“ನನ್ನ ಬಂಧನದ ಹಿಂದೆ ಮೋದಿ, ಟ್ರಂಪ್’: ಸಯೀದ್
Team Udayavani, Jan 31, 2017, 11:23 PM IST
ನವದೆಹಲಿ/ಇಸ್ಲಾಮಾಬಾದ್: “ನನ್ನ ಬಂಧನದ ಹಿಂದೆ ಭಾರತದ ಪ್ರಧಾನಿ ನರೇಂದ್ರ ಮೋದಿ ಒತ್ತಾಯ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರಚೋದನೆ ಮತ್ತು ಪಾಕಿಸ್ತಾನದ ರಾಜಿ ಮನೋಭಾವ ಕೆಲಸ ಮಾಡಿದೆ’ ಎಂದು ಮುಂಬೈ ದಾಳಿಯ ರೂವಾರಿ, ಉಗ್ರ ಹಫೀಜ್ ಸಯೀದ್ ಹೇಳಿದ್ದಾನೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಏಳು ಮುಸ್ಲಿಂ ರಾಷ್ಟ್ರಗಳ ಮೇಲೆ ಹೇರಿರುವ ವಲಸೆ ನಿರ್ಬಂಧವನ್ನು ಥಳುಕು ಹಾಕಿರುವ ಹಫೀಜ್, ತನ್ನ ಬಂಧನದ ಹಿಂದೆಯೂ ಅಮೆರಿಕ ಕೆಲಸ ಮಾಡಿದೆ ಎಂದು ಶಂಕೆ ಬೀರಿದ್ದಾನೆ. “ಕಾಶ್ಮೀರದ ಮೇಲಿನ ನಮ್ಮ ಹೋರಾಟಕ್ಕೆ ಹಿನ್ನಡೆ ಉಂಟುಮಾಡಲು ಅವರೆಲ್ಲ ಯೋಜಿಸಿದ್ದಾರೆ. ಆದರೆ, ಅದು ಆಗಿಹೋಗದ ಕೆಲಸ. ದೇವರ ಭರವಸೆ ನಮ್ಮ ಮೇಲಿದೆ. ಕಾಶ್ಮೀರ ಸ್ವಾತಂತ್ರ ಪಡೆಯುವವರೆಗೆ ನಮ್ಮ ಹೋರಾಟ’ ಎಂದು ಬೆದರಿಕೆ ಹಾಕಿದ್ದಾನೆ.
ಕಣ್ಣೊರೆಸುವ ತಂತ್ರ?: ಉಗ್ರನ ವಿರುದ್ಧ ಪಾಕಿಸ್ತಾನ ಕೈಗೊಂಡಿರುವ ಕ್ರಮ ಕೇವಲ ಕಣ್ಣೊರೆಸುವ ತಂತ್ರವಾಗಬಾರದು ಎಂದು ಭಾರತ ಖಡಕ್ಕಾಗಿ ಹೇಳಿದೆ. ಈ ಕುರಿತು ಪ್ರತಿಕ್ರಿಯಿಸಿರುವ ವಿದೇಶಾಂಗ ವ್ಯವಹಾರ ಖಾತೆ ವಕ್ತಾರ ವಿಕಾಸ್ ಸ್ವರೂಪ್ “ಈ ಹಿಂದೆಯೂ ಪಾಕಿಸ್ತಾನ ಹಫೀಜ್ ವಿರುದ್ಧ ಇಂಥ ಶಿಸ್ತುಕ್ರಮ ಕೈಗೊಂಡಿತ್ತು. ಕೊನೆಗೆ ಬಾಹ್ಯ ಒತ್ತಡಗಳಿಗೆ ಮಣಿದು ಬಿಡುಗಡೆ ಮಾಡಿತ್ತು. ಮುಂಬೈ ಮೇಲಿನ ಉಗ್ರರ ದಾಳಿ ಮತ್ತು ಗಡಿಯಲ್ಲಿ ಆತನ ಸಂಘಟನೆಯ ಉಗ್ರ ಚಟುವಟಿಕೆಗಳನ್ನು ಪಾಕ್ ಸರ್ಕಾರ ಗಂಭೀರವಾಗಿ ಪರಿಗಣಿಸಿದರೆ ಮಾತ್ರ ನಿಮ್ಮ ಪ್ರಾಮಾಣಿಕತೆಯನ್ನು ಒಪ್ಪಿಕೊಳ್ಳುತ್ತೇವೆ’ ಎಂದಿದ್ದಾರೆ.
