗಾಗಿ ಹೋರಾಟ’ದ (ರಾದಾರಿ ಟೆಹ್ರಿಕ್) ಒಂದು ಝಲಕ್. ಈ ಚಳವಳಿಗೆ ರಾಷ್ಟ್ರೀಯ ಶಾಂತಿ ಸಮಿತಿ ಸೇರಿದಂತೆ ಹತ್ತು ಹಲವು ಸಂಘಟನೆಗಳು ಬೆಂಬಲ ಘೋಷಿಸಿವೆ. “ಮುಸ್ಲಿಮ್ ಯುವಕರು, ಮುಸ್ಲಿಮೇತರ ಯುವತಿಯರನ್ನು ಪ್ರೀತಿಯ ಹೆಸರಿನಲ್ಲಿ ಮೋಸದಿಂದ ವಂಚಿಸಿ, ಮತಾಂತರ ಮಾಡುತ್ತಿದ್ದಾರೆ. ಪೋಷಕರ ಒಪ್ಪಿಗೆ ಪಡೆಯದೇ ವಿವಾಹಕ್ಕಾಗಿ ಇಂಥ ದುಷ್ಕೃತ್ಯಗಳು ನಡೆಯುತ್ತಿವೆ’ ಎಂದು ಚಳವಳಿ ನೇತಾರ ಸ್ಯಾಮ್ಸನ್ ಸಲಾಮತ್ ತಿಳಿಸಿದ್ದಾರೆ.
ಶೇ.54 ಹಿಂದೂ ಧರ್ಮೀಯರು!: ಲಾಹೋರ್‌ನ ಸಾಮಾಜಿಕ ನ್ಯಾಯ ಕೇಂದ್ರದ ಮಾಹಿತಿಯಂತೆ, 2013-2020ರ ನಡುವೆ 162 ಅಪ್ರಾಪ್ತೆಯರ ಮತಾಂತರ ಪ್ರಶ್ನಾರ್ಹವೆನ್ನಿಸಿದೆ. ಇದರಲ್ಲಿ ಶೇ.54 ಸಂತ್ರಸ್ತೆಯರು ಹಿಂದೂ, ಶೇ.44 ಮಂದಿ ಕ್ರಿಶ್ಚಿಯನ್ ಧರ್ಮಕ್ಕೆ ಸೇರಿದವರಾಗಿದ್ದಾರೆ. ಸಂತ್ರಸ್ತೆಯರ ಪೈಕಿ ಶೇ.46 ಮಂದಿ ಅಪ್ರಾಪ್ತೆಯರು, ಅದರಲ್ಲೂ ಶೇ.33 ಮಂದಿ 11-15 ವಯಸ್ಸಿನವರಾಗಿದ್ದಾರೆ. ಶೇ.17 ಮಂದಿ ಮಾತ್ರವೇ 18 ವರ್ಷಕ್ಕಿಂತ ಮೇಲ್ಪಟ್ಟವರಾಗಿದ್ದಾರೆ.
13 ವರ್ಷದ ಬಾಲಕಿ ಕಿಡ್ನ್ಯಾಪ್ :
ಅಪ್ಪನ ಕಣ್ಣೆದುರೇ 13 ವರ್ಷದ ಬಾಲಕಿಯನ್ನು ಅಪಹರಿಸಿ, ವಿವಾಹಕ್ಕಾಗಿ ಬಲವಂತದಿಂದ ಮತಾಂತರಿಸಿದ ಪ್ರಕರಣ ಮಹಿಳಾ ದಿನದಂದೇ ಪಾಕ್‌ನಲ್ಲಿ ಜರಗಿದೆ. ಸಿಂಧ್ ಪ್ರಾಂತ್ಯದ ಬಹಲ್ರಾನಿ ಬುಡಕಟ್ಟು ಜನಾಂಗದ ಬಾಲಕಿ ಕವಿತಾ ಬಾಯಿಯನ್ನು ಇಸ್ಲಾಂ ಮೌಲ್ವಿಯೊಬ್ಬ ಮತಾಂತರಿಸುತ್ತಿರುವ ದೃಶ್ಯದ ವೀಡಿಯೋ ವೈರಲ್ ಆಗಿದೆ. ಈಕೆಯನ್ನು ಅಪಹರಣಕಾರನಿಗೇ ಕೊಟ್ಟು ಮದುವೆ ಮಾಡಲಾಗಿದೆ. ಮಾ.8ರಂದು ಐವರು ಶಸ್ತ್ರಧಾರಿಗಳು, ಬಾಲಕಿ ಮನೆಗೆ ನುಗ್ಗಿ, ಅಪಹರಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Viral Video: ಖ್ಯಾತ ನ್ಯೂಸ್ ಆ್ಯಂಕರ್ ನ ಖಾಸಗಿ ವಿಡಿಯೋ ಲೀಕ್..? ಸಿಕ್ಕಾಪಟ್ಟೆ ವೈರಲ್
Donald Trump: ನೀವು ತೆರಿಗೆ ಹಾಕಿದರೆ ನಾವೂ ಹಾಕುತ್ತೇನೆ… ಭಾರತಕ್ಕೆ ಟ್ರಂಪ್ ಎಚ್ಚರಿಕೆ
Earthquake…! ರೋಡ್ ರೋಲರ್ ಶಬ್ದವನ್ನು ಭೂಕಂಪ ಎಂದು ಗ್ರಹಿಸಿ ಕಿಟಕಿಯಿಂದ ಜಿಗಿದರು
H-1B visa: ಎಚ್1ಬಿ ವೀಸಾ ನಿಯಮ ಸಡಿಲಿಕೆ… ಭಾರತೀಯ ಟೆಕ್ಕಿಗಳಿಗೆ ಸಂತಸ
Russia; ಅಭಿವೃದ್ಧಿಪಡಿಸಲಾದ ಕ್ಯಾನ್ಸರ್ ಲಸಿಕೆ ಉಚಿತವಾಗಿ ಲಭ್ಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.