ಶ್ರೀಲಂಕಾದಲ್ಲಿ ಮುಸ್ಲಿಂ ಸಂಪ್ರದಾಯವಾದಿ ಬಂಧನ
Team Udayavani, May 13, 2019, 6:07 AM IST
ಸಾಂದರ್ಭಿಕ ಚಿತ್ರ.
ಕೊಲಂಬೊ: ಶ್ರೀಲಂಕಾ ಈಸ್ಟರ್ ಸ್ಫೋಟ ಪ್ರಕರಣ ಸಂಬಂಧ ಓರ್ವ ಸಂಪ್ರದಾಯವಾದಿ ಧಾರ್ಮಿಕ ಮುಖಂಡರನ್ನು ಪೊಲೀಸರು ಬಂಧಿಸಿದ್ದಾರೆ. ಸೌದಿಯಲ್ಲಿ ಅಧ್ಯಯನಗೈದು ಲಂಕಾದಲ್ಲಿ ಸೆಂಟರ್ ಫಾರ್ ಇಸ್ಲಾಮಿಕ್ ಗೈಡೆನ್ಸ್ ಎಂಬ ಸಂಸ್ಥೆ ಹುಟ್ಟುಹಾಕಿದ್ದ ಮೊಹಮದ್ ಅಲಿಯಾರ್ (60), ಸ್ಫೋಟದ ಸಂಚುಕೋರ ಝಹ್ರಾನ್ ಹಶೀಮ್ ಜತೆೆ ಸಂಪರ್ಕದಲ್ಲಿದ್ದರು ಹಾಗೂ ಹಣಕಾಸು ನೆರವು ನೀಡುತ್ತಿದ್ದರು ಎಂದು ಹೇಳಲಾಗಿದೆ. ಅಲಿಯಾರ್ ಸಂಸ್ಥೆ ಅಡಿಯಲ್ಲಿ ಝಹ್ರಾನ್‌ನ ಊರು ಕಟ್ಟಂಕುಡಿಯಲ್ಲಿ ಮಸೀದಿ, ಶಾಲೆ, ಲೈಬ್ರರಿ ಸ್ಥಾಪಿಸಲಾಗಿತ್ತು.
ಆದರೆ ಪೊಲೀಸರು ಅಲಿಯಾರ್ ಬಂಧ ನದ ಬಗ್ಗೆ ಯಾವುದೇ ಮಾಹಿತಿ ಬಹಿರಂಗ ಗೊಳಿಸಲಿಲ್ಲ. ಝಹ್ರಾನ್‌ನ ಚಿಂತನೆಗಳು ಸೆಂಟರ್ ಫಾರ್ ಇಸ್ಲಾಮಿಕ್ ಲೈಬ್ರರಿಯಲ್ಲಿನ ಪುಸ್ತಕಗಳನ್ನು ಓದಿದ ಅನಂತರವೇ ಬದಲಾ ಗಿದೆ. ಸುಮಾರು 2-3 ವರ್ಷಗಳ ಹಿಂದೆ ಸಲಾಫಿ -ವಹಾಬಿ ಕುರಿತ ಪುಸ್ತಕಗಳನ್ನು ಈತ ಓದುತ್ತಿದ್ದ ಎಂದು ಕೆಲವರು ಹೇಳಿದ್ದಾರೆ.
ಇದಕ್ಕೂ ಹಿಂದೆ ಶ್ರೀಲಂಕಾದಲ್ಲಿ ಈ ರೀತಿಯ ಚಿಂತನೆಗಳು ಇರಲಿಲ್ಲ. ಸೌದಿ ಅರೇಬಿಯಾ ಮೂಲದ ಸಲಾಫಿ-ವಹಾಬಿ ಚಿಂತನೆಗಳನ್ನು ಶ್ರೀಲಂಕಾದಲ್ಲಿ ಹರಡಲು 1990ರಲ್ಲೇ ಅಲಿಯಾರ್ ಈ ಸಂಸ್ಥೆ ಸ್ಥಾಪಿಸಿ ದ್ದರು. ಸೌದಿಯಿಂದಲೇ ಇದಕ್ಕೆ ಅನುದಾನ ಲಭ್ಯವಾಗುತ್ತಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
UK; ಪ್ರಧಾನಿ ದೀಪಾವಳಿ ಪಾರ್ಟಿಯಲ್ಲಿ ಮದ್ಯ, ಮಾಂಸ: ಕೊನೆಗೂ ಕ್ಷಮೆ ಯಾಚನೆ
Sri Lanka Election Result:ಸಂಸತ್ ಚುನಾವಣೆ-ಅಧ್ಯಕ್ಷ ಅನುರಾ ದಿಸ್ಸಾನಾಯಕೆ ಪಕ್ಷ ಜಯಭೇರಿ
Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್ ರಾಷ್ಟ್ರ?
Marriage: ಕ್ರಿಸ್ಮಸ್‌ಗೆ ಅಮೆಜಾನ್ ಸಿಇಒ ಅದ್ಧೂರಿ ವಿವಾಹ?
Washington: ಅಮೆರಿಕ ಗುಪ್ತಚರ ಸಂಸ್ಥೆಗೆ ತುಳಸಿ ಗಬಾರ್ಡ್ ಮುಖ್ಯಸ್ಥೆ
MUST WATCH
ಹೊಸ ಸೇರ್ಪಡೆ
Karkala: ಗೋವಾ ಮದ್ಯ ಅಕ್ರಮ ದಾಸ್ತಾನು ಪ್ರಕರಣ; ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚನೆ
Karkala: ದ್ವೇಷ ಭಾವನೆ ಕೆರಳಿಸುವ ಆರೋಪ; ದೂರು ದಾಖಲು
PoK ಪ್ರದೇಶದಲ್ಲಿ ಚಾಂಪಿಯನ್ಸ್ ಟ್ರೋಫಿ ಪಂದ್ಯಗಳು: ಬಿಸಿಸಿಐ ನಿಂದ ತೀವ್ರ ಖಂಡನೆ
Congress: ಸರ್ಕಾರದಲ್ಲಿ ಒಬ್ಬರು ಏತಿ ಅಂದರೆ ಮತ್ತೊಬ್ಬರು ಪ್ರೇತಿ ಅಂತಾರೆ: ಆರ್.ಅಶೋಕ್
50 cr for 50 Cong MLAs ; ಎಸ್ ಐಟಿ ತನಿಖೆಗೆ ಎಚ್.ಡಿ.ಕುಮಾರಸ್ವಾಮಿ ಒತ್ತಾಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.