ಸ್ನೇಹಿತರ ಗಮನ ಸೆಳೆಯಲು 10 ನಿಮಿಷದಲ್ಲಿ 12 ಎನರ್ಜಿ ಡ್ರಿಂಕ್ ಗಳನ್ನು ಕುಡಿದ ಭೂಪ! ಮುಂದೆ ಆದದ್ದು..
Team Udayavani, Nov 19, 2022, 1:06 PM IST
ವಾಷಿಂಗ್ಟನ್: ಎನರ್ಜಿ ಡ್ರಿಂಕ್ ಎಂದರೆ ಶಕ್ತಿವರ್ಧಕ ಪಾನೀಯಗಳನ್ನು ನೀವು ಕುಡಿದಿರಬಹುದು. ಹೆಚ್ಚಾಗಿ ಆಟವಾಡುವ ಸಮಯದಲ್ಲಿ ಯುವಜನರು ಇದನ್ನು ಬಳಸುತ್ತಾರೆ. ವ್ಯಕ್ತಿಯೊಬ್ಬ ಎನರ್ಜಿ ಡ್ರಿಂಕ್ ಗಳನ್ನು ಕುಡಿದು ಯಾವ ಸ್ಥಿತಿಗೆ ತಲುಪಿದ್ದಾನೆ ನೋಡಿ.
36 ವರ್ಷದ ಯುಕೆಯ ಗೇಮರ್ ಒಬ್ಬ (ಜೆಸ್ ಎಂದೇ ಖ್ಯಾತಿ) ತನ್ನ ಸಹದ್ಯೋಗಿಗಳ ಗಮನ ಸೆಳೆಯಲು 10 ನಿಮಿಷಗಳಲ್ಲಿ 12 ಎನರ್ಜಿ ಡ್ರಿಂಕ್ಸ್ ಗಳನ್ನು ಕುಡಿದು ಆಸ್ಪತ್ರೆಗೆ ದಾಖಲಾಗಿದ್ದಾನೆ. ಈ ಘಟನೆಯನ್ನು, ಜೆಸ್ ನ ಆರೋಗ್ಯ ಸ್ಥಿತಿಯನ್ನು ಚುಬ್ಬೇಮ್ಯೂ (Chubbyemu) ಯೂಟ್ಯೂಬ್ ಚಾನೆಲ್ ನ್ನು ಹೊಂದಿರುವ ಡಾ. ಹೆಚ್‌ಸು ಅವರು ವಿವರಿಸಿದ್ದಾರೆ.
“ಜೆಸ್ ತನ್ನ ಸ್ನೇಹಿತರ ಗಮನ ಸೆಳೆಯಲು 12 ಎನರ್ಜಿ ಡ್ರಿಂಕ್ ಗಳನ್ನು 10 ನಿಮಿಷಗಳಲ್ಲಿ ಕುಡಿದಿದ್ದಾನೆ. ಅಷ್ಟು ಡ್ರಿಂಕ್ಸ್ ಗಳನ್ನು ಒಮ್ಮೆಗೆ ಕುಡಿದ ಬಳಿಕ ಜೆಸ್ ನ ಆರೋಗ್ಯದಲ್ಲಿ ಏರುಪೇರು ಉಂಟಾಗಿದೆ. ಆತನ ದೇಹ ಯಾವುದಕ್ಕೂ ಸ್ಪಂದಿಸದ ಹಾಗೆ ಆಗಿದೆ. ಆತ ಅಲ್ಲೇ ಕೂತು ಗೇಮ್ ಆಡಲು ಶುರು ಮಾಡಿದ್ದಾನೆ. ವಿಪರೀತ ಕೆಫೆನ್ ನಿಂದ ಆತನ ಹೃದಯ ಬಡಿತ ಹೆಚ್ಚಾಯಿತು. ಇದರೊಂದಿಗೆ ಬೆನ್ನು ನೋವು ಕೂಡ ಶುರುವಾಯಿತು. ಇದೆಲ್ಲಾ ಕಮ್ಮಿ ಆಗುತ್ತದೆ ಎಂದು ಆತ ಮದ್ಯವನ್ನು ಸೇವಿಸಿದ್ದಾನೆ. ಆ ಬಳಿಕ ಅಡುಗೆ ಮನೆಗೆ ಹೋಗಿ ಅಲ್ಲೇ ಎಲ್ಲವನ್ನೂ ಒಮ್ಮೆಗೆ ವಾಂತಿ ಮಾಡಿದರು. ಇದಾದ ಬಳಿಕವೂ ಆತ ವಿಪರೀತ ಸುಸ್ತನ್ನು ಅನುಭವಿಸಿದ” ಎಂದರು.