ಪಾಕ್‌ನಲ್ಲಿ ಪ್ರತಿಭಟನೆ: ಉಗ್ರ ಹಫೀಜ್‌ಬಂಧನ ಹಿನ್ನೆಲೆಯಲ್ಲಿ ಪಾಕಿಸ್ತಾನಾದ್ಯಂತ ಬೆಂಬಲಿಗರು ಪ್ರತಿಭಟನೆಗಿಳಿದಿದ್ದಾರೆ. ಪ್ರಮುಖ ನಗರಗಳಲ್ಲಿ ಜಮಾವಣೆ ಆಗಿದ್ದ ಪ್ರತಿಭಟನಾಕಾರರನ್ನು ಪೊಲೀಸರು ಚದುರಿಸಿದ್ದಾರೆ.
ಪಾಕ್ ಸೇನೆ ಪ್ರತಿಕ್ರಿಯೆ: “ಹಫೀಜ್ ಬಂಧನದ ಹಿಂದೆ ಯಾರ ಕೈವಾಡವೂ ಇಲ್ಲ. ಇದು ಕೇವಲ ಸರ್ಕಾರದ ನಿರ್ಧಾರ. ನಾವು ಯಾರೊಂದಿಗೂ ಯುದ್ಧಕ್ಕಿಳಿದಿಲ್ಲ. ಯುದ್ಧ ಯಾವುದಕ್ಕೂ ಪರಿಹಾರವೂ ಅಲ್ಲ. ನಮ್ಮ ಪ್ರಾಮಾಣಿಕತೆ ಮತ್ತು ಗೌರವ ಯಾರೊಂದಿಗೂ ರಾಜಿಯನ್ನೂ ಮಾಡಿಕೊಳ್ಳುವುದಿಲ್ಲ’ ಎಂದು ಪಾಕ್ ಸೇನೆಯ ಪ್ರಧಾನ ನಿರ್ದೇಶಕ ಆಸಫ್ ಘಫೂರ್ ಹೇಳಿದ್ದಾರೆ.
ಇಬ್ಬರು ಉನ್ನತ ಅಧಿಕಾರಿಗಳ ವಜಾ
ನೂತನ ವಲಸೆ ನೀತಿ ಜಾರಿಗೊಳಿಸದ್ದಕ್ಕೆ ಇಬ್ಬರು ಉನ್ನತ ಅಧಿಕಾರಿಗಳನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಜಾಗೊಳಿಸಿದ್ದಾರೆ. ಅಟಾರ್ನಿ ಜನರಲ್ (ಪ್ರಭಾರ) ಸ್ಯಾಲಿ ಯೇಟ್ಸ್ ಮತ್ತು ವಲಸೆ ಮತ್ತು ಸುಂಕ ಇಲಾಖೆ ನಿರ್ದೇಶಕ (ಪ್ರಭಾರ) ಡೇನಿಯಲ್ 7 ಮುಸ್ಲಿಂ ದೇಶದ ನಾಗರಿಕರಿಗೆ ಅಮೆರಿಕ ಪ್ರವೇಶವನ್ನು ನಿಷೇಧಿಸುವ ನೂತನ ನೀತಿಗೆ ವಿರುದ್ಧವಾಗಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕದನ ವಿರಾಮ: 3 ಒತ್ತೆಯಾಳುಗಳ ಬಿಡುಗಡೆ ಬೆನ್ನಲ್ಲೇ 90 ಕೈದಿಗಳನ್ನು ಬಿಡುಗಡೆ ಮಾಡಿದ ಇಸ್ರೇಲ್
Israel-Hamas;ಅಂತೂ ಕದನ ವಿರಾಮ ಜಾರಿ: ಮೂವರು ಇಸ್ರೇಲಿಗರ ಬಿಡುಗಡೆ
Davos; ಇಂದು ವಿಶ್ವ ಆರ್ಥಿಕ ವೇದಿಕೆ ವಾರ್ಷಿಕ ಸಭೆ ಆರಂಭ
Donald Trump ಪ್ರಮಾಣವಚನ: ಭೋಜನಕೂಟದಲ್ಲಿ ಮುಖೇಶ್ ಮತ್ತು ನೀತಾ ಅಂಬಾನಿ
America: ಟ್ರಂಪ್ ಪ್ರಮಾಣದ ಬೆನ್ನಲ್ಲೇ ಅಕ್ರಮ ವಲಸಿಗರು ಹೊರಕ್ಕೆ?
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.