“ಒಂದು ದಿನದ ಬಳಿಕ ಏನನ್ನೂ ತಿನ್ನದೇ ಕುಡಿಯದೇ ಇದ್ದಾಗ ಅವರು ತಾನಾಗಿಯೇ ಆಸ್ಪತ್ರೆಗೆ ದಾಖಲಾದರು. ವೈದ್ಯರು ಪರೀಕ್ಷಿಸಿದ ಬಳಿಕ ಮೇದೋಜ್ಜೀರಕ ಗ್ರಂಥಿಯ ಉರಿಯೂತ ( acute pancreatitis) ಎನರ್ಜಿ ಡ್ರಿಂಕ್ ನಲ್ಲಿನ ಕೆಫೆನ್ ಹಾಗೂ ಅಧಿಕ ಸಕ್ಕರೆ ಅಂಶದಿಂದ ಜೆಎಸ್‌ನ ಮೇದೋಜೀರಕ ಗ್ರಂಥಿಯು ಸ್ವತಃ ಜೀರ್ಣಿಸಿಕೊಳ್ಳಲು ಆರಂಭಿಸಿತು. ಮೇದೋಜೀರಕ ಗ್ರಂಥಿಯೂ ದ್ರವದಿಂದ ಊದಿಕೊಳ್ಳಲು ಆರಂಭವಾಯಿತು. ಇದಾದ ನಂತರ ಪರಿಸ್ಥಿತಿಯೂ ಹದಗೆಡಲು ಆರಂಭವಾಯಿತು. ಜೆಸ್ ಅವರ ಕಿಡ್ನಿ ಹಾಗೂ ಶ್ವಾಸಕೋಶಗಳು ಸ್ಥಗಿತಗೊಳ್ಳಲು ಶುರುವಾಯಿತು” ಎಂದಿದ್ದಾರೆ.
“ಆ್ಯಂಟಿ ಬಯೋಟಿಕ್ ನೀಡಿ ನಿರಂತರ ಚಿಕಿತ್ಸೆ ಬಳಿಕ ಜೆಸ್ ಚೇತರಿಕೆ ಕಂಡು ಅವರನ್ನು ಮನೆಗೆ ಕಳುಹಿಸಲಾಯಿತು. ನೀವು ಅಪರೂಪಕ್ಕೆ ಎನರ್ಜಿ ಡ್ರಿಂಕ್ ಗಳನ್ನು ಸೇವಿಸಿದರೆ ಆರೋಗ್ಯವಾಗಿರುತ್ತೀರಿ. ಆದರೆ ಹೆಚ್ಚಗೆ ಇಂಥ ಎನರ್ಜಿ ಡ್ರಿಂಕ್ ಗಳನ್ನು ಕುಡಿದರೆ ಜೆಸ್ ಗೆ ಆದ ಸ್ಥಿತಿಯೂ ನಿಮಗೆ ಆಗಬಹುದೆಂದು” ಡಾ. ಡಾ.ಹೆಚ್‌ಸು ಹೇಳುತ್ತಾರೆ.
ಡಾ. ಡಾ.ಹೆಚ್‌ಸು ಈ ವಿಡಿಯೋ ಆಪ್ಲೋಡ್ ಮಾಡಿದ್ದು ಸೆ.14, 2021 ರಂದು ಸದ್ಯ ಈ ಹಳೆಯ ವಿಡಿಯೋ ಇಂಟರ್ ನೆಟ್ ಈಗ ಸದ್ದು ಮಾಡುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Canada-India Row: ನಿಜ್ಜರ್ ಹತ್ಯೆ ಹಿಂದೆ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ
Khalistan; ಕೆನಡಾ ಹಿಂದೂಗಳ ಮೇಲೆ ದಾಳಿ: ಉಗ್ರರ ಹೊಸ ಬೆದರಿಕೆ
Prime Minister Modi; ಗಯಾನಾ, ಡೊಮಿನಿಕಾ ಗೌರವ ಪ್ರದಾನ
Pakistan; ಶಿಯಾ ಮುಸ್ಲಿಮರನ್ನು ಗುರಿಯಾಗಿರಿಸಿ ಗುಂಡಿನ ದಾಳಿ: ಕನಿಷ್ಠ 50 ಬ*ಲಿ
Netanyahu ವಿರುದ್ಧ ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯದಿಂದ ಬಂಧನ ವಾರಂಟ್
MUST WATCH
ಹೊಸ ಸೇರ್ಪಡೆ
Mangaluru: ಜೀವನ ಶೈಲಿ ಸಂಬಂಧಿ ಕಾಯಿಲೆಗೆ ಪರಿಹಾರ ಅಗತ್ಯ
Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ
Someshwara ದೇಗುಲ: ಶಿವಪಂಚಾಕ್ಷರಿ ಕೋಟಿ ನಾಮಜಪ ಯಜ್ಞ ಸಂಪನ್ನ
Maryade Prashne: ಮಧ್ಯಮ ವರ್ಗದ ಸುತ್ತ ಹೀಗೊಂದು ಚಿತ್ರ
Crocodile: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ… ನಿಟ್ಟುಸಿರು ಬಿಟ್ಟ ಗ್ರಾಮಸ್ಥರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.